ವಿಷ್ಣುಮೂರ್ತಿ ಹೊಳ್ಳ ನಿಧನ
ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಮಾಪಾಲ ನಿವಾಸಿ, ಪ್ರಗತಿ ಪರ ಕೃಷಿಕ ಮಾಪಾಲ ವಿಷ್ಣುಮೂರ್ತಿ ಹೊಳ್ಳ (86) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಅವರು ಕುರಿಯ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ರಾಜೀವಿ ಹೊಳ್ಳ, ಪುತ್ರಿ ಕಳಸ ಗ್ರಾಮ ಪಂಚಾಯಿತಿ ಸದಸ್ಯೆ ಅನುರಾಧ, ಪುತ್ರರಾದ ಕೋಲಾರದ ಉದ್ಯಮಿ ಹರೀಶ್ ಹೊಳ್ಳ, ವಿಜಯ ಕರ್ನಾಟಕದ ರೆಸ್ಪಾನ್ಸ್ ವಿಭಾಗದ ಮುಖ್ಯ ಉಪ ಸಂಪಾದಕ ಯೋಗೀಶ ಹೊಳ್ಳ ಅವರನ್ನು ಅಗಲಿದ್ದಾರೆ.
ವಿಷ್ಣುಮೂರ್ತಿ ಹೊಳ್ಳ ನಿಧನ Read More »