ನಿಧನ

ಖ್ಯಾತ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನ

ಮಂಗಳೂರು: ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ (ಮೂತ್ರಶಾಸ್ತ್ರ ವಿಭಾಗ) ತಜ್ಞರಾಗಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ […]

ಖ್ಯಾತ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನ Read More »

ಯೆಳ್ತಿಮಾರ್ ವೈ.ಸರಸ್ವತಿ ಶೆಣೈ ನಿಧನ

ಪುತ್ತೂರು: ದಿ.ಯೆಳ್ತಿಮಾರ್ ಸುಬ್ರಾಯ ಶೆಣೈ ಅವರ ಪತ್ನಿ ವೈ.ಸರಸ್ವತಿ ಶೆಣೈ (70.) ಸ್ವಗೃಹ ಜಿಡೆಕಲ್ಲಿನ ಪದ್ಮಾವತಿ ನಿಲಯದಲ್ಲಿ ನಿಧನರಾದರು. ಮೃತರು ಪುತ್ರ ದಾಮೋದರ ವಿನಾಯಕ ಶೆಣೈ, ಮಗಳು ವೈ.ಧನಲಕ್ಷ್ಮೀ, ಅಳಿಯ ಆದಿತ್ಯ ಬಾಳಿಗ ಹಾಗೂ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

ಯೆಳ್ತಿಮಾರ್ ವೈ.ಸರಸ್ವತಿ ಶೆಣೈ ನಿಧನ Read More »

ಕೊಲ್ಯ ನಿವಾಸಿ ಧರ್ಮಾವತಿ ಆಚಾರ್ಯ ನಿಧನ

ಪುತ್ತೂರು: ಸಂಪ್ಯ ಕೊಲ್ಯ ನಿವಾಸಿ ದಿವಂಗತ ನಾರಾಯಣ ಆಚಾರ್ಯ ಅವರ ಪತ್ನಿ ಧರ್ಮಾವತಿ ಆಚಾರ್ಯ (76 ವ.) ಅವರು ಅಸೌಖ್ಯದಿಂದ ನ. 15ರ ಬುಧವಾರ ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ಪುತ್ರರಾದ ವೆಂಕಟೇಶ್, ಉದಯ, ಪುತ್ರಿಯರಾದ ಆಶಾಲತಾ, ವಾಗೀಶ್ವರಿ, ಸೊಸೆ ಭಾರತೀ ಅವರನ್ನು ಅಗಲಿದ್ದಾರೆ.

ಕೊಲ್ಯ ನಿವಾಸಿ ಧರ್ಮಾವತಿ ಆಚಾರ್ಯ ನಿಧನ Read More »

ಕಬಕ ಬೈಲು ನಿವಾಸಿ ಭೈರಪ್ಪ ಗೌಡ ನಿಧನ

ಕಬಕ: ಇಲ್ಲಿನ ಬೈಲು ನಿವಾಸಿ ಬೈರಪ್ಪ ಗೌಡ ಶನಿವಾರ ರಾತ್ರಿ ಸ್ವಗೃಹದಲ್ಲಿ ಹೃದಯದಾಘತದಿಂದ ನಿಧನರಾದರು. ಲಾರಿ ಚಾಲಕ ಹಾಗೂ ನಿರ್ವಾಹಕ ಕೆಲಸ ನಿರ್ವಹಿಸುತಿದ್ದ ಅವರು ಹಲವು ವರ್ಷಗಳಿಂದ ನಿವೃತ್ತಿ ಜೀವನ ನಡೆಸುತಿದ್ದರು. ಮೃತರು ಪತ್ನಿ,ಪುತ್ರ ಹಾಗೂ ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಬಕ ಬೈಲು ನಿವಾಸಿ ಭೈರಪ್ಪ ಗೌಡ ನಿಧನ Read More »

ಹೃದಯಾಘಾತದಿಂದ ನವವಿವಾಹಿತೆ ಪುಷ್ಪಾ ಮೃತ್ಯು

ಪುತ್ತೂರು: ನವವಿವಾಹಿತೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಪಡುವನ್ನೂರು ಗ್ರಾಮದ ಪದಡ್ಕದಲ್ಲಿ ನಡೆದಿದೆ. ಪುಷ್ಪಾ (22) ಹೃದಯಾಘಾತದಿಂದ ಮೃತಪಟ್ಟವರು. ಅವರಿಗೆ ಬೆಳಗ್ಗೆ 4 ಗಂಟೆಯ ಸುಮಾರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆ ತಲುಪುವ ಮೊದಲೇ ಪುಷ್ಪಾ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪುಷ್ಪಾ ಅವರು ಕೇವಲ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ.

ಹೃದಯಾಘಾತದಿಂದ ನವವಿವಾಹಿತೆ ಪುಷ್ಪಾ ಮೃತ್ಯು Read More »

ಗಂಡಿಬಾಗಿಲು ಶಾಲಾ ಮುಖ್ಯ ಶಿಕ್ಷಕ ಜನಾರ್ದನ ಗೌಡ ನಿಧನ

ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ, ಅಲಂಕಾರು ಗ್ರಾಮದ ತೀರ್ಥಜಾಲು ನಿವಾಸಿ ಜನಾರ್ದನ ಗೌಡ (59) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ಜನಾರ್ದನ ಗೌಡ ಅವರು ಮಂಗಳವಾರ ಮಧ್ಯಾಹ್ನದ ವರೆಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. ರಾತ್ರಿ ಅವರಿಗೆ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದರಾದರು ಆ ವೇಳೆಗಾಗಲೇ ಜನಾರ್ದನಗೌಡರವರು ವೃತಪಟ್ಟಿದ್ದರು ಎನ್ನಲಾಗಿದೆ.

ಗಂಡಿಬಾಗಿಲು ಶಾಲಾ ಮುಖ್ಯ ಶಿಕ್ಷಕ ಜನಾರ್ದನ ಗೌಡ ನಿಧನ Read More »

ಸೂರಪ್ಪ ಗೌಡ ಇಡ್ಯಡ್ಕ ನಿಧನ

ಕಾಣಿಯೂರು : ಇಡ್ಯಡ್ಕ ನಿವಾಸಿ ಸೂರಪ್ಪ ಗೌಡ ಇಡ್ಯಡ್ಕ ಸೋಮವಾರ ನಿಧನರಾದರು. ಮೃತರು ಇಡ್ಯಡ್ಕ ಕುಟುಂಬದ ಯಜಮಾನರಾಗಿದ್ದಾರೆ. ಮೃತರು ಪುತ್ರರಾದ ರಮೇಶ ಗೌಡ, ಕುಸುಮಾಧರ ಗೌಡ, ಪುತ್ರಿಯರಾದ ಕುಸುಮಾವತಿ, ಮೀನಾಕ್ಷಿ, ಸೊಸೆಯಂದಿರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಸೂರಪ್ಪ ಗೌಡ ಇಡ್ಯಡ್ಕ ನಿಧನ Read More »

ಬಂಡೀಪುರ ರಾಂಪುರ ಆನೆ ಶಿಬಿರದ ವಿನಾಯಕ ಕುಸಿದು ಬಿದ್ದು ಸಾವು

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿದ್ದ ವಿನಾಯಕ ಎಂಬ ಆನೆ ಮಂಗಳವಾರ ಸಾವನ್ನಪ್ಪಿದೆ. ಆನೆಗಳಿಗೆ ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ದಿಢೀರ್‌ ಆಗಿ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆನೆಗೆ ಅಕ್ಕಿರಾಜ, ವಿನಾಯಗನ್‌ ಎಂಬ ಹೆಸರು ಇದೆ. ಕೊಯಮತ್ತೂರಿನಲ್ಲಿ 2021ರಲ್ಲಿ ಈ ಆನೆಯನ್ನು ಸೆರೆ ಹಿಡಿದು ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು. ಆನೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ

ಬಂಡೀಪುರ ರಾಂಪುರ ಆನೆ ಶಿಬಿರದ ವಿನಾಯಕ ಕುಸಿದು ಬಿದ್ದು ಸಾವು Read More »

ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಸುಪ್ರೀತ್ ನಿಧನ

ಸರ್ವೆ: ಕಲ್ಪನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 7ನೇ ತರಗತಿ ವಿದ್ಯಾರ್ಥಿ ಸುಪ್ರೀತ್ ಬುಧವಾರ ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಸುಪ್ರೀತ್‍ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಪ್ರೀತ್ ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಹಾಗೂ ಕುಂಞ ಮೇಸ್ತ್ರಿ ದಂಪತಿ ಪುತ್ರ.

ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಸುಪ್ರೀತ್ ನಿಧನ Read More »

ನೆಲ್ಲಿಕಟ್ಟೆ ರುಕ್ಮಿಣಿ ನಿಧನ

ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ರುಕ್ಮಿಣಿ (92) ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು. ನೆಲ್ಲಿಕಟ್ಟೆ ದಿ.ಭಟ್ಯಪ್ಪ ಗೌಡರ ಪತ್ನಿಯಾಗಿರುವ ಅವರು ವಯೋ ಸಹಜ ನಿಧನರಾದರು. ಮೃತರು ಪುತ್ರರಾದ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ಗೌಡ, ನಿವೃತ್ತ ಎಸ್ಪಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ, ಶ್ರೀ ಮಹಾಲಿಂಗೇಶ್ವರ ಐಟಿಐ ಆಡಳಿತ ಸಮಿತಿ ನಿರ್ದೇಶಕ ಕಿಶೋರ್ ಕುಮಾರ್, ಪುತ್ರಿಯರಾದ ಜಯಲಕ್ಷ್ಮೀ ತಾರಾಮತಿ, ಭಾರತಿ, ಅಂಬಿಕಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ನೆಲ್ಲಿಕಟ್ಟೆ ರುಕ್ಮಿಣಿ ನಿಧನ Read More »

error: Content is protected !!
Scroll to Top