ನಿಧನ

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರ ತಾಯಿ ಅಮಣಿ ಶೆಟ್ಟಿ ನಿಧನರಾಗಿದ್ದಾರೆ. 85 ವರ್ಷ ಪ್ರಾಯದ ಅಮಣಿ ಶೆಟ್ಟಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರು ಪುತ್ರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಮಾತೃವಿಯೋಗ Read More »

ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ನಿಧನ

ಪುತ್ತೂರು: ನಿವೃತ್ತ ಪ್ರಾಂಶುಪಾಲ ಕಲ್ಲಾರೆ ನಿವಾಸಿ ವಿಶ್ವನಾಥ ಶೆಟ್ಟಿ (78) ಇಂದು ನಿಧನರಾದರು. ವಿಶ್ವನಾಥ ಶೆಟ್ಟಿಯವರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ ಬಳಿಕ ಬಂಟ್ವಾಳ ತಾಲೂಕಿನ ವಾಮದಪದವು ಜೂನಿಯ‌ರ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಿಶ್ವನಾಥ ಶೆಟ್ಟಿಯವರ ಪುತ್ರ ಕಳೆದ ಒಂದು ವರ್ಷಗಳ ಹಿಂದೆ ಹೃದಯಾಘಾತದಿಂದ  ನಿಧನರಾಗಿದ್ದರು.

ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ನಿಧನ Read More »

ಅನಾರೋಗ್ಯದಿಂದಿದ್ದ ಯುವತಿ ಐಶ್ವರ್ಯ ನಿಧನ

ಪುತ್ತೂರು: ಕಲ್ಲೇಗ ರಕ್ತೇಶ್ವರಿ ವಠಾರ ನಿವಾಸಿ ಐಶ್ವರ್ಯ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಂಜಿನಿಯರಿಂಗ್‍ ಪದವೀಧರೆಯಾಗಿರುವ ಐಶ್ವರ್ಯ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯತ್ತಿದ್ದರು ಎನ್ನಲಾಗಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮನೆಯವರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದಿದ್ದ ಯುವತಿ ಐಶ್ವರ್ಯ ನಿಧನ Read More »

ಪಿಎಲ್‍ ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್‍ ನಿಧನ

ಪುತ್ತೂರು: ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರ ತಂದೆ ಹಸಂತಡ್ಕ ರಾಮ ಭಟ್ ಜ.21 ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷರಾಗಿದ್ದ ಅವರು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದರು. ಅವರು ಈ ಹಿಂದೆ ಪುತ್ರನ ವಿವಾಹ ಸಂದರ್ಭದಲ್ಲಿ ನೇತ್ರದಾನ ಮಾಡುವ ಕುರಿತು ನೋಂದಾವಣೆ ಮಾಡಿದ್ದರು. ಅದರಂತೆ ಭಾನುವಾರ ರಾತ್ರಿ ಮಂಗಳೂರಿನಿಂದ ನೇತ್ರ ತಜ್ಞರು ಆಗಮಿಸಿದ್ದರು. ಮೃತರರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಿಎಲ್‍ ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್‍ ನಿಧನ Read More »

ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರ ಸ್ಥಾಪಕಾಧ್ಯಕ್ಷ ಶ್ರೀಪಾಲ್ ಜೈನ್ ನಿಧನ

ಪುತ್ತೂರು: ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಶ್ರೀಪಾಲ್ ಜೈನ್ (74) ನಿಧನರಾಗಿದ್ದಾರೆ. ಕೊಡುಗೈ ದಾನಿಯಾಗಿದ್ದ ಅವರು, ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದರು. ಸಾಮಾಜಿಕ, ಧಾರ್ಮಿಕ ಮುಖಂಡರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಸೊಸೆಯಂದಿರನ್ನು ಅಗಲಿದ್ದಾರೆ.

ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರ ಸ್ಥಾಪಕಾಧ್ಯಕ್ಷ ಶ್ರೀಪಾಲ್ ಜೈನ್ ನಿಧನ Read More »

ಮೋದಿ ಹುಟ್ಟುಹಬ್ಬದಂದು ಉಚಿತ ಸೇವೆ ನೀಡುತ್ತಿದ್ದ ಸೆಲೂನ್ ಬಾಲ ನಿಧನ

ಪುತ್ತೂರು: ದೂರದ ತಮಿಳ್ನಾಡಿನಲ್ಲಿ ಜನಿಸಿ ಪುತ್ತೂರಿನ ಸಂಟ್ಯಾರ್ ನಲ್ಲಿ ಸೆಲೂನ್ ಬಾಲ ಅಣ್ಣಾ ಎಂದೇ ಖ್ಯಾತರಾಗಿದ್ದ ಬಾಲ ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಎಲ್ಲರಿಗೂ ಚಿರಪರಿಚಿತರಾಗಿ ತನ್ನ ಕಾಯಕವನ್ನು ನಿಷ್ಠೆಯಿಂದ ಪ್ರೀತಿಯಿಂದ ಮಾಡುತ್ತಿರುವ ಬಾಲಾ ಅವರು ಜ. 07ರಂದು ಸ್ವಗೃಹ ದಲ್ಲಿ ಹೃದಯಘಾತದಿಂದ ನಿಧನ ರಾಗಿದ್ದಾರೆ. ಅಪ್ಪಟ ದೇಶಪ್ರೇಮಿಯಾಗಿರುವ ಬಾಲ ಅವರು ನರೇಂದ್ರ ಮೋದಿಯ ಅಪ್ಪಟ ಅಭಿಮಾನಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಹುಟ್ಟುಹಬ್ಬದಂದು ತನ್ನ ಸೆಲೂನ್ ನಲ್ಲಿ ಎಲ್ಲರಿಗೂ ಉಚಿತವಾಗಿ ಹೇರ್ ಕಟ್ಟಿಂಗ್ ಮಾಡಿಸುತ್ತಿದ್ದರು ಎಂದು ಸ್ಥಳೀಯರು

ಮೋದಿ ಹುಟ್ಟುಹಬ್ಬದಂದು ಉಚಿತ ಸೇವೆ ನೀಡುತ್ತಿದ್ದ ಸೆಲೂನ್ ಬಾಲ ನಿಧನ Read More »

ಎಡಕ್ಕಾನ ಗಣಪತಿ ಭಟ್ ನಿಧನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಅಯ್ಯಪ್ಪ ಗುಡಿಯ ಮಾಜಿ ಅರ್ಚಕ ಸುಳ್ಯ ತಾಲೂಕಿನ ಕಲ್ಮಡ್ಕ ನಿವಾಸಿ ಎಡಕ್ಕಾನ ಗಣಪತಿ  ಭಟ್ (79) ಶನಿವಾರ ನಿಧನರಾದರು. ಕಲ್ಮಡ್ಕದ ಎಡಕ್ಕಾನ ನಿವಾಸಿಯಾಗಿರುವ ಮೃತರು ಹಲವು ವರ್ಷಗಳ ಕಾಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಯ್ಯಪ್ಪ ಗುಡಿಯಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅಸೌಖ್ಯದಿಂದ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.

ಎಡಕ್ಕಾನ ಗಣಪತಿ ಭಟ್ ನಿಧನ Read More »

ಅನಾರೋಗ್ಯದಿಂದ ಯುವತಿ ಮೃತ್ಯು !

ಕಡಬ: ಯುವತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಎಡಮಂಗಲ ಗ್ರಾಮದ ಗಂಡಿತಡ್ಕ ರಾಮಚಂದ್ರ ನಾಯ್ಕ ಎಂಬವರ ಪುತ್ರಿ ತೃಪ್ತಿ ಮೃತಪಟ್ಟ ಯುವತಿ ಸುಬ್ರಹ್ಮಣ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ತೃಪ್ತಿ ಎರಡು ದಿನಗಳಿಂದ ಅನಾರೋಗ್ಯದಿಂದಿದ್ದು, ಗುರುವಾರ ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅನಾರೋಗ್ಯದಿಂದ ಯುವತಿ ಮೃತ್ಯು ! Read More »

ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ!

ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕನ್ಬೌರ್ (78) ನಿಧನರಾಗಿದ್ದಾರೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಪ್ರಕಟಿಸಿದೆ. “ಫ್ರಾಂಜ್ ಬೆಕನ್ಬೌರ್ ಅಗಲಿಕೆ ತೀವ್ರ ದುಃಖದ ವಿಚಾರ” ಎಂದು ಅವರ ಕುಟುಂಬವು ಜರ್ಮನ್ ಸುದ್ದಿ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ. 1974ರಲ್ಲಿ ಜರ್ಮನಿ ತಂಡದ ನಾಯಕರಾಗಿದ್ದಾಗ ಬೆಕನ್ಬೌರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ನಿವೃತ್ತಿ ಬಳಿಕ ಅವರು ತಂಡದ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ತಂಡ 1990ರಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆದ್ದಿತ್ತು.

ಫುಟ್ಬಾಲ್ ದಿಗ್ಗಜ ಫ್ರಾಂಜ್ ಬೆಕನ್ಬೌರ್ ಇನ್ನಿಲ್ಲ! Read More »

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು !

ಪುತ್ತೂರು: ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಕೊಡಿಪ್ಪಾಡಿಯಲ್ಲಿ ನಡೆದಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ರಾಘವ ಮೃತಪಟ್ಟವರು. ಕೊಡಿಪ್ಪಾಡಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭ ರಾಘವ ಅವರು ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು ! Read More »

error: Content is protected !!
Scroll to Top