ವೈದ್ಯರ ಎಡವಟ್ಟಿನಿಂದ ಹೆರಿಗೆ ಶಸ್ತ್ರ ಚಿಕಿತ್ಸೆ ವೇಳೆ ಹೊಟ್ಟೆಯಲ್ಲೇ ಉಳಿದುಕೊಂಡ ಬಟ್ಟೆ | ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ನಗರ ಠಾಣೆಗೆ ದೂರು
ಪುತ್ತೂರು: ವೈದ್ಯರೊಬ್ಬರ ಎಡವಟ್ಟಿನಿಂದ ಹೆರಿಗೆಯಾದ ಬಳಿಕ ನಡೆಸಿದ ಶಸ್ತ್ರ ಚಿಕಿತ್ಸೆಯಲ್ಲಿ ಬಟ್ಟೆ ಮಹಿಳೆಯ ಹೊಟ್ಟೆಯೊಳಗೆ ಉಳಿದು ಬಾಣಂತಿಯೊಬ್ಬರು ಸುಮಾರು ಮೂರು ತಿಂಗಳು ನರಕಯಾತನೆ ಅನುಭವಿಸಿದ್ದು, ಈ ಕುರಿತು ಪುತ್ತೂರು ನಗರ ಠಾಣೆಗೆ ಪುತ್ತೂರಿನ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಭಾನುವಾರ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಬಾಣಂತಿಯ ಪತಿ ಗಗನ್ ದೀಪ್ ತಿಳಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೆರಿಗೆಯ ಸಂದರ್ಭ ನಗರದ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷತೆಯಿಂದ ಬಟ್ಟೆ ಹೊಟ್ಟೆಯಲ್ಲೇ ಉಳಿದು, ಅದನ್ನು ತಿಳಿದ ಬಳಿಕವೂ ತೆರವು […]