ಅಪಘಾತ

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬಸ್ಸಿನಡಿಗೆ ಬಿದ್ದು ಸ್ಕೂಟರ್‌ ಸವಾರ ಮೃತ್ಯು

ಬೆನ್ನಟ್ಟಿದ ಟ್ರಾಫಿಕ್‌ ಪೊಲೀಸ್‌ ಬಸ್‌ ಏರಿ ಪಲಾಯನ ಮಂಗಳೂರು: ಹೆಲ್ಮೆಟ್ ಧರಿಸದ ಕಾರಣಕ್ಕೆ ಪೊಲೀಸರು ಬೆನ್ನುಹತ್ತಿದಾಗ ತಪ್ಪಿಸಿಕೊಳ್ಳಲು ವೇಗವಾಗಿ ವಾಹನ ಚಲಾಯಿಸಿದ ಸ್ಕೂಟರ್‌ ಸವಾರ ಬಸ್ಸಿನಡಿಗೆ ಬಿದ್ದು ಸಾವಿಗೀಡಾದ ಘಟನೆ ನಿನ್ನೆ ರಾತ್ರಿ ಸುರತ್ಕಲ್‌ನಲ್ಲಿ ಸಂಭವಿಸಿದೆ. ಸುರತ್ಕಲ್‌ನ ಕಾನ ಕುಳಾಯಿ ಗುಡ್ಡೆ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಮೃತರನ್ನು ಕಾನ ನಿವಾಸಿ ರೆಮ್ಮಿ (38) ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದಾಗ ರಕ್ಷಣೆಗೆ ಧಾವಿಸಬೇಕಾದ ಪೊಲೀಸರು ಬಸ್‌ ಹತ್ತಿ ಪಲಾಯನ ಮಾಡಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ದ್ವಿಚಕ್ರ […]

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬಸ್ಸಿನಡಿಗೆ ಬಿದ್ದು ಸ್ಕೂಟರ್‌ ಸವಾರ ಮೃತ್ಯು Read More »

ಬೈಕ್‍-ಕಾರು ಡಿಕ್ಕಿ : ಓಡಿಲ್ನಾಳದ ಯುವಕ ಮೃತ್ಯು

ಬೆಳ್ತಂಗಡಿ: ಕಾರು ಬೈಕ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿ ಬೈಕ್‍ ಸವಾರ ಮೃತಪಟ್ಟ ಘಟನೆ ಎನ್‍ ಆರ್‍ ಪುರ ಬಳಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಕುಂದಲಿಕೆ ನಿವಾಸಿ ಶಜಿ ಎಂಬವರ ಪುತ್ರ ಸಜೇಶ್ (26) ಮೃತಪಟ್ಟ ಬೈಕ್‍ ಸವಾರ. ಸಜೇಶ್‍ ಅವರು ಎನ್. ಆರ್. ಪುರ ಬಳಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಕೆಲಸಕ್ಕೆ ತೆರಳಿದ್ದು ಗುರುವಾರ ಮಧ್ಯಾಹ್ಮ ಕೆಲಸದಿಂದ ಊಟಕ್ಕೆಂದು ತೆರಳುತಿದ್ದ ವೇಳೆ ಎದುರಿನಿಂದ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ.

ಬೈಕ್‍-ಕಾರು ಡಿಕ್ಕಿ : ಓಡಿಲ್ನಾಳದ ಯುವಕ ಮೃತ್ಯು Read More »

ಬೈಕ್‍-ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಪುತ್ತೂರು: ಸರಕಾರಿ ಬಸ್ ಹಾಗೂ ಬೈಕ್‍ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಇದೀಗ ಮುರದಲ್ಲಿ ನಡೆದಿದೆ. ಪಡ್ನೂರು ನಿವಾಸಿ ಅಬ್ದುಲ್ ಕುಂಞಿ (65) ಮೃತಪಟ್ಟ ಬೈಕ್‍ ಸವಾರ. ಮುರದಲ್ಲಿ ಮೆಡಿಕಲ್‍ ಒಂದಕ್ಕೆ ಬಂದು  ವಾಪಾಸ್ ರಸ್ತೆ ದಾಟಿ ಕೆದಿಲ ರಸ್ತೆಯತ್ತ ಬೈಕ್ ಚಲಾಯಿಸಿದಾಗ ಮಾಣಿ ಕಡೆಯಿಂದ ಬಂದ ಬಸ್‍ ಡಿಕ್ಕಿಯಾಗಿದೆ ಎನ್ನಲಾಗಿದೆ.

ಬೈಕ್‍-ಸರಕಾರಿ ಬಸ್ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ಕೆ ಎಸ್ ಆರ್ ಟಿಸಿ ಬಸ್ ಮತ್ತು ಬೈಕ್  ಡಿಕ್ಕಿ

ಪುತ್ತೂರು: ಕೆ ಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ  ಘಟನೆ ಮುರದಲ್ಲಿ ನಡೆದಿದೆ. ಘಟನೆ ಪರಿಣಾಮ ಬೈಕ್ ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಸವಾರನಿಗೆ ಗಂಭೀರ ಗಾಯಗಳಾಗಿದೆ. ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೆ ಎಸ್ ಆರ್ ಟಿಸಿ ಬಸ್ ಮತ್ತು ಬೈಕ್  ಡಿಕ್ಕಿ Read More »

ಬೈಕ್‍-ಟೆಂಪೋ ಅಪಘಾತ : ಬೈಕ್‍ ಸವಾರ ಮೃತ್ಯು

ಮಾಣಿ: ಬೈಕ್‍ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೂರಿಕುಮೇರ್ ನಲ್ಲಿ ಬುಧವಾರ ರಾತ್ರಿ ನಡೆದಿದೆ. ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಕಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಮೃತಪಟ್ಟ ಬೈಕ್ ಸವಾರ, ಕಂಪೆನಿಯಲ್ಲಿ ಕೆಲಸ ಮುಗಿಸಿ ಸುಳ್ಯದ ತನ್ನ ಮನೆಗೆ ಹೊರಟಿದ ವೇಳೆ ಅಪಘಾತ ನಡೆದಿದೆ. ಸೂರಿಕುಮೇರು ಜಂಕ್ಷನ್ ನಲ್ಲಿ ಬೈಕ್ ಹಾಗೂ ಟೆಂಪೊ ಪರಸ್ಪರ ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಸವಾರ ರಸ್ತೆಗೆ ಉರುಳಿ ಬಿದ್ದು ಗಂಭೀರ

ಬೈಕ್‍-ಟೆಂಪೋ ಅಪಘಾತ : ಬೈಕ್‍ ಸವಾರ ಮೃತ್ಯು Read More »

ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿ ಮೀಟಿಂಗ್ ರೂಮ್‌ನಲ್ಲಿ  ಶಾರ್ಟ್ ಸರ್ಕ್ಯೂಟ್‌

ಮಲ್ಪೆ: ಮೀನುಗಾರಿಕೆ ಇಲಾಖೆಯ ಕಚೇರಿ ಮೀಟಿಂಗ್ ರೂಮ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ರೂಮ್ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಈ ಘಟನೆ ಗೋಚರಿಸಿದ್ದು, ಉರಿಯುತ್ತಿದ್ದ ಅವಶೇಷಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ನಂದಿಸಿದ್ದಾರೆ. ರೂಮ್‍ನೊಳಗಿದ್ದ ಹವಾನಿಯಂತ್ರಕ ಯಂತ್ರಗಳು ಸ್ಫೋಟಗೊಂಡಿದ್ದು, ರೂಮ್‌ನ ಒಳಗಿದ್ದ ಎಲ್ಲ ಕಡತಗಳು ಸುಟ್ಟು ಹೋಗಿದೆ. ಫ್ಯಾನ್, ಚಯರ್, ಟೇಬಲ್, ಲೈಫ್‌ಬಾಯ್, ಲೈಫ್ಯಾಕೆಟ್, ಸೇರಿದಂತೆ ಪಾರ್ಟಿಶನ್ ಗೋಡೆಗಳಿಗೆ ಬೆಂಕಿ ತಗುಳಿದೆ. ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುತ್ತಿತ್ತು

ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿ ಮೀಟಿಂಗ್ ರೂಮ್‌ನಲ್ಲಿ  ಶಾರ್ಟ್ ಸರ್ಕ್ಯೂಟ್‌ Read More »

ಬೆಳ್ತಂಗಡಿ ಮಲಂತಬೆಟ್ಟು  ಕಾಲೇಜಿನ ಅತಿಥಿ ಶಿಕ್ಷಕಿ ಭಾರತಿ ನಿಧನ

ಬೆಳ್ತಂಗಡಿ : 14 ವರ್ಷದ ಹಿಂದೆ ಭೀಕರ ರಸ್ತೆ ಅಪಘಾತವಾಗಿದ್ದು, ಗಂಭೀರ ಗಾಯಗೊಂಡು ಇಲ್ಲಿವರೆಗೂ ಚಿಂತಾಜನಕದ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕಳಿಯ ಗ್ರಾಮದ ಕು.ಭಾರತಿ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಉಬರಡ್ಕ ನಿವಾಸಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಕ್ಷ್ಮಿ ಅವರ ಪುತ್ರಿಯಾಗಿರುವ ಕಳಿಯ ಗ್ರಾಮದ ಕು.ಭಾರತಿ ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯಾಗಿ ಸೇವೆಗೈದಿದ್ದಾರೆ. 2010ರ ಜುಲೈ 30ರಂದು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಮೂಡಿಗೆರೆ

ಬೆಳ್ತಂಗಡಿ ಮಲಂತಬೆಟ್ಟು  ಕಾಲೇಜಿನ ಅತಿಥಿ ಶಿಕ್ಷಕಿ ಭಾರತಿ ನಿಧನ Read More »

ಕ್ರೇನ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ

ಮಂಗಳೂರು: ಬಜಪೆ ವಿಮಾನ ನಿಲ್ದಾಣದ ಸರಹದ್ದಿನಲ್ಲಿ ಕಾಮಗಾರಿ ನಡೆಸಿ ತೆರಳುತ್ತಿದ್ದ ಬೃಹತ್ ಕ್ರೇನೊಂದು ಪಲ್ಟಿಯಾದ ಘಟನೆ ಮಂಗಳವಾರ ರಾತ್ರಿ ಕೆಂಜಾರು ವಿಮಾನ ನಿಲ್ದಾಣದ ನಿರ್ಗಮನ ರಸ್ತೆಯ ಬಳಿ ನಡೆದಿದೆ. ಪಲ್ಟಿಯಾದ ಕ್ರೇನ್ ಚಾಲಕ ಬೆಂಗಳೂರು ಮೂಲದವನೆಂದು ತಿಳಿದು ಬಂದಿದೆ. ಕ್ರೇನ್‍ ಪಲ್ಟಿಯಾದ ರಭಸಕ್ಕೆ ಚಾಲಕ ಎಸೆಯಲ್ಪಟ್ಟು ಕ್ರೇನ್ ನ ಅಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಕ್ರೇನ್ ಪಲ್ಟಿ : ಚಾಲಕನಿಗೆ ಗಂಭೀರ ಗಾಯ Read More »

ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಹುಂಡೈ ಕಾರು

ಮಂಗಳೂರು: ವೈದ್ಯೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿತ್ತಿರುವ ವೇಳೆ ಹುಂಡೈ ಕಾರು ಹೊತ್ತಿ ಉರಿದ ಘಟನೆ ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿ ಸೋಮವಾರ ನಡೆದಿದೆ. ವೈದ್ಯೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿಕೊಂಡು ಬಂದು ಅಪಾರ್ಟ್‌ಮೆಂಟ್ ಬಳಿ ತಂದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅವರು ಕಾರಿನಿಂದ ಇಳಿದಿದ್ದಾರೆ. ಅಷ್ಟರಲ್ಲಾಗಲೇ ಕಾರಿನ ಮುಂಭಾಗ ಸುಟ್ಟು ಉರಿದು ಹೋಗಿದೆ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ತಗುಳಿ ಅವಘಡ ನಡೆದಿದ್ದು, ಸ್ಥಳಕ್ಕೆ ಧಾವಿಸಿದ

ಶಾರ್ಟ್ ಸರ್ಕ್ಯೂಟ್‍ನಿಂದ ಹೊತ್ತಿ ಉರಿದ ಹುಂಡೈ ಕಾರು Read More »

ಬಂಟ್ವಾಳ : ರೈಲ್ವೆ ಹಳಿಯಲ್ಲಿ ನೆಟ್ಟಣ ವ್ಯಕ್ತಿಯ ಶವ ಪತ್ತೆ

ಕಡಬ: ಬಂಟ್ವಾಳ ತಾಲೂಕಿನ ಪುದು ಗ್ರಾಮದ ನೆತ್ತರಕೆರೆ ಸಮೀಪದ ರೈಲ್ವೆ ಹಳಿಯ ಬದಿಯ ಪೊದೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಇದು ಬಿಳಿನೆಲೆ ಗ್ರಾಮದ ನೆಟ್ಟಣ ನಿವಾಸಿ ದಿ. ಚಂದನ್ ಎಂಬವರ ಪುತ್ರ ಶಶಿಕುಮಾರ್ ಎಸ್.(40ವ.) ಎಂದು ಗುರುತಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಹಾಗೂ ಮಂಗಳೂರು ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವ್ಯಕ್ತಿಯ ತಲೆಯ ಮೇಲೆ ಗಾಯವಾದ ಕುರುಹುಗಳು ಕಂಡುಬಂದಿದ್ದು, ರಕ್ತಸಿಕ್ತ ಮಾದರಿಯಲ್ಲಿರುವ ಶವವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಶಿಕುಮಾರ್ ಅವರು

ಬಂಟ್ವಾಳ : ರೈಲ್ವೆ ಹಳಿಯಲ್ಲಿ ನೆಟ್ಟಣ ವ್ಯಕ್ತಿಯ ಶವ ಪತ್ತೆ Read More »

error: Content is protected !!
Scroll to Top