ಸ್ಥಳೀಯ ಸುದ್ದಿ

ರಸ್ತೆ ಬದಿ ನೀರು ಹೋಗುವ ಚರಂಡಿ ನಾಪತ್ತೆ | ಜೆ.ಜೆ.ಎಂ. ಯೋಜನೆಯ ಪೈಪ್ ಲೈನ್ ಅಳವಡಿಕೆ ವೇಳೆ ಘಟನೆ

ನಿಡ್ಪಳ್ಳಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯು ಒಂದು. ಮನೆ ಮನೆಗೆ ಕುಡಿಯುವ ನೀರು ಪೂರೈಕೆಗಾಗಿ ಇರುವ ಈ ಯೋಜನೆಯಿಂದ ನಿಡ್ಪಳ್ಳಿ ಗ್ರಾಮದಲ್ಲಿ ಕೊಳವೆ ಬಾವಿ ಕೊರೆದು‌ ಟ್ಯಾಂಕ್ ನಿರ್ಮಾಣ ನಡೆದಿದೆ. ಇದೀಗ ಕಾಮಗಾರಿ ಮುಂದುವರಿದು ರಸ್ತೆ ಬದಿಯಲ್ಲಿ ಪೈಪು ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಹೆಚ್ಚಿನ ಕಡೆ ರಸ್ತೆ ಬದಿಯ ಚರಂಡಿ ಮೂಲಕವೇ ಗುಂಡಿ ತೆಗೆದು ಪೈಪು ಆಳವಡಿಸಲಾಗುತ್ತಿದೆ. ಆದರೆ ಪೈಪ್ ಅಳವಡಿಸಿದ ನಂತರ ಮೊದಲಿದ್ದ ಚರಂಡಿ ನಾಪತ್ತೆ. ನಿಡ್ಪಳ್ಳಿ ಗ್ರಾಮದ ಕೊಪ್ಪಳ […]

ರಸ್ತೆ ಬದಿ ನೀರು ಹೋಗುವ ಚರಂಡಿ ನಾಪತ್ತೆ | ಜೆ.ಜೆ.ಎಂ. ಯೋಜನೆಯ ಪೈಪ್ ಲೈನ್ ಅಳವಡಿಕೆ ವೇಳೆ ಘಟನೆ Read More »

ದೇಶದೆಲ್ಲೆಡೆ ಬಿಜೆಪಿಯಿಂದ ಕಳ್ಳಮಾರ್ಗದಲ್ಲಿ ಸರ್ಕಾರ ರಚನೆ ಎಂದು ಖರ್ಗೆ ವ್ಯಂಗ್ಯ

ಮಂಗಳೂರು : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಮಂಗಳೂರಿಗೆ ಆಗಮಿಸಿದ್ದು, ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾವು 150 ಸೀಟ್ ಗೆಲ್ಲಬೇಕಾಗಿದೆ. ಕಡಿಮೆ ಸೀಟ್‌ ಗೆದ್ದಲ್ಲಿ ಶಾಸಕರನ್ನು ಬಿಜೆಪಿಯವರು ಆಪರೇಷನ್‌ ಕಮಲ ಮಾಡಿ ಕಳ್ಳ ಮಾರ್ಗದಲ್ಲಿ ಸರ್ಕಾರ ರಚಿಸುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಕಾಂಗ್ರೆಸ್‌ ಪಡೆಯುವುದು ಅಗತ್ಯ ಎಂದರು. ಕರ್ನಾಟಕ, ಮಧ್ಯಪ್ರದೇಶ, ಗೋವಾ, ಮಣಿಪುರಾ, ಉತ್ತರಖಂಡದಲ್ಲಿ ಶಾಸಕರ ಕಳ್ಳತನದಿಂದ ಸರಕಾರ ರಚನೆಯಾಗಿದೆ. ಆಮದು ಮಾಡಿಕೊಂಡ ಶಾಸಕರನ್ನ ಬಿಜೆಪಿ ವಾಷಿಂಗ್ ಮೆಷೀನ್ ಗೆ ಹಾಕಿದ್ರೆ

ದೇಶದೆಲ್ಲೆಡೆ ಬಿಜೆಪಿಯಿಂದ ಕಳ್ಳಮಾರ್ಗದಲ್ಲಿ ಸರ್ಕಾರ ರಚನೆ ಎಂದು ಖರ್ಗೆ ವ್ಯಂಗ್ಯ Read More »

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಧರ್ಮಸ್ಥಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆರಿಯಾ ಗ್ರಾಮದ ಸಿಯೊನ್ ಆಶ್ರಮದಲ್ಲಿ ಏ.23 ರಂದು ಸಂಭವಿಸಿದೆ.ಕಿಶೋರ್ ಕುಮಾರ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮಧ್ಯಾಹ್ನದ ಊಟಕ್ಕೆ ಬಾರದೇ ಇರುವುದನ್ನು ಗಮನಿಸಿ ಆಶ್ರಮದ ಸಿಬ್ಬಂಧಿ ಜಿಬಿನ್ ಎಂಬವರು ಹೋಗಿ ನೋಡಿದಾಗ, ಹಾಲ್‌ನ ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು

ಸುಳ್ಯ : ಬೆಂಗಳೂರಿನಲ್ಲಿ ನಡೆದ ಕಾರು ಬೈಕ್‌ ಡಿಕ್ಕಿ ಅಪಘಾತದಲ್ಲಿ ಕೊಲ್ಲಮೊಗ್ರ ನಿವಾಸಿಯೋರ್ವರು ಸಾವನಪ್ಪಿರುವ ಘಟನೆ ಏ.25 ರಂದು ಸಂಭವಿಸಿದೆ. ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷಿ ದಂಪತಿಯ ಪುತ್ರ ಯತೀಶ್ ಬಾಳೆಬೈಲು(30) ಮೃತಪಟ್ಟವರು. ಸೋಮವಾರ ಬೆಳಗ್ಗೆ ಯತೀಶ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯತೀಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿರುವ ಯತೀಶ್ ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು. ಮೃತರು

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು Read More »

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ

ಪುತ್ತೂರು : ಕಾಂಗ್ರೆಸ್ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದಾರೆ. ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸುಳ್ಯದ ಹೆಲಿಪ್ಯಾಡ್ ಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಮಾವೇಶ ನಡೆಯಲಿರುವ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಸಭಾಂಗಣದ ಬಳಿ ಆಗಮಿಸಿ ಸಭೆಯಲ್ಲಿ ಭಾಗವಹಿಸಿ, ಪಾಲ್ಗೊಂಡಿದ್ದಾರೆ‌. ಸುಳ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನಾಯಕರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ Read More »

ಮಂಗಳೂರು : ಜಿಲ್ಲಾಧಿಕಾರಿ ರವಿಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ, ದೂರು ದಾಖಲು

ಮಂಗಳೂರು : ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಬೆದರಿಕೆ ಹಾಕಿರುವ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಏ. 24 ರಂದು ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಎ. 20ರಂದು ಅಪರಾಹ್ನ 3:28 ಸುಮಾರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವೀಕ್ಷಕರೊಂದಿಗೆ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ

ಮಂಗಳೂರು : ಜಿಲ್ಲಾಧಿಕಾರಿ ರವಿಕುಮಾರ್‌ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ, ದೂರು ದಾಖಲು Read More »

ಲೋಕಾಯುಕ್ತ ದಾಳಿ : ಬೆಳ್ತಂಗಡಿಯ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆ

ಬೆಂಗಳೂರು : ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಚಿತ್ರದುರ್ಗ ಸೇರಿದಂತೆ ಅನೇಕ ಕಡೆ ದಾಳಿ ನಡೆದಿದ್ದು ಹಲವು ಅಧಿಕಾರಿಗಳ ಮನೆಯಲ್ಲಿ ಚಿನ್ನ, ನಗದು, ಕಡತ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ಐಟಿ ದಾಳಿ ನಡೆದಿದ್ದು ಬೆಳ್ತಂಗಡಿಯ ಮಾಜಿ ಸಚಿವ, ಕಾಂಗ್ರೆಸ್ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆ ಬಳಿಯಿರುವ ಗಂಗಾಧರ ಗೌಡ

ಲೋಕಾಯುಕ್ತ ದಾಳಿ : ಬೆಳ್ತಂಗಡಿಯ ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರಗೌಡ ಮನೆಯಲ್ಲಿ 30 ಲಕ್ಷ ಹಣ ಪತ್ತೆ Read More »

ನದಿಯಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು

ಬ್ರಹ್ಮಾವರ ಸಮೀಪ ಕುದ್ರು ಬಳಿ ನಡೆದ ಘಟನೆ ಉಡುಪಿ : ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವ ಘಟನೆ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ನದಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಇಬಾಜ್, ಫಜಾನ್, ಸೂಫಾನ್, ಫರಾನ್​ ಮೃತರು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದವರು ಎಂದು ಗುರುತಿಸಲಾಗಿದೆ. ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ದೋಣಿ ಮೂಲಕ ಮೀನು ಹಿಡಿಯಲು ಏಳು ಯುವಕರು ತೆರಳಿದ್ದರು. ನದಿಯಲ್ಲಿ ನೀರಿನ ಮಟ್ಟ

ನದಿಯಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು Read More »

ಬೆಳ್ತಂಗಡಿ : ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ : ನವವಿವಾಹಿತೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿಯಲ್ಲಿ ಸಂಭವಿಸಿದೆ.ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ಕೌಶಲ್ಯ (26) ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕೌಶಲ್ಯ ಅವರು ಇತ್ತೀಚೆಗಷ್ಟೇ ನೆರೆಯ ಸೂರ್ಯಬೆಟ್ಟು ನಿವಾಸಿ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ : ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ Read More »

ಮಂಗಳೂರು : ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ : ಬೆಂಗಳೂರಿಗೆ ಎಂದು ಮನೆಯಿಂದ ಹೊರಟು ಹೋದ ಯುವಕನ ಮೃತದೇಹ ಮಂಗಳೂರಿನ ಪಣಂಬೂರಿನಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.ಬಂಟ್ವಾಳ ಮೊಡಂಕಾಪು ನಿವಾಸಿ ಉಷಾ ಎಂಬವರ ಮಗ ವಿನಯ್ (25) ಮೃತಪಟ್ಟ ಯುವಕ. ಮಂಗಳೂರಿನ ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಇಂದು ಯುವಕನ ಮೃತದೇಹ ಪತ್ತೆಯಾಗಿದ್ದು, ಪಣಂಬೂರು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿನಯ್ ಯಾವ ಕಾರಣದಿಂದ ಮೃತಪಟ್ಟಿದ್ಧಾನೆ ಎಂಬುದು ಸ್ಪಷ್ಟವಾಗಿಲ್ಲ.

ಮಂಗಳೂರು : ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಯುವಕನ ಮೃತದೇಹ ಪತ್ತೆ Read More »

error: Content is protected !!
Scroll to Top