ಕಡಿಯುವಾಗ ವ್ಯಕ್ತಿಯ ಮೇಲೆ ಬಿದ್ದ ಮರ: ಸಾವು
ಬೆಳ್ತಂಗಡಿ : ಮನೆಯ ಪಕ್ಕದಲ್ಲಿದ್ದ ಮರ ಕಡಿಯುವ ಸಂದರ್ಭ ಆಕಸ್ಮಿಕವಾಗಿ ಮರ ವ್ಯಕ್ತಿಯ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆರಿಯದಲ್ಲಿ ಸೆ. 23ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮಂಜಲ್ಪಳಿಕೆ ನಿವಾಸಿ ರಾಮಣ್ಣ ಗೌಡ (58) ಸಾವನ್ನಪ್ಪಿದ ವ್ಯಕ್ತಿ. ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಪ್ರಯೋಜವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಶವಾಗಾರಕ್ಕೆ ಸಾಗಿಸಲಾಗಿದೆ. […]
ಕಡಿಯುವಾಗ ವ್ಯಕ್ತಿಯ ಮೇಲೆ ಬಿದ್ದ ಮರ: ಸಾವು Read More »