ಅಪಘಾತ

ಬೆಂಕಿ ಅವಘಡ : 19 ಇಲೆಕ್ಟ್ರಿಕ್‌ ಬೈಕ್‌ಗಳು ಸುಟ್ಟು ಕರಕಲು

ಚಾರ್ಜಿಂಗ್‌ ಸ್ಟೇಷನ್‌ ಓವರ್‌ಹೀಟ್‌ ಆಗಿ ಅವಘಡ ಬೆಂಗಳೂರು: ಬೆಂಗಳೂರಿನ ಯಲಚೇನಹಳ್ಳಿಯ ಕಮರ್ಷಿಯಲ್ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ 19 ಇಲೆಕ್ಟ್ರಿಕ್‌ ಬೈಕ್‌ಗಳು ಸುಟ್ಟು ಕರಕಲಾಗಿವೆ. ಕನಕಪುರ ಮುಖ್ಯರಸ್ತೆಯಲ್ಲಿರುವ ಮೂರಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಬೇಸ್ಮೆಂಟ್‌ನಲ್ಲಿದ್ದ ಇವಿ ಬೈಕ್ ಚಾರ್ಜಿಂಗ್ ಪಾಯಿಂಟ್ ಓವರ್ ಹೀಟ್ ಆದ ಪರಿಣಾಮ ಅಲ್ಲಿದ್ದ ಬೈಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಜೊತೆಗೆ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಆರು ಸಿಲಿಂಡರ್‌ಗಳ ಗ್ಯಾಸ್ ಸೋರಿಕೆಯಾಗಿದ್ದು, ಒಂದು ಸಿಲಿಂಡರ್ ಬ್ಲಾಸ್ಟ್ ಆಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಬೆಂಕಿ […]

ಬೆಂಕಿ ಅವಘಡ : 19 ಇಲೆಕ್ಟ್ರಿಕ್‌ ಬೈಕ್‌ಗಳು ಸುಟ್ಟು ಕರಕಲು Read More »

ಟೈಲರ್‌ ಅಂಗಡಿಗೆ ನುಗ್ಗಿದ ಕಾರು : ಅಪಾರ ಹಾನಿ

ಸುಳ್ಯ : ಅಡ್ಡ ಬಂದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರು ನೇರವಾಗಿ ಅಂಗಡಿಯೊಳಗೆ ಘಟನೆ ಸುಳ್ಯ ಅಂಬೆಟಡ್ಕದಲ್ಲಿ ನಿನ್ನೆ ಸಂಭವಿಸಿದೆ. ಕೆರ್ಪಳ ಹೇಮನಾಥ್ ಎಂಬವರು ಚಲಾಯಿಸುತ್ತಿದ್ದ ಕಾರು ಎನ್ನಲಾಗಿದ್ದು, ಕಾರು ನುಗ್ಗಿ ಬಂದ ಟೈಲರ್‌ ಅಂಗಡಿಯ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳಿಗೆ ಸಂಪೂರ್ಣ ಹಾನಿಯಾಗಿದೆ. ಮಧ್ಯಾಹ್ನದ ವೇಳೆ ಊಟದ ಸಮಯವಾದ ಕಾರಣ ಅಂಗಡಿಯ ಮಾಲಕಿ ಊಟಕ್ಕೆ ತೆರಳಿದ್ದು, ಸಿಬ್ಬಂದಿ ಅಂಗಡಿಯ ಹಿಂಭಾಗ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಸ್ಥಳದಲ್ಲಿ ಹೆಚ್ಚಿನ ಜನರು

ಟೈಲರ್‌ ಅಂಗಡಿಗೆ ನುಗ್ಗಿದ ಕಾರು : ಅಪಾರ ಹಾನಿ Read More »

ಫಿಲಿಫಿನ್ಸ್‌ನಲ್ಲಿ ಪ್ರಬಲ ಭೂಕಂಪ : 50ಕ್ಕೂ ಅಧಿಕ ಮಂದಿ ಸಾವು

ನಡುರಾತ್ರಿ ಸಂಭವಿಸಿದ ಭೂಕಂಪದಿಂದ ಅಲ್ಲೋಲಕಲ್ಲೋಲ ಮನಿಲಾ: ಫಿಲಿಪಿನ್ಸ್‌ ಪ್ರಾಂತ್ಯದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ 6.9 ತೀವ್ರತೆಯ ಪ್ರಬಲ ಭೂಕಂಪದಲ್ಲಿ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹಲವಾರು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ತೀವ್ರ ಕಂಪನದಿಂದಾಗಿ ವಿದ್ಯುತ್ ಕಡಿತಗೊಂಡು ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಭೂಮಿಯ ಐದು ಕಿಲೋಮೀಟರ್ ಆಳದಲ್ಲಿ ಭೂಕಂಪವಾಗಿದೆ. ಸೆಬು ಪ್ರಾಂತ್ಯದಲ್ಲಿ ಸುಮಾರು 90,000 ಜನಸಂಖ್ಯೆಯನ್ನು ಹೊಂದಿರುವ ಕರಾವಳಿ ನಗರವಾದ ಬೊಗೊದಿಂದ ಸುಮಾರು 19 ಕಿಲೋಮೀಟರ್ ಈಶಾನ್ಯಕ್ಕೆ ಇದರ ಪರಿಣಾಮ ತಟ್ಟಿದೆ. ಬೊಗೊದಲ್ಲಿ ಕನಿಷ್ಠ 14

ಫಿಲಿಫಿನ್ಸ್‌ನಲ್ಲಿ ಪ್ರಬಲ ಭೂಕಂಪ : 50ಕ್ಕೂ ಅಧಿಕ ಮಂದಿ ಸಾವು Read More »

ಬೆಂಕಿ ಅವಘಡ : ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆಬರೆ ನಾಶ

ಮಂಗಳೂರು: ನಗರದ ಹಂಪನಕಟ್ಟೆಯ ಟೋಕಿಯೊ ಮಾರ್ಕೆಟ್ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಬಟ್ಟೆಬರೆಗಳು ಅಗ್ನಿಗೆ ಆಹುತಿಯಾಗಿವೆ. ಕಟ್ಟಡವೊಂದರ ಮೇಲಿನ ಮಹಡಿಯಲ್ಲಿನ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

ಬೆಂಕಿ ಅವಘಡ : ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆಬರೆ ನಾಶ Read More »

ಕೆಎಸ್ ಆರ್ ಟಿಸಿ ಬಸ್ – ಕಾರು ಡಿಕ್ಕಿ : ಪ್ರಯಾಣಿಕರು ಪವಾಡ ಸದೃಶ ಪಾರು

ಪುತ್ತೂರು: ಆರ್ಯಾಪು ಗ್ರಾಮದ ಸಂಸ್ಕಾರು ಪರ್ಪುಂಜ ನಡುವೆ ಇಂದು ಮಧ್ಯಾಹ್ನ ಕೆಎಸ್ಆರ್ಟಿಸಿ ಬಸ್ ಹಾಗೂ ಟೂರಿಸ್ಟ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪುತ್ತೂರಿನಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಬಸ್ಗೆ, ಸುಳ್ಯ ದಿಕ್ಕಿನಿಂದ ಪುತ್ತೂರಿನತ್ತ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಕಾರು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತಪ್ಪು ದಿಕ್ಕಿನಲ್ಲಿ ಹೋಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಕಾರು ತಿರುಗಿ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಕಾರಿನಲ್ಲಿ ಇದ್ದ

ಕೆಎಸ್ ಆರ್ ಟಿಸಿ ಬಸ್ – ಕಾರು ಡಿಕ್ಕಿ : ಪ್ರಯಾಣಿಕರು ಪವಾಡ ಸದೃಶ ಪಾರು Read More »

ವಿಟ್ಲ : ಕ್ವಾರಿಯಲ್ಲಿ ಮುಳುಗಿ ಬಾಲಕ ಮೃತ್ಯು

ವಿಟ್ಲ: ಇಲ್ಲಿನ ಕುಳ ಗ್ರಾಮದ ಕಲ್ಲಂದಡ್ಕ ಎಂಬಲ್ಲಿ ಮುಚ್ಚಿದ ಕ್ವಾರಿಗೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಭಾನುವಾರ ಸಂಭವಿಸಿದೆ. ಕಬಕ ನಿವಾಸಿ ಹಸೈನ್ ಎಂಬವರ ಪುತ್ರ ಮುಹಮ್ಮದ್ ಅಜ್ಮನ್ (15) ಮೃತ ಬಾಲಕ ಎಂದು ಗುರುತಿಸಲಾಗಿದೆ. ಅಜ್ಮನ್ ಪುತ್ತೂರಿನ ಸಾಲ್ಮರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಅಜ್ಮನ್ ತನ್ನ ಸ್ನೇಹಿತರೊಂದಿಗೆ ಕಲ್ಲುಕ್ವಾರಿಯ ಬಳಿಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದ್ದು, ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಮಾಹಿತಿ

ವಿಟ್ಲ : ಕ್ವಾರಿಯಲ್ಲಿ ಮುಳುಗಿ ಬಾಲಕ ಮೃತ್ಯು Read More »

ಸೌದಿ ಅರೇಬಿಯಾ ರಸ್ತೆ ಅಪಘಾತದಲ್ಲಿ ಉಳ್ಳಾಲದ ಯುವಕ ಸಾವು

ಬಸ್ಸಿಗೆ ಬಸ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತ ಮಂಗಳೂರು : ಸೌದಿ ಅರಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ಮಿಲ್ಲತ್ ನಗರದ ನಿವಾಸಿ ಯುವಕ ಮೃತಪಟ್ಟಿದ್ದಾರೆ. ಮೃತನನ್ನು ಮಿಲ್ಲತ್ ನಗರ ನಿವಾಸಿ ಮುಹಮ್ಮದ್ ಎಂಬವರ ಪುತ್ರ ಅಬ್ದುಲ್ ರಾಝಿಕ್ (27) ಎಂದು ಗುರುತಿಸಲಾಗಿದೆ. ಅಬ್ದುಲ್ ರಾಝಿಕ್ ಸೌದಿ ಅರೇಬಿಯಾದಲ್ಲಿ ಕೆಲಸದ ನಿಮಿತ್ತ ಬಸ್ ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸೌದಿ ಅರೇಬಿಯಾದ ಜುಬೈಲ್‌ನ ಪಾಲಿಟೆಕ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ರಾಝಿಕ್ ಸೆ.14ರಂದು

ಸೌದಿ ಅರೇಬಿಯಾ ರಸ್ತೆ ಅಪಘಾತದಲ್ಲಿ ಉಳ್ಳಾಲದ ಯುವಕ ಸಾವು Read More »

ಹಾಸನ ದುರಂತ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಘೋಷಣೆ

ನವದೆಹಲಿ: ಹಾಸನ ತಾಲೂಕಿನ ಮೊಸಳೆಹಳ್ಳಿ ಸಮೀಪ ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಡಿದವರಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಹಾಸನದಲ್ಲಿ ನಡೆದ ದುರಂತ ಹೃದಯವಿದ್ರಾವಕ. ಮೃತರ ಕುಟುಂಬಗಳ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಬರೆದಿದ್ದಾರೆ. ಪಿಎಂ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ

ಹಾಸನ ದುರಂತ: ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ಘೋಷಣೆ Read More »

ಹಾಸನ ದುರಂತ : ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ

ಸಾವಿನ ಸಂಖ್ಯೆ 9ಕ್ಕೇರಿಕೆ : ಮೃತರಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಅಧಿಕ ಹಾಸನ : ಗಣೇಶ ಮೆರವಣಿಗೆ ವೇಳೆ ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ. 17ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತಕ್ಕೆ ಕ್ಯಾಂಟರ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಾರೆ. ಮೃತರ ಪೈಕಿ ಬಹುತೇಕರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾಗಿದ್ದಾರೆ.

ಹಾಸನ ದುರಂತ : ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ Read More »

ಹಾಸನ : ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಹರಿದ ಟ್ರಕ್‌; ಮೃತರ ಸಂಖ್ಯೆ 8ಕ್ಕೇರಿಕೆ

ಮೃತರ ಕುಟುಂಬಗಳಿಗೆ ಸರ್ಕಾರದಿಂದ 5 ಲ.ರೂ. ಪರಿಹಾರ; ಗಾಯಾಳುಗಳಿಗೆ ಚಿಕಿತ್ಸೆ ವೆಚ್ಚ ಹಾಸನ : ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಹಾಸನದಲ್ಲಿ ಸಂಭವಿಸದ ಭೀಕರ ದುರಂತದಲ್ಲಿ ಮೃತಪಟ್ರ ಸಂಖ್ಯ 8ಕ್ಕೇರಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ಟ್ರಕ್‌ ಹರಿದು ಈ ದುರಂತ ಸಂಭವಿಸಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ನಾಲ್ವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವವರಿಗೆ ಚಿಕಿತ್ಸೆ ಮುಂದುವರಿದಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಹಾಸನ ತಾಲೂಕಿನ

ಹಾಸನ : ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಹರಿದ ಟ್ರಕ್‌; ಮೃತರ ಸಂಖ್ಯೆ 8ಕ್ಕೇರಿಕೆ Read More »

error: Content is protected !!
Scroll to Top