ಹೃದಯಾಘಾತದಿಂದ ವಿದ್ಯಾರ್ಥಿನಿ ಮೃತ್ಯು!
ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲ್ಲೇ ಮೃತ ಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಬಳಿ ನಡೆದಿದೆ. ಕೆ.ಎ. ಸ್ಟೋರ್ ಮಾಲಕ ದಾವೂದು ಎಂಬವರ ಪುತ್ರಿ ಹಫೀಝ (17) ಮೃತ ಬಾಲಕಿ. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಈಕೆ ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದು, ಫೆ.15ರಂದು ಬೆಳಗ್ಗೆ ಎದ್ದೇಳುವಾಗ ಮೃತಪಟ್ಟಿದ್ದಳು. ಮಲಗಿದಲ್ಲೇ ಹೃದಯಾಘಾತಕ್ಕೀಡಾಗಿ ಈಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.
ಹೃದಯಾಘಾತದಿಂದ ವಿದ್ಯಾರ್ಥಿನಿ ಮೃತ್ಯು! Read More »