ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ
ಕನಕಮಜಲು: ಕನಕಮಜಲು ಗ್ರಾಮದ ಸುಣ್ಣಮೂಲೆ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ನೇಣು ಬಿಗಿದುಕೊಂಡ ವ್ಯಕ್ತಿ ಬಾಬಣ್ಣ ಎಂದು ಗುರುತಿಸಲಾಗಿದೆ.ಕೋಳಿ ಅಂಗಡಿಯ ಹತ್ತಿರದಲ್ಲಿ ಇವರ ರೂಮ್ ಇದ್ದು ಅಲ್ಲಿಂದ ಕೋಳಿ ಅಂಗಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದು ರೂಮ್ ನಲ್ಲಿ ಇವರು ಒಬ್ಬರೇ ವಾಸಿಸುತ್ತಿದ್ದರು. ಇದೀಗ ಸ್ಥಳಕ್ಕೆ ಪೋಲಿಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೋಳಿ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ Read More »