ನಿಧನ

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಆತ್ಮಹತ್ಯೆ

ಪುತ್ತೂರು: ನಗರಸಭೆ ಸದಸ್ಯ ಶಿವರಾಮ ಸಫಲ್ಯ ಗುರುವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವರಾಮ ಸಪಲ್ಯರು ಒಂದನೇ ವಾರ್ಡ್ ನ ಸದಸ್ಯರಾಗಿದ್ದಾರೆ. ನಗರದ ಹೊರವಲಯದ ಸಾಲ್ಮರ ಸಮೀಪದ ಉರಮಾಲ್ ನಲ್ಲಿ ವಾಸವಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಗುರುವಾರ ಪತ್ನಿ ಹೊರಗೆ ಹೋಗಿದ್ದು, ಪತಿಗೆ ಫೋನ್ ಕರೆ ಮಾಡಿದರೂ ತೆಗೆಯದ ಹಿನ್ನಲೆಯಲ್ಲಿ ಪಕ್ಕದ ಮನೆಯವರಲ್ಲಿ ಮನೆಕಡೆ ಹೋಗುವಂತೆ ತಿಳಿಸಿದ್ದರು. ಪಕ್ಕದ ಮನೆಯವರು ಮನೆಯತ್ತ ಹೋಗಿ ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು […]

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಆತ್ಮಹತ್ಯೆ Read More »

ಮಾಂಬಾಡಿ ರಾಮಕೃಷ್ಣ ಭಟ್‍ ನಿಧನ

ಪುತ್ತೂರು: ಬಡಗನ್ನೂರು ಗ್ರಾಮದ ಪಡುಮಲೆ ನಿವಾಸಿ ಮಾಂಬಾಡಿ ರಾಮಕೃಷ್ಣ ಭಟ್ (95) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಪ್ರಸಿದ್ಧ ಜ್ಯೋತಿಷಿ ಮಾಂಬಾಡಿ ಈಶ್ವರ ಭಟ್ಟರ ಪುತ್ರರಾಗಿದ್ದ ಅವರು ತಮ್ಮ ಚಿಕ್ಕಪ್ಪ ಮಾಂಬಾಡಿ ನಾರಾಯಣ ಭಟ್ಟರಿಂದ ಮದ್ದಳೆ ಕಲಿತು ಹವ್ಯಾಸಿ ಕಲಾವಿದರಾಗಿದ್ದರು. ಕೂಡ್ಲು ಮೇಳದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದು, ಪಡುಮಲೆ ಕೋಟಿ-ಚೆನ್ನಯ ಯುವಕ ಮಂಡಲ ಹಾಗೂ ಬೆನಕ ಯಕ್ಷ ಕಲಾ ವೇದಿಕೆ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು ನಾಲ್ವರು ಪುತ್ರರು, ನಾಲ್ಕು ಮಂದಿ ಪುತ್ತಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

ಮಾಂಬಾಡಿ ರಾಮಕೃಷ್ಣ ಭಟ್‍ ನಿಧನ Read More »

ಕಮಲ ನಿಧನ

ಪುತ್ತೂರು: ಬೆಟ್ಟಂಪಾಡಿಯ ಕುದುರೆಕುಮೇರು ನಿವಾಸಿ ನಾರಾಯಣ ಆಚಾರ್ಯರ ಪತ್ನಿ ಕಮಲ (70 ವ.) ಅಲ್ಪಕಾಲದ ಅಸೌಖ್ಯದಿಂದ ಮಾ. 9ರಂದು ಸ್ವಗೃಹದಲ್ಲಿ ನಿಧನರಾದರು. ಪತಿ, 2 ಗಂಡು, 3 ಹೆಣ್ಣು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕಮಲ ನಿಧನ Read More »

ಮಂಜಕ್ಕ ನಿಧನ

ಪುತ್ತೂರು: ಬೆಳಿಯೂರುಕಟ್ಟೆ ಸಾಜ ನಿವಾಸಿ ದಿ. ಮದನ ಪೂಜಾರಿ ಅವರ ಪತ್ನಿ ಮಂಜಕ್ಕ (97 ವ.) ಮಾರ್ಚ್ 9ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು 7 ಗಂಡು ಮಕ್ಕಳನ್ನು, 3 ಹೆಣ್ಣು ಮಕ್ಕಳನ್ನು, ಮೊಮ್ಮಕ್ಕಳನ್ನು, ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಂಜಕ್ಕ ನಿಧನ Read More »

ಬಾಲಿವುಡ್‌ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ನಿಧನ

ಮುಂಬಯಿ : ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ಇಂದು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ಪ್ರಾಯವಾಗಿತ್ತು.ಹಿರಿಯ ನಟ ಅನುಪಮ್‌ ಖೇರ್‌ ಟ್ವೀಟ್‌ ಮೂಲಕ ಸತೀಶ್‌ ಕೌಶಿಕ್‌ ನಿಧನರಾಗಿರುವುದನ್ನು ತಿಳಿಸಿದ್ದಾರೆ. ನಟಿ ಕಂಗನಾ ರಣಾವತ್‌ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.ಸತೀಶ್‌ ಕೌಶಿಕ್‌, ನಟ, ನಿರ್ದೇಶಕ, ಚಿತ್ರಕಥೆ ಲೇಖಕ, ನಿರ್ಮಾಪಕ ಹೀಗೆ ಎಲ್ಲವೂ ಆಗಿದ್ದರು. ಹಾಸ್ಯ ಪಾತ್ರಗಳಲ್ಲಿ ಅವರು ಮಿಂಚುತ್ತಿದ್ದರು. ಎಲ್ಲ ಪ್ರಮುಖ ನಟರೊಂದಿಗೆ ಸತೀಶ್‌ ಕೌಶಿಕ್‌ ನಟಿಸಿದ್ದಾರೆ. ಹರ್ಯಾಣದವರಾದ ಅವರು ಚಿತ್ರರಂಗಕ್ಕೆ ಬರುವ ಮೊದಲು

ಬಾಲಿವುಡ್‌ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ನಿಧನ Read More »

error: Content is protected !!
Scroll to Top