ಸುದ್ದಿ

ತುಮಕೂರಿನ ನಾಲ್ವರು ಬಿಹಾರದಲ್ಲಿ ನಿಗೂಢವಾಗಿ ಸಾವು

ಧರ್ಮಶಾಲೆಯಲ್ಲಿ ಮೂರು ದಿನದಿಂದ ಕೊಳೆಯುತ್ತಿದ್ದವು ಶವಗಳು ನಳಂದ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಶುಕ್ರವಾರ ಬಿಹಾರದ ನಳಂದ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪ್ರಕರಣದ ತನಿಖೆಗಾಗಿ ಕರ್ನಾಟಕ ಪೊಲೀಸರ ತಂಡ ಬಿಹಾರಕ್ಕೆ ತೆರಳಿದೆ. ಮೃತರನ್ನು ತಾಯಿ ಜಿ.ಆರ್.ಸುಮಂಗಲಾ (78), ಮಗ ಜಿ.ಆರ್.ನಾಗಪ್ರಸಾದ್ (50) ಹಾಗೂ ಆಕೆಯ ಇಬ್ಬರು ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಜಿ.ಆರ್‌.ಶ್ರುತಾ (43) ಎಂದು ಗುರುತಿಸಲಾಗಿದೆ. ಸುಮಂಗಲಾ, […]

ತುಮಕೂರಿನ ನಾಲ್ವರು ಬಿಹಾರದಲ್ಲಿ ನಿಗೂಢವಾಗಿ ಸಾವು Read More »

ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ಮಂಗಳೂರು : ಕಾರಿನಲ್ಲಿ ಗಾಂಜಾ ತುಂಬಿಸಿಕೊಂಡು‌ ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮುಡಿಪು ಬಳಿ ಬಂಧಿಸಿ‌ ಅಪಾರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನೌಶಾದ್ ಮತ್ತು ಇಬ್ರಾಹಿಂ ಎಂದು‌ ಗುರುತಿಸಲಾಗಿದೆ. ಆರೋಪಿಗಳು ಮೇಲ್ಕಾರ್ – ಸಜೀಪ – ಬೋಳಿಯಾರು ಮಾರ್ಗವಾಗಿ ಗಾಂಜಾದ ಕಟ್ಟುಗಳನ್ನು ತೆಗೆದುಕೊಂಡು ಮುಡಿಪು ಮತ್ತು ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ತರುತ್ತಿದ್ದಾರೆಂದು ಮಾಹಿತಿ ಬಂದ‌ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.

ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ Read More »

ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ

ಉಡುಪಿ : ಜಿಲ್ಲೆಯ ಹಿರಿಯ ರಾಜಕಾರಣಿ, ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (91) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಮುಂಜಾನೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ನಿಧನರಾದರು. 1935ರ ಡಿ.24ರದು ಬಸ್ರೂರಿನಲ್ಲಿ ಜನಿಸಿದ ಅಪ್ಪಣ್ಣ ಹೆಗ್ಡೆ 1960ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಬಳಿಕ ಅಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ಕಾಲಿರಿಸಿದ್ದರು. 1988-94ರ ಅವಧಿಯಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಪ್ಪಣ್ಣ ಹೆಗ್ಡೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರಲ್ಲದೆ ಸುದೀರ್ಘ ಕಾಲ ಬಸ್ರೂರಿನ ಶ್ರೀ

ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ Read More »

ಭಾರತದ ಸುಂಕ ಕಡಿತ ಒಪ್ಪಂದಕ್ಕೆ ಟ್ರಂಪ್‌ ಅಂಕಿತ

ಭಾರತ-ಅಮೆರಿಕ 500 ಶತಕೋಟಿ ಡಾಲರ್‌ ವ್ಯಾಪಾರ ಒಪ್ಪಂದ ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಬಿದ್ದಿದೆ. ರಷ್ಯಾ ತೈಲ ಖರೀದಿ ಹಿನ್ನೆಲೆ ಭಾರತದ ಆಮದು ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ 25% ಸುಂಕ ಕಡಿತಗೊಳಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಅಮೆರಿಕ ಮತ್ತು ಭಾರತದ ನಡುವೆ 500 ಶತಕೋಟಿ ಡಾಲರ್‌ ಒಪ್ಪಂದವಾಗಿದ್ದು, ಈ ಹಿನ್ನೆಲೆ ಭಾರತದ ಮೇಲಿನ ಮೂಲ ಸುಂಕವನ್ನು 25% ನಿಂದ 15%ಗೆ ಇಳಿಕೆ ಮಾಡಲಾಗಿತ್ತು. ಇದೀಗ

ಭಾರತದ ಸುಂಕ ಕಡಿತ ಒಪ್ಪಂದಕ್ಕೆ ಟ್ರಂಪ್‌ ಅಂಕಿತ Read More »

ಕಡಬ: ಅರಣ್ಯ ಇಲಾಖೆಯ ನೆಡುತೋಪು ಬೆಂಕಿಗಾಹುತಿ

ಎರಡು ಎಕರೆ ಪ್ರದೇಶದ ಮರ-ಗಿಡ ಸುಟ್ಟು ಕರಕಲು ಕಡಬ : ತಾಲೂಕಿನ ಕಾಯ್ಮಣ ಗ್ರಾಮದ ಮುಂಗ್ಲಿಮಜಲು ಪದವು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ನೆಡುತೋಪು ಹಾಗೂ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಶುಕ್ರವಾರ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದ್ದು, ಮಧ್ಯಾಹ್ನದ ಧಗಧಗಿಸುವ ಬಿಸಿಲಿನ ಸಂದರ್ಭದಲ್ಲಿ ಬೆಂಕಿ ಬಿದ್ದು ಅರಣ್ಯ ಪ್ರದೇಶವನ್ನು ಆವರಿಸಿಕೊಂಡಿದೆ, ಮುಂಗ್ಲಿಮಜಲು, ಪದವು ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನಾಟಿ ಮಾಡಿರುವ ನೆಡುತೋಪಿನ ಹಣ್ಣು ಹಂಪಲುಗಳ ಗಿಡಗಳು

ಕಡಬ: ಅರಣ್ಯ ಇಲಾಖೆಯ ನೆಡುತೋಪು ಬೆಂಕಿಗಾಹುತಿ Read More »

ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ

ಮೊದಲ ದಿನ ಭಾರತ-ಅಮೆರಿಕ ಮುಖಾಮುಖಿ ಮುಂಬೈ: ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಇಂದಿನಿಂದ ಶುರುವಾಗುತ್ತಿದೆ. ಭಾರತದ 5 ಹಾಗೂ ಶ್ರೀಲಂಕಾದ 3 ನಗರಗಳ ಆತಿಥ್ಯದಲ್ಲಿ ನಡೆಯಲಿರುವ ಈ ಬಾರಿ ವಿಶ್ವಕಪ್‌ನಲ್ಲಿ 10 ತಂಡಗಳು ಕಪ್‌ಗಾಗಿ ಸೆಣಸಾಡಲಿವೆ. ಭಾರತ ತಂಡ ಸೇರಿದಂತೆ ಎಲ್ಲಾ 20 ತಂಡಗಳು ಈ ಮೆಗಾ ಟೂರ್ನಮೆಂಟ್‌ಗಾಗಿ ತಯಾರಿ ಪೂರ್ಣಗೊಳಿಸಿ ಅಖಾಡಕ್ಕಿಳಿಯಲು ಸಜ್ಜಾಗಿವೆ. ಈಗಾಗಲೇ ಎರಡು ಬಾರಿ ಟ್ರೋಫಿ ಗೆದ್ದಿರುವ ಭಾರತ ಮೂರನೇ ಬಾರಿಗೆ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ. ಇದಕ್ಕೆ

ಇಂದಿನಿಂದ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಮೆಂಟ್‌ ಸಂಭ್ರಮ Read More »

ತಿರುಪತಿ ಲಡ್ಡುಗೆ ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್‌ ಬಳಕೆ : ಚಂದ್ರಬಾಬು ನಾಯ್ಡು ಆರೋಪ

ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಕ್ಷೇತ್ರದ ಪಾವಿತ್ರ್ಯ ಹಾಳು ಮಾಡಲಾಗಿದೆ ಎಂದ ಸಿಎಂ ಹೈದರಾಬಾದ್ : ಜಗತ್​ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು ವಿವಾದ ಇನ್ನೂ ಮುಗಿದಿಲ್ಲ. ಸ್ನಾನಗೃಹ, ಶೌಚಗೃಹ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕ ಕಲಬೆರಕೆ ಮಾಡಿರುವ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಭಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿಂದಿನ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ

ತಿರುಪತಿ ಲಡ್ಡುಗೆ ಟಾಯ್ಲೆಟ್‌ ಕ್ಲೀನರ್‌ ಕೆಮಿಕಲ್‌ ಬಳಕೆ : ಚಂದ್ರಬಾಬು ನಾಯ್ಡು ಆರೋಪ Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಪೆರ್ನೆ ಬಿ ಕಾರ್ಯಕ್ಷೇತ್ರದ ಅತ್ರಬೈಲು ನಿವಾಸಿ ಕಮಲ-ಮೋನಪ್ಪ ಮತ್ತು ಕೆದಿಲ ಎ ಕಾರ್ಯಕ್ಷೇತ್ರದ ಸತ್ತಿಕಲ್ಲು ನಿವಾಸಿ ಸೆಲ್ಮಾರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಫಲಾನುಭವಿಗಳಾಗಿದ್ದು, ಇವರಿಗೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೀಡಿರುವ ದಿನ ಬಳಕೆಗೆ ಉಪಯೋಗವಾಗುವಂತಹ ವಾತ್ಸಲ್ಯ ಕಿಟ್ ಅನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ Read More »

ಫೆ.21: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಡ್‌ಟೆಕ್-2026’

ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯು.ಎಸ್. ಕಮ್ಯುನಿಕೇಶನ್ಸ್ ವತಿಯಿಂದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಎಂಟರ್‌ಪ್ರೈಸಸ್‌ನ ಸಹಯೋಗದೊಂದಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಸ್ ಟೆಕ್ -2026* ಫೆ.21ರಿಂದ ಮೂರು ದಿನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಲಿರುವುದಾಗಿ ಅಸೋಸಿಯೇಶನ್‌ ಆಫ್ ಕನ್ಸಲಿಂಗ್ ಸಿವಿಲ್ ಇಂಜಿನಿಯರ್ ಪುತ್ತೂರು ಸೆಂಟರ್‌ನ ಅಧ್ಯಕ್ಷ ಶಿವರಾಮ ಮತಾವು ತಿಳಿಸಿದ್ದಾರೆ. ಈ ಮೂರು ದಿನದ

ಫೆ.21: ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೂರು ದಿನಗಳ ಕಾಲ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಡ್‌ಟೆಕ್-2026’ Read More »

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ‌ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ಸಹ ವಿಚಾರಣೆ ನಡೆದಿದ್ದು, ಧರ್ಮಸ್ಥಳ ಕ್ಷೇತ್ರದ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಇಂದು ವಾದ ಮಂಡನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ಹಾನಿಯಾಗಿದೆ‌. ಅವರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು. ಕಾನೂನಿನಡಿ ಸಂತ್ರಸ್ತ ಪದದ ವ್ಯಾಖ್ಯಾನದ ಬಗೆಗೂ ತಿಳಿಸಿದ ಅವರು, ಈ ಪ್ರಕರಣದಲ್ಲಿ ಕ್ಷೇತ್ರದವರನ್ನು ಸಂತ್ರಸ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ SIT

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ Read More »

error: Content is protected !!
Scroll to Top