ಸುದ್ದಿ

ಸಿ ಶ್ರೇಣಿ ದೇವಾಲಯಗಳಿಗೂ ಗೃಹಜ್ಯೋತಿ ಯೋಜನೆ ವಿಸ್ತರಣೆ | ಚಿಂತನೆ ನಡೆಸಿದ ಸರಕಾರ

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಇದೀಗ ಸರಕಾರ ಧಾರ್ಮಿಕದತ್ತಿ ಇಲಾಖೆ ವ್ಯಾಪ್ತಿಯ ಸಿ ಶ್ರೇಣಿ ದೇವಸ್ಥಾನಗಳಿಗೂ ಗೃಹಜ್ಯೋತಿ ಯೋಜನೆಯನ್ನು ಕಲ್ಪಿಸಲು ಮುಂದಾಗಿದೆ. ಈಗಾಗಲೇ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿರುವಂತೆ ಸಿ ದರ್ಜೆ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಕೆ ಮಾಡಲು ಸರಕಾರ ಚಿಂತನೆ ನಡೆಸಿದೆ. ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ಯೋಜನೆ ರೂಪಿಸಲಾಗಿದೆ. ಒಂದರಿಂದ ಐದು ಲಕ್ಷ ರೂಪಾಯಿ ಆದಾಯ ಹೊಂದಿದ […]

ಸಿ ಶ್ರೇಣಿ ದೇವಾಲಯಗಳಿಗೂ ಗೃಹಜ್ಯೋತಿ ಯೋಜನೆ ವಿಸ್ತರಣೆ | ಚಿಂತನೆ ನಡೆಸಿದ ಸರಕಾರ Read More »

ಮಾಲಕರ ವಿಶ್ವಾಸ ಗಿಟ್ಟಿಸಿದ್ದ ಕೆಲಸದವನಿಂದಲೇ ಭಾರೀ ಕಳ್ಳತನ!

ಬಂಟ್ವಾಳ: ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದಾತ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳುವು ಮಾಡಿ ಪರಾರಿಯಾಗಿರುವ ಘಟನೆ ಫರಂಗಿಪೇಟೆ ಎಂಬಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುದು ಗ್ರಾಮದ ಕೋಡಿಮಜಲು ನಿವಾಸಿಯಾಗಿರುವ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ಲಕ್ಷಾಂತರ ರೂ ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸರಿಗೆ ದೂರು ನೀಡಲಾಗಿದೆ. ಸುಮಾರು 2,75,0000

ಮಾಲಕರ ವಿಶ್ವಾಸ ಗಿಟ್ಟಿಸಿದ್ದ ಕೆಲಸದವನಿಂದಲೇ ಭಾರೀ ಕಳ್ಳತನ! Read More »

‘ಬೆಂಗಳೂರು ಕಂಬಳ’ಕ್ಕೆ ಸಿಕ್ಕಿಲ್ಲ ಅನುಮತಿ! | ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದೇನು?

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಕಂಬಳಕ್ಕೆ ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುಮತಿ ಸಿಕ್ಕಿಲ್ಲ ಎಂದು ವರದಿಯಾಗಿದೆ. ನವಂಬರ್ ಕೊನೆ ವಾರದಲ್ಲಿ ನಡೆಯಲುದ್ದೇಶಿಸಿರುವ ಬೆಂಗಳೂರು ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕರೆ ಮುಹೂರ್ತವೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮುಹೂರ್ತಕ್ಕೆ ಆಗಮಿಸಿ, 1 ಕೋಟಿ ರೂ. ಅನುದಾನ ನೀಡುವ ಘೋಷಣೆ ಮಾಡಿದ್ದರು. ಇದರ ನಡುವೆ ಇದೀಗ ಅನುಮತಿ ವಿಚಾರ ವರದಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ನಡೆಸುವುದಾದರೆ ಬಿಬಿಎಂಪಿಯ ಅನುಮತಿ ಕಡ್ಡಾಯ. ಕಾನೂನು

‘ಬೆಂಗಳೂರು ಕಂಬಳ’ಕ್ಕೆ ಸಿಕ್ಕಿಲ್ಲ ಅನುಮತಿ! | ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದೇನು? Read More »

ಕರಾಮ ಡೇ ಟು ಡೇ ಶಾಪಿಂಗ್‍ ಸೆಂಟರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ | ಇಬ್ಬರು ಮೃತ್ಯು

ದುಬೈ : ಕೊಲ್ಲಿ ರಾಷ್ಟ್ರ ದುಬೈ ಅಲ್ ಕರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಭಾರತೀಯರು ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕರಾಮ ‘ಡೇ ಟು ಡೇ’ ಶಾಪಿಂಗ್ ಸೆಂಟರ್ ಬಳಿಯ ಬಿನ್ಹೈದರ್ ಬಿಲ್ಡಿಂಗ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೇರಳ ಮಲಪ್ಪುರಂ ಮೂಲದ ಯಾಕೂಬ್ ಅಬ್ದುಲ್ಲಾ ಮತ್ತು ತಲಶ್ಶೇರಿ ಟೆಂಪಲ್ ಗೇಟ್‌ನಲ್ಲಿರುವ ನಿಟ್ಟೂರು ಮನೆಯ ನಿದಿನ್ ದಾಸ್ ಸಾವನ್ನಪ್ಪಿದವರು. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 8 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗುರುವಾರ ಸಂಜೆ ಈ

ಕರಾಮ ಡೇ ಟು ಡೇ ಶಾಪಿಂಗ್‍ ಸೆಂಟರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ | ಇಬ್ಬರು ಮೃತ್ಯು Read More »

ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಹಸಿರು ಬಳ್ಳಿಗಳ ಟೆನ್ಷನ್!! | ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ

ಬೆಳ್ತಂಗಡಿ : ತಾಲೂಕಿನ ಗುರುವಾಯನಕೆರೆ ಜಂಕ್ಷನ್’ನಿಂದ ಉಪ್ಪಿನಂಗಡಿಯ ಕಡೆಗೆ ಕವಲೊಡೆಯುವ ರಸ್ತೆ ಮಾರ್ಗದಲ್ಲಿ ಸುಮಾರು 1.8 ಕಿ. ಮೀ. ದೂರ ಕ್ರಮಿಸಿದಾಗ ಸಿಗುವ ಪುಟ್ಟ ಊರು ಪಣೆಜಾಲು. ಅಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಹಾದು ಹೋಗುತ್ತಿರುವ ಹೈ ವೋಲ್ಟೇಜ್ ವಿದ್ಯುತ್ ಪ್ರಸರಣ ಮಾರ್ಗದ ಐದಾರು ಭಾರೀ ಗಾತ್ರದ ತಂತಿಗಳನ್ನು ಹೊತ್ತು ನಿಂತಿದೆ ಒಂದು ಅಲಕ್ಷಿತ ಬಡಪಾಯಿ ವಿದ್ಯುತ್ ಕಂಬ. ಹಸಿರುವಾದ ಹೆಚ್ಚುತ್ತಿರುವ ಈ ದಿನಮಾನಗಳಿಗೆ ಪೂರಕವೋ ಎಂಬಂತೆ ಮೈತುಂಬಾ ಹಸಿರು ಬಳ್ಳಿಗಳಿಂದ ಆಚ್ಛಾದಿತವಾಗಿ ನಿಂತಿದೆ ಒಂದು ಸೊರಗಿದ

ಹೈಟೆನ್ಷನ್ ವಿದ್ಯುತ್ ಕಂಬದಲ್ಲಿ ಹಸಿರು ಬಳ್ಳಿಗಳ ಟೆನ್ಷನ್!! | ಅವಘಡ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ Read More »

ಸುಬ್ರಹ್ಮಣ್ಯದಲ್ಲಿ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಶುಭಾರಂಭ

ಸುಬ್ರಹ್ಮಣ್ಯ: ಸರಕಾರಿ ಸೇವೆ ಸಹಿತಿ ಹಲವು ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲಿರುವ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ ಸೇವಾ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಎಲ್. ವೆಂಕಟೇಶ್ ಮಾತನಾಡಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹಾಗೂ ಸಂಜೀವಿನಿ ಒಕ್ಕೂಟದ ಒಡಂಬಡಿಕೆಯಿಂದ ಸೇವೆ ಸಲ್ಲಿಸಲಿರುವ ಕೇಂದ್ರ ಸರಕಾರದ ಮಹತ್ವದ ಯೋಜನೆ ಇದಾಗಿದೆ. ಮಹಿಳೆಯರು

ಸುಬ್ರಹ್ಮಣ್ಯದಲ್ಲಿ ‘ಪೂರ್ವಿ ಸಾಮಾನ್ಯ ಸೇವಾ ಕೇಂದ್ರ’ ಶುಭಾರಂಭ Read More »

ಗಾಝಾದಲ್ಲಿ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ | ಭಾರತ ಮೂಲದ ಉಡುಪು ತಯಾರಿಕಾ ಕಂಪೆನಿ ವ್ಯಾಪಾರ ಕಡಿದುಕೊಳ್ಳಲು ನಿರ್ಧಾರ

ಹೊಸದಿಲ್ಲಿ: ಗಾಝಾದಲ್ಲಿಯ ಆಸ್ಪತ್ರೆಯ ಮೇಲೆ ಬಾಂಬ್‌ ದಾಳಿಯನ್ನು ಪ್ರತಿಭಟಿಸಿ ಇಸ್ರೇಲಿ ಪೋಲಿಸ್ – ಸಮವಸ್ತ್ರಗಳನ್ನು ಪೂರೈಸುವ ಭಾರತದ ಉಡುಪು ತಯಾರಿಕೆ ಕಂಪನಿಯೊಂದು ಅದರೊಂದಿಗೆ ವ್ಯಾಪಾರ ಕಡಿದುಕೊಳ್ಳಲು ನಿರ್ಧರಿಸಿದೆ. ಕೇರಳದ ಕಣ್ಣೂರಿನಲ್ಲಿರುವ ಮರಿಯನ್ ಅಪರೆಲ್ ಪ್ರೈ.ಲಿ. 2015ರಿಂದಲೂ ಇಸ್ರೇಲಿ ಪೋಲಿಸ್‌ ಪಡೆಗಾಗಿ ವಾರ್ಷಿಕ ಒಂದು ಲಕ್ಷ ಸಮವಸ್ತ್ರಗಳನ್ನು ತಯಾರಿಸುತ್ತಿತ್ತು. ಪ್ರಸ್ತುತ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲೂ ಸಮವಸ್ತ್ರ ಒದಗಿಸುತ್ತಿತ್ತು. ಇಸ್ರೇಲ್‌ನಿಂದ ಬಲವಂತದಿಂದ ಸ್ಥಳಾಂತರಗೊಳಿಸಲ್ಪಟ್ಟ ಸಾವಿರಾರು ಜನರಿಗೆ ಆಶ್ರಯವನ್ನು ಒದಗಿಸಿದ್ದ ಗಾಝಾ ನಗರದ ಹೃದಯಭಾಗದಲ್ಲಿರುವ ಅಲ್ ಅಹ್ ಅರಬ್ ಹಾಸ್ಪಿಟಲ್ ಮೇಲೆ

ಗಾಝಾದಲ್ಲಿ ಆಸ್ಪತ್ರೆ ಮೇಲೆ ಇಸ್ರೇಲ್ ದಾಳಿ | ಭಾರತ ಮೂಲದ ಉಡುಪು ತಯಾರಿಕಾ ಕಂಪೆನಿ ವ್ಯಾಪಾರ ಕಡಿದುಕೊಳ್ಳಲು ನಿರ್ಧಾರ Read More »

ಬೈಕ್ ಚಕ್ರಕ್ಕೆ ಸಿಲುಕಿದ ಸೀರೆ:  ಮಹಿಳೆಗೆ ಗಂಭೀರ ಗಾಯ

ಸುಳ್ಯ: ಬೈಕಿನಲ್ಲಿ ತೆರಳುತ್ತಿದ್ದಾಗ ಬೈಕ್ ಚಕ್ರಕ್ಕೆ ಮಹಿಳೆಯೊಬ್ಬರ ಸೀರೆ ಸೆರಗು ಸುತ್ತಿಕೊಂಡ ಪರಿಣಾಮ ಬೈಕ್‍ನಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಇಂದು ನಡೆದಿದೆ. ಎಲಿಮಲೆ ನಿವಾಸಿ ಶಾಂಭವಿ ಘಟನೆಯಿಂದ ಗಂಭೀರ ಗಾಯಗೊಂಡವರು ಬೈಕ್‍ನಲ್ಲಿ ಹಿಂಬದಿ ಕುಳಿತು ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಅವರ ಸೀರೆ ಬೈಕ್‍ ಚಕ್ರಕ್ಕೆ ಸುತ್ತಿಕೊಂಡಿದೆ. ಬೈಕ್‍ನಿಂದ ಬಿದ್ದ ಅವರನ್ನು ಸ್ಥಳೀಯರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿದೆ.

ಬೈಕ್ ಚಕ್ರಕ್ಕೆ ಸಿಲುಕಿದ ಸೀರೆ:  ಮಹಿಳೆಗೆ ಗಂಭೀರ ಗಾಯ Read More »

ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ಆರ್ಟಿಸಾನ್ ಕಾರ್ಡ್ ಗಾಗಿ ಪ್ರಾತ್ಯಕ್ಷಿಕೆ ಪರೀಕ್ಷೆ

ಪಡುಕುತ್ಯಾರು: ಕರ ಕುಶಲ ಕಲೆ ಅಭಿವೃದ್ಧಿ ಇಲಾಖೆಯಿಂದ ಕೇಂದ್ರ ಸರಕಾರದ ಸವಲತ್ತುಗಳನ್ನು ಪಡೆಯಲು ಆರ್ಟಿಸಾನ್ ಕಾರ್ಡ್ ಅತೀ ಅಗತ್ಯವಾಗಿದ್ದು, ಕುಶಲಕರ್ಮಿಗಳ ಹೆಸರಿನಲ್ಲಿ ಹಲವಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅವುಗಳ ವಸ್ತುನಿಷ್ಠತೆ, ನಿಖರತೆ ಪರಿಶೀಲಿಸಲು ಇತ್ತೀಚಿನ ದಿನಗಳಿಂದ ಪ್ರಾತ್ಯಕ್ಷಿಕ ಪರೀಕ್ಷೆಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದು ಮಂಗಳೂರು ವಿಭಾಗದ ಹ್ಯಾಂಡಿಕ್ರಾಫ್ಟ್ ಸರ್ವೀಸ್ ಸೆಂಟರ್ ಸಹಾಯಕ ನಿರ್ದೇಶಕಿ ವೀಣಾ ಹೇಳಿದರು.ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಸತ್ಸಂಗ ಮಂದಿರದಲ್ಲಿ ಆರ್ಟಿಸಾನ್ ಕಾರ್ಡ್ ಗಾಗಿ ನಡೆದ ವೃತ್ತಿ ಕೌಶಲ್ಯ

ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ಆರ್ಟಿಸಾನ್ ಕಾರ್ಡ್ ಗಾಗಿ ಪ್ರಾತ್ಯಕ್ಷಿಕೆ ಪರೀಕ್ಷೆ Read More »

ಲಂಚ ಸ್ವೀಕಾರ : ಇಂಜಿನಿಯರ್ ಲೋಕಾಯುಕ್ತ ಬಲೆಗೆ

ಮಂಗಳೂರು : ಕಾಮಗಾರಿ ನಡೆದ ಬಳಿಕ ಸ್ಥಳದಲ್ಲಿರುವ ಮೆಟೀರಿಯಲ್ ಪರಿಶೀಲನೆ ನಡೆಸಿ ವರದಿ ನೀಡಲು ಗುತ್ತಿಗೆದಾರರೊಬ್ಬರಿಂದ ಲಂಚ ಬೇಡಿಕೆ ಇಟ್ಟಿದ್ದ ಮಂಗಳೂರು ಲೋಕೋಪಯೋಗಿ ಸಹಾಯಕ ಕಾರ್ಯಪಾಲ ಇಂಜಿನಿಯರ್ ಕಚೇರಿಯ ಗುಣ ಭರವಸೆ ಉಪವಿಭಾಗದ ಕಿರಿಯ ಇಂಜಿನಿಯರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಿರಿಯ ಇಂಜಿನಿಯರ್ -2 ಅಗಿರುವ ರೋನಾಲ್ಡ್ ಲೋಬೋ ಲೋಕಾಯುಕ್ತ ಬಲೆಗೆ ಬಿದ್ದವರು. ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಮಗಾರಿ ನಡೆಸಿದ ಬಳಿಕ ಸ್ಥಳದಲ್ಲಿದ್ದ ಮೆಟೀರಿಯಲ್ ಪರಿಶೀಲನೆಗೆ ಬೆಳ್ತಂಗಡಿಯ ಗುತ್ತಿಗೆದಾರರೊಬ್ಬರಿಂದ 20 ಸಾವಿರ ರೂ. ಲಂಚದ ಬೇಡಿಕೆ

ಲಂಚ ಸ್ವೀಕಾರ : ಇಂಜಿನಿಯರ್ ಲೋಕಾಯುಕ್ತ ಬಲೆಗೆ Read More »

error: Content is protected !!
Scroll to Top