ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ !
ಪುತ್ತೂರು: ಮಡಿಕೇರಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಕಾರೊಂದು ಕೌಡಿಚ್ಚಾರಿನ ಮಡ್ಯಂಗಲ ಬಳಿ ಪಲ್ಟಿಯಾಗಿದೆ. ಮಡಿಕೇರಿಯ ನಾಗೇಶ್ ಎಂಬವರು ತನ್ನ ಸ್ನೇಹಿತನನ್ನು ಕರೆತರಲು ಮಡಿಕೇರಿಯಿಂದ ಬೆಳಗ್ಗಿನ ಜಾವ ಕಾರ್ಕಳಕ್ಕೆ ತೆರಳುತ್ತಿದ್ದ ವೇಳೆ ಕೌಡಿಚ್ಚಾರಿನ ಬಳಿ ಎದುರಿನಿಂದ ರಾಂಗ್ ಸೈಡಲ್ಲಿ ಬರುತ್ತಿದ್ದ ವಾಹನವೊಂದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಪಲ್ಟಿಯಾಗಿದೆ. ಕಾರನ್ನು ಸ್ವತಃ ನಾಗೇಶ್ ಅವರೇ ಚಲಾಯಿಸುತ್ತಿದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಕೌಡಿಚ್ಚಾರಿನಲ್ಲಿ ಕಾರು ಪಲ್ಟಿ ! Read More »