ಅಪಘಾತ

ಮಂಗಳೂರು ವಿಮಾನ ದುರಂತಕ್ಕೆ 14 ವರ್ಷ | ದುರಂತದಲ್ಲಿ ಮಡಿದವರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ

ಮಂಗಳೂರು : ದೇಶವನ್ನೇ ಬೆಚ್ಚಿ ಬೀಳಿಸಿದ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತ ಘಟನೆ ನಡೆದು ಇಂದಿಗೆ 14 ವರ್ಷ ತುಂಬಿದೆ. ಕಳೆದ 2010ರ ಮೇ 22ರಂದು ಬೆಳಗ್ಗೆ 6:20ಕ್ಕೆ ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ವಿಮಾನದಲ್ಲಿದ್ದ 166 ಮಂದಿಯ ಪೈಕಿ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪಾರಾಗಿದ್ದರು. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಗುರುತು ಹಿಡಿಯಲಾಗದ 12 […]

ಮಂಗಳೂರು ವಿಮಾನ ದುರಂತಕ್ಕೆ 14 ವರ್ಷ | ದುರಂತದಲ್ಲಿ ಮಡಿದವರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ Read More »

ಕಾರಿನ ಮೇಲೆ ಮರ ಬಿದ್ದು ಕಾರು ಜಖಂ : ಇಬ್ಬರಿಗೆ ಗಾಯ

ವಿಟ್ಲ: ಚಲಿಸುತ್ತಿದ್ದಕಾರಿಮ ಮೇಲೆ ಮರ ಬಿದ್ದು ಕಾರು ಜಖಂಗೊಂಡ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕುಕ್ಕರಬಟ್ಟುವಿನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮಂಗಳೂರು ಮೂಲಕ ಕಾರು ಇದಾಗಿದ್ದು, ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೈಸೂರು ಕಡೆಗೆ ತೆರಳುತ್ತಿದ್ದಾಗ ಈ ಮರ ಕಾರಿನ ಮೇಲೆ ಬಿದ್ದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನ ಮೇಲೆ ಮರ ಬಿದ್ದು ಕಾರು ಜಖಂ : ಇಬ್ಬರಿಗೆ ಗಾಯ Read More »

ಕಂಟೈನರ್ ಹಾಗೂ ಇನ್ನೋವಾ ಡಿಕ್ಕಿ :  ತಾಯಿ, ಮಗ ಮೃತ್ಯು

ನೆಲ್ಯಾಡಿ : ಕಾರು ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ತಾಯಿ, ಮಗ ದಾರುಣವಾಗಿ ಮೃತಪಟ್ಟು, ನಾಲ್ಕೈದು ಮಂದಿ ಗಂಭೀರವಾದ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನಲ್ಲಿ ನಡೆದಿದೆ. ತಾಯಿ ಸಪೀಯಾ, ಮಗ ಸಫೀಕ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದ ಬಂಟ್ವಾಳ ತಾಲೂಕಿನ ಬೊಂಡಾಲದ ಕುಟುಂಬವೊಂದು ಬೆಂಗಳೂರಿನಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಕಾರು ಶಿರಾಡಿ ಘಾಟ್ ನ

ಕಂಟೈನರ್ ಹಾಗೂ ಇನ್ನೋವಾ ಡಿಕ್ಕಿ :  ತಾಯಿ, ಮಗ ಮೃತ್ಯು Read More »

ಆ್ಯಕ್ಟೀವಾಗೆ ಕಾರು ಡಿಕ್ಕಿ‌ : ಆ್ಯಕ್ಟೀವ ಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ಆ್ಯಕ್ಟೀವಾಗೆ ಕಾರೊಂದು ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಆ್ಯಕ್ಟೀವಾ ಸವಾರ, ಪುತ್ತೂರಿನ ನೆಹರುನಗರ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಡಿಪು ಇನ್ಫೋಸಿಸ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಅವಿವಾಹಿತರಾಗಿದ್ದು, ತನ್ನ ತಾಯಿ ಜೊತೆ ವಾಸವಾಗಿದ್ದಾರೆ. ಮೃತರು ತಾಯಿ, ಐವರು ಸಹೋದರರನ್ನು ಅಗಲಿದ್ದಾರೆ.

ಆ್ಯಕ್ಟೀವಾಗೆ ಕಾರು ಡಿಕ್ಕಿ‌ : ಆ್ಯಕ್ಟೀವ ಸವಾರ ಸ್ಥಳದಲ್ಲೇ ಮೃತ್ಯು Read More »

ಟವರ್ ಮೇಲೆ ಬಿದ್ದ ಮರ : ವ್ಯಕ್ತಿಗೆ ಗಾಯ

ಬೆಳ್ತಂಗಡಿ: ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ನಡೆದಿದೆ. ಕನ್ಯಾಡಿಯ ರಮೇಶ್ ಗಾಯಗೊಂಡವರು. ಮರ ಉರುಳಿದ ಸಂದರ್ಭ ಸ್ಕೂಟರ್ ನಲ್ಲಿ ಇಂದಬೆಟ್ಟುಗೆ ಪ್ರಯಾಣಿಸುತ್ತಿದ್ದ ರಮೇಶ್ ಈ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಮರದ ಭಾಗ ತಲೆಗೆ ಬಡಿದಿದೆ. ಸ್ವಲ್ಪದರಲ್ಲೇ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಒಂದು ಗಂಟೆಗಿಂತ ಅಧಿಕಕಾಲ ಇಂದಬೆಟ್ಟು

ಟವರ್ ಮೇಲೆ ಬಿದ್ದ ಮರ : ವ್ಯಕ್ತಿಗೆ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿದ  ಪರಿಣಾಮ ಲಾರಿ ಪಲ್ಟಿಯಾದ ಘಟನೆ ಕನಕಮಜಲು ಗ್ರಾಮದ ಆನೆಗುಂಡಿ ತಿರುವಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಪಲ್ಟಿಯಾದ ಪರಿಣಾಮ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಮೈಸೂರಿನಿಂದ ಮಂಗಳೂರಿಗೆ ಟೊಮ್ಯಾಟೊ ಹೊತ್ತೊಯ್ಯತ್ತಿದ್ದ ಲಾರಿ ಆನೆಗುಂಡಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಗೊಂಡ ಚಾಲಕನನ್ನು ಸ್ಥಳೀಯರು ಸೇರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ. ಲಾರಿಯನ್ನು ಕ್ರೈನ್ ಮೂಲಕ ಮೇಲೆತ್ತಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ Read More »

ರೋಣದ ವೀರಭದ್ರೇಶ್ವರ ಜಾತ್ರೆ : ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಮೃತ್ಯು

ಗದಗ: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವಿಗೀಡಾಗಿ, ಓರ್ವ ಗಾಯಗೊಂಡ ದುರ್ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ರೋಣದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಸಂಜೆ ಮಹಾರಥೋತ್ಸವ ನಡೆಯಿತು. ಈ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿದೆ. ಮೃತ ಭಕ್ತರು ರೋಣ ಮೂಲದ ನಿವಾಸಿಗಳು ಎನ್ನಲಾಗುತ್ತಿದೆ. ಮಲ್ಲಪ್ಪ ಲಿಂಗನ ಗೌಡ್ರ(55) ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೋರ್ವನ ಹೆಸರು ತಿಳಿದು ಬಂದಿಲ್ಲ. ಮುಖದ ಮೇಲೆ

ರೋಣದ ವೀರಭದ್ರೇಶ್ವರ ಜಾತ್ರೆ : ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಮೃತ್ಯು Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಗೋಕಳ್ಳತನ | ತನಿಖೆ ನಡೆಸಿ ಗೋ ಕಳ್ಳರನ್ನು ಬಂಧಿಸುವಂತೆ ನಗರ ಠಾಣೆಗೆ ದೂರು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮೇ ಒಂದರಂದು ರಾತ್ರಿ  ನಡೆದ ಗೋ ಕಳ್ಳತನವಾದ ಬಗ್ಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಯಿತು. ದೇವಸ್ಥಾನದ ವಠಾರದಿಂದ ಎರಡು ಗೋ ಕಳ್ಳತನವಾಗಿದ್ದು ಈ ಕುರಿತು ತನಿಖೆ ನಡೆಸಿ ಗೋಕಳ್ಳರನ್ನು ಬಂಧಿಸುವಂತೆ ದೂರು ನೀಡಲಾಯಿತು. ಈ ಸಂದರ್ಭ ಬಜರಂಗದಳ ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ , ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ಗ್ರಾಮಾಂತರ ಸಂಯೋಜಕ ವಿಶಾಖ್ ಸಸಿಹಿತ್ಲು, ಹರ್ಷಿತ್ ಬಲ್ನಾಡ್,

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಗೋಕಳ್ಳತನ | ತನಿಖೆ ನಡೆಸಿ ಗೋ ಕಳ್ಳರನ್ನು ಬಂಧಿಸುವಂತೆ ನಗರ ಠಾಣೆಗೆ ದೂರು Read More »

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಪ್ರಯಾಣಿಕರಿಗೆ ಗಾಯ

ಪುತ್ತೂರು: ತಾಲೂಕು ಸರ್ವೆ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ಅಪರಾಹ್ನ ಸುಮಾರು 12.30 ಕ್ಕೆ ಸಂಭವಿಸಿದೆ. ಎರಡೂ ಕಾರುಗಳಲ್ಲಿ ಇದ್ದ ಪ್ರಯಾಣಿಕರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಕಡೆಗೆ ವಸಂತ ಎಂಬವರು ಚಲಾಯಿಸುತ್ತಿದ್ದ ಟಾಟಾ ಪಂಚ್ ಕಾರು ಹಾಗೂ ಸವಣೂರು ಕಡೆಗೆ ಚಲಾಯಿಸುತ್ತಿದ್ದ ಚಿದಾನಂದ ಎಂಬವರ ಮಾರುತಿ ಸಿಲಿರಿಯೊ ಕಾರುಗಳು ಡಿಕ್ಕಿಯಾಗಿವೆ. ಸರ್ವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸಿತ್ತಿರುವುದು ವಿಷಾದನೀಯವಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಯವರು ಸೂಕ್ತ ಎಚ್ಚರಿಕೆಯ

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ – ಪ್ರಯಾಣಿಕರಿಗೆ ಗಾಯ Read More »

ಪುರುಷರಕಟ್ಟೆ: ಬೈಕ್- ಬಸ್ ಅಪಘಾತ |ಬೈಕ್ ಸವಾರ ಮೋಕ್ಷಿತ್ ಗೌಡ ಮೃತ್ಯು !

ಪುತ್ತೂರು: ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ. 15ರಂದು ಬೆಳಿಗ್ಗೆ ನಡೆದಿದೆ. ಪುರುಷರಕಟ್ಟೆ ಯಲ್ಲಿರುವ ಬಿಂದು ಪ್ಯಾಕ್ಟರಿಯಲ್ಲಿ ಸಿಪಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುವ ವಿಟ್ಲ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ(24) ಎನ್ನುವವರು ಅಪಘಾತಕ್ಕೆ ಬಲಿಯಾದ ಯುವಕ. ಬಸ್ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು ಸವಾರ ಮೋಕ್ಷಿತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪುರುಷರಕಟ್ಟೆ: ಬೈಕ್- ಬಸ್ ಅಪಘಾತ |ಬೈಕ್ ಸವಾರ ಮೋಕ್ಷಿತ್ ಗೌಡ ಮೃತ್ಯು ! Read More »

error: Content is protected !!
Scroll to Top