ಸುದ್ದಿ

ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ

ವಿಟ್ಲ: ಭಜನಾ ಮಂದಿರ, ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಮಾಡುವುದರ ಜೊತೆಗೆ ಪ್ರತಿ ಮನೆಯಲ್ಲೂ ನಿರಂತರ ಭಜನೆ ನಡೆಯಬೇಕು. ವ್ಯಕ್ತಿ ನಿರ್ಮಾಣ ಶಿಕ್ಷಣ ದೊರೆತಲ್ಲಿ ಮನುಷ್ಯನ ಮನಸ್ಸು ಚಂಚಲಗೊಳ್ಳುವುದಿಲ್ಲ. ಅದಕ್ಕಾಗಿ ಧಾರ್ಮಿಕ ಶಿಕ್ಷಣ ಅತ್ಯಗತ್ಯ. ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರೇರಣೆ ನೀಡುತ್ತಿದ್ದು ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದು ನಿವೃತ್ತ ಅಧ್ಯಾಪಕ ರಾಧಾಕೃಷ್ಣಾಯ ಅಡ್ಯಂತಾಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್( ರಿ) ವಿಟ್ಲ ತಾಲ್ಲೂಕು ಅಳಿಕೆ ವಲಯ ,ಶ್ರೀ ಧರ್ಮಸ್ಥಳ […]

ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ Read More »

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ

ಸುಳ್ಯ: ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮ ತಾಲೂಕಿನ ಸ. ಹಿ. ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ನಡೆಯಿತು. ಟ್ರಸ್ಟ್‌ನ ಗೌರವ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಫಾಲಚಂದ್ರ ವೈ.ವಿ, ಸಲಹಾ ಸಮಿತಿ ಸದಸ್ಯೆೋೋ ಡಾ. ಅನುರಾಧಾ ಕುರುಂಜಿ, ಸ್ಥಳೀಯ ಸಮಿತಿಯ ಗೌರವ ಸಂಚಾಲಕ ಶಿವರಾಮ್ ಕೇನಾಜೆ, ಸಂಚಾಲಕ ನಾಗರಾಜ್ ಮುಳ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ಶಾಲಾ

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ Read More »

ಮಲ್ಪೆ ಸಮುದ್ರದಲ್ಲಿ ಸಿಕ್ಕಿದ ದೇವರ ವಿಗ್ರಹ : ವಿಡಿಯೋ ವೈರಲ್‌

ಇಸ್ಕಾನ್‌ ಅನುಯಾಯಿಗಳಿಗೆ ಸಿಕ್ಕಿದ ವಿಗ್ರಹ ಕುರಿತು ನಾನಾ ವದಂತಿ ಉಡುಪಿ: ಇಲ್ಲಿನ ಮಲ್ಪೆ ಕಡಲ ತೀರದಲ್ಲಿ ಭಾನುವಾರ ದೇವರ ವಿಗ್ರಹವೊಂದು ಸಮುದ್ರದಲ್ಲಿ ಸಿಕ್ಕಿ ಭಾರಿ ಕುತೂಹಲ ಕೆರಳಿಸಿದೆ. ಕೃಷ್ಣನೂರಿಗೆ ಸಾಕ್ಷಾತ್‌ ಕೃಷ್ಣನ ವಿಗ್ರಹವೇ ತೇಲಿ ಬಂದಿದೆ ಎಂದು ಭಾವಿಸಿ ಜನ ಸಂಭ್ರಮಿಸಿದ್ದಾರೆ. ಇದು ದೇವರ ಮಹಿಮೆ ಸಾವಿರಾರು ಜನ ವಿಗ್ರಹ ನೋಡಲು ಧಾವಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ಮಲ್ಪೆಯಲ್ಲಿ ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾನುವಾರ ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್

ಮಲ್ಪೆ ಸಮುದ್ರದಲ್ಲಿ ಸಿಕ್ಕಿದ ದೇವರ ವಿಗ್ರಹ : ವಿಡಿಯೋ ವೈರಲ್‌ Read More »

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ

ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನ ಬಂಟ್ವಾಳ : ಅಪರಿಚಿತ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮಲ್‌ಕಟ್ಟೆ ಎಂಬಲ್ಲಿ ನಡೆದಿದೆ. ಗಾಯಗೊಂಡವರು ರಾಮಲ್‌ಕಟ್ಟೆ ನಿವಾಸಿ ಉಸ್ಮಾನ್ ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸ್ಮಾನ್ ಅವರು ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಉಸ್ಮಾನ್ ಅವರಿಗೆ ಗಂಭೀರ ಸ್ವರೂಪದ

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ Read More »

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್‌ ಮೂಲಕ 80 ಸಾವಿರ ರೂ. ಎಗರಿಸಿದ ಪಾಪಿಗಳು

ಸಹಾಯ ಮಾಡಲೆಂದು ಬಂದು ಹಣ ವರ್ಗಾಯಿಸಿ ಪರಾರಿಯಾಗಿದ್ದ ಇಬ್ಬರ ಸೆರೆ ಮೈಸೂರು: ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಬಂದು ಅವರ ಮೊಬೈಲ್‌ನ ಯುಪಿಐ ಬಳಸಿ 80 ಸಾವಿರ ರೂಪಾಯಿ ಎಗರಿಸಿದ ಅಮಾನವೀಯ ಘಟನೆ ಮೈಸೂರಿನಲ್ಲಿ ಸಂಭವಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಮೇಶ್ ಮತ್ತು ಮನು ಎಂದು ಗುರುತಿಸಲಾಗಿದೆ. ಮೈಸೂರು ತಾಲೂಕಿನ ಕಡಕೊಳದ ಬಳಿ ಡಿ.19ರಂದು ಗಣೇಶ್ ಎಂಬವರು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಬರುವಾಗ ಅಪಘಾತವಾಗಿತ್ತು. ಆಸ್ಪತ್ರೆಗೆ ಸೇರಿಸುವ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್‌ ಮೂಲಕ 80 ಸಾವಿರ ರೂ. ಎಗರಿಸಿದ ಪಾಪಿಗಳು Read More »

ಮುಡಾ ಹಗರಣ : ಇಂದು ಜನಪ್ರತಿನಿಧಿ ನ್ಯಾಯಾಲಯದ ತೀರ್ಪು

ಸಿದ್ದರಾಮಯ್ಯನವರ ಪಾಲಿಗೆ ನಿರ್ಣಾಯಕವಾಗಲಿರುವ ತೀರ್ಪು ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ಗೆ ಸಂಬಂಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಮಂಗಳವಾರ ಮಹತ್ವದ ಆದೇಶ ಪ್ರಕಟಿಸಲಿದೆ. ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್‌ ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಕೋರ್ಟ್‌ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿತ್ತು. ನ್ಯಾಯಾಲಯ ಬಿ ರಿಪೋರ್ಟ್ ಒಪ್ಪಿದರೆ ಸಿದ್ದರಾಮಯ್ಯ ನಿರಾಳರಾಗುತ್ತಾರೆ. ಒಪ್ಪದೆ ಇದ್ದರೆ ಅವರಿಗೆ ಮತ್ತೆ ದೊಡ್ಡ ಸಂಕಷ್ಟ ಎದುರಾಗಲಿದೆ. ಡಿ.19 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ

ಮುಡಾ ಹಗರಣ : ಇಂದು ಜನಪ್ರತಿನಿಧಿ ನ್ಯಾಯಾಲಯದ ತೀರ್ಪು Read More »

ಸುಳ್ಯದ ವೈದ್ಯಾಧಿಕಾರಿ ರಾಜೀನಾಮೆ : ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ

ಆರು ತಿಂಗಳಿಂದ ಸಂಬಳ ಸಿಗದೆ ಬೇಸತ್ತು ರಾಜೀನಾಮೆ ನೀಡಿರುವ ವೈದ್ಯಾಧಿಕಾರಿ ಬೆಂಗಳೂರು: ಆರು ತಿಂಗಳಿಂದ ಸಂಬಳ ಸಿಗದ ಹಿನ್ನೆಲೆಯಲ್ಲಿ ಸುಳ್ಯದ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೀನಾಮೆ ನೀಡಿರುವುದು ಸರ್ಕಾರವನ್ನು ಟೀಕಿಸಲು ವಿಪಕ್ಷಕ್ಕೆ ಇನ್ನೊಂದು ಅಸ್ತ್ರವಾಗಿದೆ. ರಾಜ್ಯಮಟ್ಟದಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿಯಾಗಿರುವುದಕ್ಕೆ ಸುಳ್ಯದ ವೈದ್ಯಾಧಿಕಾರಿ ರಾಜೀನಾಮೆಯೇ ಸಾಕ್ಷಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಸುಳ್ಯದ ಕೊಲ್ಲಮೊಗ್ರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಸರಿಯಾಗಿ

ಸುಳ್ಯದ ವೈದ್ಯಾಧಿಕಾರಿ ರಾಜೀನಾಮೆ : ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ Read More »

ಡಿ. 25: ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಪುತ್ತೂರು ಇದರ ವಾರ್ಷಿಕ ಸಮಾವೇಶ, ಗಣಪತಿ ಹವನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ತಾಲೂಕು ಸಮಿತಿಗಳ ಪದಪ್ರಧಾನ ಸಮಾರಂಭ ಡಿ. 25 ರಂದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಪೂರ್ವಾಹ್ನ 9.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 10. 30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠ ಮಂಗಳೂರಿನ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.

ಡಿ. 25: ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸತ್ಯನಾರಾಯಣ ಪೂಜೆ Read More »

ಸುಳ್ಯ: ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ; ಚಾಲಕನಿಗೆ ಗಾಯ

ಸುಳ್ಯ : ಇಲ್ಲಿನ ಗೂನಡ್ಕ ಬಳಿ ನಿಂತಿದ್ದ ಮಾರುತಿ ಓಮ್ನಿ ಕಾರಿಗೆ ಗುದ್ದಿ ಲಾರಿ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿ ಮಡಿಕೇರಿಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗೂನಡ್ಕ ಬಳಿ ಸುಳ್ಯದಿಂದ ಕಲ್ಲಗುಂಡಿ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿದೆ. ಓಮ್ನಿ ಕಾರು ಲಾರಿ ಅಡಿಯಲ್ಲಿ ಸಿಲುಕಿಕೊಂಡಿತ್ತು. ಆದರೆ, ಅಪಘಾತದ ಸಮಯದಲ್ಲಿ ಕಾರು ಚಾಲಕ ಹತ್ತಿರದ ಅಂಗಡಿಯಲ್ಲಿ ನಿಂತಿದ್ದರಿಂದ ಪಾರಾಗಿದ್ದಾರೆ.

ಸುಳ್ಯ: ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಲಾರಿ; ಚಾಲಕನಿಗೆ ಗಾಯ Read More »

ಪುತ್ತೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ

ಪುತ್ತೂರು: ನಗರದ ಗ್ರಾಮಗಳಾದ ಬಲ್ನಾಡು, ಆರ್ಯಾಪು, ಇರ್ದೆ, ಬೆಟ್ಟಾಂಪಾಡಿ, ಕೆಮ್ಮಿಂಜೆ, ಪುತ್ತೂರು, ಕಸಬ, ಕೊಡಿಪ್ಪಾಡಿ ಗ್ರಾಮಗಳನ್ನು ಒಳಗೊಂಡ ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ ಪುತ್ತೂರು ಗೌಡ ಸಮುದಾಯ ಭವನ ತೆಂಕಿಲದಲ್ಲಿ ನಡೆಯಿತು. ಅಧ್ಯಕ್ಷರಾಗಿ ದಾಮೋದರ ಗೌಡ ಗೆಣಸಿನಕುಮೆರ್, ಪ್ರದಾನ ಕಾರ್ಯದರ್ಶಿಯಾಗಿ ಸತೀಶ್ ಗೌಡ ತೆಂಕಿಲ, ಕ್ರೀಡಾ ಕಾರ್ಯದರ್ಶಿಯಾಗಿ ಸುರೇಶ್ ಗೌಡ ಸರಳಿಕಾನ ಅವರನ್ನು ಆಯ್ಕೆ ಮಾಡಲಾಯಿತು. ಪುತ್ತೂರು ವಲಯದ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವ ಅಧ್ಯಕ್ಷರಾಗಿ ಧೀರಜ್

ಪುತ್ತೂರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳ ಆಯ್ಕೆ Read More »

error: Content is protected !!
Scroll to Top