ಸುದ್ದಿ

ಬಂಟ್ವಾಳ : ಬಾಲಕನಿಗೆ ಲೈಂಗಿಕ ಕಿರುಕುಳ

ತಲೆಮರೆಸಿಕೊಂಡ ಆರೋಪಿಗೆ ಶೋಧ ಬಂಟ್ವಾಳ : ಅಪ್ರಾಪ್ತ ಬಾಲಕನ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿದ ಕುರಿತು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಾಗಿದೆ. ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕ ಪದವು ನಿವಾಸಿ ಅಬ್ದುಲ್ಲಾ ಯಾನೆ ಮೋನು ಯಾನೆ ಪಿಲಿಮೋನು ಎಂಬಾತ ಆರೋಪಿಯಾಗಿದ್ದು, ಈತನ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ. ಬಾಲಕ ಕೂದಲು ಕಟ್ ಮಾಡುವುದಕ್ಕಾಗಿ ಸಲೂನ್‌ಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಪಿಲಿ ಮೋನು ಬಾಲಕನನ್ನು ತನ್ನ ಸ್ಕೂಟರ್‌ನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿ […]

ಬಂಟ್ವಾಳ : ಬಾಲಕನಿಗೆ ಲೈಂಗಿಕ ಕಿರುಕುಳ Read More »

ಮಂಗಳಮುಖಿಯನ್ನೂ ಬಿಡದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ!

ಕಿರುಕುಳ ಆರೋಪ ಹೊತ್ತು ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಯುವ ನಾಯಕನ ಇನ್ನಷ್ಟು ಕರ್ಮಕಾಂಡಗಳು ಬಯಲು ತಿರುವನಂತಪುರಂ: ಮಲಯಾಳಂ ನಟಿ ರಿನಿ ಆನ್ ಜಾರ್ಜ್ ಅವರಿಗೆ ಕಿರುಕುಳ ನೀಡಿದ ಆರೋಪ ಹೊತ್ತು ಕೇರಳ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಪದವಿಗೆ ಗುರುವಾರ ರಾಜೀನಾಮೆ ನೀಡಿರುವ ಶಾಸಕ ರಾಹುಲ್‌ ಮಮಕೂಟತ್ತಿಲ್‌ ತೃತೀಯ ಲಿಂಗಿಗೂ ಲೈಂಗಿಕ ಕಿರುಕುಳ ನೀಡಿದ ವಿಚಾರ ಬೆಳಕಿಗೆ ಬಂದಿದೆ. ನಟಿ ರಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಇನ್ನೂ ಹಲವು ಮಹಿಳೆಯರು ರಾಹುಲ್‌ ಮಮಕೂಟತ್ತಿಲ್‌ನ ಕಿರುಕುಳದ ಬಗ್ಗೆ

ಮಂಗಳಮುಖಿಯನ್ನೂ ಬಿಡದ ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ! Read More »

ದಿನಕ್ಕೊಂದು ಅನೂಹ್ಯ ತಿರುವು ಪಡೆಯುತ್ತಿರುವ ಧರ್ಮಸ್ಥಳ ಪ್ರಕರಣ

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಎಂಟ್ರಿ – ಅಪಪ್ರಚಾರದ ವಿರುದ್ಧ ದೂರು ಧರ್ಮಸ್ಥಳ : ಧರ್ಮಸ್ಥಳದ ಶವ ಹೂತ ಪ್ರಕರಣ ದಿನಕಳೆದಂತೆ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ದಿನಕ್ಕೊಬ್ಬರಂತೆ ಎಂಟ್ರಿಯಾಗುತ್ತಿದ್ದು, ಎಸ್‌ಐಟಿ ಅಧಿಕಾರಿಗಳೇ ಗೊಂದಲಕ್ಕೊಳಗಾಗಿದ್ದಾರೆ. ಎಸ್‌ಐಟಿ ಅಧಿಕಾರಿಗಳಿಗೆ ಬಹು ಆಯಾಮದಲ್ಲಿ ತನಿಖೆ ನಡೆಸಲು ತನಿಖಾ ತಂಡ ಪ್ರಣವ್‌ ಮೊಹಾಂತಿ ಸೂಚಿಸಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಈ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ವಿಡಿಯೋ ಹಾಕಿದ್ದಾರೆ ಎಂದು ನಾಲ್ವರ

ದಿನಕ್ಕೊಂದು ಅನೂಹ್ಯ ತಿರುವು ಪಡೆಯುತ್ತಿರುವ ಧರ್ಮಸ್ಥಳ ಪ್ರಕರಣ Read More »

ಕಾಂಗ್ರೆಸ್‌ ಶಾಸಕನ ಮನೆ ಮೇಲೆ ಇ.ಡಿ.ದಾಳಿ

ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ ವವೀರೇಂದ್ರ ಪಪ್ಪಿ ಅವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಚಳ್ಳಕೆರೆ ಪಟ್ಟಣದಲ್ಲಿರುವ ನಾಲ್ಕು ಮನೆಗಳು ಹಾಗೂ ಬೆಂಗಳೂರಿನ ಸಹಕಾರ ನಗರದಲ್ಲಿರುವ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವೀರೇಂದ್ರ ಪಪ್ಪಿಯ ಸಹೋದರರಾದ ಕೆ.ಸಿ ನಾಗರಾಜ, ಕೆ.ಸಿ ತಿಪ್ಪೇಸ್ವಾಮಿ ಅವರ ಮನೆಗಳ ಮೇಲೂ ದಾಳಿಯಾಗಿದೆ. ದಾಳಿ ನಡೆಸಿ ಶಾಕ್‌ ಕೊಟ್ಟಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

ಕಾಂಗ್ರೆಸ್‌ ಶಾಸಕನ ಮನೆ ಮೇಲೆ ಇ.ಡಿ.ದಾಳಿ Read More »

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ

ಬೈಕ್‌, ಸ್ಕೂಟರ್‌ಗಳಿಗೆ ಟೋಲ್‌ ವಿಧಿಸಲಾಗುತ್ತದೆ ಎನ್ನುವುದು ಬರೀ ವದಂತಿ ನವದೆಹಲಿ: ದೇಶಾದ್ಯಂತ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ದೃಢಪಡಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ್ವಿಚಕ್ರ ವಾಹನಗಳ ಮೇಲೆ ಶುಲ್ಕ ವಿಧಿಸಲು ಯೋಜಿಸಿದೆ ಎಂಬ ಸಾಮಾಜಿಕ ಮಾಧ್ಯಮಗಳ ವದಂತಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008ರ ಪ್ರಕಾರ ನಾಲ್ಕು ಚಕ್ರಗಳು ಮತ್ತು

ರಾಷ್ಟ್ರೀಯ ಹೆದ್ದಾರಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ Read More »

ಕುಡುಪು ಗುಂಪು ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಕ್ರಿಕೆಟ್‌ ಆಡುವಾಗ ಕೇರಳದ ವ್ಯಕ್ತಿಯನ್ನು ಗುಂಪುಕೂಡಿ ಥಳಿಸಿ ಕೊಂದ ಪ್ರಕರಣ ಮಂಗಳೂರು: ಮಂಗಳೂರಿನ ಕುಡುಪುವಿನಲ್ಲಿ ಕಳೆದ ಏ.27ರಂದು ಕೇರಳ ಮೂಲದ ಆಶ್ರಫ್ ಎಂಬವರನ್ನು ಗುಂಡು ಹತ್ಯೆ ಮಾಡಿದ ಪ್ರಕರಣದ 10 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕುಮಾರ್, ಯತಿರಾಜ್, ಮನೀಶ್ ಶೆಟ್ಟಿ, ಪ್ರದೀಪ್, ವಿವಿಯನ್ ಆಲ್ವರಿಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಏ.27ರರಂದು ಸಂಜೆ 5.30ರ

ಕುಡುಪು ಗುಂಪು ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌ Read More »

ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಅವಹೇಳನ ಮಾಡಿದ ಆರೋಪ ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಡಿಯೋ ಮಾಡಿ ಸದ್ಯ ಜಾಮೀನು ಪಡೆದು ಬಂಧನದಿಂದ ಪಾರಾಗಿರುವ ಯೂಟ್ಯೂಬರ್ ಮೊಹಮ್ಮದ್‌ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಎಂಬವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ

ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು Read More »

ಬಂಧನದ ಭೀತಿಯಲ್ಲಿದ್ದ ಸಮೀರನಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ AI ವಿಡಿಯೋ ಮಾಡಿ ಸಮಾಜದ ದಾರಿ ತಪ್ಪಿಸಿದ ಆರೋಪದಲ್ಲಿ ಪೊಲೀಸರ ಬಂಧನದ ಭೀತಿಯಲ್ಲಿದ್ದ ದೂತ ಸಮೀರನಿಗೆ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಧರ್ಮಸ್ಥಳದ ವಿರುದ್ಧ ಸಮೀರ್ ಮಾಡಿದ್ದ AI ವಿಡಿಯೋ ಸಮಾಜದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಈ ಹಿನ್ನೆಲೆ ಆತನ ವಿರುದ್ಧ ಸುಮೋಟೋ ಪ್ರಕರಣವನ್ನು ಪೊಲೀಸರು ದಾಖಲು ಮಾಡಿದ್ದರು. ಆತನನ್ನು ಬಂಧಿಸುವುದಕ್ಕಾಗಿ ಪೊಲೀಸರು ಬನ್ನೇರುಘಟ್ಟದ ಆತನ ಬಾಡಿಗೆ ಮನೆಯ ಬಳಿಗೂ ತೆರಳಿದ್ದರು. ಬಂಧನದ ಭೀತಿ

ಬಂಧನದ ಭೀತಿಯಲ್ಲಿದ್ದ ಸಮೀರನಿಗೆ ನಿರೀಕ್ಷಣಾ ಜಾಮೀನು Read More »

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ತಾಲೂಕು ಸಂಚಾರಿ ಪೀಠ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ತಿಮರೋಡಿಗೆ ಎರಡು ಬಾರಿ ನೊಟೀಸ್ ‌ನೀಡಲಾಗಿತ್ತು. ಆದರೆ ಅದಕ್ಕೆ ಯಾವುದೇ ಉತ್ತರ ನೀಡದ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ದರು. ತಿಮರೋಡಿ ಬಂಧನದ ಸಮಯದಲ್ಲಿ ಅವರ ನಿವಾಸದ ಸಮೀಪ ಹೈಡ್ರಾಮಾ ನಡೆದಿದ್ದು, ಕೊನೆಗೆ ಅವರ ಖಾಸಗಿ ವಾಹನದಲ್ಲಿ

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ Read More »

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು

ಬಿ.ಎಲ್‌. ಸಂತೋಷ್‌ ಅವರನ್ನು ನಿಂದಿಸಿದ ಪ್ರಕರಣ ಉಜಿರೆ ಮನೆಯಲ್ಲಿ ತಿಮರೋಡಿ ಬೆಂಬಲಿಗರಿಂದ ಪ್ರತಿರೋಧ- ಪೊಲೀಸರ ಜೊತೆ ವಾಗ್ವಾದ ಮಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬ್ರಹ್ಮಾವರ ಪೊಲೀಸರು ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಇಂದು ಮನೆಯಿಂದ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತಿಮರೋಡಿ, ಬಿಎಲ್ ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್‌ ಕುಲಾಲ್‌ ಎಂಬವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು Read More »

error: Content is protected !!
Scroll to Top