ಅನಾರೋಗ್ಯಕ್ಕೀಡಾಗಿ ಬಾಲಕಿ ಮೃತ್ಯು
ಬೆಳ್ತಂಗಡಿ : ಅನಾರೋಗ್ಯದಿಂದಾಗಿ ಬಾಲಕಿ ಸಾವನ್ನಪ್ಪಿದ ಘಟನೆ ಶಿಶಿಲ ಗ್ರಾಮದ ಪೆರಿಕೆ ಎಂಬಲ್ಲಿ ನಡೆದಿದೆ. ಕೃಷ್ಣಪ್ಪ ಮಲೆಕುಡಿಯ ಮತ್ತು ಸುನಂದಾ ದಂಪತಿಯ ಪುತ್ರಿ ಸುಪ್ರೀತಾ (16) ಮೃತ ಬಾಲಕಿ. ಸುಪ್ರೀತಾ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು. ಜು. 9 ರಂದು ಆಕೆಯ ಆರೋಗ್ಯ ತೀವ್ರ ಹದಗೆಟ್ಟಿದ್ದು, ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಮನೆಗೆ ಹಿಂದಿರುಗುವ ಮಾರ್ಗ ಮಧ್ಯೆ ಆಕೆ ಪ್ರಜ್ಞಾಹೀನಳಾಗಿದ್ದಳು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು […]
ಅನಾರೋಗ್ಯಕ್ಕೀಡಾಗಿ ಬಾಲಕಿ ಮೃತ್ಯು Read More »