ನಿಧನ

ಬೆಳ್ಳಿಪ್ಪಾಡಿ ಕೂಟೇಲು ನಿವಾಸಿ ಶೀನಪ್ಪ ಗೌಡ ನಿಧನ

ಪುತ್ತೂರು: ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೂಟೇಲು ನಿವಾಸಿ ಶೀನಪ್ಪ ಗೌಡ ಕೂಟೇಲು (60) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕೃಷಿಕರಾಗಿದ್ದ ಅವರು ಪತ್ನಿ ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ನಿಧನದ 5ನೇ ದಿನದ ಕಾರ್ಯ ನಾಳೆ (ಬುಧವಾರ) ಕೂಟೇಲು ಮನೆಯಲ್ಲಿ ನಡೆಯಲಿದೆ.

ಬೆಳ್ಳಿಪ್ಪಾಡಿ ಕೂಟೇಲು ನಿವಾಸಿ ಶೀನಪ್ಪ ಗೌಡ ನಿಧನ Read More »

ದ.ಕ.ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಭಾಸ್ಕರ ಎಂ. ಮಳವೂರು ನಿಧನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಸದಸ್ಯರಾದ ಭಾಸ್ಕರ ಎಂ. ಮಳವೂರು ಸಿದ್ಧಾರ್ಥನಗರ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರೂ, ಮಳವೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ, ಹಿರಿಯ ಸಮಾಜ ಸೇವಕರೂ  ಹಾಗೂ ಜಿಲ್ಲೆಯ ಖ್ಯಾತ ವಾದ್ಯ ಕಲಾವಿದರೂ ಆಗಿದ್ದರು.   ಅವರು ನಾಲ್ಕು ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರಿಗೆ  ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ

ದ.ಕ.ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಭಾಸ್ಕರ ಎಂ. ಮಳವೂರು ನಿಧನ Read More »

ನಿವೃತ ಡಿ ಸಿ ಆರ್ (ಎನ್ ಆರ್ ಸಿ ಸಿ )ಉದ್ಯೋಗಿ ಸೀತಾರಾಮ್ ಪ್ರಭು ಮುಂಡೋಡಿ ನಿಧನ.

ಪುತ್ತೂರು: ನಿವೃತ್ತ ಡಿಸಿಆರ್ ಉದ್ಯೋಗಿ ಸೀತಾರಾಮ್ ಪ್ರಭು ( 68) ಹೃದಯಾಘಾತದಿಂದ ಸ್ವಗೃಹದಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರು ಮುಂಡೋಡಿ ಕಲ್ಕಾರ್ ನವಶಕ್ತಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ನ ಸದಸ್ಯರಾಗಿದ್ದರು. ಅವರು ಪುತ್ರಿಯರಾದ ರೂಪ, ದೀಪ, ದಿವ್ಯ ಹಾಗೂ ಅಳಿಯಂದಿರು, ಮೊಮಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಮನೆಗೆ ನಿವೃತ ಡಿಸಿಆರ್ ಉದ್ಯೋಗಿಗಳು, ಬಿಜೆಪಿ ಬೂತ್ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಯುವಮೋರ್ಚಾ ಕಾರ್ಯದರ್ಶಿ ವಿನೋದ್ ಕರ್ಪುತಮೂಳೆ, ಶಿವಪ್ರಸಾದ್ ಕೈಂಡಾಡಿ, ಹಾಗೂ ಗಣ್ಯರು, ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ

ನಿವೃತ ಡಿ ಸಿ ಆರ್ (ಎನ್ ಆರ್ ಸಿ ಸಿ )ಉದ್ಯೋಗಿ ಸೀತಾರಾಮ್ ಪ್ರಭು ಮುಂಡೋಡಿ ನಿಧನ. Read More »

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ, ರಾಧಾಕೃಷ್ಣ ಭಕ್ತ ನಿಧನ.

ಪುತ್ತೂರು: ಪುತ್ತೂರು ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದಲ್ಲಿ ಅಧ್ಯಕ್ಷರಾಗಿ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಉದ್ಯಮಿ, ಸಂಘಟನಾ ಚತುರ ರಾಧಾಕೃಷ್ಣ ಭಕ್ತ (72) ಗುರುವಾರ ನಿಧನರಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಅಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ರಾಧಕೃಷ್ಣ ಭಕ್ತರು ಧಾರ್ಮಿಕ ಮುಂದಾಳುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಪುತ್ತೂರಿನಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜ್‌ ಸ್ಥಾಪನೆಯ ಮುಖ್ಯ ರೂವಾರಿಯಾಗಿದ್ದರು. ಹಲವು ವರ್ಷಗಳ ಕಾಲ ಪುತ್ತೂರಿನ ಲಕ್ಷ್ಮೀ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ, ರಾಧಾಕೃಷ್ಣ ಭಕ್ತ ನಿಧನ. Read More »

ದರ್ಬೆ ‘ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್’ ಮಾಲಕ ಆತ್ಮಹತ್ಯೆ

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಶಾಲಾ ಸಮೀಪದ ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್ ಶಾಪ್ ಮಾಲಕ ರಮೇಶ್ (49 ವ.) ತಮ್ಮ ಶಾಪ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಜೇಸಿಐ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ದರ್ಬೆ ‘ಚೈತ್ರಾ ಇಲೆಕ್ಟ್ರಾನಿಕ್ಸ್ ಕಾರ್ ಆಕ್ಸಸರೀಸ್’ ಮಾಲಕ ಆತ್ಮಹತ್ಯೆ Read More »

ಪಂಜಾಬ್‌ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನ

ಚಂಡೀಗಢ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಶಿರೋಮಣಿ ಅಖಾಲಿದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ (95) ನಿನ್ನೆ ರಾತ್ರಿ ನಿಧನರಾಗಿದ್ದಾರೆ.ಮೊಹಾಲಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಚಿಕಿತ್ಸೆಗೆ ದಾಖಲಾಗಿದ್ದರು. ಪ್ರಕಾಶ್ ಸಿಂಗ್ ಬಾದಲ್ ನಿಧನ ಸುದ್ದಿಯನ್ನು ಅವರ ಆಪ್ತ ಸಹಾಯಕರು ಹಾಗೂ ಪುತ್ರರು ದೃಢಪಡಿಸಿದ್ದಾರೆ. ಪ್ರಕಾಶ್ ಸಿಂಗ್ ಬಾದಲ್ 5 ಬಾರಿ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದರು. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತಿಮ ಸಂಸ್ಕಾರ ಭಟಿಂಡದ ಬಾದಲ್ ಗ್ರಾಮದಲ್ಲಿ ನಡೆಯಲಿದೆ. ಬುಧವಾರ ಬೆಳಗ್ಗೆ ಅವರ ಪಾರ್ಥಿವ

ಪಂಜಾಬ್‌ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ನಿಧನ Read More »

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಧರ್ಮಸ್ಥಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆರಿಯಾ ಗ್ರಾಮದ ಸಿಯೊನ್ ಆಶ್ರಮದಲ್ಲಿ ಏ.23 ರಂದು ಸಂಭವಿಸಿದೆ.ಕಿಶೋರ್ ಕುಮಾರ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮಧ್ಯಾಹ್ನದ ಊಟಕ್ಕೆ ಬಾರದೇ ಇರುವುದನ್ನು ಗಮನಿಸಿ ಆಶ್ರಮದ ಸಿಬ್ಬಂಧಿ ಜಿಬಿನ್ ಎಂಬವರು ಹೋಗಿ ನೋಡಿದಾಗ, ಹಾಲ್‌ನ ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು

ಸುಳ್ಯ : ಬೆಂಗಳೂರಿನಲ್ಲಿ ನಡೆದ ಕಾರು ಬೈಕ್‌ ಡಿಕ್ಕಿ ಅಪಘಾತದಲ್ಲಿ ಕೊಲ್ಲಮೊಗ್ರ ನಿವಾಸಿಯೋರ್ವರು ಸಾವನಪ್ಪಿರುವ ಘಟನೆ ಏ.25 ರಂದು ಸಂಭವಿಸಿದೆ. ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷಿ ದಂಪತಿಯ ಪುತ್ರ ಯತೀಶ್ ಬಾಳೆಬೈಲು(30) ಮೃತಪಟ್ಟವರು. ಸೋಮವಾರ ಬೆಳಗ್ಗೆ ಯತೀಶ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯತೀಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿರುವ ಯತೀಶ್ ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು. ಮೃತರು

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು Read More »

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ

ತೃಶೂರ್ : ಎಂಟು ವರ್ಷದ ಬಾಲಕಿ ಮೊಬೈಲ್ ಫೋನ್ ಸ್ಫೋಟಗೊಂಡು ಮೃತಪಟ್ಟಿರುವ ದಾರುಣ ಘಟನೆ ಕೇರಳದಲ್ಲಿ ಸಂಭವಿಸಿದೆ. ಮೂರನೇ ತರಗತಿ ಬಾಲಕಿ ಆದಿತ್ಯಶ್ರೀ ರಾತ್ರಿ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಸುಟ್ಟ ಗಾಯವಾಗಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯಿದರೂ ಪ್ರಯೋಜನವಾಗಲಿಲ್ಲ. ತಶೂರು ಸಮೀಪದ ತಿರುವಿಲಾಮಲದ ಪಟ್ಟಿಪರಂಬು ಎಂಬಲ್ಲಿ ಈ ಘಟನೆ ಸಂಭವಿಸಿದೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ Read More »

ರೈಲಿನ ಟಾಯ್ಲೆಟ್‌ನಲ್ಲಿ ಮೃತದೇಹ ಪತ್ತೆ : ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ

ಮುಂಬಯಿ-ಮಂಗಳೂರು ರೈಲಿನಲ್ಲಿ ನಡೆದ ಮನಕಲಕುವ ಘಟನೆ ಮಂಗಳೂರು : ರೈಲಿನಲ್ಲಿ ಮೃತಪಟ್ಟ ವ್ಯಕ್ತಿಯ ಶವ ಮುಂಬಯಿಯಿಂದ ಮಂಗಳೂರು ತನಕ ಬಂದು ವಾಪಸು ಮುಂಬಯಿಗೆ ಹೋದ ಘಟನೆ ಮುಂಬಯಿ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನಾಪತ್ತೆಯಾಗಿದ್ದಾರೆಂದು ಭಾವಿಸಿ ಈ ವ್ಯಕ್ತಿಯ ಮನೆಯವರು ಮಂಗಳೂರು ಮತ್ತು ಮುಂಬಯಿಯಲ್ಲಿ ಹಲವು ನಿಲ್ದಾಣಗಳಲ್ಲಿ ಹುಡುಕಾಡಿದ್ದರು. ರೈಲಿನ ಸಿಬ್ಬಂದಿ ಕೂಡ ಇಡೀ ರೈಲನ್ನು ಹುಡುಕಾಡಿ ರೈಲಿನಲ್ಲಿ ಪತ್ತೆಯಾಗಿಲ್ಲ ಎಂದು ವರದಿ ನೀಡಿದ್ದರು. ಆದರೆ ಶವ ಭರ್ತಿ 24 ತಾಸು ಶೌಚಾಲಯದ ಒಳಗೆ

ರೈಲಿನ ಟಾಯ್ಲೆಟ್‌ನಲ್ಲಿ ಮೃತದೇಹ ಪತ್ತೆ : ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ Read More »

error: Content is protected !!
Scroll to Top