ಸುದ್ದಿ

ಪ್ರೇಕ್ಷಕ ಪ್ರಭುವಿನ ಒತ್ತಾಸೆಗೆ ಮಣಿದು ಗುರುವಾರದವರೆಗೆ ಯಾನ ಮುಂದುವರಿಸಿದ ‘ಭಾವ ತೀರ ಯಾನ’

ಪುತ್ತೂರು : ಇಂದು ಕೊನೆಯ ಪ್ರದರ್ಶನವೆಂದು ನಿಗದಿಯಾಗಿದ್ದ ‘ಭಾವ ತೀರ ಯಾನ’  ಸಿನಿಮಾ ಪ್ರದರ್ಶನ ಮುಂದುವರಿದು, ಏ. 24 ಗುರುವಾರದವರೆಗೆ GL ONE MALLನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ವಿತರಕರು ಮತ್ತು ನಿರ್ಮಾಪಕರು ತಿಳಿಸಿದ್ದಾರೆ. ನಾಳೆ ಸಂಜೆ 4-45ಕ್ಕೆ ಪ್ರದರ್ಶನ ನಿಗದಿಯಾಗಿದ್ದು ಸಾಕಷ್ಟು ಮಂದಿ ಈಗಾಗಲೇ ಟಿಕೆಟ್ ಕಾಯ್ದಿರಿಸಿದ್ದಾರೆ. Book my show App ನಲ್ಲಿಯೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಪ್ರೇಕ್ಷಕ ಪ್ರಭುವಿನ ಒತ್ತಾಸೆಗೆ ಮಣಿದು ಗುರುವಾರದವರೆಗೆ ಯಾನ ಮುಂದುವರಿಸಿದ ‘ಭಾವ ತೀರ ಯಾನ’ Read More »

ಖಾಸಗಿ ಬಸ್ಸಿಗೆ ಹಿಂಬದಿಯಿಂದ ಗುದ್ದಿದ ಪಿಕಪ್‍

ವಿಟ್ಲ: ಖಾಸಗಿ ಬಸ್ಸಿನ ಹಿಂಬದಿಗೆ ಪಿಕಪ್‍ ಗುದ್ದಿದ ಘಟನೆ ಕಡಂಬುವಿನಲ್ಲಿ ನಡೆದಿದೆ. ಸಾಲೆತ್ತೂರು ರಸ್ತೆಯ ಕಡಂಬು ರಾದುಕಟ್ಟೆಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಮಹೇಶ್ ಹೆಸರಿನ ಖಾಸಗಿ ಬಸ್ ನ ಹಿಂಭಾಗಕ್ಕೆ ಪಿಕಪ್ ವಾಹನ ಬಲವಾಗಿ ಡಿಕ್ಕಿ ಹೊಡೆದಿದೆ. ನಿಯಂತ್ರಣವಿಲ್ಲದ ಪಿಕಪ್ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ಅಪಘಾತಕ್ಕೀಡಾದ ಬಸ್ಸಿನ ಪ್ರಯಾಣಿಕರು ಮತ್ತು ಪಿಕಪ್ ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಹಿಂಬದಿ ಜಖಂಗೊಂಡಿದ್ದು ಎರಡು

ಖಾಸಗಿ ಬಸ್ಸಿಗೆ ಹಿಂಬದಿಯಿಂದ ಗುದ್ದಿದ ಪಿಕಪ್‍ Read More »

ಪುತ್ತೂರಿನಲ್ಲಿ ತಾಲೂಕು ಹಿಂದೂ ಧರ್ಮ ಶಿಕ್ಷಣ ಸಮಿತಿ ಉದ್ಘಾಟನೆ

ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂಗಳವರ ಆಶೀರ್ವಾದಗಳೊಂದಿಗೆ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ನೀಡಿರುವ ನಿರ್ದೇಶನದಂತೆ ಪುತ್ತೂರಿನಾದ್ಯಂತ ಧರ್ಮ ಶಿಕ್ಷಣವನ್ನು ಜಾರಿಗೊಳಿಸುವ ಹಿನ್ನೆಲೆಯಲ್ಲಿ ತಾಲೂಕು ಧರ್ಮ ಶಿಕ್ಷಣ ಸಮಿತಿಯನ್ನು ಭಾನುವಾರ ಪುತ್ತೂರಿನ ಸ್ವಾಮಿ ಕಲಾಮಂದಿರದಲ್ಲಿ ಘೋಷಿಸಲಾಯಿತು.   ಕಳೆದ ಕೆಲವು ತಿಂಗಳುಗಳಿಂದ ಪುತ್ತೂರು ಹಾಗು ಕಡಬ ತಾಲೂಕಿನ ನಾನಾ ಭಾಗಗಳಲ್ಲಿ ಗ್ರಾಮ ಸಮಿತಿಗಳು ರೂಪುಗೊಂಡಿದ್ದು, ಇದೀಗ ತಾಲೂಕು ಸಮಿತಿಯನ್ನು ರಚಿಸುವ ಮೂಲಕ ಧರ್ಮ ಶಿಕ್ಷಣದ ಜಾರಿಗೊಳಿಸುವಿಕೆಯ ಪ್ರಕ್ರಿಯನ್ನು ಮತ್ತೊಂದು ಹಂತಕ್ಕೆ ಒಯ್ಯಲಾಯಿತು. ಸಮಿತಿಯ ಗೌರವ

ಪುತ್ತೂರಿನಲ್ಲಿ ತಾಲೂಕು ಹಿಂದೂ ಧರ್ಮ ಶಿಕ್ಷಣ ಸಮಿತಿ ಉದ್ಘಾಟನೆ Read More »

1 ಲಕ್ಷ ರೂ. ದಾಟಿ ಸಾರ್ವತ್ರಿಕ ದಾಖಲೆ ಬರೆದ ಚಿನ್ನ

ಮಂಗಳವಾರ ಬೆಳಗ್ಗೆ 10 ಗ್ರಾಂಗೆ 1,01,135 ರೂ. ದರ ನವದೆಹಲಿ: ಅಕ್ಷಯ ತೃತೀಯಕ್ಕೆ ಕೆಲವೇ ದಿನಗಳು ಬಾಕಿ ಇರುವ ಹೊತ್ತಲ್ಲೇ ಚಿನ್ನದ ಬೆಲೆ ಒಂದು ಲಕ್ಷ ರೂ. ದಾಟಿ ಚಿನಿವಾರ ಮಾರುಕಟ್ಟೆಯಲ್ಲಿ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ಅಮೆರಿಕದ ಸುಂಕ ನೀತಿ ಮತ್ತು ಚೀನದ ಜೊತೆಗಿನ ವ್ಯಾಪಾರ ಸಮರ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಲು ಕಾರಣ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ದಾಟಿದೆ. 24 ಕ್ಯಾರಟ್ ಚಿನ್ನದ

1 ಲಕ್ಷ ರೂ. ದಾಟಿ ಸಾರ್ವತ್ರಿಕ ದಾಖಲೆ ಬರೆದ ಚಿನ್ನ Read More »

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ

ವೀರಮಂಗಲ : ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ ನಡೆಯಿತು. ದೇಶದ್ಯಾಂತ ಇಂದು ವಿಶ್ವ ಭೂದಿನವನ್ನಾಗಿ ಆಚರಿಸುತ್ತಿದ್ದು ಪರಿಸರ ಪ್ರೇಮದೊಂದಿಗೆ ಗಿಡಗಳ ಪರಿಚಯ, ಸ್ವಚ್ಛತೆ, ಕಸವಿಲೇವಾರಿ, ನೀರು ಇಂಗಿಸುವಿಕೆ ಇತ್ಯಾದಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಪ್ರತಿ ಶಾಲೆಯಲ್ಲೂ ಇಕೋ ಕ್ಲಬ್ ಸ್ಥಾಪಿಸಲಾಗಿದ್ದು ಆ ಪ್ರಯುಕ್ತ ವಿಶ್ವ ಭೂದಿನವಾದ ಏ 22 ರಂದು  ಗಿಡಗಳ ಪರಿಚಯ ಮಾಡಲು ಗಿಡಗಳಿಗೆ QR CODE ಕಟ್ಟುವುದರ ಮೂಲಕ ವೀರಮಂಗಲ ಪಿಎಂಶ್ರೀ ಶಾಲೆಯ

ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ Read More »

ಕಾರುಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

ಬೆಳ್ತಂಗಡಿ : ಗುರುವಾಯನಕೆರೆ-ಕಾರ್ಕಳ ರಸ್ತೆಯ ಅಳದಂಗಡಿ ಸಮೀಪ ಕೆದ್ದು ಎಂಬಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಏ.21ರಂದು ಸಂಜೆ ನಡೆದಿದೆ. ಅಳದಂಗಡಿಯಿಂದ ಗುರುವಾಯನಕೆರೆ ಕಡೆಗೆ ತೆರಳುತ್ತಿದ್ದ ಕಾರು ಗುರುವಾಯನಕೆರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಮುಖಾಮುಖಿ ಡಿಕ್ಕಿಹೊಡೆದಿದೆ. ಗಾಯಗೊಂಡವರನ್ನು ಗೇರುಕಟ್ಟೆಯ ನಿವಾಸಿಗಳಾದ ಕುಸುಮಾವತಿ (75), ಭಾಗ್ಯವತಿ (50) ಮತ್ತು ವೈಭವ್ (23) ಎಂದು ಗುರುತಿಸಲಾಗಿದೆ. ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ Read More »

ಖರ್ಗೆ ಸಭೆ ಖಾಲಿ ಖಾಲಿ : ಕಾಂಗ್ರೆಸ್‌ ಜಿಲ್ಲಾಧ್ಯಕ್ಷನೇ ಅಮಾನತು

ಬೃಹತ್‌ ಸಮಾವೇಶಕ್ಕೆ ಜನ ಸೇರದೆ ಕಾಂಗ್ರೆಸ್‌ಗೆ ಮುಜುಗರ ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ ಬಿಹಾರದ ಬಕ್ಸರ್‌ನಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ವಿಫಲವಾಗಿರುವುದರಿಂದ ಆಕ್ರೋಶಗೊಂಡಿರುವ ಹೈಕಮಾಂಡ್‌ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರನ್ನೇ ಅಮಾನತುಗೊಳಿಸಿದೆ. ರಾಜಕೀಯ ಕಾರ್ಯಕ್ರಮದಲ್ಲಿ ಸಭಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಖರ್ಗೆ ಖಾಲಿ ಕುರ್ಚಿಗಳನ್ನು ನೋಡಿಕೊಂಡು ಭಾಷಣ ಮಾಡಬೇಕಾಯಿತು. ಇದರಿಂದ ಕಾಂಗ್ರೆಸ್‌ ಹೈಕಮಾಂಡ್‌ ತೀವ್ರ ಮುಜುಗರಕ್ಕೊಳಗಾಗಿದೆ. ಹೀಗಾಗಿ ಬಕ್ಸರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಮನೋಜ್

ಖರ್ಗೆ ಸಭೆ ಖಾಲಿ ಖಾಲಿ : ಕಾಂಗ್ರೆಸ್‌ ಜಿಲ್ಲಾಧ್ಯಕ್ಷನೇ ಅಮಾನತು Read More »

ಅಶೋಕ್ ಬನ್ನೂರು ಕಲಾವಿದನಾದ ಕಥೆ..!

ಪುತ್ತೂರಿನ ತಟ್ಟಿರಾಯ ಕಲಾಚತುರ ಬಿರುದು ಪಡೆದಿರುವ ತುಳು ರಂಗಭೂಮಿಯ ಹಾಸ್ಯ ಕಲಾವಿದ ಬನ್ನೂರಿನ ಅಶೋಕ. ಅಶೋಕ್‍ ರಂಗ ಪಯಣದಲ್ಲಿ ದೊಡ್ಡ ಕನಸು ಕಂಡ ಚಿಕ್ಕ ಕಲಾವಿದ. ರಂಗಭೂಮಿಯಲ್ಲಿ ಅಶೋಕ್‍ ಬನ್ನೂರು ಕನಸನ್ನು ನನಸು ಮಾಡಿಬಿಟ್ಟಿದ್ದಾರೆ. ಕಲಾಭಿಮಾನಿಗಳ ಮನಸ್ಸಿನಲ್ಲಿ ಒಬ್ಬ ಉತ್ತಮ ಹಾಸ್ಯ ಕಲಾವಿದನಾಗಿ ಉಳಿದುಬಿಟ್ಟಾಗಿದೆ. ಇದು ಬನ್ನೂರಿನ ಕಲಾಚತುರ ಅಶೋಕಣ್ಣನ ಕಥೆ. ಹೌದು ಇವರು ವೇದಿಕೆಗೆ ಬಂದರೆ ಚಪ್ಪಾಳೆ ಚಪ್ಪಾಳೆ. ಹಾಸ್ಯಲೋಕದ ದಿಗ್ಗಜರಲ್ಲಿ ಒಬ್ಬ ಪುತ್ತೂರಿನ ಚಿಕ್ಕ ಮುತ್ತು ನಮ್ಮ ಅಶೋಕ್‍ ಬನ್ನೂರು. ತನ್ನದೇ ಶೈಲಿಯಲ್ಲಿ ಹಾಸ್ಯವನ್ನು

ಅಶೋಕ್ ಬನ್ನೂರು ಕಲಾವಿದನಾದ ಕಥೆ..! Read More »

ವಿಮಾನಕ್ಕೆ ಬೆಂಕಿ ಹತ್ತಿಕೊಂಡರೂ 282 ಪ್ರಯಾಣಿಕರು ಪವಾಡಸದೃಶವಾಗಿ ಪಾರು

ಟೇಕಾಫ್‌ ಆಗುತ್ತಿದ್ದ ವಿಮಾನದ ಎರಡೂ ಇಂಜಿನ್‌ಗಳಲ್ಲಿ ಬೆಂಕಿ ವಾಷಿಂಗ್ಟನ್‌: ಅಮೆರಿಕದ ಫ್ಲೋರಿಡಾದಲ್ಲಿ ಭೀಕರ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದ್ದು, 282 ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ. ಸೋಮವಾರ (ಸ್ಥಳೀಯ ಸಮಯ) ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆಗುವಾಗ ವಿಮಾನದ ಎರಡೂ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಗಮನಿಸಿದ ಪೈಲಟ್ ಕೂಡಲೇ ವಿಮಾನವನ್ನು ನಿಲ್ಲಿಸಿದ್ದು, ನಂತರ ಪ್ರಯಾಣಿಕರನ್ನು ತುರ್ತು ಸ್ಲೈಡ್‌ಗಳ ಮೂಲಕ ಸ್ಥಳಾಂತರಿಸಲಾಗಿದೆ.ಅಟ್ಲಾಂಟಾಗೆ ತೆರಳುತ್ತಿದ್ದ ವಿಮಾನ ರನ್‌ವೇಗೆ ಹೊರಟಾಗ ಎರಡು

ವಿಮಾನಕ್ಕೆ ಬೆಂಕಿ ಹತ್ತಿಕೊಂಡರೂ 282 ಪ್ರಯಾಣಿಕರು ಪವಾಡಸದೃಶವಾಗಿ ಪಾರು Read More »

ಪೋಪ್‌ ನಿಧನಕ್ಕೆ ಸ್ಪೀಕರ್‌ ಖಾದರ್‌ ಸಂತಾಪ

ಮಂಗಳೂರು: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಆಧ್ಯಾತ್ಮಿಕ ಗುರುಗಳಾಗಿದ್ದ ಪೋಪ್‌ ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವವರ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದ ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಖಾದರ್ ಪೋಪ್

ಪೋಪ್‌ ನಿಧನಕ್ಕೆ ಸ್ಪೀಕರ್‌ ಖಾದರ್‌ ಸಂತಾಪ Read More »

error: Content is protected !!
Scroll to Top