ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ
ಸಂಪಾಜೆ: ಕಾರು ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇದೀಗ ಸಂಪಾಜೆ ಮಸೀದಿ ಸಮೀಪ ಅರೆಕಲ್ಲು ರೋಡಿಗೆ ತಿರುವಿನಲ್ಲಿ ಸಂಭವಿಸಿದೆ. ಕಾರು ಮಡಿಕೇರಿ ಕಡೆಯಿಂದ ಬರುತ್ತಿದ್ದು ಎನ್ನಲಾಗಿದ್ದು, ಕಾರಿನಲ್ಲಿದ್ದ ಮಗುವಿಗೆ ಅಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಇದೇ ಜಾಗದಲ್ಲಿ ಮೂರು ಹಸುವಿಗೆ ವಾಹನವೊಂದು ಡಿಕ್ಕಿ ಹೊಡೆದು ಒಂದು ಹಸು ಮೃಪಟ್ಟಿತ್ತು. ಈ ಹಿಂದೆಯೂ ಕೂಡ ಹಲವು ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಿಕಪ್-ಕಾರು ಡಿಕ್ಕಿ : ಕಾರಿನಲ್ಲಿದ್ದ ಮಗುವಿಗೆ ಗಾಯ Read More »