ಅಪಘಾತ

ಕಡಿಯುವಾಗ ವ್ಯಕ್ತಿಯ ಮೇಲೆ ಬಿದ್ದ ಮರ: ಸಾವು

ಬೆಳ್ತಂಗಡಿ : ಮನೆಯ ಪಕ್ಕದಲ್ಲಿದ್ದ ಮರ ಕಡಿಯುವ ಸಂದರ್ಭ ಆಕಸ್ಮಿಕವಾಗಿ ಮರ ವ್ಯಕ್ತಿಯ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆರಿಯದಲ್ಲಿ ಸೆ. 23ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮಂಜಲ್ಪಳಿಕೆ ನಿವಾಸಿ ರಾಮಣ್ಣ ಗೌಡ (58) ಸಾವನ್ನಪ್ಪಿದ ವ್ಯಕ್ತಿ. ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಪ್ರಯೋಜವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬೆಳ್ತಂಗಡಿ ಶವಾಗಾರಕ್ಕೆ ಸಾಗಿಸಲಾಗಿದೆ. […]

ಕಡಿಯುವಾಗ ವ್ಯಕ್ತಿಯ ಮೇಲೆ ಬಿದ್ದ ಮರ: ಸಾವು Read More »

ಬಿಎಂಡಬ್ಲ್ಯು ಬೈಕ್ ಭೀಕರ ಅಪಘಾತ: ಪಾರ್ಟಿ ಮುಗಿಸಿ ವಾಪಾಸಾಗುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಂಬಕ್ಕೆ ಬಿಎಂಡಬ್ಲ್ಯು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಯಶವಂತಪುರದ ಆರ್‌.ಎಂ.ಸಿ. ಯಾರ್ಡ್‌ ಬಳಿ ಮುಂಜಾನೆ 3.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಮೃತರನ್ನು 31 ವರ್ಷದ ಮನಮೋಹನ್‌ ಹಾಗೂ 25 ವರ್ಷದ ನಿಖಿಲ್‌ ಎಂದು ಗುರುತಿಸಲಾಗಿದೆ. ಯಶವಂತಪುರದಿಂದ ಆರ್‌.ಎಮ್‌.ಸಿ. ಯಾರ್ಡ್ ರೋಡ್ ಕಡೆ ಡ್ರೈವ್ ಮಾಡುತ್ತಿದ್ದ ಇವರು ಮದ್ಯ ಸೇವಿಸಿದ್ದರು ಹಾಗೂ ಅತಿವೇಗದಿಂದ ಚಾಲನೆ ಮಾಡಿದ್ದರು ಎನ್ನಲಾಗಿದೆ. ಇಬ್ಬರೂ ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಸ್ನೇಹಿತರ

ಬಿಎಂಡಬ್ಲ್ಯು ಬೈಕ್ ಭೀಕರ ಅಪಘಾತ: ಪಾರ್ಟಿ ಮುಗಿಸಿ ವಾಪಾಸಾಗುತ್ತಿದ್ದ ಯುವಕರಿಬ್ಬರು ಸ್ಥಳದಲ್ಲೇ ಸಾವು Read More »

ಜೋಡಣೆ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ ಪ್ರಪಾತಕ್ಕೆ..!!

ಪುತ್ತೂರು: ಚಲಿಸುತ್ತಿದ್ದ ವಾಹನದಿಂದ ಕಾಂಕ್ರೀಟ್ ಮಿಕ್ಸರ್ ಯಂತ್ರ ಕಳಚಿ, ಪಕ್ಕದ ಬರೆಯಿಂದ ಕೆಳಗೆ ಉರುಳಿದ ಘಟನೆ ಶುಕ್ರವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ. ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ವಾಹನವೊಂದಕ್ಕೆ ಜೋಡಿಸಿ, ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಕಾಂಕ್ರೀಟ್ ಮಿಕ್ಸರ್ ಯಂತ್ರ ವಾಹನದ ಜೋಡಣೆಯಿಂದ ಕಳಚಿ, ನಿಯಂತ್ರಣ ಕಳೆದುಕೊಂಡಿದೆ. ಈ ಮಿಕ್ಸರ್ ಯಂತ್ರ ಪಕ್ಕದ ಬರೆಯಿಂದ ಕೆಳಗೆ ಉರುಳಿ ಬಿದ್ದಿದೆ. ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.

ಜೋಡಣೆ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ ಪ್ರಪಾತಕ್ಕೆ..!! Read More »

ಬಲ್ಯ: ಕಟ್ಟಿಗೆ ಕಟ್ಟುವ ಹಗ್ಗ ಮೃತದೇಹ ತೋರಿಸಿತು!

ಕಡಬ: ತೋಟದಿಂದ ಹುಲ್ಲು ತರಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಲ್ಯ ಗ್ರಾಮದ ದೇರಾಜೆ ನಿವಾಸಿ ಕುಶಲಾವತಿ ಮೃತಪಟ್ಟ ಮಹಿಳೆ. ಕುಶಾಲವತಿ ಮನೆ ಕೆಲಸ ಮಾಡಿಕೊಂಡಿದ್ದರು. ಮೈದುನ ಕೆಲಸಕ್ಕೆ ಹೋಗಿದ್ದು, ತಂಗಿಯ ಮಗ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಕುಶಲಾವತಿ ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದ ಸಂದರ್ಭ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮಗ ಪ್ರಜ್ವಲ್ ಸಂಜೆ ಶಾಲೆಯಿಂದ ಮನೆಗೆ ಬಂದು ಹುಡುಕಾಡಿದ್ದಾರೆ. ತೋಟದ ಕಡೆ

ಬಲ್ಯ: ಕಟ್ಟಿಗೆ ಕಟ್ಟುವ ಹಗ್ಗ ಮೃತದೇಹ ತೋರಿಸಿತು! Read More »

ಅಪಘಾತಕ್ಕೀಡಾದ ರಿಕ್ಷಾ: ಯುವತಿ ಸ್ಥಳದಲ್ಲೇ ಮೃತ್ಯು!

ಮಂಗಳೂರು: ಆಟೋರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುಪುರದ ಬಂಗ್ಲೆಗುಡ್ಡೆ ಸಮೀಪ ನಡೆದಿದೆ. ಯುವತಿ ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಮೃತಪಟ್ಟವರು. ಪ್ರೀತಿ ಅವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್‌ (9), ಆಟೋ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ. ಮೃತ ಯುವತಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಮುಂದಿನ ವರ್ಷ ಜ. 4ರಂದು ಮದುವೆಗೆ ದಿನ

ಅಪಘಾತಕ್ಕೀಡಾದ ರಿಕ್ಷಾ: ಯುವತಿ ಸ್ಥಳದಲ್ಲೇ ಮೃತ್ಯು! Read More »

ಅಪ್ರಾಪ್ತ ಪುತ್ರನ ವ್ಹೀಲಿಂಗಿಗೆ PSI ತಾಯಿಯ ಸಾಥ್: ಇಲಾಖೆ ಕೈಗೊಂಡಿತು ಕ್ರಮ!! | ವ್ಹೀಲಿಂಗಿಗೆ ಬಲಿಯಾದ ವೃದ್ಧನ ಶವವಿಟ್ಟು ಪ್ರತಿಭಟನೆ

ಮೈಸೂರು: ಮಹಿಳಾ ಪಿಎಸ್ಐ ಪುತ್ರನ ವ್ಹೀಲಿಂಗ್ ಪುಂಡಾಟಕ್ಕೆ ಶನಿವಾರ ಅಮಾಯಕ‌ ವೃದ್ಧ ಬಲಿಯಾಗಿದ್ದರು. ಇದೀಗ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಪುತ್ರ ಸೈಯದ್‌ ಐವನ್‌ನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರವಲ್ಲದೆ ಮಗನಿಗೆ ಕುಮ್ಮಕ್ಕು ನೀಡಿದ ಪಿಎಸ್‌ಐ ಯಾಸ್ಮಿನ್‌ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಮಗ ಮಾಡಿದ ತಪ್ಪಿಗೆ ನಂಜನಗೂಡು ಸಂಚಾರ ವಿಭಾಗದ ಪಿಎಸ್‌ಐ ಯಾಸ್ಮಿನ್ ತಾಜ್‌ಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ವ್ಹೀಲಿಂಗ್‌ ಮಾಡಿ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದ ಸೈಯದ್‌ನನ್ನು

ಅಪ್ರಾಪ್ತ ಪುತ್ರನ ವ್ಹೀಲಿಂಗಿಗೆ PSI ತಾಯಿಯ ಸಾಥ್: ಇಲಾಖೆ ಕೈಗೊಂಡಿತು ಕ್ರಮ!! | ವ್ಹೀಲಿಂಗಿಗೆ ಬಲಿಯಾದ ವೃದ್ಧನ ಶವವಿಟ್ಟು ಪ್ರತಿಭಟನೆ Read More »

ಚಾರ್ಮಾಡಿ ಘಾಟ್ ಪ್ರಪಾತಕ್ಕೆ ಉರುಳಿದ ಲಾರಿ!

ಬೆಳ್ತಂಗಡಿ : ದಟ್ಟ ಮಂಜು ಆವರಿಸಿದ ಪರಿಣಾಮ ಚಾರ್ಮಾಡಿ ಘಾಟಿಯಯಲ್ಲಿ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ನೂರು ಅಡಿ ಆಳದ ಪ್ರಪಾತಕ್ಕೆ ಉರುಳಿದ ಘಟನೆ ನಡೆದಿದೆ. ಸೋಮನಕಾಡು ನೀರಿನ ಫಾಲ್ಸ್ ಸಮೀಪ ಈ ಅಪಘಾತ ಸಂಭವಿಸಿದ್ದು, ಚಾಲಕ ಹಾಗೂ ನಿರ್ವಾಹಕ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಲಾರಿ ಉರುಳಿ ಪ್ರಪಾತದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ಮರದಲ್ಲೇ ಸಿಲುಕಿಕೊಂಡಿರುವುದರಿಂದ ಚಾಲಕ, ನಿರ್ವಾಹಕ ಪ್ರಾಣಾಪಾಯದಿಂದ ಪಾರಾದಂತಾಗಿದೆ.

ಚಾರ್ಮಾಡಿ ಘಾಟ್ ಪ್ರಪಾತಕ್ಕೆ ಉರುಳಿದ ಲಾರಿ! Read More »

ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ | ಹೆಚ್ಚಿನ ಅನಾಹುತ ತಪ್ಪಿಸಿದ ಸ್ಥಳೀಯರು

ಸುಬ್ರಹ್ಮಣ್ಯ: ನಿಲ್ಲಿಸಿದ್ದ ಕಾರಿನಲ್ಲಿ ಹಠಾತ್ತನೆ ಬೆಂಕಿ ಹತ್ತಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲಾ ಬಳಿ ನಡೆದಿದೆ. ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಯಾತ್ರಾರ್ಥಿ ಕುಟುಂಬವೊಂದು ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲಾ ಬಳಿ ಕಾರು ನಿಲ್ಲಿಸಿ ದೇವರ ದರ್ಶನಕ್ಕೆ ತೆರಳಿತ್ತು. ಈ ಸಂದರ್ಭ ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಸುಬ್ರಹ್ಮಣ್ಯದ ಗಣೇಶ್ ಭಟ್‍ ಹಾಗೂ ಮತ್ತಿತರರು ಈ ಕಾರಿನ ಹಿಂದೆ ಸಾಲು ಸಾಲಾಗಿ ನಿಂತಿದ್ದ ಕಾರಿಗೆ ಬೆಂಕಿ ತಗಲದಂತೆ ಹೆಚ್ಚಿನ

ನಿಲ್ಲಿಸಿದ್ದ ಕಾರಿನಲ್ಲಿ ಬೆಂಕಿ | ಹೆಚ್ಚಿನ ಅನಾಹುತ ತಪ್ಪಿಸಿದ ಸ್ಥಳೀಯರು Read More »

ಭೀಕರ ದುರಂತ: ಶಾಲಾ ಮಕ್ಕಳಿದ್ದ ದೋಣಿ ಮುಳುಗಡೆ! | 34 ಮಕ್ಕಳ ಪೈಕಿ ನೀರುಪಾಲಾದವರೆಷ್ಟು?

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರದಲ್ಲಿ ಗುರುವಾರ ಬೆಳಗ್ಗೆ ಶಾಲಾ ಮಕ್ಕಳಿದ್ದ ದೋಣಿ ಬಾಗಮತಿ ನದಿಯಲ್ಲಿ ಮುಳುಗಿದೆ. 18 ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ದೋಣಿಯಲ್ಲಿ ಸುಮಾರು 34 ಮಕ್ಕಳು ಇದ್ದರು ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಸುಮಾರು 20 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ನಿಖರ ಅಂಕಿಅಂಶಗಳು ದೊರೆತಿಲ್ಲ. ಹೀಗಾಗಿ ಸುಮಾರು 18 ಮಂದಿ ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮಕ್ಕಳು ಸ್ಥಳೀಯ ಗ್ರಾಮದಿಂದ ನದಿಯಾಚೆಗಿನ ಶಾಲೆಗೆ ತೆರಳುತ್ತಿದ್ದರು. ಬೆನಿಯಾಬಾದ್ ಒಪಿ ಪ್ರದೇಶದ ಭಟ್ಗಾಮಾ ಗ್ರಾಮದ ಮಧುರಪಟ್ಟಿ

ಭೀಕರ ದುರಂತ: ಶಾಲಾ ಮಕ್ಕಳಿದ್ದ ದೋಣಿ ಮುಳುಗಡೆ! | 34 ಮಕ್ಕಳ ಪೈಕಿ ನೀರುಪಾಲಾದವರೆಷ್ಟು? Read More »

ಭಕ್ತಕೋಡಿಯಲ್ಲಿ ಸ್ಕೂಟರಿಗೆ ಬೈಕ್ ಢಿಕ್ಕಿ: ವಿಶೇಷ ಚೇತನ ವಿದ್ಯಾರ್ಥಿಗೆ ಗಾಯ

ಪುತ್ತೂರು: ಸ್ಕೂಟರಿಗೆ ಬೈಕ್ ಮುಖಾಮುಖಿ ಢಿಕ್ಕಿಯಾಗಿ, ವಿಶೇಷಚೇತನ ವಿದ್ಯಾರ್ಥಿ ಗಾಯಗೊಂಡ ಘಟನೆ ಗುರುವಾರ ಬೆಳಿಗ್ಗೆ ಭಕ್ತಕೋಡಿ ಶಾಲಾ ಬಳಿ ನಡೆದಿದೆ. ಭಕ್ತಕೋಡಿಯಲ್ಲಿ ಅಂಗಡಿ ಉದ್ಯಮ ನಡೆಸುತ್ತಿರುವ ಅಶೋಕ್ ಅವರ ಪುತ್ರ ರಕ್ಷಿತ್ ಗಾಯಾಳು. ಇವರು ವಿಶೇಷಚೇತನ ವಿದ್ಯಾರ್ಥಿಯಾಗಿದ್ದು, ಭಕ್ತಕೋಡಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ರಕ್ಷಿತ್ ಅವರನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಅಶೋಕ್ ಅವರ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ರಿಕ್ಷಾವನ್ನು ಓವರ್’ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಉದಯ್, ಸ್ಕೂಟರಿಗೆ

ಭಕ್ತಕೋಡಿಯಲ್ಲಿ ಸ್ಕೂಟರಿಗೆ ಬೈಕ್ ಢಿಕ್ಕಿ: ವಿಶೇಷ ಚೇತನ ವಿದ್ಯಾರ್ಥಿಗೆ ಗಾಯ Read More »

error: Content is protected !!
Scroll to Top