ಅಪಘಾತ

ಟ್ಯಾಕ್ಟರ್ ಪಲ್ಟಿ : ತುಂಡಾಗಿ ಬಿದ್ದ ಎರಡು ವಿದ್ಯುತ್ ಕಂಬಗಳು

ಪುತ್ತೂರು: ನರಿಮೊಗರು ಶಾಲಾ ಬಳಿ ಟ್ರ್ಯಾಕ್ಟರ್ ಒಂದು ಪಲ್ಟಿಯಾದ ಪರಿಣಾಮ ಎರಡು ವಿದ್ಯುತ್‍ ಕಂಬ ಮುರಿದುಬಿದ್ದ ಬುಧವಾರ ಸಂಜೆ ನಡೆದಿದೆ. ಟ್ರ್ಯಾಕ್ಟರ್ ಗಡಿಪಿಲದಿಂದ ಪುರುಷರಕಟ್ಟೆಗೆ ತೆರಳುತ್ತಿದ್ದ ಸಂದರ್ಭ ಪಲ್ಟಿಯಾಗಿದೆ. ಅಪಘಾತದಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಗಡಿಪಿಲ ಬಳಿ ಮೇಲೆ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ನೀರು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಇದಾಗಿತ್ತು.

ಟ್ಯಾಕ್ಟರ್ ಪಲ್ಟಿ : ತುಂಡಾಗಿ ಬಿದ್ದ ಎರಡು ವಿದ್ಯುತ್ ಕಂಬಗಳು Read More »

ಕಾಂಗ್ರೆಸ್ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಮೇಲೆ ಫೈರಿಂಗ್

ವಿಟ್ಲ : ಇಂಟೆಕ್ ಪ್ರಮುಖ ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಅವರ ಮೇಲೆ ಫೈರಿಂಗ್ ನಡೆದಿದೆ ಎಂದು ತಿಳಿದು ಬಂದಿದೆ ಎಂಬುವುದು ವರದಿಯಾಗಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಅನಂತಾಡಿ ಎಂಬಲ್ಲಿ ಫೈರಿಂಗ್ ನಡೆದಿದೆ ಎನ್ನಲಾಗಿದ್ದು, ಅವರು ಯಾಕೆ ಅಲ್ಲಿ  ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿಲ್ಲ. ಆತನ ಗನ್ ನಿಂದ ಮಿಸ್ ಫೈರಿಂಗ್ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಖಚಿತವಾದ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ಗಾಯಗೊಂಡ ಚಿತ್ತರಂಜನ್ ಶೆಟ್ಟಿ ಅವರನ್ನು ಮಂಗಳೂರು ಖಾಸಗಿ

ಕಾಂಗ್ರೆಸ್ ಕಾರ್ಯಕರ್ತ ಚಿತ್ತರಂಜನ್ ಶೆಟ್ಟಿ ಮೇಲೆ ಫೈರಿಂಗ್ Read More »

ಬೈಕ್‍ ಸವಾರನ ಮೇಲೆ ಬಿದ್ದ ಮರ | ಸವಾರನಿಗೆ ಗಂಭೀರ ಗಾಯ

ಕಡಬ : ಚಲಿಸುತ್ತಿದ್ದ ಬೈಕ್ ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ಕಡಬ -ಪಂಜ ರಸ್ತೆಯ ಪುಳಿಕುಕ್ಕು ಸಮೀಪ ಮಂಗಳವಾರ ಸಂಜೆ ನಡೆದಿದೆ. ಈ ಘಟನೆಯಲ್ಲಿ ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ಯಶವಂತ ಎಂಬವರು ಗಾಯಗೊಂಡ ಬೈಕ್‍ ಸವಾರ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಕ್ನಿ ಕಲೆಕ್ಟರ್ ಕೆಲಸ ಮಾಡುತ್ತಿದ್ದ ಇವರು, ಕೆಲಸ ಮುಗಿಸಿ ಹಿಂತಿರುಗುವಾಗ ಈ ಘಟನೆ ಸಂಭವಿಸಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ

ಬೈಕ್‍ ಸವಾರನ ಮೇಲೆ ಬಿದ್ದ ಮರ | ಸವಾರನಿಗೆ ಗಂಭೀರ ಗಾಯ Read More »

ಆಟೋರಿಕ್ಷಾ-ಬೈಕ್ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಪುತ್ತೂರು: ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ನಗರದ ಹೊರವಲಯದ ಮುರದಲ್ಲಿ ನಡೆದಿದೆ. ಚೇತನ್ ಕೆಮ್ಮಿಂಜೆ ಮೃತಪಟ್ಟ ಬೈಕ್‍ ಸವಾರ. ಪುತ್ತೂರು ದಿ. ನಿವೃತ್ತ ಅರಣ್ಯಾಧಿಕಾರಿ ಪುರುಷೋತ್ತಮ ರವರ ಪುತ್ರನಾಗಿದ್ದು,  ಕೆಎಸ್‍ ಆರ್ ಟಿಸಿ ಮೆಕ್ಯಾನಿಕ್ ಅಶೋಕರವರ ತಮ್ಮ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿನೆ ನಡೆಸಿದ್ದಾರೆ.

ಆಟೋರಿಕ್ಷಾ-ಬೈಕ್ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ಲಾರಿಯಡಿಗೆ ಬಿದ್ದ ಬೈಕ್ | ಸವಾರ ಗಂಭೀರ ಗಾಯ

ಮಂಗಳೂರು : ನಿಯಂತ್ರಣ ತಪ್ಪಿ ಲಾರಿಯಡಿಗೆ ಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಮುಕ್ಕ ಸಮೀಪ ನಡೆದಿದೆ. ಅತಿ ವೇಗದಿಂದ ಚಲಿಸುತ್ತಿದ್ದ ಲಾರಿ ಸಡನ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಲಾರಿಯಡಿ ಬಿದ್ದಿದೆ. ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಸ್ಕಾಂಗೆ ಸೇರಿದ ಲಾರಿ ಇದಾಗಿದ್ದು, ವಿದ್ಯುತ್ ಕಂಬಗಳನ್ನು ರವಾಣಿಸುತ್ತಿತ್ತು ಎನ್ನಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

ಲಾರಿಯಡಿಗೆ ಬಿದ್ದ ಬೈಕ್ | ಸವಾರ ಗಂಭೀರ ಗಾಯ Read More »

ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ವಿಮಾನ | 18  ಮಂದಿ ದುರ್ಮರಣ ಸಾವು..!

ವಾಷಿಂಗ್ಟನ್‌ : ಪ್ರಯಾಣಿಕರಿದ್ದ ವಿಮಾನವೊಂದು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದರಿಂದ ಪ್ರಯಾಣಿಕರಿದ್ದ ವಿಮಾನ ನದಿಗೆ ಬಿದ್ದಿದ್ದು,18 ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ವಾಷಿಂಗ್ಟನ್ ಡಿಸಿಯ ರೊನಾಲ್ಡ್‌ ರೇಗನ್ ವಿಮಾನ ನಿಲ್ದಾಣದ ಬಳಿ ನಡೆದಿದೆ. ಅಮೆರಿಕ ಸೇನಾ ಹೆಲಿಕಾಪ್ಟರ್‌ಗೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ಪೋಟೋಮ್ಯಾಕ್ ನದಿಗೆ ವಿಮಾನ ಬಿದ್ದಿದೆ. ಸದ್ಯ ನದಿಯಿಂದ ವಿಮಾನದಲ್ಲಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, 18 ಮಂದಿಯ ಮೃತದೇಹಗಳನ್ನು ಮೇಲೆತ್ತಲಾಗಿದೆ. ಅಪಘಾತಕ್ಕೀಡಾದ ವಿಮಾನವು 60 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಕಾನ್ಸಾಸ್‌ನಿಂದ ಡಿ.ಸಿ.ಯ

ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ವಿಮಾನ | 18  ಮಂದಿ ದುರ್ಮರಣ ಸಾವು..! Read More »

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು

ಪುತ್ತೂರು : ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಅಗ್ನಿಶಾಮಕ ದಳದ ಸಿದ್ಧರೂಢ ಮತ್ತು ಮೌನೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸೋಮವಾರ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಮಂಗಳವಾರ ಬೆಕ್ಕಿನ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದರು. ಬೆಕ್ಕನ್ನ ಹಿಡಿಯಲು ಬಾವಿಯೊಳಗಡೆ ಸಿದ್ಧರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು Read More »

ಕಾಳು ಮೆಣಸು ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು

ಸುಳ್ಯ: ಕಾಳುಮೆಣಸು ಕೊಯ್ಯುವ ವೇಳೆ ಮರದಿಂದ ಆಯತಪ್ಪಿ ಬಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕೊಲ್ಲಂತಡ್ಕ ಎಂಬಲ್ಲಿ ಸೋಮವಾರ ಸಂಭವಿಸಿದೆ. ಕನಕಮಜಲು ಗ್ರಾಮದ ಕೊಲ್ಲಂತಡ್ಕದ ಜಗನ್ನಾಥ (75) ಮೃತರು. ಜಗನ್ನಾಥ ಅವರು ಸೋಮವಾರ ಬೆಳಿಗ್ಗೆ ತಮ್ಮ ಮನೆಯ ಅಂಗಳದಲ್ಲಿದ್ದ ಮರದಲ್ಲಿ ಕಾಳುಮೆಣಸು ಕೊಯ್ಯಲು ಏಣಿ ಇರಿಸಿ, ಹತ್ತಿ ಕಾಳು ಮೆಣಸು ಕೊಯ್ಯುವ ವೇಳೆ ಆಯತಪ್ಪಿ ಕೆಳಗೆ ಬಿದ್ದು, ತಲೆಗೆ ತೀವ್ರ ಗಾಯಗೊಂಡಿದ್ದು, ಗಾಯಾಳುವನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತರಾಗಿದ್ದಾರೆ

ಕಾಳು ಮೆಣಸು ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು Read More »

ಚಾರ್ಮಾಡಿ ಘಾಟಿಯಲ್ಲಿ ಕಾರು-ಲಾರಿ ಅಪಘಾತ : ನಾಲ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಲಾರಿ ಮತ್ತು ಕಾರು ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೂಡಿಗೆರೆಯಿಂದ ಉಜಿರೆ ಕಡೆ ಬರುತ್ತಿದ್ದ ಕಾರು ಹಾಗೂ ಕೊಟ್ಟಿಗೆಹಾರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಕಾರಿನಲ್ಲಿ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಹಂಪೆಯ ವೇದಮ್ಮ(55) ಜ್ಞಾನಮ್ಮ (70), ಮಂಜುಳಾ (50) ಮತ್ತು ರೇಣುಕಾ (26) ಗಂಭೀರವಾಗಿ ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳು ಯಾವುದೇ ರೀತಿಯ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆಂದು

ಚಾರ್ಮಾಡಿ ಘಾಟಿಯಲ್ಲಿ ಕಾರು-ಲಾರಿ ಅಪಘಾತ : ನಾಲ್ವರಿಗೆ ಗಂಭೀರ ಗಾಯ Read More »

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ: ಕಾರು ಅಪಘಾತದಲ್ಲಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 14ರಂದು ಬೆಂಗಳೂರಿನಿಂದ ಬೆಳಗಾವಿಗೆ ತೆರಳುವಾಗ ಅಂಬಡಗಟ್ಟಿ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತವಾಗಿ, ಕತ್ತಿಗೆ ಗಾಯವಾಗಿತ್ತು. 13 ದಿನಗಳ ಕಾಲ ಚಿಕಿತ್ಸ ಪಡೆದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ಆಗಬಾರದ ದುರ್ಘಟನೆ ಆಯಿತು. ಕೊನೇ ಹಂತ ನೋಡಿ ಹೋರಾಟ ಮಾಡಿ

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದ ಬಿಡುಗಡೆ Read More »

error: Content is protected !!
Scroll to Top