ನಿಧನ

ವಿವೇಕಾನಂದ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ನಿಧನ

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ (60) ಬುಧವಾರ ನಸುಕಿನ ವೇಳೆ ನಿಧನ ಹೊಂದಿದ್ದಾರೆ. ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದರು. ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಕೆಲವೇ ಕ್ಷಣಗಳಲ್ಲಿ ಅವರು ನಿಧನರಾದರು. ಹೃದಯಾಘಾತದಿಂದ ನಿಧನರಾಗಿರಬೇಕೆಂದು ಶಂಕಿಸಲಾಗಿದೆ. 1987 ರಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾಗಿ ಗೋಪಿನಾಥ ಶೆಟ್ಟಿ ನೇಮಕಗೊಂಡಿದ್ದು, ಸುದೀರ್ಘ 35 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2022 ರಲ್ಲಿ ನಿವೃತ್ತರಾಗಿದ್ದರು. ಪಾಲಿಟೆಕ್ನಿಕ್ ನ್ನು ಉತ್ತಮ ಶಿಕ್ಷಣ ಸಂಸ್ಥೆಯಾಗಿ […]

ವಿವೇಕಾನಂದ ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ನಿಧನ Read More »

ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ ರಾವ್ ನಿಧನ

ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್‍ ಟ್ರಸ್ಟ್ ಅಧ್ಯಕ್ಷ ಶಿವಾನಂದ ರಾವ್ (93) ಇಂದು ಬೆಳಿಗ್ಗೆ ವಯೋ ಸಹಜವಾಗಿ ನಿಧನರಾದರು. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಪ್ರಗತಿಪರ ಕೃಷಿಕರೂ ಆಗಿದ್ದರು. ವಿಶ್ವ ಹಿಂದೂ ಪರಿಷತ್‍ ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮೃತರು ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಶಿವಾನಂದ ರಾವ್ ನಿಧನ Read More »

ಹೃದಯಾಘಾತದಿಂದ ಯುವಕ ಉದಯ ಮೃತ್ಯು !

ಬಂಟ್ವಾಳ: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ನಡೆದಿದೆ. ಉದಯ (36) ಮೃತಪಟ್ಟ ಯುವಕ ಉದಯ ಅವರು ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಗ್ರಂಥಪಾಲಕನಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಭಾನುವಾರ ರಾತ್ರಿ ಊಟ ಮಾಡಿ ಮಲಗಿದವರನ್ನು ಇಂದು ಬೆಳಿಗ್ಗೆ ಮನೆಯರು ಎಬ್ಬಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೃದಯಾಘಾತದಿಂದ ಯುವಕ ಉದಯ ಮೃತ್ಯು ! Read More »

ಹಿರಿಯ ಲೇಖಕ, ಪತ್ರಕರ್ತ ನಾಗರಾಜ ಪೂವಣಿ ನಿಧನ

ಬೆಳ್ತಂಗಡಿ: ಹಿರಿಯ ಲೇಖಕ, ಪ್ರಾಧ್ಯಾಪಕ, ಪತ್ರಕರ್ತ ನಾಗರಾಜ ಪೂವಣಿ  (‘ನಾ’ವುಜಿರೆ) (80) ಇಂದು ಸ್ವಗೃಹದಲ್ಲಿ ನಿಧನರಾದರು. ಅಲ್ಪಕಾಲದ ಅಸೌಖ್ಯದಿಂದ ಅವರು ಇಂದು ಮುಂಜಾನೆ ನಿಧನರಾದರು. ತಾಲೂಕಿನ ಹಿರಿಯ ಸಾಹಿತಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಉದಯವಾಣಿ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಜತೆಗೆ ಶಿಕ್ಷಕರಾಗಿ ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಅಪಾರ ಉತ್ತಮ ಪಾಂಡಿತ್ಯ ಹೊಂದಿದ್ದರು. ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಹಿರಿಯ ಲೇಖಕ, ಪತ್ರಕರ್ತ ನಾಗರಾಜ ಪೂವಣಿ ನಿಧನ Read More »

ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಕಾರು ಡಿಕ್ಕಿ | ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಕಾರೊಂದು ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುಲಾಬಿ (55) ಮೃತಪಟ್ಟ ಮಹಿಳೆಯಾಗಿದ್ದಾರೆ. ಪತಿ ಕೃಷ್ಣಪ್ಪ ನಾಯ್ಕ ಗಂಭೀರ ಗಾಯಗೊಂಡಿದ್ದಾರೆ. ಘಟನೆ ಮರೀಲ್ ನ ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಬಳಿ ನಡೆದಿದ್ದು, ಅಪಘಾತದಲ್ಲಿ ಗುಲಾಬಿ (55), ಕೃಷ್ಣಪ್ಪ ನಾಯ್ಕ (60) ಗಂಭೀರ ಗಾಯಗೊಂಡಿದ್ದು, ರೋಹಿಣಿ (32), ಗನ್ಯ (2) ಸಣ್ಣ ಪುಟ್ಟ ಗಾಯಗಳಾಗಿವೆ. ಈ ಪೈಕಿ ಗುಲಾಬಿ

ನಿಲ್ಲಿಸಿದ್ದ ಗೂಡ್ಸ್ ಲಾರಿಗೆ ಕಾರು ಡಿಕ್ಕಿ | ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಸಮುದ್ರ ಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಉಪ್ಪಳ: ಸಮುದ್ರಪಾಲಾಗಿದ್ದ ವಿದ್ಯಾರ್ಥಿಯೊಬ್ಬನ ಮೃತದೇಹ ಉಪ್ಪಳ ಠಾಣಾ ವ್ಯಾಪ್ತಿಯ ಮೂಸೋಡಿ ಬಳಿಯ ಸಮುದ್ರದಲ್ಲಿ ಬುಧವಾರ ಪತ್ತೆಯಾಗಿದೆ. ಪೊರ್ಕೋಡಿ ನಿವಾಸಿ ವಿದ್ಯಾರ್ಥಿ ಲಿಖಿತ್ (18) ಮೃತದೇಹ ಪತ್ತೆಯಾಗಿದೆ. ಮೂರು ದಿನಗಳ ಬಳಿಕ ಮೃತದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಕುತ್ತಿಗೆಯಲ್ಲಿ ಚೈನ್, ಒಳ ಉಡುಪು ಆಧಾರದಲ್ಲಿ ಲಿಖಿತ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸರು ಮಂಗಲ್ಪಾಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಪಟ್ಟ ಪಣಂಬೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕಳೆದ ಭಾನುವಾರ ಪೊರ್ಕೋಡಿಯ ಸ್ನೇಹಿತರಾದ ನಾಗರಾಜ್‌ (24), ಮಿಲನ್‌ (20) ಹಾಗೂ

ಸಮುದ್ರ ಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ Read More »

ಓಜಾಲ ನಿವಾಸಿ ಉಸ್ಮಾನ್ ನಿಧನ

ಪುತ್ತೂರು : ಕಬಕ ಸಮೀಪದ ಓಜಾಲ ನಿವಾಸಿ ಉಸ್ಮಾನ್  ಹೃದಯಾಘಾತದಿಂದ ಇಂದು ನಿಧನರಾದರು. ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಉಸ್ಮಾನ್ ಅವರು ಹಲವಾರು ವರ್ಷಗಳಿಂದ ಸೆಕೆಂಡ್ ಹ್ಯಾಂಡ್ ವಾಹನ ವ್ಯಾಪಾರಸ್ಥರಾಗಿದ್ದು, ಪುತ್ತೂರಿನ ಜೆ.ಎಂ.ಕಟ್ಟಡದಲ್ಲಿ ಯುನೈನ್ ಅಟೋ ಲಿಂಕ್ಸ್ ಶಾಫ್ ಹೊಂದಿದ್ದರು.

ಓಜಾಲ ನಿವಾಸಿ ಉಸ್ಮಾನ್ ನಿಧನ Read More »

ಸಾಮೆತ್ತಡ್ಕ ನಿವಾಸಿ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನಸ್ ನಿಧನ

ಪುತ್ತೂರು: ಸಾಮೆತ್ತಡ್ಕ ಯವಕ ಮಂಡಲದ ಮಾಜಿ ಅಧ್ಯಕ್ಷ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನಸ್ (54) ಅಸೌಖ್ಯದಿಂದ ನಿಧನರಾದರು. ಸಾಮೆತ್ತಡ್ಕ ದಿ. ಜೋಸೆಫ್‍ ಝೇವಿಯರ್ ಮಸ್ಕರೇನಸ್ ಹಾಗೂ ಹಿಲ್ಡಾ ರೋಚ್ ಅವರ ಪುತ್ತರಾಗಿರುವ ಅನಿಲ್ ವಿಲ್ಸನ್‍ ಹಲವಾರು ವರ್ಷ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ವಿದೇಶದಿಂದ ಬಂದ ಬಳಿಕ ಪುತ್ತೂರಿನ ಸಾಮೆತ್ತಡ್ಕದಲ್ಲಿ ನೆಲೆಸಿದ್ದರು. ಮೃತರು ತಾಯಿ, ಪತ್ನಿ, ಪುತ್ರಿ, ಸಹೋದರಿಯರನ್ನು ಅಗಲಿದ್ದಾರೆ.

ಸಾಮೆತ್ತಡ್ಕ ನಿವಾಸಿ ಅನಿಲ್ ವಿಲ್ಸನ್ ಸೆಬಾಸ್ಟಿಯನ್ ಮಸ್ಕರೇನಸ್ ನಿಧನ Read More »

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ರಫೀಕ್‍ ನಿಧನ

ಪುತ್ತೂರು : ಹಲವು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೂರ್ನಡ್ಕ ಮರೀಲ್ ನಿವಾಸಿ ರಫೀಕ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರು. ರಫೀಕ್ ಅವರು ಕೆಎಸ್‍ ಆರ್‍ ಟಿಸಿ ಬಸ್ ನಿಲ್ದಾಣದ ಬಳಿ ಎ.ಎಂ. ಕಾಂಪ್ಲೆಕ್ಸ್ ನಲ್ಲಿ SKY ಮೊಬೈಲ್ ಅಂಗಡಿಯನ್ನು ಹೊಂದಿದ್ದರು. ಜತೆಗೆ ರಿಕ್ಷಾ ಚಾಲಕರಾಗಿ ದುಡಿಯುತಿದ್ದರು. ಹಲವು ದಿನಗಳ ಹಿಂದೆ ಕೂರ್ನಡ್ಕ ಸಮೀಪ ಅಟೋರಿಕ್ಷಾ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ರಫೀಕ್‍ ನಿಧನ Read More »

ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ ನಿಧನ

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ (52) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೊಡಪ್ಪಾಡಿಗುತ್ತು ತರವಾಡಿನ ಪ್ರಧಾನ ಜಠಾಧಾರಿ ದೈವದ ನರ್ತಕರಾಗಿದ್ದು ಒಳಮೊಗ್ರು ಗ್ರಾಮದ ಅನೇಕ ಕಡೆ ದೈವ ಚಾಕರಿಯಲ್ಲಿ ತನ್ನನ್ನು ಸಮರ್ಪಿಸಿಕೊಂಡಿದ್ದರು. ಇವರನ್ನು ಕಳೆದ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ವತಿಯಿಂದ ಗೌರವಿಸಲಾಗಿತ್ತು. ಒಳಮೊಗ್ರು ಗ್ರಾಮ ಪಂಚಾಯಿತಿ ಕೂಡ ಅವರನ್ನು ಗೌರವಿಸಿತ್ತು.  ಸ್ಥಳೀಯ ಶ್ರೀ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ದೈವ ನರ್ತನದಲ್ಲಿ ಅವರ ಸೇವೆಯನ್ನು ಪರಿಗಣಿಸಿ ಗೌರವಿಸಲಾಗಿತ್ತು.

ಮೊಡಪ್ಪಾಡಿ ದೈವ ನರ್ತಕ ಬೊಳಿಯ ಅಜಿಲ ನಿಧನ Read More »

error: Content is protected !!
Scroll to Top