ಸುದ್ದಿ

ಪಶ್ಚಿಮ ಬಂಗಾಳ : ಮೂವರು ಸಾವು; 150ಕ್ಕೂ ಅಧಿಕ ಬಂಧನ

ವಕ್ಫ್‌ ಕಾಯಿದೆ ವಿರೋಧಿ ಪ್ರತಿಭಟನೆ ವೇಳೆ ಭಾರಿ ಹಿಂಸಾಚಾರ ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ತಂದೆ ಮತ್ತು ಮಗ ಸೇರಿ ಈವರೆಗೆ ಒಟ್ಟು ಮೂವರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶುಕ್ರವಾರದ ಪ್ರಾರ್ಥನೆಯ ನಂತರ ಭುಗಿಲೆದ್ದ ಹಿಂಸಾಚಾರ ಮುರ್ಷಿದಾಬಾದ್‌ ಜಿಲ್ಲೆಯ ಹಲವು ಭಾಗಗಳಿಗೆ ವ್ಯಾಪಿಸಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿವೆ. ಕಳೆದ ರಾತ್ರಿ ಪೊಲೀಸರು, ಅರೆಸೇನಾ ಪಡೆಗಳು ಸಂಪೂರ್ಣ ಗಸ್ತು ತಿರುಗಿದ್ದು, ಸುತಿ, […]

ಪಶ್ಚಿಮ ಬಂಗಾಳ : ಮೂವರು ಸಾವು; 150ಕ್ಕೂ ಅಧಿಕ ಬಂಧನ Read More »

ಬೆಂಗಳೂರು : 20ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿ

ಬೆಂಗಳೂರು: ಕೂಲಿ ಕಾರ್ಮಿಕರು ವಾಸವಿದ್ದ 20ಕ್ಕೂ ಹೆಚ್ಚು ಶೆಡ್​ಗಳು ಬೆಂಕಿಗಾಹುತಿ ಆಗಿರುವ ಘಟನೆ ಬೆಂಗಳೂರು ನಗರದ ವೀರಣ್ಣಪಾಳ್ಯ ಮುಖ್ಯ ರಸ್ತೆಯ ಬಳಿ ಇಂದು ಮುಂಜಾನೆ ನಡೆದಿದೆ. ಬೆಂಕಿ ಅವಘಡದಿಂದ ಆಟಿಕೆ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ 20 ಶೆಡ್​ಗಳು ಪೂರ್ತಿಯಾಗಿ ಸುಟ್ಟುಹೋಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಆಟಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜನರಿಗಾಗಿ ವೀರಣ್ಣಪಾಳ್ಯ ಮುಖ್ಯರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿ

ಬೆಂಗಳೂರು : 20ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿ Read More »

ಪರಿಶಿಷ್ಟರೆ ರಾಜ್ಯದಲ್ಲಿ ನಂಬರ್‌ ಒನ್‌ : ಜಾತಿ ಗಣತಿ ವರದಿಯಲ್ಲಿ ಬಹಿರಂಗ

ಹಲವು ಜಾತಿಗಳ ಮೀಸಲಾತಿ ಪ್ರಮಾಣ ಹೆಚ್ಚಿಸಲು ಶಿಫಾರಸ್ಸು ಬೆಂಗಳೂರು: ತೀವ್ರ ಚರ್ಚೆಗೆ ಕಾರಣವಾಗಿರುವ ಸಿದ್ದರಾಮಯ್ಯ ಸರಕಾರದ ಜಾತಿ ಗಣತಿ ವರದಿ ಅಧಿಕೃತವಾಗಿ ಇನ್ನೂ ಬಹಿರಂಗವಾದಿದ್ದರೂ ಅದರಲ್ಲಿರುವ ಕೆಲವು ಮಾಹಿತಿಗಳು ಸೋರಿಕೆಯಾಗಿವೆ. ವರದಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಹಲವು ಚರ್ಚೆ, ವಿರೋಧದ ನಡುವೆ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ಮಂಡನೆ ಆಗಿದೆ. ಸಮಗ್ರ ಚರ್ಚೆಗೆ ಮುಂದಿನ ಗುರುವಾರದ ಸಚಿವ ಸಂಪುಟ ಸಭೆಯ ಮುಹೂರ್ತ

ಪರಿಶಿಷ್ಟರೆ ರಾಜ್ಯದಲ್ಲಿ ನಂಬರ್‌ ಒನ್‌ : ಜಾತಿ ಗಣತಿ ವರದಿಯಲ್ಲಿ ಬಹಿರಂಗ Read More »

ಭಾರತೀಯ ಔಷಧ ಕಂಪನಿ ಗೋದಾಮಿನ ಮೇಲೆ ರಷ್ಯಾ ದಾಳಿ

ಉದ್ದೇಶಪೂರ್ವಕವಾಗಿ ದಾಳಿ ಮಾಡಿ ಔಷಧಗಳ ನಾಶ ಎಂದು ಆರೋಪಿಸಿದ ಉಕ್ರೇನ್‌ ನವದೆಹಲಿ: ಉಕ್ರೇನ್‌ನ ಕೀವ್‌ನಲ್ಲಿರುವ ಭಾರತೀಯ ಮೂಲದ ಔಷಧ ಕಂಪನಿಯ ಗೋದಾಮನ್ನು ರಷ್ಯಾ ಕ್ಷಿಪಣಿ ದಾಳಿ ನಡೆಸಿ ನಾಶ ಮಾಡಿದೆ ಎಂದು ಉಕ್ರೇನ್‌ ಹೇಳಿಕೊಂಡಿದೆ. ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಭಾರತದ ಪರಮಾಪ್ತ ಮಿತ್ರ ಎಂದು ಹೇಳಿಕೊಳ್ಳುವ ರಷ್ಯಾ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಭಾರತದಲ್ಲಿನ ಉಕ್ರೇನ್‌ನ ರಾಯಭಾರ ಕಚೇರಿ ಆರೋಪಿಸಿದೆ.ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಭಾರತದೊಂದಿಗೆ ವಿಶೇಷ ಸ್ನೇಹವಿದೆ

ಭಾರತೀಯ ಔಷಧ ಕಂಪನಿ ಗೋದಾಮಿನ ಮೇಲೆ ರಷ್ಯಾ ದಾಳಿ Read More »

ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಸಲಾಗಿದೆ : ಸಿದ್ದರಾಮಯ್ಯ ಸಮರ್ಥನೆ

1,01,60,000 ಜನರು ಭಾಗಿ ; ಶೇ.95 ರಷ್ಟು ನಿಖರ ವರದಿ ಎಂದ ಸಿಎಂ ಬೆಂಗಳೂರು: ಜಾತಿ ಗಣತಿ ವರದಿ ಪರ ಮತ್ತು ವಿರೋಧವಾಗಿ ರಾಜ್ಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇದು ಸಂಪೂರ್ಣವಾಗಿ ವೈಜ್ಞಾನಿಕವಾಗಿ ನಡೆಸಿದ ವರದಿ. ಯಾರು ಯಾವ ಜಾತಿಗೆ ಸೇರಿದ್ದಾರೆ ಎಂದು ತಿಳಿದುಕೊಳ್ಳಲು ಸಮೀಕ್ಷೆ ನಡೆಸಿ ವರದಿ ತಯಾರಿಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ವೈಜ್ಞಾನಿಕ ಹಾಗೂ ಸಮರ್ಪಕವಾಗಿ ಜಾತಿಗಣತಿ ನಡೆಸಲಾಗಿದ್ದು, ಇದರಲ್ಲಿ 1,01,60,000 ಜನರು

ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ನಡೆಸಲಾಗಿದೆ : ಸಿದ್ದರಾಮಯ್ಯ ಸಮರ್ಥನೆ Read More »

ಕಾಶ್ಮೀರ : ಉಗ್ರರ ಜೊತೆ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮ

ಎರಡು ಕಾರ್ಯಾಚರಣೆಯಲ್ಲಿ ಐವರು ಉಗ್ರರ ಹತ್ಯೆ ಶ್ರೀನಗರ: ಕಾಶ್ಮೀರದಲ್ಲಿ ಮತ್ತೆ ಉಗ್ರರು ನುಸುಳಿಕೊಂಡು ಬರುವ ಕೃತ್ಯಗಳು ಶುರುವಾಗಿದ್ದು, ಶುಕ್ರವಾರ ತಡರಾತ್ರಿ ಗಡಿ ದಾಟಿ ಬರಲು ಯತ್ನಿಸಿದ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ತೀವ್ರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಉಗ್ರರ ನುಸುಳಿ ಬರುವ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಈ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ತೀವ್ರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆಯ ಮೂಲಗಳು ತಿಳಿಸಿದೆ.ಜಮ್ಮುವಿನ ಅಕ್ನೂರ್‌ ವಲಯದ ಭಟ್ಟಲ್‌ ಎಂಬಲ್ಲಿ ಉಗ್ರರು ಗಡಿದಾಟಿ ಬರುತ್ತಿರುವ

ಕಾಶ್ಮೀರ : ಉಗ್ರರ ಜೊತೆ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮ Read More »

ನಾರಾವಿ : ಬೈಕ್‌ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸಾವು

ಬೆಳ್ತಂಗಡಿ: ಬೈಕೊಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಾರಾವಿಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.ನಾರಾವಿ ಸಮೀಪ ಕುತ್ಲೂರಿನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತರನ್ನು ಪ್ರಶಾಂತ್ ಹಾಗೂ ದಿನೇಶ್ ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ವೇಳೆ ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ಕುತ್ಲೂರು ಪುರುಷಗುಡ್ಡೆ ಸಮೀಪ ಕೊಕ್ರಾಡಿ ನಾರಾವಿ ರಸ್ತೆಯಲ್ಲಿ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ.ಪ್ರಶಾಂತ್‌ ಬೆಳ್ತಂಗಡಿ ಮತ್ತು ದಿನೇಶ್‌ ಕಾರ್ಕಳ ಸಮೀಪದ

ನಾರಾವಿ : ಬೈಕ್‌ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸಾವು Read More »

ಧರ್ಮಸ್ಥಳದ ಆಕ್ಷೇಪಾರ್ಹ ವಿಡಿಯೋ ಮಾಡಿದ ಸಮೀರ್‌ ವಿರುದ್ಧ 10 ಕೋ. ರೂ. ಮಾನನಷ್ಟ ದಾವೆ

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಎರಡನೇ ವಿಡಿಯೋ ಮಾಡಿರುವುದಕ್ಕೆ ಆಕ್ಷೇಪ ಬೆಂಗಳೂರು : ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣ ಸಂಬಂಧ ಧರ್ಮಸ್ಥಳವನ್ನು ಗುರಿಯಾಗಿಟ್ಟುಕೊಂಡು ಮಾಡಿದ್ದ ವಿಡಿಯೋವನ್ನು ತೆಗೆದು ಹಾಕುವಂತೆ ನೀಡಿದ್ದ ಆದೇಶ ಉಲ್ಲಂಘಿಸಿದ ಯುಟ್ಯೂಬರ್‌ ಎಂ ಡಿ ಸಮೀರ್‌ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಧರ್ಮಸ್ಥಳ ಪರ ಡಿ. ಹರ್ಷೇಂದ್ರ ಕುಮಾರ್‌ ಮತ್ತು ನಿಶ್ಚಲ್‌ ಡಿ. ಹೂಡಿದ್ದ ಮಾನನಷ್ಟ ಮೊಕದ್ದಮೆ ಅರ್ಜಿ ಪರಿಶೀಲಿಸಿದ ಬಳಿಕ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಧೀಶರಾದ ಎಸ್‌. ನಟರಾಜ್‌

ಧರ್ಮಸ್ಥಳದ ಆಕ್ಷೇಪಾರ್ಹ ವಿಡಿಯೋ ಮಾಡಿದ ಸಮೀರ್‌ ವಿರುದ್ಧ 10 ಕೋ. ರೂ. ಮಾನನಷ್ಟ ದಾವೆ Read More »

ಮಂಗಳೂರು: ಬೀಚ್‌ನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಮೂವರು ಸೆರೆ

ಮಾದಕವಸ್ತು, ಕಾರು ಸಹಿತ 9.24 ಲ.ರೂ. ಸೊತ್ತು ವಶ ಮಂಗಳೂರು ‌: ನಗರದ ಸುರತ್ಕಲ್‌ ಬೀಚ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಿಂದ ನಿಷೇಧಿತ ಎಂಡಿಎಂಎಯನ್ನು ತಂದು ಸುರತ್ಕಲ್ ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರನ್ನು ಗುರಿಮಾಡಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರನ್ನು ಸುರತ್ಕಲ್ ನಿವಾಸಿಗಳಾದ ಮೊಹಮ್ಮದ್ ಆಸಿಫ್ (24), ಅಸ್ಕರ್ ಅಲಿ (31) ಮತ್ತು ಹಳೆಯಂಗಡಿಯ ಮೊಹಮ್ಮದ್ ರಶೀಮ್ (24)

ಮಂಗಳೂರು: ಬೀಚ್‌ನಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಮೂವರು ಸೆರೆ Read More »

ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ವೇಳೆ ರೈಲುಗಳಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದಲ್ಲಿ ಇಡೀ ದಿನ ನಡೆದ ಹಿಂಸಾಚಾರ ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮುಸ್ಲಿಮರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿ ಎರಡು ರೈಲುಗಳನ್ನು ಜಖಂಗೊಳಿಸಿದ್ದಾರೆ.ಶುಕ್ರವಾರ ಮಧ್ಯಾಹ್ನ ಪ್ರತಿಭಟನೆ ನಡೆದಿತ್ತು. ರಾತ್ರಿ ಪ್ರತಿಭಟನೆ ಹಿಂಸಚಾರಕ್ಕೆ ತಿರುಗಿದೆ. ಘಟನೆಯ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಮತ್ತು ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ

ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ವೇಳೆ ರೈಲುಗಳಿಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ Read More »

error: Content is protected !!
Scroll to Top