ಅಪಘಾತ

ಕಂಟೈನರ್‌ಗೆ ಡಿಕ್ಕಿಯಾದ ಬಸ್‌ : 20 ಪ್ರಯಾಣಿಕರು ಗಂಭೀರ

ಮಂಡ್ಯ : ಬೆಂಗಳೂರು-ಮೈಸೂರು ‌ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯದ ಸಾಂಜೋ ಆಸ್ಪತ್ರೆ ಬಳಿಯ ಭೀಕರ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಿಂದ ಮಂಡ್ಯ ಕಡೆಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಹೆದ್ದಾರಿಯಿಂದ ಸರ್ವಿಸ್​ ರಸ್ತೆಗೆ ಬರುವಾಗ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಕಂಟೈನರ್​ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಂಟೈನರ್‌ಗೆ ಡಿಕ್ಕಿಯಾದ ಬಸ್‌ : 20 ಪ್ರಯಾಣಿಕರು ಗಂಭೀರ Read More »

ರಿಕ್ಷಾ- ಕಾರು ಡಿಕ್ಕಿ : ಇಬ್ಬರಿಗೆ ಗಾಯ

ಕಟಪಾಡಿ: ಕಾರು ಮತ್ತು ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ‌ ರಿಕ್ಷಾ ಚಾಲಕ ಮತ್ತು ಪ್ರಯಾಣಿಕ ಸಹಿತ ಇಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಮಸೀದಿ ಜಂಕ್ಷನ್ ಬಳಿ ಶನಿವಾರ ರಾತ್ರಿ ನಡೆದಿದೆ. ರಿಕ್ಷಾ ಚಾಲಕ ಪೂರ್ಣೇಶ್ ಮತ್ತು ಪ್ರಯಾಣಿಕ ನೂರ್ ಸಾಹೇಬ್ ಗಾಯಗೊಂಡವರು. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕೇರಳ ಮೂಲದ ಕಾರು ಕಾಪು ಪೇಟೆಯಿಂದ ಪೊಲಿಪು ಕಡೆಗೆ ತೆರಳುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ರಿಕ್ಷಾ

ರಿಕ್ಷಾ- ಕಾರು ಡಿಕ್ಕಿ : ಇಬ್ಬರಿಗೆ ಗಾಯ Read More »

ಕ್ಯಾಂಟರ್‌ಗೆ ಕಾರು ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು

ಬಾಗಲಕೋಟೆ : ಕ್ಯಾಂಟರ್​ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಭೀಕರ ಅಪಘಾತ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಎಂಬ ನಾಲ್ವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಮೃತರು ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.ಕಾರು ಮುದ್ದೇಬಿಹಾಳದ ಕಡೆ ಹೊರಟಿತ್ತು. ಕ್ಯಾಂಟರ್​ ಮುದ್ದೇಬಿಹಾಳದಿಂದ ಹುನಗುಂದ ಕಡೆ ತೆರಳಿತ್ತು. ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ಕ್ಯಾಂಟರ್​ಗೆ

ಕ್ಯಾಂಟರ್‌ಗೆ ಕಾರು ಡಿಕ್ಕಿ : ನಾಲ್ವರು ಸ್ಥಳದಲ್ಲೇ ಸಾವು Read More »

ಟ್ಯಾಂಕರ್ – ಸರಕಾರಿ ಬಸ್ ಡಿಕ್ಕಿ : ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯ

ಉಪ್ಪಿನಂಗಡಿ : ಟ್ಯಾಂಕರ್ ಹಾಗೂ ಕೆಎಸ್‌ ಆರ್‌ ಟಿಸಿ ಬಸ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾ.ಹೆ. 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಗುಂಡ್ಯ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಟ್ಯಾಂಕ‌ರ್ ಹಾಗೂ ಬಸ್ ಚಾಲಕ ಸಹಿತ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕನನ್ನು

ಟ್ಯಾಂಕರ್ – ಸರಕಾರಿ ಬಸ್ ಡಿಕ್ಕಿ : ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯ Read More »

ಆ್ಯಂಬುಲೆನ್ಸ್-ಪಿಕಪ್ ಡಿಕ್ಕಿ : ಹಸುಳೆಗೆ ಗಾಯ

ಪುತ್ತೂರು: ಪುತ್ತೂರು ಮುರ ಸಮೀಪ ಸೋಮವಾರ ರಂದು ರಾತ್ರಿ ಸುಳ್ಯದ ಆ್ಯಂಬುಲೆನ್ಸ್ ಮತ್ತು ಪಿಕಪ್ ಜೀಪು ನಡುವೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್ ನಲ್ಲಿದ್ದ ಹಸುಳೆಗೆ ಗಾಯವಾಗಿದೆ. ಸುಳ್ಯ ಆಸ್ಪತ್ರೆಯಲ್ಲಿ ಜನಿಸಿದ ಮಗುವಿಗೆ ಬೆಳವಣಿಗೆ ಸಂಬಂಧಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಮತ್ತು ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಪಿಕಪ್ ನಡುವೆ ಮುರದಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ ನಲ್ಲಿದ್ದ ಹಸುಳೆ ಮತ್ತು ಚಾಲಕನಿಗೆ ಗಾಯವಾಗಿದೆ. ಗಾಯಾಳು ಹಸುಳೆಯನ್ನು ತಕ್ಷಣ ಪುತ್ತೂರು ಚೇತನಾ ಆಸ್ಪತ್ರೆಗೆ ಕರೆದುಕೊಂಡು

ಆ್ಯಂಬುಲೆನ್ಸ್-ಪಿಕಪ್ ಡಿಕ್ಕಿ : ಹಸುಳೆಗೆ ಗಾಯ Read More »

ಆಕ್ಟಿವಾ-ಕಾರು ಡಿಕ್ಕಿ : ಹೋಳಿಗೆ ವ್ಯಾಪಾರಿ ಗಣೇಶ್ ಮೃತ್ಯು

ಪುತ್ತೂರು: ಪುರುಷರ ಕಟ್ಟೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾರು ಮತ್ತು ಆಕ್ಟಿವಾ ಡಿಕ್ಕಿ ಪ್ರಕರಣದಲ್ಲಿ ಗಂಭಿರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಆಕ್ಟಿವಾ ಸವಾರ ಪುರುಷರಕಟ್ಟೆ ಇಂದಿರಾನಗರ ನಿವಾಸಿ ಗಣೇಶ್‍  ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೀಝಾ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಅಕ್ಕಿವಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸವಾರ ಅಕ್ಕಿವ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು ಗಂಭೀರ ಗಾಯವಾಗಿತ್ತು. ಗಂಭೀರ ಗಾಯಗೊಂಡಿರುವ

ಆಕ್ಟಿವಾ-ಕಾರು ಡಿಕ್ಕಿ : ಹೋಳಿಗೆ ವ್ಯಾಪಾರಿ ಗಣೇಶ್ ಮೃತ್ಯು Read More »

ಆಕ್ಟಿವಾ-ಕಾರು ಡಿಕ್ಕಿ : ಹೋಳಿಗೆ ವ್ಯಾಪಾರಿ ಗಣೇಶ್ ಗಂಭೀರ ಗಾಯ

ಪುತ್ತೂರು: ಕಾರು ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಆಕ್ಟಿವಾ ಸವಾರ ಪುರುಷರಕಟ್ಟೆ ಇಂದಿರಾನಗರ ನಿವಾಸಿ ಗಣೇಶ್‍ ಗಂಭೀರ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ಪುರುಷರಕಟ್ಟೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಬೀಝಾ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಅಕ್ಕಿವಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸವಾರ ಅಕ್ಕಿವ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಪಟ್ಟಿದ್ದು ಗಂಭೀರ ಗಾಯವಾಗಿದೆ. ಗಂಭೀರ ಗಾಯಗೊಂಡಿರುವ ಆಕ್ಟಿವಾ ಸವಾರ ಹೋಳಿಗೆ ವ್ಯಾಪಾರಿ, ಗಣೇಶ್‍ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ

ಆಕ್ಟಿವಾ-ಕಾರು ಡಿಕ್ಕಿ : ಹೋಳಿಗೆ ವ್ಯಾಪಾರಿ ಗಣೇಶ್ ಗಂಭೀರ ಗಾಯ Read More »

ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ

ಪುತ್ತೂರು: ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಘಟನೆ ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಓಮ್ನಿಯಲ್ಲಿ ಚಾಲಕ ಮಾತ್ರವಿದ್ದು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಓಮ್ನಿಯು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿತ್ತು.ಅಪಘಾತವು ಬೆಳಗಿನ ಜಾವ 7.30ರ ಸುಮಾರಿಗೆ ನಡೆದಿದೆ. ರೆಂಜಿಲಾಡಿಗೆ ನಿವಾಸಿ ರಫೀಕ್ ಎಂಬವರು ಅಪಘಾತಕ್ಕಿಡಾದ ವಾಹನ ಚಲಾಯಿಸುತ್ತಿದ್ದರು. ನಿದ್ದೆ ಮಂಪರು ಆವರಿಸಿದ್ದರಿಂದ ವಾಹನ ಹತೋಟಿ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ ಚರಂಡಿಗೆ ಉರುಳಿದೆ. ವಾಹನ

ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ Read More »

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

ವಿಟ್ಲ: ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮ  ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಧರ್ಮಪಾಲ ಗೌಡರ ಪತ್ನಿ ಸುಂದರಿ (48) ಮೃತಪಟ್ಟವರು. ಸೆ.10 ರಂದು ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸುಂದರಿ ಅವರು ಸಾಲೆತ್ತೂರಿನಲ್ಲಿರುವ ಪ್ರಸಿದ್ಧ ವೈದ್ಯರ ಬಳಿ ಪುತ್ತೂರಿನಿಂದ ಸಂಬಂಧಿಕನ ಜೊತೆ ಆಕ್ಟಿವಾದಲ್ಲಿ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು Read More »

ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿ ಪಲ್ಟಿ

ಬಿ.ಸಿ.ರೋಡ್ : ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿಯೊಂದು ಮಗುಚಿ ಬಿದ್ದ ಘಟನೆ ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆ ಎಂಬಲ್ಲಿ ಸಂಭವಿಸಿದೆ. ಆರ್ ಎ ಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್ ಗೆ ಹೋಗುತ್ತಿರುವಾಗ ಕುದ್ರೋಟಿಕಟ್ಟೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಅಪಘಾತದಿಂದ ಚಾಲಕ ಸಣ್ಣ ಪುಟ್ಟ ಗಾಯಗೊಂಡಿದ್ದು, ಮತ್ತೋರ್ವ ಪ್ರಯಾಣಿಕ ಸಾಂತಪ್ಪ ನಾಯಕ್ ಅವರನ್ನು ಚಿಕಿತ್ಸೆಗೆ ಮಂಗಳೂರು ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ರಾಪಿಡ್ ಏಕ್ಷನ್ ಫೋರ್ಸ್ ನ ಗೂಡ್ಸ್ ಲಾರಿ ಪಲ್ಟಿ Read More »

error: Content is protected !!
Scroll to Top