ಅಪಘಾತ

ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು

ಸುರತ್ಕಲ್‌: ಸುರತ್ಕಲ್‌ ಎನ್‌ಐಟಿಕೆ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಬಿದ್ದ ಘಟನೆ ಭಾನುವಾರ ಸಂಭವಿಸಿದೆ. ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿದ್ದ ಕಾರನ್ನು ಕುಂದಾಪುರ ನಿವಾಸಿ ಪ್ರತ್ಯಕ್ಷ ಎಂಬವರು ಚಲಾಯಿಸುತ್ತಿದ್ದರು. ಅಪಘಾತದಿಂದ ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷ ಅವರು ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕುಂದಾಪುರಕ್ಕೆ ಹಿಂದಿರುಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಏಕಾಏಕಿ ಬ್ರೇಕ್‌ ಹಾಕಿದ್ದಾರೆ. ಇದರಿಂದ ನಿಯಂತ್ರಣ ಕಳೆದುಕೊಂಡ ಕಾರು ಮೇಲ್ಸೇತುವೆಯಿಂದ […]

ಸುರತ್ಕಲ್‌ : ಮೇಲ್ಸೇತುವೆಯಿಂದ ಸರ್ವಿಸ್‌ ರಸ್ತೆಗೆ ಬಿದ್ದ ಕಾರು Read More »

ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡದಲ್ಲಿ ಬೆಂಕಿ ಅವಘಡ

ಮಂಗಳೂರು ವಿವಿಯ ಎನ್‌ಆರ್‌ಐ ವಿದ್ಯಾರ್ಥಿಗಳಿದ್ದ ಹಾಸ್ಟೆಲ್‌ ಮಂಗಳೂರು: ದೇರಳಕಟ್ಟೆಯಲ್ಲಿ ಎನ್‌ಆರ್‌ಐ ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ವೆಂಕಟ್ ರೆಸಿಡೆನ್ಸಿಯ ಜನರೇಟರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೇಲಿನ ಎರಡು ಮಹಡಿಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಿಯುವ ಎನ್‌ಆರ್‌ಐ ವಿದ್ಯಾರ್ಥಿಗಳಿದ್ದು, ಎಲ್ಲರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಕಟ್ಟಡದ ಟಾಪ್ ಫ್ಲೋರ್‌ನಲ್ಲಿ ಸಭಾಂಗಣವಿದ್ದು, ಅಲ್ಲಿ ಯಾವುದೇ ಕಾರ್ಯಕ್ರಮಗಳಿರಲಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯವನ್ನು

ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡದಲ್ಲಿ ಬೆಂಕಿ ಅವಘಡ Read More »

ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಮೃತ್ಯು, 18ಕ್ಕೂ ಹೆಚ್ಚು ಮಂದಿಗೆ ಗಾಯ

ನೆಲ್ಯಾಡಿ: ಖಾಸಗಿ ಬಸ್‍ ಹಿಟಾಚಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, 18 ಕ್ಕೂ ಹಚ್ಚು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಲಾವತಡ್ಕದಲ್ಲಿ ಇಂದು  ಮುಂಜಾನೆ ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಾರ್ಕಳ ಪಡುಮನೆ ನಿವಾಸಿ ಶಂಕರನಾರಾಯಣ ಭಟ್ (41) ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾರ್ಕಳದಿಂದ ಧರ್ಮಸ್ಥಳ ಮೂಲಕ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸು, ಲಾವತಡ್ಕ ಬಳಿ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಹಿಟಾಚಿ ಯಂತ್ರವನ್ನು ಸಾಗಿಸುತ್ತಿದ್ದ ಲಾರಿಗೆ

ಖಾಸಗಿ ಬಸ್ ಹಿಟಾಚಿ ಲಾರಿಗೆ ಡಿಕ್ಕಿ : ಓರ್ವ ಮೃತ್ಯು, 18ಕ್ಕೂ ಹೆಚ್ಚು ಮಂದಿಗೆ ಗಾಯ Read More »

ಪತನಗೊಂಡ ವಿಮಾನದ ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ

ಅಪಘಾತದ ನಿಖರ ಕಾರಣ ತಿಳಿಯುವ ಸಾಧ್ಯತೆ ಅಹಮದಾಬಾದ್‌: ಕಳೆದ ಗುರುವಾರ ಮಧ್ಯಾಹ್ನ ಟೇಕಾಫ್‌ ಆದ ಬೆನ್ನಲ್ಲೇ ವಿಮಾನ ನಿಲ್ದಾಣದ ಬಳಿಯಿರುವ ಮೇಘನಿನಗರದ ಬಿ.ಜೆ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತನಗೊಂಡಿದ್ದ ಏ‌ರ್ ಇಂಡಿಯಾ ಬೋಯಿಂಗ್ 787-8 ವಿಮಾನದ 2ನೇ ಬ್ಲ್ಯಾಕ್ ಬಾಕ್ಸ್ ಭಾನುವಾರ ಪತ್ತೆಯಾಗಿದೆ. ವಿಮಾನದಲ್ಲಿ 2 ಬ್ಲ್ಯಾಕ್ ಬಾಕ್ಸ್‌ಗಳಿದ್ದವು. ವಿಮಾನದ ಫ್ಲೈಟ್‌ ಡೇಟಾ ರೆಕಾರ್ಡರ್ ಶುಕ್ರವಾರ ಪತ್ತೆಯಾಗಿತ್ತು. ʻಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ʼ ಭಾನುವಾರ ಪತ್ತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ

ಪತನಗೊಂಡ ವಿಮಾನದ ಎರಡನೇ ಬ್ಲ್ಯಾಕ್ ಬಾಕ್ಸ್ ಪತ್ತೆ Read More »

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರಿದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ. ಗುಡ್ಡ ಕುಸಿದಿರುವ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯತ್‌ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆ ಕೂಡ

ಗುಡ್ಡ ಕುಸಿತ : ಶೃಂಗೇರಿ-ಮಂಗಳೂರು ಸಂಚಾರ ಸ್ಥಗಿತ Read More »

ಮಂಗಳೂರು : ಕುಸಿದು ಬಿದ್ದ ಆಸ್ಪತ್ರೆಯ ಗೋಡೆ

ಒಂದೇ ಕುಟುಂಬದ ಆರು ಮಂದಿ ಅದೃಷ್ಟವಶಾತ್‌ ಪಾರು ಮಂಗಳೂರು : ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಕುಸಿದು ಬಿದ್ದಿದ್ದು, ಭಾರಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕುಟುಂಬವೊಂದು ಅದೃಷ್ಟವಶಾತ್‌ ಪಾರಾಗಿದೆ. ಕಂಕನಾಡಿ ಬಳಿಯ ಸುವರ್ಣ ಲೇನ್‌ನಲ್ಲಿ ಭಾರಿ ಅವಘಡ ಸಂಭವಿಸಿದೆ. ಧಾರಾಕಾರ ಮಳೆಗೆ ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ.

ಮಂಗಳೂರು : ಕುಸಿದು ಬಿದ್ದ ಆಸ್ಪತ್ರೆಯ ಗೋಡೆ Read More »

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ : ಆರು ಮಂದಿ ಸಾವು

ಡೆಹ್ರಾಡೂನ್: : ಅಹಮದಾಬಾದ್ ವಿಮಾನ ದುರಂತ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದ್ದು, ಉತ್ತರಾಖಂಡದ ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಗೌರಿಕುಂಡ್ ಪ್ರದೇಶದ ಬಳಿ ಈ ಅಪಘಾತ ಸಂಭವಿಸಿ ಹೆಲಿಕಾಪ್ಟರ್​​ನಲ್ಲಿದ್ದ ಪೈಲಟರ್​ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಎನ್​​ಡಿಆರ್​ಎಫ್​ ತಂಡಗಳು ಸ್ಥಳಕ್ಕೆ ತಲುಪಿವೆ. ಹೆಲಿಕಾಪ್ಟರ್‌ನ ಅವಶೇಷಗಳು ಸ್ಥಳದಲ್ಲಿ ಚದುರಿಹೋಗಿವೆ. ಹುಲ್ಲು ಕತ್ತರಿಸುತ್ತಿದ್ದ ಮಹಿಳೆಯರು ಹೊಗೆಯನ್ನು ನೋಡಿದ ನಂತರ ಘಟನೆಯ ಬಗ್ಗೆ ಕೂಡಲೇ ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್

ಕೇದಾರನಾಥದಲ್ಲಿ ಹೆಲಿಕಾಪ್ಟರ್‌ ಪತನ : ಆರು ಮಂದಿ ಸಾವು Read More »

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ

ಶಿವಮೊಗ್ಗ: ಕಾಂತಾರ-1 ಚಿತ್ರತಂಡಕ್ಕೆ ಇನ್ನೊಂದು ಅವಘಡ ಎದುರಾದ ಕುರಿತು ವರದಿಯಾಗಿದೆ. ನಿನ್ನೆ ರಾತ್ರಿ ತೀರ್ಥಹಳ್ಳಿ ಸಮೀಪ ಶೂಟಿಂಗ್‌ ನಡೆಯುತ್ತಿದ್ದಾಗ ದೋಣಿ ಮಗುಚಿ ಬಿದ್ದು ಅವಘಡ ಸಂಭವಿಸಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ. ಬೋಟ್‌ನಲ್ಲಿ ಚಿತ್ರದ ನಾಯಕ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿಯವರೂ ಇದ್ದರು ಎನ್ನಲಾಗಿದೆ. ಕಾಂತಾರ-1 ಸಿನಿಮಾದ ಚಿತ್ರೀಕರಣ ಆರಂಭ ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸಿನಿಮಾ ಶೂಟಿಂಗ್​​ನಲ್ಲಿ ಭಾಗಿ ಆಗಿದ್ದ ಮೂರು ಮಂದಿ ನಿಧನ ಹೊಂದಿದ್ದಾರೆ. ಇದೀಗ ಮತ್ತೊಂದು ಅಪಘಾತ ಸಿನಿಮಾ ಸೆಟ್​ನಲ್ಲಿ

ಕಾಂತಾರ-1 ಶೂಟಿಂಗ್‌ನಲ್ಲಿ ಇನ್ನೊಂದು ಅವಘಡ : ಜಲಾಶಯದಲ್ಲಿ ದೋಣಿ ಪಲ್ಟಿ Read More »

ಮಂಗಳೂರು: ಅಂಗಡಿಯಲ್ಲಿ ಬೆಂಕಿ ಅವಘಡ

ಎರಡು ಅಂಗಡಿ, ಒಂದು ವಾಹನ ನಾಶ ಮಂಗಳೂರು : ಹಂಪನಕಟ್ಟೆಯ ಯೂನಿವರ್ಸಿಟಿ ಕಾಲೇಜ್ ಮುಂಭಾಗ ಗುಜರಿ ಅಂಗಡಿಯಲ್ಲಿ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಅದರ ಪಕ್ಕದಲ್ಲಿರುವ ವಸ್ತ್ರ ಮಳಿಗೆಗೂ ಬೆಂಕಿ ವ್ಯಾಪಿಸಿದೆ. ಎರಡು ಅಂಗಡಿ ಮತ್ತು ಒಂದು ಗೂಡ್ಸ್‌ ವಾಹನ ಬೆಂಕಿಯಿಂದ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಸೊತ್ತುಗಳಿಗೆ ಹಾನಿಯಾಗಿದೆ. ಪಾಂಡೇಶ್ವರ ಅಗ್ನಿಶಾಮಕ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ಆರಿಸಲು ಹರಸಾಹಸ ಪಡಬೇಕಾಯಿತು.

ಮಂಗಳೂರು: ಅಂಗಡಿಯಲ್ಲಿ ಬೆಂಕಿ ಅವಘಡ Read More »

ಅಹಮದಾಬಾದ್‌ : ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ 274ಕ್ಕೇರಿಕೆ

ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ ಅಹಮದಾಬಾದ್‌: ಇಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 274ಕ್ಕೇರಿದೆ. ವಿಮಾನದಲ್ಲಿದ್ದ 230 ಪ್ರಯಾಣಿಕರು, 10 ಗಗನಸಖಿಯರು ಮತ್ತು ಇಬ್ಬರು ಪೈಲಟ್‌ಗಳ ಪೈಕಿ ಬದುಕುಳಿದಿರುವುದು ಒಬ್ಬ ಪ್ರಯಾಣಿಕ ಮಾತ್ರ. ವಿಮಾನ ಅಹಮದಾಬಾದ್‌ನ ಮೇಘನಿ ನಗರದಲ್ಲಿರುವ ಬಿ.ಜೆ.ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿದ ಪರಿಣಾಮ ಇನ್ನಷ್ಟು ಸಾವುಗಳು ಸಂಭವಿಸಿವೆ. ಈ ಸಾವು-ನೋವುಗಳಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರು, ಪೈಲಟ್‌ ಹಾಗೂ ಸಿಬ್ಬಂದಿ, ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಜನರು ಸೇರಿದ್ದಾರೆ. ಮೇಘನಿ ನಗರದಲ್ಲಿ

ಅಹಮದಾಬಾದ್‌ : ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ 274ಕ್ಕೇರಿಕೆ Read More »

error: Content is protected !!
Scroll to Top