ನಿಧನ

ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ

ಪೆರುವೋಡಿ: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ (96) ಮಂಗಳವಾರ ನಿಧನರಾದರು. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ  ಪದ್ಯಾಣದಲ್ಲಿ 1927 ರಲ್ಲಿ ಜನಿಸಿದ ಪೆರುವೋಡಿ ಪ್ರಸಿದ್ಧ ಧರ್ಮಸ್ಥಳ ಮೇಳಕ್ಕೆ ಸೇರಿ ಹಲವಾರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದ ನಾರಾಯಣ ಭಟ್ ಅವರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದು ಕೊಟ್ಟಿದ್ದಾರೆ. ‘ಪಾಪಣ್ಣ ವಿಜಯ’ ಪ್ರಸಂಗದ ಪಾಪಣ್ಣ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು […]

ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ Read More »

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವರ ತಂದೆ ಆನಂದ ಆಳ್ವ ನಿಧನ

ಮಂಗಳೂರು : ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ. ಮೋಹನ್ ಆಳ್ವರ ತಂದೆ ಆನಂದ ಆಳ್ವ (106) ತಮ್ಮ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ. ಆನಂದ ಆಳ್ವ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರೀಯಾಶೀಲರಾಗಿ ಗುರುತಿಸಿಕೊಂಡಿದ್ದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಭಾಗವಹಿಸುವ ಕೆಲವೇ ಮಂದಿಗಳಲ್ಲಿ ಆನಂದ ಆಳ್ವರೂ ಒಬ್ಬರಾಗಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆನಂದ ಆಳ್ವ ಮೂಡಬಿದಿರೆ ಪರಿಸರದಲ್ಲಿ ಜನಾನುರಾಗಿಯಾಗಿ

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವರ ತಂದೆ ಆನಂದ ಆಳ್ವ ನಿಧನ Read More »

ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ

ಕಾರ್ಕಳ: ತಾಲೂಕಿನ ಅಜೆಕಾರು ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು (54) ಹೃದಯಾಘಾತದಿಂದ ನಿಧನರಾದರು. ಶೇಖರ್ ಅಜೆಕಾರ್ ಅವರು ಮಕ್ಕಳ ಸಾಹಿತ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಿದ್ದು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ Read More »

ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪ್ರಶಾಂತ್ ಪಲ್ಲತ್ತಡ್ಕ ನಿಧನ

ಪುತ್ತೂರು : ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (32) ಅಲ್ಪಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು, ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಮಾರಂಭಕ್ಕೆ ಎಲ್‌ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಜತೆ ತಾವೇ ಎಲ್‌ಇಡಿಗಳನ್ನು ಅಳವಡಿಸುವ ಪಿಕ್ಸೆಲ್ ಕ್ರಿಯೇಟಿವ್ಸ್ ಮೂಲಕ ಖ್ಯಾತರಾಗಿದ್ದ ಪ್ರಶಾಂತ್ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು. ಮೃತರು ಪತ್ನಿ, ತಂದೆ ತಾಯಿ ಅಕ್ಕಂದಿರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪ್ರಶಾಂತ್ ಪಲ್ಲತ್ತಡ್ಕ ನಿಧನ Read More »

ಶ್ರೀಧರ ಆಚಾರ್ಯ ನಿಧನ

ಪುತ್ತೂರು: ಮಂಜುಶ್ರೀ ಜ್ಯುವೆಲ್ಲರಿ ಮಾಲಕ ಶ್ರೀಧರ ಆಚಾರ್ಯ (63) ಹೃದಯಾಘಾತದಿಂದ ನಿಧನರಾದರು. ಮುಂಡೂರಿನ ಕಲ್ಲಗುಡ್ಡೆಯಲ್ಲಿ ಮಂಜುಶ್ರೀ ಜ್ಯುವೆಲ್ಲರಿ ಶಾಪ್ ನಡೆಸಿಕೊಂಡಿದ್ದ ಅವರಿಗೆ ಭಾನುವಾರ ರಾತ್ರಿ ಹಠಾತ್ತನೆ ಹೃದಯಾಘಾತವಾಗಿ ನಿಧನರಾದರು. ಮೃತರು ಪತ್ನಿ ಲತಾ, ಪುತ್ರ ಶಿವಕುಮಾರ್ ಹಾಗೂ ಪುತ್ರಿ ಶ್ರುತಿಕಾ ಅವರನ್ನು ಅಗಲಿದ್ದಾರೆ.

ಶ್ರೀಧರ ಆಚಾರ್ಯ ನಿಧನ Read More »

ಹೆರಿಗೆ ವೇಳೆ ಮಾಡಾವಿನ ಮಹಿಳೆ ಮೃತ್ಯು

ಪುತ್ತೂರು: ಪುತ್ತೂರು ತಾಲೂಕಿನ ಮಾಡಾವಿನ ಎರಡು ಮಕ್ಕಳ ತಾಯಿಯೊಬ್ಬರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ನ ಸದಸ್ಯೆ, ಪರ್ಲಡ್ಕ ಅಬ್ದುಲ್ ರಶೀದ್ ಹಾಜಿಯವರ ಪುತ್ರಿ ಮರಿಯಮ್ ರಮೀಝಾ ಮೃತಪಟ್ಟ ಮಹಿಳೆ ಪುತ್ತೂರಿನ ಸಂಪ್ಯ ನಿವಾಸಿ ಮರ್ಹೂಮ್ ಅಬೂಬಕ್ಕರ್ ಪಟ್ಲಮೂಲೆ ಅವರ ಮಗ ಮಡಾವು ನಿವಾಸಿ ಗಲ್ಫ್ ನ ಒಮಾನ್‍ ನಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ರಫೀಖ್ ಅವರ ಪತ್ನಿಯಾಗಿದ್ದು, ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ

ಹೆರಿಗೆ ವೇಳೆ ಮಾಡಾವಿನ ಮಹಿಳೆ ಮೃತ್ಯು Read More »

ರೈ ಚಿಕನ್ ಸೆಂಟರ್‌ ಮಾಲಕ ಗಂಗಾಧರ್ ನಾಯ್ಕ್ ನಿಧನ

ಪುತ್ತೂರು: ಪಂಜಳ ನಿವಾಸಿ, ರೈ ಚಿಕನ್ ಸೆಂಟರ್‌ ಮಾಲಕ ಗಂಗಾಧರ್ ನಾಯ್ಕ್ (64 ವ.) ಅಸೌಖ್ಯದಿಂದ ಪಂಜಳದ ಸ್ವಗೃಹದಲ್ಲಿ ಅ. 22ರಂದು ನಿಧನರಾದರು. ಗಂಗಾಧರ್ ನಾಯ್ಕ್ ಅವರು ಪುತ್ತೂರು ಎಪಿಎಂಸಿ ರಸ್ತೆಯ ಕಾಂಗ್ರೆಸ್ ಕಚೇರಿ ಸಮೀಪ ರೈ ಚಿಕನ್ ಸೆಂಟರ್ ನಡೆಸುತ್ತಿದ್ದರು‌. ಮೃತರು ತಾಯಿ ಗಿರಿಜಾ, ಸಹೋದರ ಮೋಹನ್ ನಾಯ್ಕ್ , ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ರೈ ಚಿಕನ್ ಸೆಂಟರ್‌ ಮಾಲಕ ಗಂಗಾಧರ್ ನಾಯ್ಕ್ ನಿಧನ Read More »

ನಿವೃತ್ತ ಕೆಎಸ್‍ ಆರ್ ಟಿ ಸಿ ಉದ್ಯೋಗಿ ಕೆ.ಸಿ.ಜನಾರ್ದನ್ ನಂಬಿಯಾರ್ ನಿಧನ

ಪುತ್ತೂರು :- ಬ್ಲಾಕ್ ಕಾಂಗ್ರೆಸ್ ಹಿರಿಯ ಸದಸ್ಯ, ಮುರ  ನಿವಾಸಿ ಕೆ.ಸಿ.ಜನಾರ್ದನ್ ನಂಬಿಯಾರ್ (75) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ನಿವೃತ್ತ ಕೆಎಸ್‍ಆರ್‍ಟಿಸಿ ಉದ್ಯೋಗಿಯಾಗಿರುವ ಅವರು ಬ್ಲಾಕ್ ಕಾಂಗ್ರೆಸ್ ಸಕ್ರೀಯ ಸದಸ್ಯರಾಗಿದ್ದರು. ಅಲ್ಲದೆ ಹಿರಿಯ ನಾಗರಿಕ ಕಾರ್ಡ್ ವಿತರಣೆ, ಮುಂತಾದ ಸೌಲಭ್ಯಗಳನ್ನು ಒದಗಿಸುವ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪುತ್ರ ರೂಪೇಶ್, ಪುತ್ರಿ ರೇಶ್ಮಾ ಅವರನ್ನು ಅಗಲಿದ್ದಾರೆ.

ನಿವೃತ್ತ ಕೆಎಸ್‍ ಆರ್ ಟಿ ಸಿ ಉದ್ಯೋಗಿ ಕೆ.ಸಿ.ಜನಾರ್ದನ್ ನಂಬಿಯಾರ್ ನಿಧನ Read More »

ನಗರಸಭಾ ಸದಸ್ಯ ಶಕ್ತಿ ಸಿನ್ಹಾ ನಿಧನ!

ಪುತ್ತೂರು: ಇಲ್ಲಿನ ನಗರಸಭೆ ಸದಸ್ಯ, ನೆಲ್ಲಿಕಟ್ಟೆ ನಿವಾಸಿ ಶಕ್ತಿ ಸಿನ್ಹಾ (66 ವ.) ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಪುತ್ತೂರು ಖಾಸಗಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ವಾಸ್ತವ್ಯ ಇರುವ ಶಕ್ತಿ ಸಿನ್ಹಾ ಅವರು ಸಕ್ರೀಯ ರಾಜಕಾರಣಿ. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ನೀಡುವವರಾಗಿದ್ದರು. ತನ್ನ ಕಿರಿಯ ಮಗಳ ಜೊತೆ ವಾಸವಾಗಿದ್ದ ಅವರಿಗೆ ಇಂದು ಬೆಳಿಗ್ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಹಾದಿಯಲ್ಲಿ ಅವರು ಕೊನೆಯುಸಿರೆಳೆದರು. ಕೆಲ ತಿಂಗಳ ಹಿಂದೆಯಷ್ಟೇ ಶಕ್ತಿ ಸಿನ್ಹಾ ಅವರ ಪತ್ನಿಯೂ ವಿಧಿವಶರಾಗಿದ್ದರು. ಮೃತರು

ನಗರಸಭಾ ಸದಸ್ಯ ಶಕ್ತಿ ಸಿನ್ಹಾ ನಿಧನ! Read More »

ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಯುವ ನ್ಯಾಯವಾದಿ ನಿಧನ

ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಜಯಕಿರಣ ಪತ್ರಿಕೆಯ ತಾಲೂಕು ವರದಿಗಾರ ಹಾಗೂ ಯುವ ನ್ಯಾಯವಾದಿ ವೇಣುಗೋಪಾಲ (30) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಚ್ಚೇರಿಪೇಟೆಯ ಆನಂದ ಪೂಜಾರಿ ಅವರ ಪುತ್ರರಾಗಿರುವ ವೇಣುಗೋಪಾಲ ಅವಿವಾಹಿತರಾಗಿದ್ದಾರೆ. ಕ್ರಿಯಾಶೀಲ ಪತ್ರಕರ್ತರಾಗಿದ್ದ ಅವರು ಮೂಡುಬಿದಿರೆಯಲ್ಲಿ ಯುವ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. ಪತ್ರಿಕಾ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ ಹಾಗೂ ಇತರ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ವೇಣುಗೋಪಾಲ ಅವರು, ಭಾನುವಾರ ಸಂಜೆ ತನ್ನ ಸಹೋದರಿಯ ಮನೆಗೆ ಹೋಗಿದ್ದರು. ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತ

ಮೂಡುಬಿದಿರೆ ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಯುವ ನ್ಯಾಯವಾದಿ ನಿಧನ Read More »

error: Content is protected !!
Scroll to Top