ನಿಧನ

ಕೆಜಿಎಫ್‌ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ

ಯಶ್‌, ಪುನೀತ್‌ ರಾಜ್‌ಕುಮಾರ್‌ ಮುಂತಾದವರ ಜೊತೆ ನಟಿಸಿದ್ದ ಪ್ರತಿಭಾವಂತ ಉಡುಪಿ : ಕನ್ನಡ ಚಿತ್ರರಂಗದ ನಟ ಮತ್ತು ಕಲಾ ನಿರ್ದೇಶಕ ದಿನೇಶ್ ಮಂಗಳೂರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ‘ಉಳಿದವರು ಕಂಡಂತೆ’, ‘ಕಿರಿಕ್ ಪಾರ್ಟಿ, ‘ಕೆಜಿಎಫ್’ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ದಿನೇಶ್ ಮಂಗಳೂರು ನಟಿಸಿದ್ದರು. ಆಗಸ್ಟ್ 25ರಂದು ಬೆಳಗ್ಗೆ ಕುಂದಾಪುರದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿ ಜಿಲ್ಲೆಯ ಕುಂದಾಪುರದ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. ಕಲಾ ನಿರ್ದೇಶಕ, ಕಲಾವಿದ, ನಿರ್ಮಾಪಕ, […]

ಕೆಜಿಎಫ್‌ ಖ್ಯಾತಿಯ ನಟ ದಿನೇಶ್‌ ಮಂಗಳೂರು ನಿಧನ Read More »

ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು

ಒಂದೇ ದಿನ ಇಬ್ಬರು ಸಹೋದರರ ಸಾವಿನಿಂದ ಆಘಾತಕ್ಕೊಳಗಾದ ಕುಟುಂಬ ಮಂಗಳೂರು: ತಮ್ಮನ ಅಂತ್ಯಕ್ರಿಯೆಗಾಗಿ ದೂರದ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಅಂತ್ಯಕ್ರಿಯೆ ಮುಗಿಯುವ ಮೊದಲೇ ಸಾವಿಗೀಡಾದ ಘಟನೆ ಕಟೀಲು ಸಮೀಪ ನಿಡ್ಡೋಡಿ ಎಂಬಲ್ಲಿ ಶನಿವಾರ ಸಂಭವಿಸಿದೆ. ನಿಡ್ಡೋಡಿಯ ಮುದಲಾಡಿಗುತ್ತು ಮನೆಯ ಪ್ರವೀಣ್‌ ಶೆಟ್ಟಿ (49) ಮತ್ತು ಸಾಯಿಪ್ರಸಾದ್‌ ಶೆಟ್ಟಿ (52) ಒಂದೇ ದಿನ ಸಾವಿಗೀಡಾದ ಸಹೋದರರು. ಪ್ರವೀಣ್‌ ಶೆಟ್ಟಿ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶುಕ್ರವಾರ ಅವರ ಪರಿಸ್ಥಿತಿ ಉಲ್ಬಣಿಸಿತ್ತು. ಮನೆಯವರು ಗುಜರಾತ್‌ನಲ್ಲಿರುವ ಸಾಯಿಪ್ರಸಾದ್‌ ಶೆಟ್ಟಿಯವರಿಗೆ ವಿಷಯ ತಿಳಿಸಿದ್ದರು.

ಕಟೀಲು : ತಮ್ಮನ ಅಂತ್ಯಕ್ರಿಯೆಗಾಗಿ ಗುಜರಾತ್‌ನಿಂದ ಬಂದಿದ್ದ ಅಣ್ಣನೂ ಕುಸಿದು ಬಿದ್ದು ಸಾವು Read More »

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ

ಬೆಂಗಳೂರು: ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಶುಕ್ರವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಶ್ರೀಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ತಡರಾತ್ರಿ 12:01 ಗಂಟೆ ಸುಮಾರಿಗೆ ಭೈರವೈಕ್ಯರಾಗಿದ್ದಾರೆ. ಸ್ವಾಮೀಜಿಗಳ ಅಂತಿಮ ದರ್ಶನವನ್ನು ಇಂದು (ಶನಿವಾರ) ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಧಾರ್ಮಿಕ ಮುಖಂಡರು, ಪೀಠಾಧ್ಯಕ್ಷರ ನೇತೃತ್ವದಲ್ಲಿ ಭೈರವೈಕ್ಯರಾದ ಶ್ರೀಗಳ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಶ್ರೀಗಳ ಉತ್ತರಾಧಿಕಾರಿಗಳಾದ ನಿಶ್ಚಲಾನಂದನಾಥ ಸ್ವಾಮೀಜಿ

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ Read More »

ಬಾವಿಗೆ ಬಿದ್ದು ಮಹಿಳೆ ಸಾವು

ಪುತ್ತೂರು: ಉರ್ಲಾಂಡಿ ನಿವಾಸಿ ಅವಿವಾಹಿತೆಯೋರ್ವರು ಆ.15ರಂದು ಮಧ್ಯಾಹ್ನ ಮನೆಯಂಗಳದ ಬಾವಿಗೆ ಬಿದ್ದು ಮೃತಪ್ಪಟಿರುವ ಘಟನೆ ನಡೆದಿದೆ. ಉರ್ಲಾಂಡಿ ನಿವಾಸಿ ಶೇಖರ್ ಅವರ ಸಹೋದರಿ ಆರ್.ಗೀತಾ (59) ಮೃತರು. ಗೀತಾ ಅವರು ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು, ಔಷಧಿ ಪಡೆಯುತ್ತಿದ್ದರು. ಸಹೋದರ ಶೇಖರ್ ಅವರ ಮನೆಯಲ್ಲಿ ವಾಸ್ತವ್ವ ಹೊಂದಿದ್ದು, ಆ.15ರಂದು ಮಧ್ಯಾಹ್ನ ಊಟ ಮಾಡಿದ್ದರು. ಬಳಿಕ ಅವರು ಮನೆಯಂಗಳದ ಬಾವಿಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಮೃತರು ಸಹೋದರರಾದ ಸೆಲೂನ್ನ ಮಾಲಕ ಶೇಖರ್, ತಂಕರ್, ಸುರೇಶ್, ಸಹೋದರಿಯರಾದ ಆರ್.

ಬಾವಿಗೆ ಬಿದ್ದು ಮಹಿಳೆ ಸಾವು Read More »

ಬಾವಿಗೆ ಹಾರಿ ಪ್ರಸಿದ್ಧ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ಆತ್ಮಹತ್ಯೆ

ವಿಟ್ಲ: ಯಕ್ಷಗಾನ ಲೋಕದಲ್ಲಿ ರಸಿಕ ‘ರತ್ನ ಬಿರುದು’ ಪಡೆದ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ರವಿ ಜೋಶಿ (68) ಬುಧವಾರ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.ಇವರು ಕರ್ನಾಟಕ ಬ್ಯಾಂಕ್‌ ನ ನಿವೃತ್ತ ಉದ್ಯೋಗಿಯಾಗಿದ್ದರು. ಮನೆ ಮುಂದಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ ಜೋಶಿ ಆವರ ಶವವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಸ್ಥಿಳಕ್ಕೆ ವಿಟ್ಲ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಹಿರಿಯ ಪುತ್ರಿಯ ಅಕಾಲಿಕ ಮರಣದಿಂದ ಮನೋವೈಕಲ್ಯಕ್ಕೊಳಗಾಗಿ

ಬಾವಿಗೆ ಹಾರಿ ಪ್ರಸಿದ್ಧ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ಆತ್ಮಹತ್ಯೆ Read More »

ಹಿಮ್ಮುಖವಾಗಿ ಚಲಿಸಿದ ಜೀಪು : ಹಿಂದೆ ನಿಂತಿದ್ದ ವ್ಯಕ್ತಿಗೆ ಜೀಪು ಡಿಕ್ಕಿ ಹೊಡೆದು ಮೃತ್ಯು

ಕಡಬ : ತಾಲೂಕಿನ ಬಿಳಿನೆಲೆ ಗ್ರಾಮದ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಸಂಭವಿಸಿದ ದುರಂತದಲ್ಲಿ ಧರ್ಮಪಾಲ (68) ಎಂಬ ಹಿರಿಯ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಮೃತರ ಮಗ ಏರು ರಸ್ತೆಯಲ್ಲಿ ಜೀಪು ಚಲಾಯಿಸುತ್ತಿದ್ದ ವೇಳೆ, ವಾಹನ ಮೇಲಕ್ಕೆ ಏರದ ಕಾರಣ ಧರ್ಮಪಾಲರು ಕೆಳಗೆ ಇಳಿದು ಹಿಂಬದಿ ನಿಂತಿದ್ದರು. ಈ ವೇಳೆ ಜೀಪು ಏಕಾಏಕಿ ಹಿಮ್ಮುಖವಾಗಿ ಚಲಿಸಿ ನಿಯಂತ್ರಣ ತಪ್ಪಿ ಅವರ ಮೇಲೆ ಮಗುಚಿ ಬಿದ್ದಿದೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರ ನೆರವಿನಿಂದ ಕಡಬ ಸರ್ಕಾರಿ ಆಸ್ಪತ್ರೆಗೆ

ಹಿಮ್ಮುಖವಾಗಿ ಚಲಿಸಿದ ಜೀಪು : ಹಿಂದೆ ನಿಂತಿದ್ದ ವ್ಯಕ್ತಿಗೆ ಜೀಪು ಡಿಕ್ಕಿ ಹೊಡೆದು ಮೃತ್ಯು Read More »

ತೋಡಿನಲ್ಲಿ ಮಹಿಳೆಯ ಶವ ಪತ್ತೆ

ಪುತ್ತೂರು : ತಾಲೂಕಿನ ಕೆದಿಲ ಸಮೀಪ ಕಾಂತಕೋಡಿ ಎಂಬಲ್ಲಿ ತೋಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಕಾಂತಕೋಡಿ ನಿವಾಸಿ ರಾಮಣ್ಣ ಗೌಡ ಅವರ ಪತ್ನಿ ಮಮತಾ(35) ಎಂದು ಗರುತಿಸಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೋಲಿಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಸ್ಥಳೀಯರು ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಪೋಲಿಸರ ತನಿಖೆಯ ಬಳಿಕವಷ್ಟೇ ನಿಖರ ಮಾಹಿತಿ ತಿಳಿಯಬೇಕಾಗಿದೆ.

ತೋಡಿನಲ್ಲಿ ಮಹಿಳೆಯ ಶವ ಪತ್ತೆ Read More »

ಕಾಡಾನೆ ದಾಳಿಗೆ ವೃದ್ಧ ಬಲಿ

ಮಡಿಕೇರಿ: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಬುಧವಾರ ತಡರಾತ್ರಿ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಎಂಬಲ್ಲಿ ನಡೆದಿದೆ. ದಬ್ಬಡ್ಕ ಕೊಪ್ಪದ ಶಿವಪ್ಪ (72) ಆನೆ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ವ್ಯಕ್ತಿ. ಶಿವಪ್ಪ ಅವರು ಬುಧವಾರ ರಾತ್ರಿ ಸುಮಾರು 10.30 ರ ಸಮಯ ಮನೆ ಬಳಿಯ ತೋಟದಲ್ಲಿ ನಾಯಿ ಬೊಗಳುತ್ತಿರುವುದನ್ನು ನೋಡಲು ತೋಟದ ಕಡೆಗೆ ಹೋದ ಸಂದರ್ಭ ಆನೆ ತುಳಿದಿದೆ. ತಕ್ಷಣ ಅವರನ್ನು ಮನೆಯವರು ಸಂಪಾಜೆ ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕಾಡಾನೆ ದಾಳಿಗೆ ವೃದ್ಧ ಬಲಿ Read More »

ಪಶು ವೈದ್ಯೆ ಕೀರ್ತನಾ ಜೋಶಿ ಆತ್ಮಹತ್ಯೆ

ಪುತ್ತೂರು: ಇಲ್ಲಿನ ಬಪ್ಪಳಿಗೆ ನಿವಾಸಿ, ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ ಕೀರ್ತನಾ ಜೋಶಿ (27 ವ.) ಅವರು ಸೋಮವಾರ ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೀರ್ತನಾ ಜೋಶಿ ಅವರ ಮೃತದೇಹವನ್ನು ಪುತ್ತೂರಿನ ಮನೆಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪಶುವೈದ್ಯಕೀಯದಲ್ಲಿ ಎಂ.ಡಿ. ಶಿಕ್ಷಣ ಪೂರೈಸಿರುವ ಡಾ. ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಸೋಮವಾರ ತಡರಾತ್ರಿ ಸ್ವಗೃಹದಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದು

ಪಶು ವೈದ್ಯೆ ಕೀರ್ತನಾ ಜೋಶಿ ಆತ್ಮಹತ್ಯೆ Read More »

ಕನ್ನಡದ ಯುವ ನಾಯಕ ನಟ ಸಂತೋಷ್ ಬಾಲರಾಜ್ ನಿಧನ

ಅನಾರೋಗ್ಯ ಉಲ್ಬಣಿಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ನಟ ಬೆಂಗಳೂರು : ಕನ್ನಡ ಚಿತ್ರರಂಗದ ಯುವ ನಾಯಕ ನಟ ಸಂತೋಷ್ ಬಾಲರಾಜ್ (34) ಇಂದು ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ಬಾಲರಾಜ್ ಕಳೆದ ತಿಂಗಳು ಜಾಂಡೀಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿದ್ದರು. ಜಾಂಡೀಸ್ ಉಲ್ಬಣಿಸಿ ಗಂಭೀರ ಸ್ಥಿತಿಯಲ್ಲಿ

ಕನ್ನಡದ ಯುವ ನಾಯಕ ನಟ ಸಂತೋಷ್ ಬಾಲರಾಜ್ ನಿಧನ Read More »

error: Content is protected !!
Scroll to Top