ನಿಧನ

ನದಿಯಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು

ಬ್ರಹ್ಮಾವರ ಸಮೀಪ ಕುದ್ರು ಬಳಿ ನಡೆದ ಘಟನೆ ಉಡುಪಿ : ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವ ಘಟನೆ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ನದಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಇಬಾಜ್, ಫಜಾನ್, ಸೂಫಾನ್, ಫರಾನ್​ ಮೃತರು. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಮೂಲದವರು ಎಂದು ಗುರುತಿಸಲಾಗಿದೆ. ರಂಜಾನ್ ಹಬ್ಬಕ್ಕೆ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ದೋಣಿ ಮೂಲಕ ಮೀನು ಹಿಡಿಯಲು ಏಳು ಯುವಕರು ತೆರಳಿದ್ದರು. ನದಿಯಲ್ಲಿ ನೀರಿನ ಮಟ್ಟ […]

ನದಿಯಲ್ಲಿ ಮೀನು ಹಿಡಿಯಲು ಹೋದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಸಾವು Read More »

ಬೆಳ್ತಂಗಡಿ : ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ

ಬೆಳ್ತಂಗಡಿ : ನವವಿವಾಹಿತೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿಯಲ್ಲಿ ಸಂಭವಿಸಿದೆ.ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ಕೌಶಲ್ಯ (26) ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕೌಶಲ್ಯ ಅವರು ಇತ್ತೀಚೆಗಷ್ಟೇ ನೆರೆಯ ಸೂರ್ಯಬೆಟ್ಟು ನಿವಾಸಿ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ : ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆ Read More »

ಮಂಗಳೂರು : ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಯುವಕನ ಮೃತದೇಹ ಪತ್ತೆ

ಬಂಟ್ವಾಳ : ಬೆಂಗಳೂರಿಗೆ ಎಂದು ಮನೆಯಿಂದ ಹೊರಟು ಹೋದ ಯುವಕನ ಮೃತದೇಹ ಮಂಗಳೂರಿನ ಪಣಂಬೂರಿನಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.ಬಂಟ್ವಾಳ ಮೊಡಂಕಾಪು ನಿವಾಸಿ ಉಷಾ ಎಂಬವರ ಮಗ ವಿನಯ್ (25) ಮೃತಪಟ್ಟ ಯುವಕ. ಮಂಗಳೂರಿನ ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಇಂದು ಯುವಕನ ಮೃತದೇಹ ಪತ್ತೆಯಾಗಿದ್ದು, ಪಣಂಬೂರು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿನಯ್ ಯಾವ ಕಾರಣದಿಂದ ಮೃತಪಟ್ಟಿದ್ಧಾನೆ ಎಂಬುದು ಸ್ಪಷ್ಟವಾಗಿಲ್ಲ.

ಮಂಗಳೂರು : ಪಣಂಬೂರು ಬೀಚ್ ನ ಬ್ರೇಕ್ ವಾಟರ್ ಬಳಿ ಯುವಕನ ಮೃತದೇಹ ಪತ್ತೆ Read More »

ಉಪ್ಪಿನಂಗಡಿ: ಸ್ಕೂಟರ್-ಕಾರು ಡಿಕ್ಕಿ : ತಂದೆ ಸಾವು, ಇಬ್ಬರು ಮಕ್ಕಳು ಗಂಭೀರ

ಉಪ್ಪಿನಂಗಡಿ : ಏ. 22 ರಂದು ಕಲ್ಲೇರಿ ಎಂಬಲ್ಲಿ ಸ್ಕೂಟರ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜಿಬೈಲು ನಿವಾಸಿ ಜಾಫರ್ (35) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಇವರು ತನ್ನೆರಡು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ಇವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಮಕ್ಕಳಿಬ್ಬರು ಗಂಭೀರ ಗಾಯಗೊಂಡಿದ್ದು,

ಉಪ್ಪಿನಂಗಡಿ: ಸ್ಕೂಟರ್-ಕಾರು ಡಿಕ್ಕಿ : ತಂದೆ ಸಾವು, ಇಬ್ಬರು ಮಕ್ಕಳು ಗಂಭೀರ Read More »

ಟ್ರಕ್‌-ಬಸ್‌ ಡಿಕ್ಕಿ ಯಾಗಿ 4 ಸಾವು, 22 ಮಂದಿಗೆ ಗಾಯ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ ಪುಣೆ : ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಪುಣೆ ಸಮೀಪ ಭೀಕರ ಅಪಘಾತ ಸಂಭವಿಸಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಟ್ರಕ್-ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ. ಇಂದು ಬೆಳಗಿನ ಜಾವ ಅಪಘಾತ ಸಂಭವಿಸಿದೆ. .ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಅಂಬೇಗಾಂವ್‌ನ ಸ್ವಾಮಿ ನಾರಾಯಣ ದೇಗುಲದ ಬಳಿ ನವಲೆ ಸೇತುವೆ ಬಳಿ ಅಪಘಾತ ಸಂಭವಿಸಿದೆ.ಸಕ್ಕರೆ ಮೂಟೆ ಸಾಗಿಸುತ್ತಿದ್ದ ಟ್ರಕ್‌ ಟೂರಿಸ್ಟ್‌ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ

ಟ್ರಕ್‌-ಬಸ್‌ ಡಿಕ್ಕಿ ಯಾಗಿ 4 ಸಾವು, 22 ಮಂದಿಗೆ ಗಾಯ Read More »

ಕಿರುತೆರೆ ನಟ ಸಂಪತ್ ಜಯರಾಮ್ ಆತ್ಮಹತ್ಯೆ

ಅಗ್ನಿಸಾಕ್ಷಿ ಧಾರಾವಾಹಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದರು ಬೆಂಗಳೂರು : ಕಿರುತೆರೆಯ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಟಿಸಿ ಫೇಮಸ್ ಆಗಿದ್ದ ಹಾಗೂ ಸಾಕಷ್ಟು ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದ ಸಂಪತ್ ಜಯರಾಮ್(35) ಅವರು ನಿಧನರಾಗಿದ್ದಾರೆ. ಕೆಲವು ಕನ್ನಡ ಸಿನೆಮಾ ಹಾಗೂ ದಾರವಾಹಿಗಳಲ್ಲಿ ಸಂಪತ್‌ ಕುಮಾರ್‌ ನಟಿಸಿದ್ದರು. ಆದರೆ ಇತ್ತೀಚೆಗೆ ಕೆಲ ಸಮಯದಿಂದ ಸೂಕ್ತ ಅವಕಾಶ ಸಿಗದೆ ಚಿಂತೆಯಲ್ಲಿದ್ದರು. ಶನಿವಾರ (ಏ.22) ನೆಲಮಂಗಲದಲ್ಲಿರುವ ತಮ್ಮ ನಿವಾಸದಲ್ಲೇ ಸಂಪತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ವೈವಾಹಿಕ ಜೀವನಕ್ಕೆ

ಕಿರುತೆರೆ ನಟ ಸಂಪತ್ ಜಯರಾಮ್ ಆತ್ಮಹತ್ಯೆ Read More »

ಪುತ್ತೂರು : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಣಿಗೆಮುಡ್ನೂರು ಗ್ರಾಮದ ಪುಳಿಮಾರಡ್ಕದಲ್ಲಿ ಏ. 19 ರಂದು ಸಂಭವಿಸಿದೆ. ರಹಿಮಾನ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ನೆಟ್ಟಣಿಗೆಮುಡ್ನೂರು ಗ್ರಾಮದ ಪುಳಿಮಾರಡ್ಕದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ಸುಮಾರು 15 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನ ಕಂಕನಾಡಿ ಮತ್ತು ಶಿವಮೊಗ್ಗ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಮಾಡಿದ್ದು, ಸರಿಯಾಗಿ ಗುಣಮುಖಗೊಂಡಿರದ ಕಾರಣ ಇವರ ಯೋಗಕ್ಷೇಮವನ್ನು ಇವರ ಚಿಕ್ಕಮ್ಮನ ಮಗ ಮಹಮ್ಮದ್ ಹಾರಿಸ್ ನೋಡಿಕೊಳ್ಳುತ್ತಿದ್ದರು. ಏ. 19 ರಂದು ಸಂಜೆ 6.45

ಪುತ್ತೂರು : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು

ಕೊಲಂಬಸ್ : ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯೋರ್ವ ದುಷ್ಕರ್ಮಿಗಳ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಏ. 21 ರಂದು ಅಮೆರಿಕದಲ್ಲಿ ಸಂಭವಿಸಿದೆ.ಮೃತನನ್ನು ಸಾಯಿಶ್ ವೀರಾ(24) ಎಂದು ಗುರುತಿಸಲಾಗಿದೆ. ಇವರು ಕೊಲಂಬಸ್ ನ ಇಂಧನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಯುಎಸ್ ರಾಜ್ಯ ಓಹಿಯೋದ ಪೊಲೀಸರು ತಿಳಿಸಿದ್ದಾರೆ. ಸಾಯಿಶ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದು ಕೇವಲ 10 ದಿನಗಳ ಅಂತರದಲ್ಲಿ ಪದವಿಯೊಂದಿಗೆ H1B ವೀಸಾದ ಅಡಿಯಲ್ಲಿ ಆಯ್ಕೆಯಾಗಿದ್ದರು. ಇಂಧನ

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು Read More »

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ದರ್ಖಾಸು ಎಂಬಲ್ಲಿ ಏ. 20 ರಂದು ಸಂಭವಿಸಿದೆ.ಸುಬ್ಬಪ್ಪ (60)ಎಂಬವರೇ ಮೃತ ವ್ಯಕ್ತಿ. ಪಡ್ಪಿನಂಗಡಿ ದರ್ಖಾಸು ಎಂಬಲ್ಲಿರುವ ವಿಮಲ ರವರ ವಾಸದ ಮನೆಯ ಜಗಲಿಯಲ್ಲಿ ಛಾವಣಿಯ ಪಕ್ಕಾಸಿಗೆ ಶಾಲನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಅಡಿಲು ಮೋನಪ್ಪ ಕರ್ಕೇರಾ ನಿಧನ

ಪುತ್ತೂರು: ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಅಡಿಲು ಮೋನಪ್ಪ ಕರ್ಕೇರಾ (75) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಗುರುವಾರ ರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ನಿಧನರಾದರು. ಅವರು ಪ್ರತಿಷ್ಠಿತ ಕೃಷಿ  ಪಂಡಿತ ಪ್ರಶಸ್ತಿ ಪಡೆದಿರುವುದಲ್ಲದೆ ಮೀನುಗಾರಿಕೆಯಲ್ಲಿ ನಿರ್ದೇಶಕರಾಗಿ ಸೇವಿಸಲ್ಲಿಸಿರುತ್ತಾರೆ. ಅವರು ಪತ್ನಿ, ಮಕ್ಕಳು  ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ

ಅಡಿಲು ಮೋನಪ್ಪ ಕರ್ಕೇರಾ ನಿಧನ Read More »

error: Content is protected !!
Scroll to Top