ಸುದ್ದಿ

ರಿಕ್ಕಿ ರೈ ಮೇಲೆ ನಡೆದ ಫೈರಿಂಗ್‌ ನಕಲಿ?

ಮಾಜಿ ಗನ್‌ಮ್ಯಾನ್‌ ಮೂಲಕ ಫೈರಿಂಗ್‌ ಮಾಡಿಸಿಕೊಂಡ ಸಂಶಯ ಬೆಂಗಳೂರು: ಮಾಜಿ ಡಾನ್‌ ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಡೆದಿದ್ದ ಫೈರಿಂಗ್‌ ಸುತ್ತ ಅನುಮಾನ ಮೂಡಿದೆ. ಇದು ನಕಲಿ ಶೂಟೌಟ್‌ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್‌ಮ್ಯಾನ್ ಆಗಿದ್ದ ವಿಠ್ಠಲ ಎಂಬಾತ ಕಾರಿನ ಮೇಲೆ ಫೈರಿಂಗ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಗನ್‌ಮ್ಯಾನ್ ವಿಠ್ಠಲನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಠ್ಠಲ […]

ರಿಕ್ಕಿ ರೈ ಮೇಲೆ ನಡೆದ ಫೈರಿಂಗ್‌ ನಕಲಿ? Read More »

ಲಕ್ಷದ ಸನಿಹ ತಲುಪಿದ ಚಿನ್ನದ ಬೆಲೆ

24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 98,350 ರೂ. ದಾಖಲೆ ದರ ಬೆಂಗಳೂರು: ಚಿನ್ನದ ಬೆಲೆ ಸತತವಾಗಿ ಏರುತ್ತಿದ್ದು, ಸದ್ಯದಲ್ಲೇ 10 ಗ್ರಾಮ್‌ಗೆ 1 ಲಕ್ಷ ರೂ. ಆಗುವ ಸಾಧ್ಯತೆ ಇದೆ. ಮುಂಬಯಿಯ ಜವೇರಿ ಬಜಾರ್‌ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಸಮೀಪಕ್ಕೆ ಹೋಗಿ ಹೊಸ ದಾಖಲೆ ಬರೆದಿದೆ. 24 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ ಈಗ 98,350 ರೂ.ಗೆ

ಲಕ್ಷದ ಸನಿಹ ತಲುಪಿದ ಚಿನ್ನದ ಬೆಲೆ Read More »

ನಾಳೆ (ಏ.22) : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ

ಪುತ್ತೂರು : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಉದ್ಘಾಟನಾ ಸಮಾರಂಭದ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿಏ. 22ಮಂಗಳವಾರದಂದು ಸಂಜೆ 6:30 ರಿಂದ  ಪ್ರಸಿದ್ಧ  ಕಲಾವಿದರ ಕೂಡುವಿಕೆಯಿಂದ  ” ಗಿರಿಜಾ ಕಲ್ಯಾಣ” ಎಂಬ ತೆಂಕುತಿಟ್ಟು  ಯಕ್ಷಗಾನ ಪ್ರದರ್ಶನವನ್ನು  ಆಯೋಜಿಸಲಾಗಿದೆ . ಯಕ್ಷಗಾನ ಪ್ರಿಯರು ಈ ಕಾರ್ಯಕ್ರಮಕ್ಕೆ ಬಂದು ಸಂತೋಷದಿಂದ ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಹಿಮ್ಮೇಳದಲ್ಲಿ – ಭಾಗವತರು : ಅಮೃತಾ ಕೌಶಿಕ್ ರಾವ್ , ಮುರಾರಿ

ನಾಳೆ (ಏ.22) : ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಯಕ್ಷಗಾನ ಕಾರ್ಯಕ್ರಮ Read More »

60 ದಿನ ಪೂರೈಸಿದ ಭಾವ ತೀರ ಯಾನ ಸಿನಿಮಾ | ಏ.22 ಕ್ಕೆ ಕೊನೆಯ ದಿನ ದ ಶೋ | ನಾಳೆ ಬೆಳಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ  ಸಂಗೀತ  ಹಾಗೂ  ಚಿತ್ರ  ನಿರ್ದೇಶಕ  ಮಯೂರ  ಅಂಬೆಕಲ್ಲು  ನಿರ್ಮಾಣದ “ಭಾವ  ತೀರ  ಯಾನ’  ಸಿನಿಮಾ  ಪ್ರೇಕ್ಷಕರ  ಮೆಚ್ಚುಗೆ  ಪಡೆದು   60 ನೇ  ದಿನಕ್ಕೆ ಯಶಸ್ವಿಯಾಗಿ  ಮುನ್ನಡೆಯುತ್ತಿದ್ದು  ಚಿತ್ರಕ್ಕೆ  ವ್ಯಾಪಕ  ಬೆಂಬಲ  ವ್ಯಕ್ತವಾಗುತ್ತಿದೆ. ನಾಳೆ  ಏ.20  ಮಂಗಳವಾರದಂದು  ಬೆಳಗ್ಗೆ  11:00  ಗಂಟೆಗೆ  ಚಿತ್ರ  ಪ್ರದರ್ಶನಗೊಳ್ಳಲಿದೆ. ಪುತ್ತೂರಿನ ಜಿ ಎಲ್‍ ಒನ್‍ ಮಾಲ್‍ನ ಭಾರತ್‍ ಸಿನಿಮಾಸ್‍ ನಲ್ಲಿ ನಾಳೆ ಭಾವ ತೀರ ಯಾನ ಸಿನಿಮಾ ಕೊನೆಯ ಪ್ರದರ್ಶನವಾಗಿದ್ದು, ಸಿನಿಪ್ರಿಯರು ಪುತ್ತೂರಿನಲ್ಲಿರುವ ಭಾರತ್‍ ಸಿನಿಮಾಸ್‍ನಲ್ಲಿ ಭಾವ

60 ದಿನ ಪೂರೈಸಿದ ಭಾವ ತೀರ ಯಾನ ಸಿನಿಮಾ | ಏ.22 ಕ್ಕೆ ಕೊನೆಯ ದಿನ ದ ಶೋ | ನಾಳೆ ಬೆಳಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನ Read More »

ವಿದ್ಯಾರ್ಥಿಗೆ ಧಾರ್ಮಿಕ ಅವಮಾನ ಮಾಡಿರುವ ಸಿಬ್ಬಂದಿಯ ನಡವಳಿಕೆ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು

ಮಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆಯ ಸಂದರ್ಭ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಜನಿವಾರ ಧರಿಸಿದ್ದಕ್ಕೆ ಕೆಲ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಅವಮಾನಕರವಾಗಿ ವರ್ತಿಸಿರುವುದು ಅತ್ಯಂತ ಖೇದಕರ ಮತ್ತು ಶ್ರಮಪಟ್ಟು ಪರೀಕ್ಷೆಗೆ ಸಿದ್ಧವಾಗಿದ್ದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗೆ ತೀವ್ರ ಆಘಾತವನ್ನುಂಟುಮಾಡುವ ಘಟನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಶೇಷವಾಗಿ, ನೀನು ಜನಿವಾರದಿಂದ ನೇಣು ಹಾಕಿಕೊಂಡರೆ ನಾವು ಏನು ಮಾಡಬೇಕು? ಎಂಬ ರೀತಿಯ ಉದ್ಧಟ, ಅಮಾನವೀಯ ಪ್ರಶ್ನೆಯನ್ನು ಕೇಳಿರುವ ಸಿಬ್ಬಂದಿಯ ನಡವಳಿಕೆಯನ್ನು

ವಿದ್ಯಾರ್ಥಿಗೆ ಧಾರ್ಮಿಕ ಅವಮಾನ ಮಾಡಿರುವ ಸಿಬ್ಬಂದಿಯ ನಡವಳಿಕೆ ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು Read More »

ಬೀದರ್ ನಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ತೆಗೆದ ಘಟನೆ | ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಟನೆ

ಬೀದರ್ ನಲ್ಲಿ ಇತ್ತೀಚೆಗೆ ಪರೀಕ್ಷೆ ಬರೆಯಲು ತೆರಳಿದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಯನ್ನು ಖಂಡಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಬೃಹತ್‍ ಪ್ರತಿಭಟನಾ ಸಭೆ ಅಮರ್ ಜವಾನ್ ಸ್ಮಾರಕದ ಬಳಿ ಸೋಮವಾರ ನಡೆಯಿತು. ಶಾಂತಿ ಮಂತ್ರದೊಂದಿಗೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಬ್ರಾಹ್ಮಣ ಸಭಾದ ಅಧ್ಯಕ್ಷ, ನ್ಯಾಯವಾದಿ ಮಹೇಶ್‍ ಕಜೆ ಮಾತನಾಡಿ, ಜನಿವಾರ ಎಂಬುದು ಕೇವಲ ನೂಲಲ್ಲ. ಅದು ಬ್ರಾಹ್ಮಣರ ಅಸ್ಮಿತೆ, ಅಸ್ತಿತ್ವ. ಅದನ್ನು ಕೊನೆ ಉಸಿರಿರುವ ತನಕ ಉಳಿಸಿಕೊಳ್ಳಬೇಕಾಗಿದೆ. ಸರಕಾರದ ಕುಮ್ಮಕ್ಕಿನಿಂದ ಇಂತಹ ಜನಿವಾರವನ್ನು

ಬೀದರ್ ನಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ತೆಗೆದ ಘಟನೆ | ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಟನೆ Read More »

ಸ್ಕಂದ ನಿವಾಸದಲ್ಲಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ

ಪುತ್ತೂರು ಕೃಷ್ಣ ನಗರ ಸ್ಕಂದ ನಿವಾಸದಲ್ಲಿ ಧಾರ್ಮಿಕ ಸಮಾರಂಭದ  ಸಭಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ರಾಂಕ್ ಪಡೆದ ಪುತ್ತೂರು ಸೈಂಟ್ ಫಿಲೋಮಿನಾ ಪದವಿಪೂರ್ವ  ಕಾಲೇಜಿನ ನೀತಿ ಮತ್ತು ಸಮಾಜ ಕಲ್ಯಾಣ ಸಂಸ್ಥೆ.ರಿ  ಬೆಂಗಳೂರು ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಯಕ್ಷಗಾನ ಕಲಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರುತಿ ವಿಸ್ಮಿತ್ ಬಲ್ನಾಡು ಇವರನ್ನು ಕಾರ್ಯಕ್ರಮದ ಆಯೋಜಕರಾದ ಗುಡ್ಡಪ್ಪ ಬಲ್ಯ, ಕುಸುಮ ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಕು. ನೇಹಾ ಅಭಿನಂದಿಸಿದರು.

ಸ್ಕಂದ ನಿವಾಸದಲ್ಲಿ ತಾಳಮದ್ದಳೆ ಹಾಗೂ ಸನ್ಮಾನ ಕಾರ್ಯಕ್ರಮ Read More »

ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ

ಬೆಳ್ತಂಗಡಿ :-  ವಾಗೀಶ್_ ವಿ_ 68* ಅಫೀಷಿಯಲ್  ಪ್ರೊಡಕ್ಷನ್ ನಲ್ಲಿ , ನಿರಂಜನ್ ಗೌಡ ಗುರುವಾಯನಕೆರೆ  ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶನ- ಸಾಹಿತ್ಯದಲ್ಲಿ, ಹಾಗೂ ಭರತ್ ಕುಲಾಲ್ ಅರಸಿನಮಕ್ಕಿ  ಛಾಯಾಗ್ರಹಣ,  ಸುಮಂತ್ ಬೆಳ್ತಂಗಡಿ ನೃತ್ಯ ಸಂಯೋಜನೆ, ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣದಲ್ಲಿ, ತಯಾರಾಗುತ್ತಿರುವ  ಸಸ್ಪೆನ್ಸ್‍ ಲವ್ ಸ್ಟೋರಿಯ ಮುಹೂರ್ತ ಸಮಾರಂಭವು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಎಪ್ರಿಲ್.20 ಅದಿತ್ಯವಾರ ನಡೆಯಿತು. ಈ ಚಿತ್ರದಲ್ಲಿ ರಂಗಿನ ಮನಸ್ಸು ,  ವಿಷ್ಣು ಕಲಾವಿದರು ಮದ್ದಡ್ಕ ಹಾಗೂ ಗಯಾಪದ ಕಲಾವಿದರು ಉಬರ್ ಮತ್ತು

ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ Read More »

1 ಕೋಟಿ ರೂ. ಬಹುಮಾನವಿದ್ದ ಮುಖಂಡನ ಸಹಿತ ಎಂಟು ನಕ್ಸಲರು ಬಲಿ

ರಾಂಚಿ: ಜಾರ್ಖಂಡ್‌ನ ಬೊಕಾರೊದ ದಟ್ಟಾರಣ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತಲೆಗೆ 1 ಕೋಟಿ ರೂ. ಬಹುಮಾನ ಹೊತ್ತಿದ್ದ ನಕ್ಸಲ್ ನಾಯಕ ಸೇರಿ 8 ಮಂದಿ ನಕ್ಸಲರನ್ನು ಕಮಾಂಡೋಗಳು ಗುಂಡಿಕ್ಕಿ ಕೊಂದಿದ್ದಾರೆ. ಸೋಮವಾರ ಬೆಳಗ್ಗೆ ಕೇಂದ್ರ ಮೀಸಲು ಪೊಲೀಸ್ ಪಡೆ, ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಕಮಾಂಡೋಗಳ ಅರಣ್ಯ ಯುದ್ಧ ಘಟಕ ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿದ್ದರು. ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನ ಪತ್ತೆಗೆ ಸರ್ಕಾರ 1 ಕೋಟಿ ರೂ. ಬಹುಮಾನ ಫೋಷಿಸಿತ್ತು. ಇದೀಗ

1 ಕೋಟಿ ರೂ. ಬಹುಮಾನವಿದ್ದ ಮುಖಂಡನ ಸಹಿತ ಎಂಟು ನಕ್ಸಲರು ಬಲಿ Read More »

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ : ಪತ್ನಿ ಪಲ್ಲವಿ ಅರೆಸ್ಟ್‌

ಆತ್ಮರಕ್ಷಣೆಗಾಗಿ ಕೊಲೆ ಮಾಡಬೇಕಾಯಿತು ಎಂದು ಹೇಳಿಕೆ ಬೆಂಗಳೂರು : ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯಿಂದೀಚೆಗೆ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ಎಚ್​ಎಸ್​ಆರ್​​ ಲೇಔಟ್​​ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದರು. ಇಂದು ಪಲ್ಲವಿಯನ್ನು ಬಂಧನಕ್ಕೊಳಪಡಿಸುವ ಔಪಚಾರಿಕತೆ ಮಾಡಲಾಯಿತು. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೆ ಓಂ ಪ್ರಕಾಶ್ ನಿನ್ನೆ ಸಂಜೆ ಭೀಕರವಾಗಿ ಹತ್ಯೆಯಾಗಿದ್ದಾರೆ. ಪತ್ನಿ ಮತ್ತು

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ : ಪತ್ನಿ ಪಲ್ಲವಿ ಅರೆಸ್ಟ್‌ Read More »

error: Content is protected !!
Scroll to Top