ಅಪಘಾತ

ಭೀಕರ ಅಪಘಾತ : ಮಂತ್ರಾಲಯಕ್ಕೆ ಹೋಗುತ್ತಿದ್ದ 8 ಭಕ್ತರು ಸ್ಥಳದಲ್ಲೇ ಸಾವು

13 ಮಂದಿಗೆ ಗಂಭೀರ ಗಾಯ-ಬೊಲೆರೊ ವಾಹನಕ್ಕೆ ಗುದ್ದಿದ ಟ್ಯಾಂಕರ್‌ ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಎಂಟು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಭಕ್ತರು ರಾಯರ ದರ್ಶನಕ್ಕಾಗಿ ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ […]

ಭೀಕರ ಅಪಘಾತ : ಮಂತ್ರಾಲಯಕ್ಕೆ ಹೋಗುತ್ತಿದ್ದ 8 ಭಕ್ತರು ಸ್ಥಳದಲ್ಲೇ ಸಾವು Read More »

ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 250 ಮಂದಿ ನಾಪತ್ತೆ

ರೊಹಿಂಗ್ಯಾ ನಿರಾಶ್ರಿತರನ್ನು ಮಲೇಷ್ಯಾಕ್ಕೆ ಸಾಗಿಸುತ್ತಿದ್ದ ದೋಣಿ ಮುಳುಗಡೆ ಢಾಕ್ಕಾ: ಅಂಡಮಾನ್ ಸಮುದ್ರದಲ್ಲಿ ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿದ ಪರಿಣಾಮ ಸುಮಾರು 250 ರೋಹಿಂಗ್ಯಾ ನಿರಾಶ್ರಿತರು ಹಾಗೂ ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಬಾಂಗ್ಲಾದೇಶದ ಕಾಕ್ಸ್‌ ಬಜಾರ್‌ ಜಿಲ್ಲೆಯ ಟೆಕ್ನಾಫ್‌ನಿಂದ ಈ ದೋಣಿ ಮಲೇಷ್ಯಾಕ್ಕೆ ತೆರಳುತ್ತಿತ್ತು. ದೋಣಿಯಲ್ಲಿ ರೊಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ಪ್ರಜೆಗಳಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚು ಜನರು ತುಂಬಿ ಓವರ್‌ಲೋಡ್‌ ಅಗಿದ್ದ ದೋಣಿ ದೋಣಿ ಭಾರಿ ಬಿರುಗಾಳಿ ಹಾಗೂ ಅಲೆಗಳ ಹೊಡೆತದಿಂದ ನಡುಸಮುದ್ರದಲ್ಲಿ

ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 250 ಮಂದಿ ನಾಪತ್ತೆ Read More »

ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ : ಮೂವರು ಸಜೀವ ದಹನ

ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸಂಭವಿಸಿದ ದುರಂತ ನವದೆಹಲಿ: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಮಂಗೇರಾಮ್ ಪಾರ್ಕ್‌ನಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣಾ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲಿಯೇ ನಿರ್ಮಿಸಲಾಗಿದ್ದ ಗುಡಿಸಲುಗಳನ್ನು ಆಹುತಿ ಪಡೆದಿದೆ. ಈ ಘೋರ ಘಟನೆಯಲ್ಲಿ ಮಗುವೂ ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ. ಬುದ್ಧ ವಿಹಾರ್ ಬಳಿಯ ಸುಮಾರು 400 ಚದರ ಗಜಗಳಷ್ಟು ವಿಸ್ತೀರ್ಣದ ಜಾಗದಲ್ಲಿ ಈ ಅನಾಹುತ ಸಂಭವಿಸಿದೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡಲಾಗಿತ್ತು

ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ : ಮೂವರು ಸಜೀವ ದಹನ Read More »

ಮೆರವಣಿಗೆ ಮೇಲೆ ಹರಿದ ಕಾರು : ಬಾಲಕಿ ಸಾವು; 9 ಮಂದಿಗೆ ಗಾಯ

ಅಂಬೇಡ್ಕರ್‌ ಜಯಂತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಸಂಭವಿಸಿದ ದುರಂತ ಚಿಕ್ಕಮಗಳೂರು : ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಕಾರು ಹರಿದು ಬಾಲಕಿ ಮೃತಪಟ್ಟು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಏಕಾಏಕಿ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಈ ಘಟನೆಯು ಹಾಸನದ ಗಣಪತಿ ಮೆರವಣಿಗೆಯ ವೇಳೆ ನಡೆದಿದ್ದ ದುರಂತವನ್ನು ನೆನಪಿಸುವಂತಿದೆ.

ಮೆರವಣಿಗೆ ಮೇಲೆ ಹರಿದ ಕಾರು : ಬಾಲಕಿ ಸಾವು; 9 ಮಂದಿಗೆ ಗಾಯ Read More »

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸುಳ್ಯದ ಯುವತಿ ಅಪಘಾತಕ್ಕೆ ಬಲಿ

ಪ್ರವಾಸ ತೆರಳಿದ್ದ ವೇಳೆ ಸಂಭವಿಸಿದ ದುರಂತ ಸುಳ್ಯ: ಆಂಧ್ರ ಪ್ರದೇಶದ ಕರ್ನೂಲ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸುಳ್ಯದ ಯುವತಿ ಮೃತಪಟ್ಟ ಘಟನೆ ನಡೆದಿದೆ. ಸುಳ್ಯ ಕಂದಡ್ಕದ ಶಶಿಕಲಾ ಭಟ್ ಎಂಬವರ ಪುತ್ರಿ ಕ್ಷಿಪ್ರ (27) ಎಂಬ ಯುವತಿ ಶನಿವಾರ ರಾತ್ರಿ ಆಂಧ್ರಪ್ರದೇಶದ ಕರ್ನೂಲ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಕ್ಷಿಪ್ರ ಸಹದ್ಯೋಗಿಗಳೊಂದಿಗೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ.

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಸುಳ್ಯದ ಯುವತಿ ಅಪಘಾತಕ್ಕೆ ಬಲಿ Read More »

ಟಿಪ್ಪರ್‌ ಡಿಕ್ಕಿ : ಸ್ಕೂಟಿ ಸವಾರ ಸಾವು

ಮಂಗಳೂರು: ರಾ.ಹೆ. 66ರ ನಂತೂರು-ಪಂಪ್‌ವೆಲ್ ಸರ್ವಿಸ್ ರಸ್ತೆಯಲ್ಲಿ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಗೋಪಾಲ್ (29) ಎಂದು ಗುರುತಿಸಲಾಗಿದೆ. ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಗುರುಪುರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ ಮುಳಿಹಿತ್ಲು ಬಳಿ ವಾಸವಾಗಿದ್ದರು ಎನ್ನಲಾಗಿದೆ. ಈ ಅಪಘಾತದಲ್ಲಿ ಮತ್ತೊಂದು ದ್ವಿಚಕ್ರ ವಾಹನಕ್ಕೂ ಹಾನಿಯಾಗಿದ್ದು, ಸವಾರನಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಸಂಚಾರ

ಟಿಪ್ಪರ್‌ ಡಿಕ್ಕಿ : ಸ್ಕೂಟಿ ಸವಾರ ಸಾವು Read More »

ಬಂಟ್ವಾಳ : ಚಲಿಸುತ್ತಿದ್ದ ರಿಕ್ಷಾ ಬೆಂಕಿಗಾಹುತಿ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ರಿಕ್ಷಾ ಬೆಂಕಿಗಾಹುತಿಯಾದ ಘಟನೆ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ಜೆ ಎಂಬಲ್ಲಿ ಶುಕ್ರವಾರ ನಡೆದಿದೆ. ಬಿ.ಸಿ.ರೋಡು – ಧರ್ಮಸ್ಥಳ ರಸ್ತೆಯ ಮೂರ್ಜೆ ವಿಶಾಲನಗರ ಎಂಬಲ್ಲಿ ಈ ಘಟನೆ ನಡೆದಿದೆ. ಬಾಂಬಿಲ ನಿವಾಸಿ ರೇವಣ್ಣ ಅವರ ಗ್ಯಾಸ್ ಸಂಪರ್ಕ ಹೊಂದಿದ ರಿಕ್ಷಾದಲ್ಲಿ ಗ್ಯಾಸ್ ಖಾಲಿಯಾಗಿದೆ ಎಂಬ ಕಾರಣಕ್ಕಾಗಿ ಪೆಟ್ರೋಲ್ ತುಂಬಿಸಲು ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಗ್ಯಾಸ್ ಸೋರಿಕೆಯ ರೀತಿಯಲ್ಲಿ ವಾಸನೆ ಬರುತ್ತಿದೆ ಎಂದು ಚಾಲಕ ರೇವಣ್ಣ

ಬಂಟ್ವಾಳ : ಚಲಿಸುತ್ತಿದ್ದ ರಿಕ್ಷಾ ಬೆಂಕಿಗಾಹುತಿ Read More »

ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರು ಸಾವು

ರೀಲ್ಸ್‌ ಗೀಳಿನಿಂದಾಗಿ ಸಂಭವಿಸಿದ ಭೀಕರ ದುರಂತ ಹೈದರಾಬಾದ್: ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿದ್ದ ಮೂವರು ಯುವತಿಯರು ಕ್ಯಾಮೆರಾ ಮುಂದೆಯೇ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಈ ದುರಂತದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೃತರನ್ನು 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ ಮತ್ತು 16 ವರ್ಷದ ಪವಿತ್ರಾ 16 ಎಂದು ಗುರುತಿಸಲಾಗಿದೆ. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತದಲ್ಲಿ ವಿಡಿಯೋ ಮಾಡಲು ಹೋದ ಮೂವರು ಯುವತಿಯರು

ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರು ಸಾವು Read More »

ಹುಲಿಕಲ್‌ ಘಾಟಿಯಲ್ಲಿ ಭೂಕುಸಿತವಾಗಿ ಮೂವರು ಕಾರ್ಮಿಕರು ಸಾವು

ರಸ್ತೆ ಅಗಲೀಕರಣ ಕಾಮಗಾರಿ ನಡೆಯುವಾಗ ಸಂಭವಿಸಿದ ದುರಂತ ಶಿವಮೊಗ್ಗ: ಹುಲಿಕಲ್‌ ಘಾಟ್‌ನಲ್ಲಿ (ಬಾಳೇಬರೆ) ರಸ್ತೆ ಅಗಲೀಕರಣ ವೇಳೆ ಗುಡ್ಡ ಕುಸಿತ ಸಂಭವಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಸ್ಥಳದಲ್ಲಿಯೇ ಇದ್ದ ಕಾಮಗಾರಿ ಮೇಲ್ವಿಚಾರಕ ಸೇರಿ ಮೂವರು ಮೃತಪಟ್ಟಿದ್ದಾರೆ. ಕಾಮಗಾರಿ ಮೇಲ್ವಿಚಾರಕ ಚಕ್ಕಾರು ಗ್ರಾಮದ ರಾಘು (37), ಹಾವೇರಿ ಜಿಲ್ಲೆಯ ನೆಲಗಲು ಗ್ರಾಮದ ರಾಜು (30) ಹಾಗೂ ಶಬ್ಬೀರ್(40) ಮೃತ ಕಾರ್ಮಿಕರು. ಮಲೆನಾಡು ಮತ್ತು ಕರಾವಳಿ ಸಂಪರ್ಕಕ್ಕೆ ಹುಲಿಕಲ್‌ ಘಾಟ್‌ ಮುಖ್ಯ ಸಂಪರ್ಕ ಸೇತುವೆಯಾಗಿದೆ.

ಹುಲಿಕಲ್‌ ಘಾಟಿಯಲ್ಲಿ ಭೂಕುಸಿತವಾಗಿ ಮೂವರು ಕಾರ್ಮಿಕರು ಸಾವು Read More »

ಖಾಸಗಿ ಬಸ್ – ಲಾರಿ ನಡುವೆ ಅಪಘಾತ: ಚಾಲಕರಿಬ್ಬರಿಗೂ ಗಂಭೀರ ಗಾಯ

ಗುರುಪುರ: ಖಾಸಗಿ ಬಸ್ಸು ಮತ್ತು ಲಾರಿಯೊಂದರ ನಡುವೆ ನಡೆದ ಅಪಘಾತದಲ್ಲಿ ಚಾಲಕರಿಬ್ಬರೂ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಘಟನೆ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಸಮೀಪ ಬುಧವಾರ ನಡೆದಿದೆ. ಬಸ್ಸು ಕಾರ್ಕಳದತ್ತ ಹೋಗುತ್ತಿದ್ದರು, ಲಾರಿ ಮಂಗಳೂರಿನ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ಭೀಕರತೆಗೆ ಬಸ್ಸು ಮತ್ತು ಲಾರಿಗಳೆರಡರ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಗ್ಯಾಸ್ ಕಟ್ಟರ್ ಮಷಿನ್ ಬಳಸಿ ಸ್ಥಳೀಯರು ಚಾಲಕರಿಬ್ಬರನ್ನೂ ವಾಹನದಿಂದ ಹೊರಕ್ಕೆ ತೆಗೆದಿರುವುದಾಗಿದೆ. ಅವರಿಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ

ಖಾಸಗಿ ಬಸ್ – ಲಾರಿ ನಡುವೆ ಅಪಘಾತ: ಚಾಲಕರಿಬ್ಬರಿಗೂ ಗಂಭೀರ ಗಾಯ Read More »

error: Content is protected !!
Scroll to Top