ಅಪಘಾತ

ಕಾರು – ಲಾರಿ ನಡುವೆ ಅಪಘಾತ: ಇಬ್ಬರು ಸಾವು

ಕಾಸರಗೋಡು: ಚಟ್ಟಂಚಾಲ್ ತೆಕ್ಕಿಲ್ ಬಳಿಯಲ್ಲಿ ನಡೆದ ಕಾರು ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಮೂವರಿಗೆ ಗಂಭೀರ ಪ್ರಮಾಣದ ಗಾಯಗಳಾದ ಘಟನೆ ನಡೆದಿದೆ. ಮೃತರನ್ನು ಸಜೀಪ ಬೈಲುಗುತ್ತು ನಿವಾಸಿ ಆಸಿಫ್ ಮುಹಮ್ಮದ್ ಮತ್ತು ನಾಟೆಕಲ್ ನಿವಾಸಿ ಮುಹಮ್ಮದ್ ಶಫೀಕ್ ಎಂದು ಗುರುತಿಸಲಾಗಿದೆ. ಐವರು ಗೆಳೆಯರು ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಕಾರಿನಲ್ಲಿ ವಯರನಾಡಿಗೆ ತೆರಳಿ ಊರಿಗೆ ಮರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಆಸಿಫ್ ‌ಸ್ಥಳದಲ್ಲೇ ಮೃತಪಟ್ಟಿದ್ದು, ಶಫೀಕ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಮಂಜೇಶ್ವರ […]

ಕಾರು – ಲಾರಿ ನಡುವೆ ಅಪಘಾತ: ಇಬ್ಬರು ಸಾವು Read More »

ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಬೈಕ್: ತಂದೆ ಗಂಭೀರ, ಮಗ ಸಾವು

ಸುಳ್ಯ: ನಿಯಂತ್ರಣ ತಪ್ಪಿ ಬೆಳ್ಳಾರೆ ರಸ್ತೆಯ ಕಲ್ಲೋಣಿ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಮೋರಿಗೆ ಬೈಕ್ ಬಿದ್ದ ಪರಿಣಾಮ ಮಗ ಮೃತಪಟ್ಟಿದ್ದು, ತಂದೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಘಟನೆ ನಡೆದಿದೆ. ಕಡಬದ ಮರ್ಧಾಳ ಸಮೀಪದ ನಿಶಾಂತ್(24) ಮೃತಪಟ್ಟಿದ್ದು, ಬೈಕಿನಲ್ಲಿದ್ದ ಅವರ ತಂದೆ ಮೋನಪ್ಪ ಅವರಿಗೆ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ. ತಂದೆ ಮತ್ತು ಮಗ ಶಬರಿಮಲೆಯ ಪ್ರಸಾದವನ್ನು ಸಂಬಂಧಿಕರಿಗೆ ನೀಡಲು ಸುಳ್ಯಕ್ಕೆ ಬೈಕ್ ಮೂಲಕ ತೆರಳುತ್ತಿದ್ದರು. ತಿರುವಿನಲ್ಲಿ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಗಾಯಾಳು ಮೋನಪ್ಪ

ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಬೈಕ್: ತಂದೆ ಗಂಭೀರ, ಮಗ ಸಾವು Read More »

ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು

ಕಾಳುಮೆಣಸು ಕೊಯ್ಯಲು ಮರ ಏರಿದಾಗ ಸಂಭವಿಸಿದ ದುರ್ಘಟನೆ ಪುತ್ತೂರು : ನಿವೃತ್ತ ಶಿಕ್ಷಕರೊಬ್ಬರು ತೆಂಗಿನಮರದಿಂದ ಬಿದ್ದು ಮೃತಪಟ್ಟಿರುವ ದುರ್ಘಟನೆ ಬೆಟ್ಟಂಪಾಡಿಯಲ್ಲಿ ಸೋಮವಾರ ಸಂಭವಿಸಿದೆ. ಬೆಟ್ಟಂಪಾಡಿ ಗ್ರಾಮದ ಗುಮ್ಮಟಿಗದ್ದೆ ನಿವಾಸಿ ನಾರಾಯಣ ನಾಯ್ಕ ಪೈಂತಿಮುಗೇರು ಮೃತಪಟ್ಟಿರುವ ವ್ಯಕ್ತಿ. ಗುಮ್ಮಟಿಗದ್ದೆಯಲ್ಲಿ ಸೋಮವಾರ ಕಾಳುಮೆಣಸು ಕೀಳಲೆಂದು ತೆಂಗಿನಮರ ಏರಿದ್ದ ನಾರಾಯಣ ನಾಯ್ಕ ಬಿದ್ದು ಮೃತಪಟ್ಟಿದ್ದಾರೆ. ಅಲ್ಯುಮಿನಿಯಂ ಏಣಿ ಇಟ್ಟು ಅವರು ಕಾಳುಮೆಣಸು ಕೊಯ್ಯುತ್ತಿದ್ದರು. ಈ ವೇಳೆ ಏಣಿ ಜಾರಿ ಏಣಿ ಸಮೇತ ಬಿದ್ದ ನಾರಾಯಣ ನಾಯ್ಕ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು.

ತೆಂಗಿನಮರದಿಂದ ಬಿದ್ದು ನಿವೃತ್ತ ಶಿಕ್ಷಕ ಸಾವು Read More »

ಪುತ್ತೂರು : ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ

ಬಲೂನ್‌ ವಿದ್ಯುತ್‌ ತಂತಿಗೆ ತಗುಲಿದಾಗ ಸಂಭವಿಸಿದ ಅವಘಡ ಪುತ್ತೂರು : ಗ್ಯಾಸ್ ಬಲೂನ್ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಭಸ್ಮವಾದ ಘಟನೆ ಶ್ರೀ ಪೂಮಾಣಿ-ಕಿನ್ನಿಮಾನಿ ಬಳಿಯ ಪಡುಮಲೆ ಹಾಗೂ ಬಡಗನ್ನೂರು ಗ್ರಾಮ ಪಂಚಾಯತ್‌ನ ಮೈಂದಿನಡ್ಕ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಳಿಯ ಪಡುಮಲೆಯಲ್ಲಿ ಭಾನುವಾರ ನಡೆದಿದೆ. ದೈವಸ್ಥಾನ ಜಾತ್ರಾ ಮಹೋತ್ಸವ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದೇವಾಲಯದ ಆವರಣದಲ್ಲಿರುವ ವಿದ್ಯುತ್ ಕಂಬದ ಬಳಿ ಕಾರು ಪಾರ್ಕಿಂಗ್‌ ಮಾಡಲಾಗಿತ್ತು. ಆ ಸಮಯದಲ್ಲಿ, ಹತ್ತಿರದ ಜಾತ್ರೆಯಿಂದ

ಪುತ್ತೂರು : ವಿದ್ಯುತ್‌ ಕಂಬದ ಬಳಿ ನಿಲ್ಲಿಸಿದ್ದ ಕಾರು ಬೆಂಕಿಗಾಹುತಿ Read More »

ಹೈಸ್ಪೀಡ್‌ ರೈಲುಗಳ ನಡುವೆ ಡಿಕ್ಕಿ : 21 ಪ್ರಯಾಣಿಕರು ಸಾವು

ಹಳಿತಪ್ಪಿ ಇನ್ನೊಂದು ಹಳಿಗೆ ಜಿಗಿದಾಗ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಮ್ಯಾಡ್ರಿಡ್‌ : ಸ್ಪೇನ್ ದೇಶದ ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್‌ಗೆ ಜಿಗಿದು ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ ಎಂದು ಸ್ಪೇನ್‌ನ ಅದಿಪ್ ರೈಲು ನೆಟ್ ವಾರ್ಕ್ ಆಪರೇಟರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ

ಹೈಸ್ಪೀಡ್‌ ರೈಲುಗಳ ನಡುವೆ ಡಿಕ್ಕಿ : 21 ಪ್ರಯಾಣಿಕರು ಸಾವು Read More »

ಟಿಪ್ಪರ್ – ಬೈಕ್ ನಡುವೆ ಅಪಘಾತ: ಮೂರು ಸಾವು

ಬೆಂಗಳೂರು: ಟಿಪ್ಪರ್ – ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ನಡೆದಿದೆ. ಮೃತಪಟ್ಟವರು ಹುಣಸಮಾರೇನಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಓರ್ವನನ್ನು ತೌಸೀಫ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಮೂವರು ವಿದ್ಯಾರ್ಥಿಗಳು ಬೂದಿಗೆರೆ ಕಡೆಗೆ ಹೊರಟಿದ್ದಾಗಿ ತಿಳಿದು ಬಂದಿದೆ. ಈ ಸಂದರ್ಭ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮೂರೂ ದೇಹಗಳು ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ. ಘಟನೆಯ

ಟಿಪ್ಪರ್ – ಬೈಕ್ ನಡುವೆ ಅಪಘಾತ: ಮೂರು ಸಾವು Read More »

ಬೈಕ್ – ಟಿಪ್ಪರ್ ‌ನಡುವೆ ಅಪಘಾತ: ಓರ್ವ ಸಾವು, ಮತ್ತೊಬ್ಬ ಗಂಭೀರ

ಪಾವಗಡ: ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಪ್ರಮಾಣದ ಗಾಯಗಳಾಗಿರುವ ಘಟನೆ ಪಾವಗಡದಲ್ಲಿ ನಡೆದಿದೆ. ಮೃತನನ್ನು ಬೈಕ್ ಸವಾರ ಅಂಬರೀಶ್ (25) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಭಾಸ್ಕರ್ ಅವರನ್ನು ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೈಕ್ ಸವಾರರು ಪಾವಗಡದಿಂದ ಮಧುಗಿರಿಯ ಕಡೆಗೆ ಹೊರಟಿದ್ದರು. ಈ ವೇಳೆ ಇವರ ಬೈಕ್‌ಗೆ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಪರಿಣಾಮ ಅಂಬರೀಶ್ ಮೃತಪಟ್ಟು, ಭಾಸ್ಕರ್‌ಗೆ ಗಂಭೀರ ಗಾಯಗಳಾಗಿರುವುದಾಗಿದೆ. ಪಾವಗಡ ಪೊಲೀಸ್

ಬೈಕ್ – ಟಿಪ್ಪರ್ ‌ನಡುವೆ ಅಪಘಾತ: ಓರ್ವ ಸಾವು, ಮತ್ತೊಬ್ಬ ಗಂಭೀರ Read More »

ಕಾರ್ಕಳ: ಗ್ಯಾಸ್‌ ಸಿಲಿಂಡರ್‌ ಸ್ಫೋಟಿಸಿ ಅಪಾರ ಹಾನಿ

ಸ್ಫೋಟದ ಬಿರುಸಿಗೆ ಮನೆಯ ಗೋಡೆಯಲ್ಲಿ ಬಿರುಕು ಕಾರ್ಕಳ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆಯ ಗೋಡೆ ಸಹಿತ ಹಲವು ಸೊತ್ತುಗಳು ಹಾನಿಗೀಡಾದ ಘಟನೆ ಸಾಣೂರು ಗ್ರಾಮದ ಮುದ್ದಣ್ಣ ನಗರ ಎಂಬಲ್ಲಿ ಗುರುವಾರ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಮುದ್ದಣ್ಣ ನಗರದ ವಾರಿಜಾ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅಡುಗೆ ಕೋಣೆಯ ಹೊರಭಾಗದ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆ, ಫರ್ನಿಚರ್, ವಾಷಿಂಗ್ ಮಷೀನ್, ಪಾತ್ರೆ ಪಗಡಿ ಹಾಗೂ

ಕಾರ್ಕಳ: ಗ್ಯಾಸ್‌ ಸಿಲಿಂಡರ್‌ ಸ್ಫೋಟಿಸಿ ಅಪಾರ ಹಾನಿ Read More »

ಬಾಂಗ್ಲಾದೇಶದ ಅಕ್ರಮ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ

ತೆರವು ಮಾಡಿದ ಬಳಿಕ ಮತ್ತೆ ಬಂದು ನೆಲೆಸಿದ್ದ ವಲಸಿಗರು ಬೆಂಗಳೂರು: ಅಕ್ರಮ ಬಾಂಗ್ಲಾದೇಶದ ವಲಸಿಗರು ನೆಲೆಸಿದ್ದ ಶೆಡ್‌ಗಳು ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿಗಾಹುತಿಯಾದ ಘಟನೆ ಬೆಂಗಳೂರು ಹೊರವಲಯದ ಬೇಗೂರಿನ ಎಳೇನಹಳ್ಳಿಯಳ್ಳಿಯಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ನಡೆದಿದೆ. 5 ಎಕ್ರೆ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶೀಯರನ್ನು ಕೆಲ ದಿನಗಳ ಹಿಂದೆ ಸ್ಥಳದಿಂದ ತೆರವುಗೊಳಿಸಲಾಗಿತ್ತು. ಆದರೆ ರಾತ್ರೋರಾತ್ರಿ ಮತ್ತೆ ವಲಸಿಗರು ಇಲ್ಲಿಗೆ ಆಗಮಿಸಿ ಶೆಡ್‌ ಹಾಕಿದ್ದರು. ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳು ಹೊತ್ತಿ ಉರಿದಿದ್ದು ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿತ್ತು.

ಬಾಂಗ್ಲಾದೇಶದ ಅಕ್ರಮ ವಲಸಿಗರ ಶೆಡ್‌ಗಳು ಬೆಂಕಿಗಾಹುತಿ Read More »

ಕಾರು-ಬಸ್‌ ಡಿಕ್ಕಿ : ಮಗು ಸಹಿತ ಮೂವರು ಸಾವು

ಶಿವಮೊಗ್ಗ: ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ ಭೀಕರ ಅಪಘಾತ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಕ್ರಾಸ್ ಬಳಿ ನಡೆದಿದೆ. ಮಗು, ಕಾರಿನ ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76) ಎಂದು ಗುರುತಿಸಲಾಗಿದೆ. ಇವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ

ಕಾರು-ಬಸ್‌ ಡಿಕ್ಕಿ : ಮಗು ಸಹಿತ ಮೂವರು ಸಾವು Read More »

error: Content is protected !!
Scroll to Top