ಶೈಕ್ಷಣಿಕ

ಕೆ.ಎಸ್. ಎಸ್ ಕಾಲೇಜಿನ ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮಾ ಕೋರ್ಸಿಗೆ ಉತ್ತಮ ಫಲಿತಾಂಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಶ್ರವಣಬೆಳಗೊಳ ಜಂಟಿಯಾಗಿ  ಪ್ರಾಕೃತ ಸರ್ಟಿಫಿಕೇಟ್ ಮತ್ತು ಡಿಪ್ಲೋಮ  ಕೋರ್ಸ್ನ ಫಲಿತಾಂಶ ಕಾರ್ಯಕ್ರಮ ನಡೆಯಿತು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಪ್ರಸಾದ. ಎನ್ ಹಾಗೂ ಇತಿಹಾಸ ಉಪನ್ಯಾಸಕಿ ನಮಿತಾ ಎಂ ಎ ಅವರ ಮಾರ್ಗದರ್ಶನದಲ್ಲಿ   ಪ್ರತಿ ವರ್ಷ ಕೆ.ಎಸ್. ಎಸ್ ಕಾಲೇಜಿನ ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮಾ ಕೋರ್ಸಿಗೆ ಉತ್ತಮ ಫಲಿತಾಂಶ ನಡೆಸಲಾಗುತ್ತದೆ.  ಈ ಕೋರ್ಸಿಗೆ 31 ವಿದ್ಯಾರ್ಥಿಗಳು ದಾಖಲಾಗಿ […]

ಕೆ.ಎಸ್. ಎಸ್ ಕಾಲೇಜಿನ ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮಾ ಕೋರ್ಸಿಗೆ ಉತ್ತಮ ಫಲಿತಾಂಶ Read More »

ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ಶ್ರೀವಿದ್ಯಾ ಭಟ್‍ ವಿವಿಗೆ 8ನೇ ರ‍್ಯಾಂಕ್

ಪುತ್ತೂರು: ಶ್ರೀವಿದ್ಯಾ ಭಟ್ ಅವರು ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ  8ನೇ ರ‍್ಯಾಂಕ್ ಗಳಿಸಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಲ್ಲಿ ನಡೆದ ಅರ್ಗನಾನ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪಥಿ ಫಿಲಾಸಫಿ ವಿಷಯದ ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ  8ನೇ ರ‍್ಯಾಂಕ್ ಗಳಿಸಿದ್ದಾರೆ ಅವರು ಪುತ್ತೂರು ಬೆದ್ರಾಳ ನಿವಾಸಿ ಮನ್ವಿತ್ ಕುಮಾರ್ ಅವರ ಪತ್ನಿ , ಪಳ್ಳ ಮುಳ್ಳೇರಿಯ ನಿವಾಸಿ  ದಿ. ಶ್ರೀಮನ್ನಾರಾಯಣ ಭಟ್ ಹಾಗೂ ಸರಸ್ವತಿ ದಂಪತಿ ಪುತ್ರಿ

ಎಂಡಿ ಹೋಮಿಯೋಪಥಿ ಪರೀಕ್ಷೆಯಲ್ಲಿ ಶ್ರೀವಿದ್ಯಾ ಭಟ್‍ ವಿವಿಗೆ 8ನೇ ರ‍್ಯಾಂಕ್ Read More »

ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ – ಬಲರಾಮ ಆಚಾರ್ಯ | ಫಿಲೋಕಾರ್ನಿವಾಲ್- 2025 ಪಿಜಿಫೆಸ್ಟ್ ಉದ್ಘಾಟನೆ

ಪುತ್ತೂರು: ಪುತ್ತೂರು ಸಂತ ಫಿಲೋಮಿನ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿಭಾಗಗಳ ಫೆಸ್ಟ್ “ಫಿಲೋಕಾರ್ನಿವಾಲ್ 2025” ಸೋಮವಾರ ಉದ್ಘಾಟನೆಗೊಂಡಿತು. ಜಿ..ಎಲ್. ಆಚಾರ್ಯ ಸಮೂಹ ಸಂಸ್ಥೆಗಳ ಎಂಡಿ ಬಲರಾಮ ಆಚಾರ್ಯ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕೌಶಲ್ಯಗಳು ಬಹುಮುಖ್ಯವಾಗಿದ್ದು ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆಯ ಅಗತ್ಯವಿದೆ.  ವಿದ್ಯಾರ್ಥಿಗಳು ಕೇವಲ ತರಗತಿ ಚಟುವಟಿಗಳಲ್ಲಿ ಮಾತ್ರ ತೊಡಗಿಕೊಳ್ಳದೆ ಇಂತಹ ಫೆಸ್ಟ್ ಗಳನ್ನು ಆಯೋಜನೆ ಮಾಡಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಪ್ರತಿಯೊಬ್ಬರಲ್ಲೂ ಕೌಶಲ್ಯಗಳ ಅಭಿವೃದ್ಧಿ ಸಾಧ್ಯ

ಕೌಶಲ್ಯಗಳ ಬೆಳವಣಿಗೆಗೆ ವಿಮರ್ಶಾತ್ಮಕ ಚಿಂತನೆ ಅಗತ್ಯ – ಬಲರಾಮ ಆಚಾರ್ಯ | ಫಿಲೋಕಾರ್ನಿವಾಲ್- 2025 ಪಿಜಿಫೆಸ್ಟ್ ಉದ್ಘಾಟನೆ Read More »

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾಲಯದ, ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ, ಡಾ.ಕೆ.ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಐಕ್ಯೂಸಿ ವಿಭಾಗದ ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏ.29 ಮಂಗಳವಾರ ಸಂಜೆ 3 ಗಂಟೆಗೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಎನ್‍. ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿ ಖ್ಯಾತ

ನಾಳೆ (ಏ.29) : ವಿವೇಕಾನಂದ ಸ್ವಾಯತ್ತ ಕಾಲೇಜು ವತಿಯಿಂದ ನಿರಂಜನ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ Read More »

ಕೆ.ಎಸ್.ಎಸ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ

ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಎನ್.ಎಸ್.ಎಸ್ ಘಟಕ ಮತ್ತು ಸುಳ್ಯ ತಾಲೂಕು ಆರೋಗ್ಯ ಅಧಿಕಾರಿ  ಕಛೇರಿ ಜಂಟಿಯಾಗಿ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಏ.25 ಶುಕ್ರವಾರದಂದು  ಹಮ್ಮಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಯಾದ ಡಾ. ತ್ರಿಮೂರ್ತಿ ಅವರು ಉಪಸ್ಥಿತರಿದ್ದರು. ತಾಲೂಕು ಆರೋಗ್ಯ  ಶಿಕ್ಷಣ ಅಧಿಕಾರಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಲೇರಿಯಾ ರೋಗವನ್ನು ತಡೆಗಟ್ಟುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್‍ಪೆಕ್ಟರ್ ಉಮರ್ ಖಾನ್ ಮತ್ತು

ಕೆ.ಎಸ್.ಎಸ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ  ಪೂರ್ವ ವಿದ್ಯಾರ್ಥಿ  ಸಂಘ ಬೆಂಗಳೂರು ಚಾಪ್ಟರ್ ವತಿಯಿಂದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮವನ್ನು ಏ.21ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ .ಟಿ ವಹಿಸಿದರು. ಕಾರ್ಯಕ್ರಮದಲ್ಲಿ, ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಘಟಕವನ್ನು ಹುಟ್ಟು ಹಾಕಿದ ಕೆ ಎಸ್ ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ ಕೆ ರಂಗಯ್ಯ ಶೆಟ್ಟಿಗಾರ್ ಅವರು ಈ ಘಟಕವು ಸಂಸ್ಥೆಯ ಹಲವಾರು ವಿದ್ಯಾರ್ಥಿಗಳಿಗೆ  ಉದ್ಯೋಗವನ್ನು,

ಕೆ ಎಸ್ ಎಸ್ ಕಾಲೇಜಿನಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಬೆಂಗಳೂರು ಚಾಪ್ಟರ್ ನಿಂದ ದತ್ತಿ ನಿಧಿ ಸ್ಥಾಪನೆ Read More »

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ

ವೀರಮಂಗಲ : ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ ನಡೆಯಿತು. ದೇಶದ್ಯಾಂತ ಇಂದು ವಿಶ್ವ ಭೂದಿನವನ್ನಾಗಿ ಆಚರಿಸುತ್ತಿದ್ದು ಪರಿಸರ ಪ್ರೇಮದೊಂದಿಗೆ ಗಿಡಗಳ ಪರಿಚಯ, ಸ್ವಚ್ಛತೆ, ಕಸವಿಲೇವಾರಿ, ನೀರು ಇಂಗಿಸುವಿಕೆ ಇತ್ಯಾದಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಪ್ರತಿ ಶಾಲೆಯಲ್ಲೂ ಇಕೋ ಕ್ಲಬ್ ಸ್ಥಾಪಿಸಲಾಗಿದ್ದು ಆ ಪ್ರಯುಕ್ತ ವಿಶ್ವ ಭೂದಿನವಾದ ಏ 22 ರಂದು  ಗಿಡಗಳ ಪರಿಚಯ ಮಾಡಲು ಗಿಡಗಳಿಗೆ QR CODE ಕಟ್ಟುವುದರ ಮೂಲಕ ವೀರಮಂಗಲ ಪಿಎಂಶ್ರೀ ಶಾಲೆಯ

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ Read More »

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದವರಿಗೆ ಶುಲ್ಕ ಹೆಚ್ಚಳದ ಜೊತೆ ಇನ್ನೊಂದು ಬರೆ ಬೆಂಗಳೂರು : ಶಾಲಾ ಶುಲ್ಕದ ಬೆನ್ನಿಗೆ ಪೋಷಕರಿಗೆ ಪಠ್ಯಪುಸ್ತಕದ ಬೆಲೆಯೇರಿಕೆಯ ಬರೆ ಬಿದ್ದಿದೆ. ಪಠ್ಯಪುಸ್ತಕಗಳ ಬೆಲೆ ಸರಾಸರಿಯಾಗಿ ಶೇ. 10ರಷ್ಟು ಏರಿಕೆಯಾಗಿದೆ. ಈ ಏರಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ 2025-2026ನೇ ಸಾಲಿನ ಪಠ್ಯಪುಸ್ತಕ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಿದೆ. ಈಗಾಗಲೇ ಕೆಲವು ಪಠ್ಯಪುಸ್ತಕಗಳ ಬೆಲೆ ಶೇ.100ರಷ್ಟು ಹೆಚ್ಚಾಗಿದ್ದು, ಈ ವರ್ಷವೂ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕಗಳ

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ Read More »

ಒಂದನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆಯಿಂದ ಖಾಸಗಿ ಶಾಲೆಗಳಿಗೆ ಸಮಸ್ಯೆ

ಎಲ್‌ಕೆಜಿ ತರಗತಿಗೆ ಹಿಂದಿನ ನಿಯಮದಂತೆ ಸೇರಿರುವ ಮಕ್ಕಳಿಗೆ ಮುಂದಿನ ವರ್ಷ ಶಾಲೆಗೆ ಸೇರಲಾಗುವುದಿಲ್ಲ ಬೆಂಗಳೂರು : ಒಂದನೇ ತರಗತಿ ಸೇರ್ಪಡೆಗೆ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಈ ವರ್ಷದ ಮಟ್ಟಿಗೆ ಸಡಿಲಿಸಿ ಐದೂವರೆ ವರ್ಷ ಪ್ರಾಯದ ಮಕ್ಕಳನ್ನು ಶಾಲೆಗೆ ಸೇರಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಆದೇಶ ಮಕ್ಕಳ ಪೋಷಕರಿಗೆ ಖುಷಿ ಕೊಟ್ಟಿದ್ದರೂ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಈ ಸಡಿಲಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ. ಈ ವರ್ಷ 1ನೇ ತರಗತಿ ಸೇರ್ಪಡೆಗೆ

ಒಂದನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆಯಿಂದ ಖಾಸಗಿ ಶಾಲೆಗಳಿಗೆ ಸಮಸ್ಯೆ Read More »

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕೆ  ಶ್ರೀ ಸುಬ್ರಹ್ಮಣ್ಯೇಶ್ವರ ಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಇದರ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬ ಆಚರಣೆ ಘಟಕದ ವತಿಯಿಂದ ಏ.17 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಅತಿಥಿಗಳು ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಗೈದರು.  ವಿದ್ಯಾರ್ಥಿಗಳು ಅಂಬೇಡ್ಕರ ಹಾಡುಗಳನ್ನು ಗೀತ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಅತಿಥಿಯಾಗಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸ್ವಾತಿ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

error: Content is protected !!
Scroll to Top