ನಿಧನ

ಜಯರಾಮ್ ಪೂಜಾರಿ ಬಡಾವು ನಿ‍ಧನ

ಪುತ್ತೂರು: ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಅವರ ಸಹೋದರ ಜಯರಾಮ್ ಪೂಜಾರಿ ಬಡಾವು (52) ನಿಧನರಾಗಿದ್ದಾರೆ. ಅನಾರೋಗ್ಯದಿಂದಿದ್ದ ಅವರು ಶನಿವಾರ ನಿಧನರಾದರು. ಮೃತರು ಪತ್ನಿ, ಮಗಳು ಹಾಗೂ ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಜಯರಾಮ್ ಪೂಜಾರಿ ಬಡಾವು ನಿ‍ಧನ Read More »

ಉಪ್ಪಿನಂಗಡಿ ಹೆಡ್ ಕಾನ್‍ಸ್ಟೇಬಲ್  ಕೃಷ್ಣಪ್ಪ ನಾಯ್ಕ್ ನಿಧನ

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ಹೆಡ್ ಕಾನ್‍ಸ್ಟೇಬಲ್ ಕೃಷ್ಣಪ್ಪ ನಾಯ್ಕ್‍ ಜಿ. ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾಣಿ ಸಮೀಪದ ನೇರಳಕಟ್ಟೆ ನಿವಾಸಿಯಾಗಿರುವ ಮೃತರು ಕಳೆದ 6 ವರ್ಷಗಳಿಂದ ಉಪ್ಪಿನಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದಿಮದ ಅನಾರೋಗ್ಯದಿಂದ ರಜೆಯಲ್ಲಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಉಪ್ಪಿನಂಗಡಿ ಹೆಡ್ ಕಾನ್‍ಸ್ಟೇಬಲ್  ಕೃಷ್ಣಪ್ಪ ನಾಯ್ಕ್ ನಿಧನ Read More »

ಬಲ್ನಾಡು ಯುವಕ ಹೃದಯಾಘಾತದಿಂದ ನಿಧನ

ಪುತ್ತೂರು: ಯುವನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಲ್ನಾಡಿನಲ್ಲಿ ನಡೆದಿದೆ. ಬಲ್ನಾಡು ನಿವಾಸಿ ಕಿಶನ್ (27) ಮೃತಪಟ್ಟ ಯುವಕ. ಕಿಶನ್ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಬಲ್ನಾಡು ಯುವಕ ಹೃದಯಾಘಾತದಿಂದ ನಿಧನ Read More »

ಬಡ ಕುಟುಂಬದ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ

ಕಡಬ : ಕಡಬ ತಾಲೂಕಿನ ಕಡು ಬಡತನದ ಮಹಿಳೆಯೊಬ್ಬರು ಶುಕ್ರವಾರ ಪುತ್ತೂರು ಸರಕಾರಿ ಆಸ್ಪತ್ರೆ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರಲ್ಲಿ ಹಣಕಾಸಿನ ವ್ಯವಸ್ಥೆ ತೊಂದರೆ ಪಡುವಂತಾಯಿತು. ಇದನ್ನು ತಕ್ಷಣ ಮನಗಂಡ ಪುತ್ತಿಲ ಪರಿವಾರದ ಕಡೆಯಿಂದ ಅಂಬುಲೆನ್ಸ್ ಮತ್ತು  ಅಂತ್ಯಕ್ರಿಯೆಯನ್ನು ನಡೆಸಲು ಬೇಕಾದ ವ್ಯವಸ್ಥೆಯನ್ನು  ಮಾಡಿ, ಕುಟುಂಬದ ದುಃಖದಲ್ಲಿ ಪುತ್ತಿಲ ಪರಿವಾರ ಭಾಗಿಯಾಯಿತು, ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ನಗರ ಸಮಿತಿಯ ಅಧ್ಯಕ್ಷ ಅನಿಲ್ ತೆಂಕಿಲ , ಕಿಶೋರ್ ಕುಮಾರ್  , ಗೀತೇಶ ಹಾಗೂ ಪುತ್ತಿಲ ಪರಿವಾರದ

ಬಡ ಕುಟುಂಬದ ಮಹಿಳೆಯೊಬ್ಬರ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ Read More »

ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ ಮಾತೃ ವಿಯೋಗ

ಪುತ್ತೂರು: ಸರ್ವೆ ಗ್ರಾಮದ ದಿ.ಅಚ್ಚುತ ಪೂಜಾರಿ ಸೊರಕೆಯವರ ಪತ್ನಿ ಸುನೀತಿ (92) ಶನಿವಾರ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದಿದ್ದ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರಿಗೆ ಮಾತೃ ವಿಯೋಗ Read More »

ಕುದ್ಮಾರು ರಾಮಚಂದ್ರ ಬನಾರಿ ನಿಧನ

ಕುದ್ಮಾರು: ಕಡಬ ತಾಲೂಕಿನ ಕುದ್ಮಾರು ನಿವಾಸಿ ರಾಮಚಂದ್ರ ಬನಾರಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಟೈಲರ್ ಆಗಿದ್ದ  ಅವರು ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ ನಳಿನಾಕ್ಷಿ, ಪುತ್ರ ಸ್ವಸ್ತಿಕ್, ಪುತ್ರಿ ಚೈತನ್ಯ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ.

ಕುದ್ಮಾರು ರಾಮಚಂದ್ರ ಬನಾರಿ ನಿಧನ Read More »

ಅಣ್ಣು ಶಾಂತಿಗೋಡು ನಿಧನ

ಪುತ್ತೂರು: ಶಾಂತಿಗೋಡು ಗ್ರಾಮದ ಓಲಾಡಿ ದಿ.ಚೋಮರವರ ಪುತ್ರ ಅಣ್ಣು ಶಾಂತಿಗೋಡು (49) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಮೃತರು ಅವಿವಾಹಿತರಾಗಿದ್ದಾರೆ. ಮೃತರು ಸಹೋದರ, ಸಹೋದರಿಯರು, ಬಂದು ಬಳಗದವರನ್ನು ಅಗಲಿದ್ದಾರೆ.

ಅಣ್ಣು ಶಾಂತಿಗೋಡು ನಿಧನ Read More »

ಸಿದ್ದೇಶ್ ಯಾದವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಕಾಲಿಕ ನಿಧನ ಹೊಂದಿದ ಬಳ್ಳಾರಿ ವಿಭಾಗ ಪ್ರಭಾರಿಗಳಾಗಿದ್ದ ಸಿದ್ದೇಶ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮೃತರಿಗೆ ಗೌರವ ಸಮರ್ಪಿಸಿದರು. ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಸಿದ್ಧೇಶ್ ಅವರ ಆತ್ಮಕ್ಕೆ ಸದ್ಗತಿ ದೊರಕಲಿ. ಅವರ ಕುಟುಂಬಕ್ಕೆ ಅಗಲುವಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಸಿದ್ದೇಶ್ ಯಾದವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ Read More »

ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರೊ. ಟಿ.ಓ.ಜೋನ್ ನಿಧನ

ಪುತ್ತೂರು : ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಪ್ರೊ.ಟಿ.ಓ.ಜೋನ್ (80) ನಿಧನರಾಗಿದ್ದಾರೆ. ಕೇರಳದ ಕೊಟ್ಟಾಯಂ ನಿವಾಸಿಯಾಗಿರುವ ಅವರು ಅಸೌಖ್ಯದಿಂದ ಕೇರಳದಲ್ಲಿ ನಿಧನರಾಗಿದ್ದಾರೆ. 1979-80 ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಸೇವೆಗೆ ಸೇರಿದ್ದು, ಸುಮಾರು 33 ವರ್ಷಗಳ ಕಾಲ ಕಾಲೇಜಿನಲ್ಲಿ ಸೇವೆ ಸಲ್ಲಿಸಿ 2012 ರಲ್ಲಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರೊ. ಟಿ.ಓ.ಜೋನ್ ನಿಧನ Read More »

ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮಾಧವ ಗೌಡ ನಿಧನ

ಪುತ್ತೂರು: ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮತ್ತು ಕೊಳಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಮಾಧವ ಗೌಡ(78ವ) ಸೋಮವಾರ ನಿಧನರಾದರು. ಕೊಳ್ತಿಗೆ ಗ್ರಾಮದ ಕೊರಂಬಡ್ಕ ದೊಡ್ಡಮನೆ ನಿವಾಸಿಯಾಗಿರುವ ಅವರು ಅನಾರೋಗ್ಯದಿಂದಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಿಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ನಿವೃತ್ತ ಹೆಡ್‌ಕಾನ್‌ಸ್ಟೇಬಲ್ ಮಾಧವ ಗೌಡ ನಿಧನ Read More »

error: Content is protected !!
Scroll to Top