ಅಪಘಾತ

ಕಾರು ಡಿಕ್ಕಿ : ರಸ್ತೆ ಬದಿ ನಿಂತಿದ್ದ ಬೇಕರಿ ಮಾಲೀಕನಿಗೆ ಗಂಭಿರ ಗಾಯ

ಸ್ಕೂಟಿ ಪಂಕ್ಚರ್‌ ಆದ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಂತಿದ್ದಾಗ ಡಿಕ್ಕಿ ಹೊಡೆದ ಕಾರು ವಿಟ್ಲ: ಕಾರು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ದ್ವಿಚಕ್ರ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ವಿಟ್ಲ ಠಾಣಾ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ. ಕುಡ್ತಮುಗೇರಿನ ಪ್ರಗತಿ ಸ್ವೀಟ್ಸ್ ಬೇಕರಿಯ ಮಾಲೀಕ ಜಗನ್ನಾಥ ಶೆಟ್ಟಿಗಾರ್ ಗಂಭೀರ ಗಾಯಗೊಂಡವರು. ಜಗನ್ನಾಥ ಶೆಟ್ಟಿಗಾರ್ ಇಂದು ಬೆಳಗ್ಗೆ ಕುಡ್ತಮುಗೇರಿನಿಂದ ಪರ್ತಿಪ್ಪಾಡಿ ಕಡೆಗೆ ತೆರಳುತ್ತಿದ್ದ ವೇಳೆ ದಾರಿಮಧ್ಯೆ ಅವರ ದ್ವಿಚಕ್ರ ವಾಹನದ ಟಯರ್ ಪಂಕ್ಚರ್ […]

ಕಾರು ಡಿಕ್ಕಿ : ರಸ್ತೆ ಬದಿ ನಿಂತಿದ್ದ ಬೇಕರಿ ಮಾಲೀಕನಿಗೆ ಗಂಭಿರ ಗಾಯ Read More »

ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಮಂದಿ ಸಾವು

74 ಮಂದಿ ನಾಪತ್ತೆ, 10 ಜನರ ರಕ್ಷಣೆ ಸನಾ: ಯೆಮೆನ್ ಕರಾವಳಿಯಲ್ಲಿ ಭಾನುವಾರ 154 ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಜನರು ಮೃತಪಟ್ಟಿದ್ದಾರೆ. 74 ಮಂದಿ ನಾಪತ್ತೆಯಾಗಿದ್ದು, 10 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ನಡೆಯುತ್ತಿದೆ. ರಕ್ಷಿಸಲ್ಪಟ್ಟ 10 ಜನರಲ್ಲಿ ಒಂಬತ್ತು ಮಂದಿ ಇಥಿಯೋಪಿಯನ್ ಪ್ರಜೆಗಳು ಮತ್ತು ಒಬ್ಬರು ಯೆಮೆನ್ ಪ್ರಜೆ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರಾಂತ್ಯದ ಆರೋಗ್ಯ ಅಧಿಕಾರಿ ಅಬ್ದುಲ್ ಖಾದಿರ್ ಬಜಮೀಲ್ ಹೇಳಿದ್ದಾರೆ. ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಹುಡುಕಾಟ

ವಲಸಿಗರನ್ನು ಸಾಗಿಸುತ್ತಿದ್ದ ದೋಣಿ ಮುಳುಗಿ 68 ಮಂದಿ ಸಾವು Read More »

ಪುತ್ತೂರು : ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಪುತ್ತೂರು: ಪರ್ಲಡ್ಕ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ನಿವಾಸಿ ಸಯ್ಯದ್ ಆಲಂ ಎಂಬವರ ಪತ್ನಿ ಅಫ್ಸಾ (54) ಮೃತಪಟ್ಟ ಮಹಿಳೆ. ಶುಕ್ರವಾರ ರಾತ್ರಿ ಅಸ್ಲಾಂ ದಂಪತಿ ಪೇಟೆಯ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅವರ ಸ್ಕೂಟರ್ ಮತ್ತು ಮುಂಭಾಗದಿಂದ ಆಗಮಿಸುತ್ತಿದ್ದ ಇನ್ನೊಂದು ಸ್ಕೂಟರ್ ಪರ್ಲಡ್ಕ ಜಂಕ್ಷನ್‌ನಲ್ಲಿ ಪರಸ್ಪರ ಢಿಕ್ಕಿಯಾಗಿತ್ತು. ಢಿಕ್ಕಿಯ

ಪುತ್ತೂರು : ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು Read More »

ವಿಟ್ಲ : ಆವರಣ ಗೋಡೆಗೆ ಖಾಸಗಿ ಬಸ್‌ ಡಿಕ್ಕಿ, ಪ್ರಯಾಣಿಕರಿಗೆ ಗಾಯ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಆವರಣ ಗೋಡೆಗೆ ಡಿಕ್ಕಿಯಾಗಿ ಪ್ರಯಾಣಿಕರು ಗಾಯಗೊಂಡ ಘಟನೆ ವಿಟ್ಲದಲ್ಲಿ ಶನಿವಾರ ಸಂಜೆ ನಡೆದಿದೆ. ವಿಟ್ಲ ಕೆ.ಎಸ್.ಆರ್.ಟಿ.ಸಿ.ನಿಲ್ದಾಣದ ಬಳಿ ಖಾಸಗಿ ಬಸ್ಸಿನ ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ಆವರಣ ಗೋಡೆಗೆ ಢಿಕ್ಕಿಯಾಗಿದೆ. ಅಪಘಾತದಲ್ಲಿ ಆವರಣ ಗೋಡೆ ಕುಸಿದುಬಿದ್ದಿದ್ದು, ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. 17ಕ್ಕೂ ಅಧಿಕ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ವಿಟ್ಲದಿಂದ ಕನ್ಯಾನಕ್ಕೆ ಬಸ್ ತೆರಳುವ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಿಟ್ಲ ಎಸ್.ಐ.ರಾಮಕೃಷ್ಣ

ವಿಟ್ಲ : ಆವರಣ ಗೋಡೆಗೆ ಖಾಸಗಿ ಬಸ್‌ ಡಿಕ್ಕಿ, ಪ್ರಯಾಣಿಕರಿಗೆ ಗಾಯ Read More »

ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ ಉದ್ದೇಶಪೂರ್ವಕ ದುಷ್ಕೃತ್ಯ : ತನಿಖಾ ವರದಿಯಲ್ಲಿ ಬಹಿರಂಗ

ಹಳಿಯ ಇಂಟರ್‌ಲಾಕ್‌ ಕಿತ್ತು ಹಾಕಿದ ಪರಿಣಾಮ ಭೀಕರ ಅಪಘಾತ ಚೆನ್ನೈ: ಕಳೆದ ವರ್ಷ ಮೈಸೂರಿನಿಂದ ದರ್ಭಾಂಗಗೆ ಹೋಗುತ್ತಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಉದ್ದೇಶಿತ ದುಷ್ಕೃತ್ಯ. ಹಳಿ ಇಂಟರ್‌ಲಾಕ್ ತೆಗೆದು ದುಷ್ಕೃತ್ಯ ಎಸಗಿದ್ದಾರೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಈ ಕುರಿತು ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಎಂ.ಚೌಧರಿ, ಕಳೆದ ವರ್ಷ ಅಕ್ಟೋಬರ್‌ 11ರಂದು ಚೆನ್ನೈ ಸಮೀಪದ ಕವರೈ ಪಟ್ಟಿ ರೈಲ್ವೆ

ಭಾಗಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ ಉದ್ದೇಶಪೂರ್ವಕ ದುಷ್ಕೃತ್ಯ : ತನಿಖಾ ವರದಿಯಲ್ಲಿ ಬಹಿರಂಗ Read More »

ಪುತ್ತೂರು : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಪುತ್ತೂರು: ಕೌಡಿಚಾರ್ – ರೆಂಜ ರಸ್ತೆಯ ಪಾಪೆಮಜಲು ಎಂಬಲ್ಲಿ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಪಾಪೆಮಜಲು ನಿವಾಸಿ ಸುಭಾಷ್ (50) ಮೃತಪಟ್ಟವರು. ಅವರು ಶುಕ್ರವಾರ ರಾತ್ರಿ ವೇಳೆ ರಸ್ತೆ ದಾಟುತ್ತಿದ್ದಾಗ ಅವರಿಗೆ ರಿಕ್ಷಾ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪುತ್ತೂರು : ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು Read More »

ಕೆಟ್ಟು ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ : ಇಬ್ಬರು ಸಾವು

ಮಂಗಳೂರಿನಿಂದ ಚಿತ್ರದುರ್ಗದತ್ತ ಹೋಗುತ್ತಿದ್ದ ಬಸ್‌ ಶಿವಮೊಗ್ಗ: ಮಂಗಳೂರಿನಿಂದ ಚಿತ್ರದುರ್ಗದತ್ತ ಹೋಗುತ್ತಿದ್ದ ಖಾಸಗಿ ಬಸ್‌ ಶಿವಮೊಗ್ಗ ಸಮೀಪ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ವೇಳೆ ಸಂಭವಿಸಿದೆ. ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರ ಬಳಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಬಸ್ ಮಂಗಳೂರಿನಿಂದ ರಾತ್ರಿ ಹೊರಟಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗೆ ತಲುಪಬೇಕಿತ್ತು. ಬುಧವಾರ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ಸಿನ ನಿರ್ವಾಹಕ, ಹೊಸನಗರದ

ಕೆಟ್ಟು ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ : ಇಬ್ಬರು ಸಾವು Read More »

ಮಂಗಳೂರು : ಕೋಳಿ ಆಹಾರ ಮಳಿಗೆಯಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಪಂಪ್‌ವೆಲ್‌ನಲ್ಲಿರುವ ಕೋಳಿ ಆಹಾರ ಮಾರಾಟ ಮಳಿಗೆಯೊಂದರಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಅಪಾರ ಹಾನಿ ಉಂಟಾಗಿದೆ. ಪಂಪ್‌ವೆಲ್‌ನಲ್ಲಿರುವ ಭಾರತ್ ಆಗ್ರೋ ಎಂಬ ಮಳಿಗೆಯಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿದೆ. ಇದರಿಂದ ಕೋಳಿ ಆಹಾರ ಮತ್ತು ಪೀಠೋಪಕರಣ ಸುಟ್ಟು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

ಮಂಗಳೂರು : ಕೋಳಿ ಆಹಾರ ಮಳಿಗೆಯಲ್ಲಿ ಬೆಂಕಿ ಅವಘಡ Read More »

ಬಸ್‌ಗೆ ಲಾರಿ ಡಿಕ್ಕಿ : 18 ಕನ್ವರ್‌ ಯಾತ್ರಿಗಳ ದಾರುಣ ಸಾವು

ಕನ್ವರ್‌ ಯಾತ್ರಿಗಳ ಪಾಲಿಗೆ ಕರಾಳ ದಿನವಾದ ಮಂಗಳವಾರ ಜಾರ್ಖಂಡ್‌: ಕನ್ವರ್‌ ಯಾತ್ರಿಗಳು ಪ್ರಯಾಣಿಸುತ್ತಿದ್ದ ಬಸ್ಸಿಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ 18 ಮಂದಿ ಮೃತಪಟ್ಟಿರುವ ಭೀಕರ ಅಪಘಾತ ಇಂದು ಮುಂಜಾನೆ ಜಾರ್ಖಂಡ್‌ನ ದಿಯೋಘಡ್‌ ಎಂಬಲ್ಲಿ ಸಂಭವಿಸಿದೆ. ದಿಯೋಘಡ್‌ನ ಮೋಹನಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಜಮುನಿಯ ಅರಣ್ಯ ಪ್ರದೇಶ ಭಾಗದಲ್ಲಿ ಕನ್ವರ್‌ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಮಿನಿಬಸ್‌ಗೆ ಮುಂಜಾನೆ 4.30ರ ವೇಳೆಗೆ ಗ್ಯಾಸ್‌ ಸಿಲಿಂಡರ್‌ಗಳಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು,

ಬಸ್‌ಗೆ ಲಾರಿ ಡಿಕ್ಕಿ : 18 ಕನ್ವರ್‌ ಯಾತ್ರಿಗಳ ದಾರುಣ ಸಾವು Read More »

ಸುಳ್ಯ: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಮಹಿಳೆ ಸಾವು

ಸುಳ್ಯ: ಕಲ್ಲಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ಬೈಲು ನಿವಾಸಿ ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಚೆದ್ಮಾರ್ ಅವರ ತಾಯಿ ಕಮಲಾ ಚೆತ್ಕಾರ್(67) ಎಂದು ಗುರುತಿಸಲಾಗಿದೆ. ಕಮಲಾ ಅವರು ಸಂಪಾಜೆಗೆ ಹೋಗುವ ಬಸ್ ಹತ್ತುವುದಕ್ಕಾಗಿ ಕಲ್ಲಗುಂಡಿ ಅಂಚೆ ಕಚೇರಿ ಬಳಿ ರಸ್ತೆ ದಾಟುತ್ತಿದ್ದಾಗ, ಸುಳ್ಯದ ಕಡೆಗೆ ಬರುತ್ತಿದ್ದ ಕೇರಳ ನೋಂದಣಿಯ ಬೈಕ್ ನಿಯಂತ್ರಣ ಕಳೆದುಕೊಂಡು ಅವರಿಗೆ

ಸುಳ್ಯ: ರಸ್ತೆ ದಾಟುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಮಹಿಳೆ ಸಾವು Read More »

error: Content is protected !!
Scroll to Top