ನಿಧನ

ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ಮೃತ್ಯು

ಒಂದೇ ಕುಟುಂಬದ 6 ಮಂದಿ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಗುಜರಾತ್​ನ ಖೇಡಾ ಜಿಲ್ಲೆಯ ಮೆಶ್ವೋ ನದಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ನಾಡಿಯಾಡ್ ಅಗ್ನಿಶಾಮಕ ದಳದ ತಂಡವು ಕನಿಜ್ ಗ್ರಾಮದ ಬಳಿ ಸ್ಥಳಕ್ಕೆ ತಲುಪಿ, ಆರು ಶವಗಳನ್ನು ನದಿಯಿಂದ ಹೊರತೆಗೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನಿಜ್ ಗ್ರಾಮದ ಬಳಿಯ ನದಿಯಲ್ಲಿ ಸಂಜೆ ಸ್ನಾನ ಮಾಡಲು ಆರು ಮಂದಿ ತೆರಳಿದ್ದರು. ನೀರಿನ ಆಳ ತಿಳಿಯದೇ ಇಳಿದು ಈಜಲಾಗದೆ ಪ್ರಾಣ […]

ನದಿಯಲ್ಲಿ ಸ್ನಾನ ಮಾಡಲು ಹೋಗಿ ಒಂದೇ ಕುಟುಂಬದ 6 ಮಂದಿ ಮೃತ್ಯು Read More »

ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ

ಸುಳ್ಯ; ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ ಹೊಂದಿರುವ ಘಟನೆ ಕನಕಮಜಲಿನಲ್ಲಿ ನಡೆದಿದೆ. ಕನಕಮಜಲು ಗ್ರಾಮದ ನೆಡಿಲು ಸೋಮಪ್ಪ ಗೌಡರು ಏ.17 ರಂದು ನಿಧನ ಹೊಂದಿದ್ದರು. ಹನ್ನೊಂದನೇ ದಿನದ ಕಾರ್ಯಕ್ರಮ ಏ. 28 ರಂದು ನಡೆಯುತ್ತಿತ್ತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಧ್ಯಾಹ್ನದ ವೇಳೆಗೆ ಪತ್ನಿ ಸುಬ್ಬಕ್ಕೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ, ಕೂಡಲೇ ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ Read More »

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ಸಿಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ಸಮೀಪ ನಡೆದಿದೆ. ಕೇರಳ ರಿಜಿಸ್ಟ್ರೇಷನ್ ಹೊಂದಿರುವ ಬೈಕ್ ಇದಾಗಿದ್ದು, ಮೃತ ಸವಾರನ ಕುರಿತು ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆಎಸ್‌ಆರ್‌ಟಿಸಿ- ಬೈಕ್‍ ಡಿಕ್ಕಿ | ಬೈಕ್‍ ಸವಾರ ಮೃತ್ಯು Read More »

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು

ಪುತ್ತೂರು: ಕಾಡಾನೆ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್ ಸಿ ಕಾಲನಿಯಿಂದ ವರದಿಯಾಗಿದೆ. ರಬ್ಬರ್ ಟ್ಯಾಪಿಂಗ್ ಗೆ ತೆರಳಿದ ಅರ್ತಿಯಡ್ಕದ ಮಹಿಳೆಯೋರ್ವರ ಮೇಲೆ ಎ.29 ರಂದು ಮುಂಜಾನೆ ಆನೆ ದಾಳಿ ನಡೆಸಿದೆ. ಆನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

ಕಾಡಾನೆ ದಾಳಿಯಿಂದ ಮಹಿಳೆ ಮೃತ್ಯು Read More »

ಬರಗಾಲ ಸಿದ್ಧನಾಥ ಆಶ್ರಮದ ಶ್ರೀ ಮಾಧವಾನಂದ ಮಹಾರಾಜರು ಲಿಂಗೈಕ್ಯ

ಪುತ್ತೂರು: ಬರಗಾಲ ಸಿದ್ಧನಾಥ ಆಶ್ರಮ ಬ್ರಹ್ಮಗಡ್ಡಿ ಮಠ, ಮುಸ್ಟೂರು, ಕಾರಟಗಿ ತಾ. ಕೊಪ್ಪಳ ಜಿಲ್ಲೆಯ ಶ್ರೀ ಮಾಧವಾನಂದ ಮಹಾರಾಜರು ಇಂದು ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ. ಬಳ್ಪ ಗ್ರಾಮದ ಎಣ್ಣೆಮಜಲು ಮನೆಯವರಾಗಿದ್ದು, ಸುಮಾರು 45  ವರ್ಷಗಳ ಹಿಂದೆ ಕುಟುಂಬ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಪ್ರಸ್ತುತ ಬರಗಾಲ ಸಿದ್ಧನಾಥ ಆಶ್ರಮ ಬ್ರಹ್ಮಗಡ್ಡಿ ಮಠ, ಮುಸ್ಟೂರು, ಕಾರಟಗಿ ತಾ. ಕೊಪ್ಪಳ ಜಿಲ್ಲೆ ಇಲ್ಲಿ ಸ್ವಾಮೀಜಿ ಯಾಗಿ, ಮಠದ ಮಹಾರಾಜರಾಗಿ ಸಾವಿರಾರು ಭಕ್ತರನ್ನು ಹೊಂದಿದ್ದರು. ಅವರ ಅಂತ್ಯಕ್ರಿಯೆ ನಾಳೆ (ಏ.28) ಮಧ್ಯಾಹ್ನ 11.20 ಕ್ಕೆ

ಬರಗಾಲ ಸಿದ್ಧನಾಥ ಆಶ್ರಮದ ಶ್ರೀ ಮಾಧವಾನಂದ ಮಹಾರಾಜರು ಲಿಂಗೈಕ್ಯ Read More »

ಇಂದು ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅಂತ್ಯಕ್ರಿಯೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ.ಕಸ್ತೂರಿ ರಂಗನ್ ನಿನ್ನೆ ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ 12 ರವರೆಗೆ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಇಸ್ರೊ ತಿಳಿಸಿದೆ. ಡಾ. ಕಸ್ತೂರಿರಂಗನ್ ಅವರ ಹಿರಿಯ ಮಗ ಸಂಜಯ್ ರಂಜನ್

ಇಂದು ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅಂತ್ಯಕ್ರಿಯೆ Read More »

ಗುಡ್ಡೆಯಲ್ಲಿ ಅನ್ಯವ್ಯಕ್ತಿಯ ಶವ ಪತ್ತೆ

ವಿಟ್ಲ: ಗುಡ್ಡೆಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾದ ಘಟನೆ ಸಾಲೆತ್ತೂರು ಸಮೀಪದ ಪಾಲ್ತಾಜೆ ಎಂಬಲ್ಲಿ ನಡೆದಿದೆ. ಸ್ಥಳದಲ್ಲಿ ಸಾರ್ವಜನಿಕರು ಧಾವಿಸಿದ್ದು,  ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ .ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಗುಡ್ಡೆಯಲ್ಲಿ ಅನ್ಯವ್ಯಕ್ತಿಯ ಶವ ಪತ್ತೆ Read More »

ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ

ಕಡಬ: ಅತ್ಯುತ್ತಮ ಹೆಸರಾಂತ ಕಬಡ್ಡಿ ಆಟಗಾರ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿಯಲ್ಲಿ ಗಮನ ಸೆಳೆದಿದ್ದ ಕಡಬದ ಕೋಕಿಲಾನಂದ ಆಸ್ಪತ್ರೆಯಲ್ಲಿ ನಿಧನರಾದರು. ಇತ್ತೀಚೆಗೆ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿದ್ದ ಕೋಕಿಲಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರ ಚಿಕಿತ್ಸೆಗೆ ಹಲವು ಧಾನಿಗಳು ಆರ್ಥಿಕ ಸಹಾಯವನ್ನು ನೀಡಿದ್ದರು. ಕೋಕಿಲಾನಂದ ಅವರು ಕಡಬ ನಿವಾಸಿಯಾಗಿದ್ದು, ಕೇವಲ ಕಬಡ್ಡಿ ಆಟ ಮಾತ್ರವಲ್ಲದೆ ಊರಿನ ಕೆಲವೊಂದು ಸಮಸ್ಯೆಗೆ ಹೋರಾಟ ಕೂಡಾ ನಡೆಸಿದ್ದರು. ಕಡಬದಲ್ಲಿ ಆನೆ ದಾಳಿಯ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳ

ಹೆಸರಾಂತ ಕಬಡ್ಡಿ ಆಟಗಾರ ಕೋಕಿಲಾನಂದ ನಿಧನ Read More »

ಸೀತಾರಾಮ ಪಟ್ಟೆ ವಿಧಿವಶ

ಪುತ್ತೂರು – ಉಪ್ಪಿನಂಗಡಿ ರಸ್ತೆಯ ಪಡೀಲಿನಲ್ಲಿರುವ ಬಾಳಪ್ಪ ಕಾಂಪ್ಲೆಕ್ಸ್’ನಲ್ಲಿ ಎಸ್.ಆರ್. ಹಾರ್ಡ್’ವೇರ್ ಉದ್ಯಮ ನಡೆಸುತ್ತಿದ್ದ ಸೀತಾರಾಮ ಪಟ್ಟೆಯವರು ಇಂದು ಮುಂಜಾನೆ 5.30ಕ್ಕೆ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈಚೆಗೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪತ್ನಿ ಶೋಭಾ ಮತ್ತು ಅಂಬಿಕಾ ಸೆಂಟ್ರಲ್ ಸ್ಕೂಲ್’ನಲ್ಲಿ 10ನೆ ತರಗತಿ ವ್ಯಾಸಂಗ ಮಾಡುತ್ತಿರುವ ಮಗಳು ಮನಸ್ವಿ ಮತ್ತು 6ನೆ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೇಯಸ್ ಅವರನ್ನು ಅಗಲಿದ್ದಾರೆ. ಸೀತಾರಾಮ ಅವರು ಪಡೀಲ್’ನಲ್ಲಿರುವ ‘ಸಮೃದ್ಧಿ ಕಾಂಪ್ಲೆಕ್ಸ್’ನ ಮಾಲಕರು ಆಗಿದ್ದರು. ಪುಟ್ಟದೊಂದು ಸರಕು ಸಾಗಣೆಯ

ಸೀತಾರಾಮ ಪಟ್ಟೆ ವಿಧಿವಶ Read More »

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಯುವಕನೊಬ್ಬ ನದಿಗೆ ಬಿದ್ದು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಳಿ ಸಾಕಾಣಿಕೆ ವಾಹನದಲ್ಲಿ ದುಡಿಯುತ್ತಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುದುರು ನಿವಾಸಿ ಮನ್ಸೂರ್ (19) ಎಂಬಾತ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಗೆ ಏ.17 ರಂದು ರಾತ್ರಿ ಟಿ.ನರಸೀಪುರ ತಾಲೂಕಿನ ಬನ್ನೂರು ನಲ್ಲಿ ತಂಗಿದ್ದರು. ಏ.18 ರಂದು ಬೆಳಗ್ಗೆ ಸ್ಥಳೀಯ ಕಾವೇರಿ ನದಿಯಲ್ಲಿ ವಾಹನ ತೊಳೆದು, ಸ್ನಾನ ಮಾಡಲು ತೆರಳಿದ

ಬೆಳ್ತಂಗಡಿಯ  ಯುವಕ ಮೈಸೂರಿನಲ್ಲಿ ನದಿಗೆ ಬಿದ್ದು ಮೃತ್ಯು Read More »

error: Content is protected !!
Scroll to Top