ಎರಡು ಬೈಕ್ ಗಳ ನಡುವೆ ಡಿಕ್ಕಿ | ಓರ್ವರಿಗೆ ಗಂಭೀರ ಗಾಯ
ಪುತ್ತೂರು: ಮುಕ್ರುಂಪಾಡಿಯಲ್ಲಿ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಪುತ್ತೂರು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಮತ್ತು ಕಾಸರಗೋಡಿನ ಉದಯ ಎಂಬವರ ಬೈಕ್ ಗಳು ಮಾಣಿ ಮೈಸೂರು ಹೈವೇಯ ಪುತ್ತೂರಿನ ಮುಕ್ರುಂಪಾಡಿಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರಿಗೂ ಗಾಯವಾಗಿದೆ. ಓರ್ವರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಹಾವೀರ ಆಸ್ಪತ್ರೆಗೆ ತನ್ನ ಕಾರಿನಲ್ಲೇ ಸಾಗಿಸಿದ್ದಾರೆ ಎನ್ನಲಾಗಿದೆ.
ಎರಡು ಬೈಕ್ ಗಳ ನಡುವೆ ಡಿಕ್ಕಿ | ಓರ್ವರಿಗೆ ಗಂಭೀರ ಗಾಯ Read More »