ಸ್ಥಳೀಯ ಸುದ್ದಿ

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ಗ್ಲೋ ಫೆಸ್ಟ್‌ಗೆ ಚಾಲನೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಾರ್ಷಿಕ ವಜ್ರಾಭರಣಗಳ ಮಹೋತ್ಸವ ಗ್ಲೋಬಲ್ ಫೆಸ್ಟ್ ಇಂದಿನಿಂದ ಮುಂದಿನ ಒಂದು ತಿಂಗಳ ಕಾಲ ನಡೆಯಲಿದ್ದು, ಇಂದು ಚಾಲನೆ ದೊರೆತಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಅವರು ದೀಪ ಬೆಳಗಿಸಿ, ಮಹೋತ್ಸವಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಬಿ. ಆಚಾರ್ಯ ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ನೈಜ ವಜ್ರಗಳು ಮತ್ತು ಲ್ಯಾಬ್ ತಯಾರಿತ ವಜ್ರಗಳು ಎಂಬ ಎರಡು ವಿಧಗಳಿವೆ. […]

ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ಗ್ಲೋ ಫೆಸ್ಟ್‌ಗೆ ಚಾಲನೆ Read More »

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ

ಸಂಪ್ಯ: ಪುತ್ತೂರಿನ ಆರಕ್ಷಕ ಠಾಣೆಯ ಬಳಿ ಕಾರ್ಯಾಚರಿಸುತ್ತಿರುವ ತರಬೇತಿ ಸಂಸ್ಥೆ ವಿದತ್ (VIDATH) ಇದರ ಆಡಳಿತ ಮಂಡಳಿಯವರು ಕಚೇರಿ ನಿರ್ವಾಹಕ (Office Admin) ಹುದ್ದೆಗೆ ನೇಮಕಾತಿ ಮಾಡಲಿದ್ದು ಆಸಕ್ತರನ್ನು ಆಹ್ವಾನಿಸಿದ್ದಾರೆ. ಕಚೇರಿ ವೇಳೆಯಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ಪಾಲುದಾರರಾಗಿರುವ ಶುಭಾ ಅವರು ತಿಳಿಸಿದ್ದಾರೆ.

ಉದ್ಯೋಗ ವಾರ್ತೆ: ಆಫೀಸ್ ಅಡ್ಮಿನ್ ಹುದ್ದೆಗೆ ಅರ್ಜಿ ಆಹ್ವಾನ Read More »

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಅವಕಾಶವಿರುವ ಸರ್ಕಾರಿ ಅಧಿಕಾರಿ ಹುದ್ದೆಗಳನ್ನು ಪಡೆಯಲು ಕೆಎಎಸ್,ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿ ಯಶಸ್ಸನ್ನು ಪಡೆಯಲು ಪಿಯುಸಿಯ ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಸಿದ್ಧತೆ ಮಾಡಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು. ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜ್ಞಾನಾರ್ಜನೆಗಾಗಿ ಶಿಕ್ಷಣದ ಜೊತೆಗೆ ಸಾಮಾಜಿಕ ಋಣವನ್ನು ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿರಿಯ ಉಪನ್ಯಾಸಕಿಯಾದ ಭಾಗ್ಯಲಕ್ಷ್ಮಿ

ಗೇರುಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ Read More »

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬ: ಶೀಘ್ರ ಪರಿಹಾರಕ್ಕೆ ಕ್ಯಾ. ಚೌಟ ಸೂಚನೆ

ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬವಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಶೀಘ್ರ ವಿಮಾ ಮೊತ್ತ ಪಾವತಿಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಕಳೆದ ವಾರ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ವಿಳಂಬಕ್ಕೆ ‌ಕಾರಣ ಏನು ಎಂಬುದರ ಬಗ್ಗೆ ಪರಾಮರ್ಶಿಸಿದ್ದರು. ಹಾಗೆಯೇ ತುರ್ತಾಗಿ ವಿಮಾ

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬ: ಶೀಘ್ರ ಪರಿಹಾರಕ್ಕೆ ಕ್ಯಾ. ಚೌಟ ಸೂಚನೆ Read More »

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುರೇಶ್ ATI ಅವರು ನವೆಂಬರ್ 30 ರಂದು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ. 1989 ರಲ್ಲಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಕಾರ್ಯ ಆರಂಭಿಸಿದ ಅವರು ಆ ಬಳಿಕ ತಮ್ಮ ಉತ್ತಮ ಸೇವೆಯ ಫಲವಾಗಿ ಸಹಾಯಕ ಸಂಚಾರ ನಿಯಂತ್ರಕರಾಗಿ ಮುಂಭಡ್ತಿ ಹೊಂದಿದ್ದರು. ಅವರ ಸೇವಾ ನಿವೃತ್ತಿಗೆ ‌ಶುಭ ಕೋರಿ ಪುತ್ತೂರು ಘಟಕದ ಎಲ್ಲಾ ಚಾಲಕರ ಪರವಾಗಿ ಪುತ್ತೂರು ಘಟಕದ ಚಾಲಕ ಬೋಧಕ ಪಿ. ವಿ.

KSRTC ಯಲ್ಲಿನ ವೃತ್ತಿಯಿಂದ ನಿವೃತ್ತರಾಗಲಿರುವ ಸುರೇಶ್ ATI Read More »

ಮಹಿಳೆಯರಿಗೆ ಡ್ರೋನ್ ಹಾರಿಸುವ ಉಚಿತ ತರಬೇತಿಗೆ ಸಂದರ್ಶನ

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಪುತ್ತೂರು, ಅರಸ್ ಟ್ರಸ್ಟ್, ಪುತ್ತೂರು ಮತ್ತು ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವುಗಳ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ ನಡೆಯಲಿರುವ ಡ್ರೋನ್ ಹಾರಿಸುವ ಅತ್ಯುನ್ನತ ದರ್ಜೆಯ 12 ದಿನಗಳ ಉಚಿತ ತರಬೇತಿಗೆ ಸಂದರ್ಶನ ನಡೆಯಲಿದೆ. ಸಂದರ್ಶನ ಯಾವಾಗ, ಎಲ್ಲಿ, ಎಷ್ಟೊತ್ತಿಗೆ? ಯಾರು ಅರ್ಹರು? ಸಂದರ್ಶನಕ್ಕೆ ಹಾಜರಾಗುವಾಗ ಏನೇನು ತರಬೇಕು? ತರಬೇತಿಯ ಪ್ರಯೋಜನ ತರಬೇತಿ ಯಾವಾಗ?2025ರ ದಶಂಬರ ತಿಂಗಳ ಎರಡನೇ ವಾರದಲ್ಲಿ ತರಬೇತಿ ನಡೆಯಲಿದೆ. ಆಸಕ್ತ ಮಹಿಳೆಯರು 9448725813 / 8217595631 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಮಹಿಳೆಯರಿಗೆ ಡ್ರೋನ್ ಹಾರಿಸುವ ಉಚಿತ ತರಬೇತಿಗೆ ಸಂದರ್ಶನ Read More »

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯನ್ನುಬೊಳುವಾರು ಬೈಲಿನ ಸೌಭರಿ ನಿವಾಸದಲ್ಲಿ ಸದಾನಂದ ರಾವ್ ಮತ್ತು ವನಿತಾ ಎಸ್ ರಾವ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ನಾನಾ ಸೌಲಭ್ಯಗಳಿದ್ದರೂ ಅದನ್ನು ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಟ, ರೋಗಿಯ ಜೀವ ಉಳಿಸಲು ಕುಟುಂಬದ ಸದಸ್ಯರು ಎದುರಿಸುವ ಸಮಸ್ಯೆಗಳನ್ನು ನೋಡಿದಾಗ

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್ Read More »

ನೇಣು ಬಿಗಿದು ಯುವಕ ಆತ್ಮಹತ್ಯೆ

ಪುತ್ತೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪುರುಷರಕಟ್ಟೆಯ ಇಂದಿರಾನಗರದ ಯುವಕನೊಬ್ಬ ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಪ್ರತೀಕ್ ಜೋಗಿ (23) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶೋ ರೂಮ್ ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನ. 21 ರಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ, ಬಳಿಕ ಕಾಣೆಯಾಗಿದ್ದ. ಅನುಮಾನಗೊಂಡ ಮನೆ ಮಂದಿ ಆತನನ್ನು ಹುಡುಕಾಡಿದ್ದು, ಈ ವೇಳೆ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈತನ

ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಯೋಗ್ಯತೆಗಿಂತ ಯೋಗ ಮುಖ್ಯ. ಜನ್ಮ ದಿನದ ಸ್ವರ್ಣ ಸಂಭ್ರಮದಲ್ಲಿ SRK ಕೇಶವ ಅಮೈ

ಕೊಯ್ಲ: ಇಲ್ಲಿನ ಕಲಾಯಿಗುತ್ತು ಮನೆಯಲ್ಲಿ SRK Laddersನ ಕೇಶವ ಅಮೈ ಅವರ 50ನೇ ಹುಟ್ಟುಹಬ್ಬ ಅದ್ದೂರಿಯಾಗಿ ನಡೆಯಿತು. ಚಿತ್ರದೊಳಗೆ ಕೇಶವಮೈಸೂರಿನಲ್ಲಿ ಚಿತ್ರಕಲಾ ಶಿಕ್ಷಕರಾದ ಲಕ್ಷ್ಮೀನಾರಾಯಣ ಅವರು ಕೇಶವರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಹಾಡೊಂದು ಸಾಗಿಬಂದ ಆರೆಂಟು ನಿಮಿಷಗಳಲ್ಲಿ ಕೇಶವರ ಕ್ಯಾನ್ವಾಸ್ ಚಿತ್ರ ರಚಿಸಿದ್ದು ವಿಶೇಷವಾಗಿತ್ತು. AI touchಈಗಿನ ಆಪ್ತ ತಾಂತ್ರಿಕತೆಯಾಗಿರುವ ಕೃತಕ ಬುದ್ಧಿಮತ್ತೆ (Artificial Intelligence) ವಿಶೇಷ ರೀತಿಯಲ್ಲಿ ಪ್ರಕಟಗೊಂಡದ್ದು ವಿಶೇಷವಾಗಿತ್ತು. ಕೇಶವರ ಜೀವಮಾನದ ಸಾಧನೆಯ ಕುರಿತಾಗಿ ರಚನೆಯಾಗಿದ್ದ ಹಾಡಿಗೆ AI ಮೂಲಕ ರಾಗ, ಗಾಯನ ಮತ್ತು ಸಂಗೀತ

ಯೋಗ್ಯತೆಗಿಂತ ಯೋಗ ಮುಖ್ಯ. ಜನ್ಮ ದಿನದ ಸ್ವರ್ಣ ಸಂಭ್ರಮದಲ್ಲಿ SRK ಕೇಶವ ಅಮೈ Read More »

ನ.9: ಮಾಹಿ ಕಿರುಚಿತ್ರ ಬಿಡುಗಡೆ

ಕಾವು: ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ, ಅಜಿತ್ ಬಿ.ಟಿ. ನಿರ್ಮಾಣದ ಕಿರು ಚಿತ್ರ ಮಾಹಿ ಇದೇ ತಿಂಗಳ 9 ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಪ್ರಥಮ ಪ್ರೀಮಿಯರ್ ಶೋ ರಿಲೀಸ್ ಆಗಲಿದೆ ಎಂದು ಚಿತ್ರದ ನಿರ್ದೇಶಕ ಕೀರ್ತನ್ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ. ಹಲವು ಗಣ್ಯರ ಸಮ್ಮುಖದಲ್ಲಿ ತೆರೆ ಕಾಣಲಿರುವ, ಮಕ್ಕಳು ನಟಿಸಿರುವ ಮಾಹಿ ಚಿತ್ರದ 4 ಶೋ ಭಾನುವಾರ ಪ್ರದರ್ಶನಗೊಳ್ಳಲಿದೆ. ಚಿತ್ರದ ಎಲ್ಲ ಟಿಕೆಟ್‌ಗಳು ಮುಗಿದಿದ್ದು ಈಗಲೇ ಹೌಸ್ ಫುಲ್ ಆಗಿರುವುದಾಗಿ ಅವರು ಹೇಳಿದ್ದಾರೆ.

ನ.9: ಮಾಹಿ ಕಿರುಚಿತ್ರ ಬಿಡುಗಡೆ Read More »

error: Content is protected !!
Scroll to Top