ಅಪಘಾತ

ಎರಡು ಬಸ್‍ ಗಳು ಮುಖಾಮುಖಿ ಡಿಕ್ಕಿ : ಏಳು ಸಾವು, 40 ಮಂದಿಗೆ ಗಾಯ

ತಮಿಳುನಾಡು : ತಮಿಳುನಾಡಿನ ಕಡಲೂರು ಜಿಲ್ಲೆಯ ಮೇಲ್ಪಟ್ಟಂಪಕ್ಕಂನಲ್ಲಿ ಸೋಮವಾರ ಬೆಳಗ್ಗೆ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಏಳು ಮಂದಿ ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಸ್‌ಗಳ ಡಿಕ್ಕಿಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಅಪಘಾತದಲ್ಲಿ ಭಾಗಿಯಾದವರ ಜೊತೆ ಮಾತನಾಡಿದ ನಂತರವಷ್ಟೇ ತಿಳಿಯಲಿದೆ ಎಂದು ಕಡಲೂರು ಪೊಲೀಸ್ […]

ಎರಡು ಬಸ್‍ ಗಳು ಮುಖಾಮುಖಿ ಡಿಕ್ಕಿ : ಏಳು ಸಾವು, 40 ಮಂದಿಗೆ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಬಿದ್ದ ಕಾರು | ಆರು ಮಂದಿಗೆ ಗಾಯ

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಕಿರು ಸೇತುವೆಯಿಂದ ಕೆಳಗೆ ಬಿದ್ದು ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಲ್ಯಾಡಿ ಸಮೀಪ ಶನಿವಾರ ನಡೆದಿದೆ. ಗಾಯಗೊಂಡವರನ್ನು ಬೆಂಗಳೂರು ಆರ್ ಟಿ ನಗರ ನಿವಾಸಿಗಳೆಂದು ಗುರುತಿಸಲಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದ ಎರಡು ವರ್ಷದ ಮಗುವೊಂದು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಗೆ ಬಿದ್ದ ಕಾರು | ಆರು ಮಂದಿಗೆ ಗಾಯ Read More »

ವಿಟ್ಲದಲ್ಲಿ ಬೈಕ್‍ಗಳೆರಡು ಮುಖಾಮುಖಿ ಡಿಕ್ಕಿ | ಸವಾರರಿಗೆ ಗಾಯ

ವಿಟ್ಲ: ಬೈಕ್ ಗಳೆರಡು ಡಿಕ್ಕಿ ಹೊಡೆದುಕೊಂಡು ಬೈಕ್‍ ಸವಾರರಿಬ್ಬರೂ ಗಾಯಗೊಂಡ ಘಟನೆ ವಿಟ್ಲ ಸಮೀಪ ನಡೆದಿದೆ. ಬೈಕ್‍ ಸವಾರರಾದ ಧ್ಯಾನ್ ಹಾಗೂ ರಮೇಶ್ ಗಾಯಗೊಂಡವರು. ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ವಿಟ್ಲದಲ್ಲಿ ಬೈಕ್‍ಗಳೆರಡು ಮುಖಾಮುಖಿ ಡಿಕ್ಕಿ | ಸವಾರರಿಗೆ ಗಾಯ Read More »

ಚಿತ್ತೂರು ಜಿಲ್ಲೆಯಲ್ಲಿ ಆನೆಗಳ ಹಿಂಡಿಗೆ ಮಿನಿ ಲಾರಿ ಡಿಕ್ಕಿ | ಮೂರು ಆನೆಗಳು ಮೃತ್ಯು

ಚಿತ್ತೂರು: ತರಕಾರಿ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿಯೊಂದು ರಸ್ತೆ ದಾಟುತ್ತಿದ್ದ ಆನೆ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಆನೆಗಳು ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಒಂದು ದೊಡ್ಡ ಆನೆ ಹಾಗೂ ಎರಡು ಮರಿ ಆನೆಗಳು ಸಾವನ್ನಪ್ಪಿದೆ. ಪಲಮನೇರು ಬಳಿ ಆಹಾರಕ್ಕಾಗಿ ಆನೆಗಳು ಸುತ್ತಾಡುತ್ತಲಿತ್ತು. ಬುಧವಾರ ರಾತ್ರಿ ಬೂತಲಬಂಡ ತಿರುವಿನಲ್ಲಿ ಚೆನ್ನೈಗೆ ತರಕಾರಿ ಹೇರಿಕೊಂಡು ಹೋಗುತ್ತಿದ್ದ ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಓಡಿ ಹೋಗಿದ್ದಾನೆ. ಅಪಘಾತ

ಚಿತ್ತೂರು ಜಿಲ್ಲೆಯಲ್ಲಿ ಆನೆಗಳ ಹಿಂಡಿಗೆ ಮಿನಿ ಲಾರಿ ಡಿಕ್ಕಿ | ಮೂರು ಆನೆಗಳು ಮೃತ್ಯು Read More »

ಟಿಪ್ಪರ್-ಸ್ಕೂಟರ್ ಅಪಘಾತ : ನೆಲ್ಯಾಡಿಯ ಯುವಕ ಮೃತ್ಯು

ಮಂಗಳೂರು; ಮಂಗಳೂರಿನ ಪಂಪುವೆಲ್ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಗಾಯಗೊಂಡ ಸ್ಕೂಟರ್ ಸವಾರ ಮೃತಪಟ್ಟಿದ್ದಾರೆ‌. ಇಚ್ಚಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25) ಮೃತಪಟ್ಟ ಯುವಕ.  ಸಂದೇಶ್ ಮಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ ವೆಲ್ ನಲ್ಲಿ ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ

ಟಿಪ್ಪರ್-ಸ್ಕೂಟರ್ ಅಪಘಾತ : ನೆಲ್ಯಾಡಿಯ ಯುವಕ ಮೃತ್ಯು Read More »

ಮನೆಯೊಳಗೆ ಬಿದ್ದು ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್ | ಮನೆಗೆ ಭೇಟಿ ನೀಡಿ ಶಾಸಕರಿಂದ ಸಾಂತ್ವನ

ಪುತ್ತೂರು: ಅನಾರೋಗ್ಯದಿಂದಿದ್ದ ಮೆಸ್ಕಾಂ ಪವರ್‌ಮ್ಯಾನ್ ಮನೆಯೊಳಗೆ ಕುಸಿದು ಬಿದ್ದು ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮೃತರ ಮನೆಗೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡ ಮೇರ ಎಂಬವರ ಪುತ್ರ ಕುಂಬ್ರದಲ್ಲಿ ಮೆಸ್ಕಾಂ ಪವರ್‌ಮ್ಯಾನ್ ಆಗಿ ಕರ್ತವ್ಯದಲ್ಲಿರುವ ಉಮೇಶ್ ಕುಂಡಕೋರಿ (42) ರವರು ಕೆಲದಿನಗಳಿಂದ ಅನಾರೋಗ್ಯ  ಪೀಡಿತರಾಗಿದ್ದು ಜೂ. 12 ರಂದು ರಾತ್ರಿ ಮನೆಯೊಳಗೆ ಕುಸಿದು ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ

ಮನೆಯೊಳಗೆ ಬಿದ್ದು ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್ | ಮನೆಗೆ ಭೇಟಿ ನೀಡಿ ಶಾಸಕರಿಂದ ಸಾಂತ್ವನ Read More »

ಹೊಳೆಗೆ ಬಿದ್ದ ಕಾರು ಓರ್ವ ಮೃತ್ಯು. ಇನ್ನೋರ್ವನಿಗೆ ಗಂಭೀರ ಗಾಯ.

ನೆಲ್ಯಾಡಿ : ರಾಷ್ಟ್ರೀಯ ಹೆಚ್ಚಾರಿ 75ರ ಶಿರಾಡಿ ಅಡ್ಡ ಹೊಳೆ ಸೇತುವೆಯಿಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟರೆ ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮೃತಪಟ್ಟವರನ್ನು ತಮಿಳುನಾಡಿನ ಹೊಸೂರು ಮೂಲದ ಹರಿಪ್ರಸಾದ್ (50) ಎಂದು ಗುರುತಿಸಲಾಗಿದ್ದು, ಗೋಪಿ (48) ಎಂಬವರು ಗಾಯಗೊಂಡವರು.  ಕಾರು ಹೊಸೂರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು ಎನ್ನಲಾಗುತ್ತಿದೆ. ಗಾಯಾಳುವಿಗೆ ನೆಲ್ಯಾಡಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ

ಹೊಳೆಗೆ ಬಿದ್ದ ಕಾರು ಓರ್ವ ಮೃತ್ಯು. ಇನ್ನೋರ್ವನಿಗೆ ಗಂಭೀರ ಗಾಯ. Read More »

ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು

ನೆಲ್ಯಾಡಿ: ಮಾರುತಿ ಎರ್ಟಿಗಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಉರುಳಿ ಬಿದ್ದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆ ಎಂಬಲ್ಲಿ ರಸ್ತೆ ಬದಿಯ ಹೊಳೆಗೆ ಕಾರು ಉರುಳಿ ಬಿದ್ದಿದೆ. ಗಾಯಾಳುವನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು Read More »

ಅಡಿಕೆ ಕೀಳುವಾಗ ವಿದ್ಯುತ್ ಶಾಕ್: ಯುವಕ ಮೃತ್ಯು | ಬಂಟ್ವಾಳದ ಮಲಾಯಿಬೆಟ್ಟುವಿನಲ್ಲಿ ಘಟನೆ

ಬಂಟ್ವಾಳ: ಅಡಿಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳದ ಮಲಾಯಿಬೆಟ್ಟು ಎಂಬಲ್ಲಿ ನಡೆದಿದೆ. ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ ಮೃತ ಯುವಕ. ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಅವರ ತೋಟದಲ್ಲಿ ಅಡಿಕೆ ತೆಗೆಯುತ್ತಿದ್ದಾಗ ಘಟನೆ ನಡೆದಿದೆ. ರಸ್ತೆಯ ಬದಿಯಲ್ಲಿ ಹಾದು ಹೋಗಿದ್ದ ಎಲ್.ಟಿ. ವಯರಿಗೆ ಫೈಬರ್ ದೋಟಿ ತಾಗಿ, ವಿದ್ಯುತ್ ಶಾಕ್ ಹೊಡೆದಿದೆ ಎಂದು ಹೇಳಲಾಗಿದೆ. ಅಡಿಕೆ ವ್ಯಾಪಾರಿಯಾಗಿರುವ ಶಾಫಿ, ಗಿಡದಿಂದಲೇ ಅಡಿಕೆಯನ್ನು ಕ್ರಯಕ್ಕೆ ಪಡೆದುಕೊಳ್ಳುತ್ತಿದ್ದರು. ನಂತರ ಅಡಿಕೆಯನ್ನು

ಅಡಿಕೆ ಕೀಳುವಾಗ ವಿದ್ಯುತ್ ಶಾಕ್: ಯುವಕ ಮೃತ್ಯು | ಬಂಟ್ವಾಳದ ಮಲಾಯಿಬೆಟ್ಟುವಿನಲ್ಲಿ ಘಟನೆ Read More »

ಮರ ಕಡಿಯುವ ವೇಳೆ ಗೆಲ್ಲು ಬಡಿದು ಮೃತ್ಯು | ತಡವಾಗಿ ಬೆಳಕಿಗೆ ಬಂದ ಪ್ರಕರಣ

ಕುಂಬ್ರ: ಮನೆ ಹಿತ್ತಲಿನ ಮರ ಕಡಿಯುವ ವೇಳೆ ಮರದ ಗೆಲ್ಲು ತಲೆಗೆ ಬಡಿದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ದರ್ಬೆತ್ತಡ್ಕದಲ್ಲಿ ಬುಧವಾರ ಸಂಜೆ ನಡೆದಿದೆ. ದರ್ಬೆತ್ತಡ್ಕದ ಗುರುಪ್ರಸಾದ್ ಮೃತಪಟ್ಟವರು. ಬುಧವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ಮರ ಕಡಿಯುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಮರ ಕಡಿಯುವ ವೇಳೆ ಗೆಲ್ಲು ಬಡಿದು ಮೃತ್ಯು | ತಡವಾಗಿ ಬೆಳಕಿಗೆ ಬಂದ ಪ್ರಕರಣ Read More »

error: Content is protected !!
Scroll to Top