ಸ್ಥಳೀಯ ಸುದ್ದಿ

ಬಾರ್ಯ ಕ್ಷೇತ್ರದಲ್ಲಿ ಜಾಂಬವತಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ: ಬಾರ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಶ್ರೀಪತಿ ಕಲ್ಲುರಾಯ ಅವರ ಪ್ರಾಯೋಜಕತ್ವದಲ್ಲಿ ಜಾಂಬವತಿ ಕಲ್ಯಾಣ ತಾಳಮದ್ದಳೆ ಜರಗಿತು. ಭಾಗವತರಾಗಿ ನಾರಾಯಣ ಶಬರಾಯ ಉಡುಪಿ, ಪದ್ಯಾಣ ಜಯರಾಮ್ ಭಟ್ ಮತ್ತು ಮುರಳಿಧರ ಕಲ್ಲೂರಾಯ , ಬಲರಾಮನಾಗಿ ಡಾ. ಶ್ರೀಪತಿ ಕಲ್ಲೂರಾಯ, ಶ್ರೀ ಕೃಷ್ಣನಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಜಾಂಬವಂತನಾಗಿ ಗಣರಾಜ ಕುಂಬಳೆ, ಜಾಂಬವತಿಯಾಗಿ ರಾಜಶ್ರೀ ಶಬರಾಯ ಉಡುಪಿ ಭಾಗವಹಿಸಿದ್ದರು. ದೇವಳದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ […]

ಬಾರ್ಯ ಕ್ಷೇತ್ರದಲ್ಲಿ ಜಾಂಬವತಿ ಕಲ್ಯಾಣ ತಾಳಮದ್ದಳೆ Read More »

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದ ವಾರ್ಷಿಕ ಜಾತ್ರೋತ್ಸವ

ವೀರಮಂಗಲ: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದ ವಾರ್ಷಿಕ ಜಾತ್ರೋತ್ಸವ ಮತ್ತು ದೈವಗಳ ನೇಮೋತ್ಸವ ಫೆ. 15 ರಂದು ನಡೆಯಲಿದೆ. ಫೆ. 9 ರಂದು ನಾಗತಂಬಿಲ, ಫೆ. 10 ರಂದು ಸಂಜೆ 6 ಗಂಟೆಗೆ ನೂತನವಾಗಿ ನಿರ್ಮಾಣವಾಗಿರುವ ಅಂಙಣಪಂಜುರ್ಲಿ ದೈವಸ್ಥಾನದ ವಾಸ್ತು ಪೂಜೆ, ಫೆ. 11 ರಂದು ಹುಲಿ ಚಾಮುಂಡಿ ಮತ್ತು ಅಂಙಣಪಂಜುರ್ಲಿ ದೈವಗಳ ಪುನಃಪ್ರತಿಷ್ಟೆ, ಫೆ. 14 ರಂದು ಕುಮಾರಧಾರಾ ನದಿಯಲ್ಲಿ ಗಂಗಾ ಪೂಜೆ, ಕಲಶ ಜಲ ಮೆರವಣಿಗೆ, ಮಹಾ ಪೂಜೆ, ಅನ್ನಸಂತರ್ಪಣೆ, ರಾತ್ರಿ

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದ ವಾರ್ಷಿಕ ಜಾತ್ರೋತ್ಸವ Read More »

ಕುದ್ಮಾರು ಶಾಲೆ: ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ

ಕುದ್ಮಾರು ಹಿರಿಯ ಮಾದರಿ ಕಿರಿಯ ಪ್ರಾಥಮಿಕ ಶಾಲೆಗೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಶಿಫಾರಸ್ಸಿನ ಮೇರೆಗೆ MRPL CRS ಫಂಡ್ ನ 15 ಲಕ್ಷ ಅನುದಾನದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗುವ ಮುನ್ನವೇ ಸಂಸದರಿಂದ ಉದ್ಘಾಟನೆ ಆಗುವಂತೆ ಆಗಲಿ. ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಿ ಒಟ್ಟಾಗಿ ಕೆಲಸ ಮಾಡುವಂತೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಭಾರತೀಯ

ಕುದ್ಮಾರು ಶಾಲೆ: ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಭೂಮಿ ಪೂಜೆ Read More »

ವಿವಾಹದ ಭರವಸೆ ನೀಡಿ ಯುವತಿಗೆ ವಂಚನೆ: ಆರೋಪಿ ಅಂದರ್

ಪುತ್ತೂರು: ವಿವಾಹದ ಭರವಸೆ ನೀಡಿ ಯುವತಿಯೊಬ್ಬಳನ್ನು ಗರ್ಭವತಿಯನ್ನಾಗಿ ಮಾಡಿದ ಆರೋಪಿಯನ್ನು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಬಕ ನಿವಾಸಿ ಪ್ರಕಾಶ್ ಗೌಡ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿವಾಹದ ಭರವಸೆ ನೀಡಿ ಯುವತಿಗೆ ವಂಚನೆ: ಆರೋಪಿ ಅಂದರ್ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ’ದ ಪುತ್ತೂರು ಘಟಕದ ಸಭೆ

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಬಂಟವಾಳ ಮೆಲ್ಕಾರ್ ಇದರ ಪುತ್ತೂರು ಘಟಕದ ಸಭೆಯು ಹೋಟೆಲ್ ಸ್ವಾಗತ್‍ನ ಸಭಾಂಗಣದಲ್ಲಿ ನಡೆಯಿತು. ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಸಂಚಾಲಕ ಭಾಸ್ಕರ್ ಬಾರ್ಯ ಕೇಂದ್ರ ಸಮಿತಿಯ ಚಟುವಟಿಕೆಗಳ ಮಾಹಿತಿ ಮತ್ತು ಪುತ್ತೂರು ಘಟಕದ ಪ್ರಗತಿಯ ಬಗ್ಗೆ ಸಲಹೆಗಳನ್ನು ನೀಡಿದರು. ಮುರ ಶಿವ ಸದನದಲ್ಲಿರುವ ಆಶ್ರಮದಲ್ಲಿ ಮುಂದಿನ ಕಾರ್ಯಕ್ರಮ ನಡೆಸುವುದೆಂದು ಶಂಕರಿ ಶರ್ಮ ತಿಳಿಸಿದರು. ಮೆಲ್ಕಾರ್ ಶಂಕರಪತ್ತಿನ ಸಹಕಾರಿ ಸಂಘದ ಪಾಲುದಾರರಾಗಲು

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ’ದ ಪುತ್ತೂರು ಘಟಕದ ಸಭೆ Read More »

ಸಾರ್ವಜನಿಕ ರಸ್ತೆಯನ್ನು ಮುಚ್ಚಿದ ಖಾಸಗಿ ವ್ಯಕ್ತಿ: ಸಾರ್ವಜನಿಕರ ಪರದಾಟ

ಪುತ್ತೂರು: ಖಾಸಗಿ ವ್ಯಕ್ತಿಯೆಬ್ಬರು ಸುಮಾರು 25 ವರ್ಷಗಳಿಂದ ಸಾರ್ವಜನಿಕವಾಗಿ ಬಳಕೆ ಮಾಡುತ್ತಿದ್ದ ರಸ್ತೆಯನ್ನೇ ಮುಚ್ಚಿದ್ದು, ಇದರಿಂದಾಗಿ ಎಂಡೋಸಲ್ಫಾನ್ ಪೀಡಿತ ಬಾಲಕನೊಬ್ಬ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದಕ್ಕೂ ಪರದಾಡಬೇಕಾದ ಸ್ಥಿತಿ ಕೊಡಿಪ್ಪಾಡಿಯ ಬಾಯಂಬೆಯಲ್ಲಿ ನಿರ್ಮಾಣವಾಗಿದೆ. ವ್ಯಕ್ತಿಯೊಬ್ಬರು ತಮ್ಮ ಜಮೀನನ್ನು ತುಂಡು ಭೂಮಿಯಾಗಿ ಪರಿವರ್ತಿಸಿ ಅನೇಕರಿಗೆ ಮಾರಾಟ ಮಾಡಿದ್ದರು. ಈ ಸಂದರ್ಭದಲ್ಲಿ ರಸ್ತೆಯನ್ನು ದಾಖಲೆಗಳಲ್ಲಿ ಸಾರ್ವಜನಿಕ ರಸ್ತೆ ಎಂಬುದಾಗಿ ತೋರಿಸಲಾಗಿತ್ತು. ಸ್ಥಳೀಯರು ಸಹ ಇದೇ ರಸ್ತೆಯನ್ನು ಕಳೆದ 25 ವರ್ಷಗಳಿಂದ ಬಳಕೆ ಮಾಡುತ್ತಿದ್ದರು. ಆದರೆ ಪ್ರಸ್ತುತ ಕಲ್ಲುಗಳನ್ನು ಕಟ್ಟಿ ಈ ರಸ್ತೆಯನ್ನು

ಸಾರ್ವಜನಿಕ ರಸ್ತೆಯನ್ನು ಮುಚ್ಚಿದ ಖಾಸಗಿ ವ್ಯಕ್ತಿ: ಸಾರ್ವಜನಿಕರ ಪರದಾಟ Read More »

ಗ್ಯಾರೇಜಿನಲ್ಲಿ ಜಗಳ, ಹಲ್ಲೆ: ದೂರು ದಾಖಲು

ಪುತ್ತೂರು: ನಗರದ ಪರ್ಲಡ್ಕ ಎಂಬಲ್ಲಿರುವ ಶ್ರೀ ಮಹಾಲಿಂಗೇಶ್ವರ ಆರ್. ಆರ್. ವರ್ಕ್ಸ್‌ನಲ್ಲಿ ಅದರ ಮಾಲೀಕ ಮತ್ತು ವ್ಯಕ್ತಿಯೊಬ್ಬರ ‌ನಡುವೆ ಮಾತಿನ ಚಕಮಕಿ ನಡೆದು, ಹಲ್ಲೆ ನಡೆದ ಬಗ್ಗೆ ಪ್ರಕರಣ ದಾಖಲಾಗಿದೆ. ಗ್ಯಾರೇಜಿನ ಮಾಲೀಕ ಬಲ್ನಾಡು ನಿವಾಸಿ ರಮೇಶ್ ಆಚಾರ್ಯ ಅವರು ಈ ಕುರಿತು ದೂರು ನೀಡಿದ್ದಾರೆ. ಜ. 27 ರಂದು ತಾನು ಗ್ಯಾರೇಜ್ ಓಪನ್ ಮಾಡುತ್ತಿದ್ದ ವೇಳೆ ರಮೇಶ್ ನಾಯ್ಕ್ ಎಂಬವರು ಇನ್ನೋವಾ ಕಾರಿನಲ್ಲಿ ಬಂದು, ಕಾರಿನ ಕ್ಯಾರಿಯರ್ ಮಾರಾಟಕ್ಕೆ ಸಂಬಂಧಿಸಿದ ಹಾಗೆ ಜಗಳವಾಡಿದ್ದಾರೆ. ಹಲ್ಲೆ ನಡೆಸಿದ್ದಾಗಿ

ಗ್ಯಾರೇಜಿನಲ್ಲಿ ಜಗಳ, ಹಲ್ಲೆ: ದೂರು ದಾಖಲು Read More »

ಕಾವು:ನೋವಿಗೆ ಸ್ಪಂದಿಸಿದ ಮಾನವೀಯ ಕೈಗಳು

ಅರುಣ್ ಕುಮಾರ್ ಪುತ್ತಿಲರಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಹಾಯಧನ ಪುತ್ತೂರು: ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಜೀವನದ ದಾರಿಯೇ ಕತ್ತಲಾಗಿ ಕಾಣುತ್ತಿದ್ದ ಕಾವು–ಮಾಡ್ನೂರು ಗ್ರಾಮದ ಹಲವು ಕುಟುಂಬಗಳಿಗೆ ಮಾನವೀಯತೆಯ ಬೆಳಕಾಗಿ ಸಮಾಜಸೇವಕ ಹಾಗೂ ಹಿಂದೂ ಮುಖಂಡ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಜೊತೆ ನಿಂತರು. ಗ್ರಾಮಸ್ಥರು ಸಂಗ್ರಹಿಸಿದ ಸಹಾಯಧನವನ್ನು ಪುತ್ತಿಲ ಪರಿವಾರದ ಕಾವು ಘಟಕದ ಮೂಲಕ ಮನೆಮನೆಗೆ ತೆರಳಿ ಹಸ್ತಾಂತರಿಸಿದ ಅವರು, ಕೇವಲ ಹಣವಷ್ಟೇ ಅಲ್ಲ — ನೋವಿನಲ್ಲಿ ಮುಳುಗಿದ್ದ

ಕಾವು:ನೋವಿಗೆ ಸ್ಪಂದಿಸಿದ ಮಾನವೀಯ ಕೈಗಳು Read More »

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

ಬೆಳ್ತಂಗಡಿ: ಮನೆಯ ಬಳಿ ನೀರಿನ ಪಂಪ್ ಆನ್ ಮಾಡುವ ವೇಳೆ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರಿಪಳ್ಳ ಬಳಿಯ ಕಡಿಯಾರು ಗ್ರಾಮದ ‌ಬಳಿ ನಡೆದಿದೆ. ಶಿವಪ್ರಸಾದ್ ಆದಪ್ಪ (48) ಎಂಬವರೇ ‌ಮೃತ ದುರ್ದೈವಿ. ಅವರು ಪ್ರತಿನಿತ್ಯದ ಕೆಲಸ ಮುಗಿಸಿ ಬೆಳಗ್ಗೆ ತಮ್ಮ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಧಿಸಿದ ಪರಿಣಾಮ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಉಜಿರೆಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟೇಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷಾ ಹಿನ್ನೆಲೆ

ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು Read More »

ಮದುವೆಯಾಗುವುದಾಗಿ ಹೇಳಿದ್ದಕ್ಕೆ ‌ನಾಮಕರಣ ಮುಂದೂಡಿಕೆ: ಪ್ರತಿಭಾ ಕುಳಾಯಿ

ಪುತ್ತೂರು: ಇಡೀ ರಾಜ್ಯದೆಲ್ಲೆಡೆ ‌ಸುದ್ದಿಯಾಗಿದ್ದ ಲವ್, ಸೆಕ್ಸ್, ಮಗು ಕೊಟ್ಟು ಮದುವೆಯಾಗದೆ ಯುವತಿಗೆ ‌ವಂಚಿಸಿದ ಆರೋಪಿ ಕೃಷ್ಣ ಜೆ. ರಾವ್ ಮದುವೆಗೆ ಒಪ್ಪಿದ್ದಾನೆ ಎಂಬ ಕಾರಣಕ್ಕೆ ಆ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಫೆ. 7 ಕ್ಕೆ ಮುಂದೂಡಿರುವುದಾಗಿ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ. ಜ. 24 ಕ್ಕೆ ನಾಮಕರಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಅವರಾಗಿಯೇ ಮದುವೆಯಾಗುವುದಾಗಿ ಹೇಳಿ ಈಗ ಮುಂದೆ ಬಂದಿದ್ದಾರೆ. ಜ. 31 ರ ಒಳಗಾಗಿ ಕೃಷ್ಣ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂದು ಪ್ರತಿಭಾ ಹೇಳಿದ್ದಾರೆ. ಸಂತ್ರಸ್ತೆಯ ‌ತಾಯಿಗೆ

ಮದುವೆಯಾಗುವುದಾಗಿ ಹೇಳಿದ್ದಕ್ಕೆ ‌ನಾಮಕರಣ ಮುಂದೂಡಿಕೆ: ಪ್ರತಿಭಾ ಕುಳಾಯಿ Read More »

error: Content is protected !!
Scroll to Top