ಅಪಘಾತ

ಬಂಟ್ವಾಳ: ಗುಡ್ಡದಲ್ಲಿ ಪತಿ-ಪತ್ನಿ ಸಜೀಹ ದಹನ!!

ಬಂಟ್ವಾಳ: ಗುಡ್ಡವೊಂದರಲ್ಲಿ ಹುಲ್ಲುಗಾವಲಿಗೆ ಬೆಂಕಿ ಕೊಡಲು ಹೋದ ಪತಿ ಪತ್ನಿ ಇಬ್ಬರೂ ಸಜೀಹ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡು ಪದವು ಎಂಬಲ್ಲಿ ಜ.28ರ ಭಾನುವಾರ ಮಧಾಹ್ನ ವೇಳೆ ಸಂಭವಿಸಿದೆ. ಲೊರೆಟ್ಟೊಪದವು ತುಂಡುಪದವು ನಿವಾಸಿ, ಕ್ರಿಸ್ಟಿನ್ ಕಾರ್ಲೋ(51) ಹಾಗೂ ಗಿಲ್ಬರ್ಟ್ ಕಾರ್ಲೊ (65) ಮೃತಪಟ್ಟವರು. ಇವರ ಮನೆ ಸಮೀಪದಲ್ಲಿರುವ ಗುಡ್ಡದಲ್ಲಿರುವ ಮುಳಿಹುಲ್ಲು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ನೀಡಿದ್ದರು. ಮಧ್ಯಾಹ್ನ ಅಗಿದ್ದ ಕಾರಣ ಬೆಂಕಿಯ ಜ್ವಾಲೆ ಇವರಿಗೆ ಹತ್ತಿಕೊಂಡಿರಬೇಕು ಎಂದು ಹೇಳಲಾಗಿದೆ. ಬಂಟ್ವಾಳ ನಗರ […]

ಬಂಟ್ವಾಳ: ಗುಡ್ಡದಲ್ಲಿ ಪತಿ-ಪತ್ನಿ ಸಜೀಹ ದಹನ!! Read More »

ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಶಾಲಾ ಬಸ್ !!

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸು ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿಯ ರಾಮನಗರದಲ್ಲಿ ಇಂದು ನಡೆದಿದೆ. ಉಪ್ಪಿನಂಗಡಿ ಹಳೆಗೇಟು ಸಮೀಪದ ಅರಫಾ ಶಾಲಾ ಬಸ್ ಹಿರೇಬಂಡಾಡಿ ಕಡೆಯಿಂದ ಮಕ್ಕಳನ್ನು ಕರೆದುಕೊಂಡು ಬರುವ ಸಂದರ್ಭ ಈ ಘಟನೆ ನಡೆದಿದೆ. ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಶಾಲಾ ಬಸ್ !! Read More »

ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ

ಪುತ್ತೂರು: ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಕಾಡಾನೆ ಪತ್ಯಕ್ಷಗೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಕೋರಿಕ್ಕಾರು ಗಣೇಶ್ ಭಂಡಾರಿ ಎಂಬವರ ಜಮೀನಿನಲ್ಲಿ ಕಾಡಾನೆ ಬಂದಿರುವುದನ್ನು ನೋಡಿರುವುದಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್‍. ತಿಳಿಸಿದ್ದಾರೆ. ಈ ಭಾಗದ ಜನರು ಈ ಕುರಿತು ಜಾಗೃತರಾಗಿರುವಂತೆ ಅವರು ತಿಳಿಸಿದ್ದಾರೆ.

ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ Read More »

ಆಕಸ್ಮಿಕ ಕೆರೆಗೆ ಬಿದ್ದು ಕೇಶವ ದೇವಾಡಿಗ ಮೃತ್ಯು !

ವಿಟ್ಲ : ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಕೊಳ್ನಾಡು ಗ್ರಾಮದ ಮಂಕುಡೆ ಗುಳಿಗಳ ಗುರಿ ಎಂಬಲ್ಲಿ ನಡೆದಿದೆ. ಮಂಕುಡೆ ಗುಳಿಗಳ ಗುರಿ ನಿವಾಸಿ ಕೇಶವ ದೇವಾಡಿಗ ಎಂಬವರ ಪುತ್ರ ರವೀಂದ್ರ ದೇವಾಡಿಗ (32) ಮೃತಪಟ್ಟವರು. ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ರವೀಂದ್ರ ದೇವಾಡಿಗರು ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಪಾಳು ಬಿದ್ದ ಕೆರೆಗೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು

ಆಕಸ್ಮಿಕ ಕೆರೆಗೆ ಬಿದ್ದು ಕೇಶವ ದೇವಾಡಿಗ ಮೃತ್ಯು ! Read More »

ವಿದ್ಯುತ್ ತಂತಿ ಸವರಿದ ಲಾರಿ | ರಸ್ತೆಗಡ್ಡವಾಗಿ ಬಿದ್ದ ಎರಡು ಕಂಬ : ವಿದ್ಯುತ್ ಪೂರೈಕೆ ಸ್ಥಗಿತ

ಕಾಂಕ್ರೀಟ್ ಮಿಕ್ಸಿಂಗ್ ಲಾರಿಯೊಂದು ವಿದ್ಯುತ್ ತಂತಿಗಳನ್ನು ಎಳೆದಾಡಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿದ ಘಟನೆ ನಾಲ್ಕೂರು ಗ್ರಾಮದ ಸೂಳಬೆಟ್ಟು ಎಂಬಲ್ಲಿ ತಡರಾತ್ರಿ ನಡೆದಿದೆ. ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟು ಎಂಬಲ್ಲಿ ರಾತ್ರಿ, ಲಾರಿಯ ಚಾಲಕ ಮೇಲಿರುವ ತಂತಿಗಳನ್ನು ಗಮನಿಸದೆ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ. ಅದು ಚಾಲಕನ‌ ಗಮನಕ್ಕೆ ಬಾರದೆ ಆತ ಏಕಾಏಕಿ ಮುಂದುವರಿದಿದ್ದಾನೆ. ಪರಿಣಾಮ ತಂತಿಗಳೊಂದಿಗೆ ಎರಡು ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ಸಂದರ್ಭ ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿ ಕಾಣಿಸಿತ್ತು.

ವಿದ್ಯುತ್ ತಂತಿ ಸವರಿದ ಲಾರಿ | ರಸ್ತೆಗಡ್ಡವಾಗಿ ಬಿದ್ದ ಎರಡು ಕಂಬ : ವಿದ್ಯುತ್ ಪೂರೈಕೆ ಸ್ಥಗಿತ Read More »

ನೀರಿನ ತೊಟ್ಟಿಗೆ ಬಿದ್ದು ಮಹಿಳೆ ಮೃತ್ಯು !

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಅವರ ಪತ್ನಿ ಶುಭಲಕ್ಷ್ಮೀ ಮನೆ ಸಮೀಪದ ಕೃತಕ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಮನೆ ಸಮೀಪದ ಗುಡ್ಡದ ಮೇಲಿರುವ ಟಾರ್ಪಾಲು ನಿರ್ಮಿತ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಕಾಲು ಜಾರಿ ಬಿದ್ದಿರುವುದೋ ಅಥವಾ ಆತ್ಮಹತ್ಯೆಯೇ ಎಂಬ ಶಂಕೆ ಮೂಡಿದ್ದು, ಸರಿಯಾದ ಮಾಹಿತಿ ತಿಳಿದು ಬಂದಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ

ನೀರಿನ ತೊಟ್ಟಿಗೆ ಬಿದ್ದು ಮಹಿಳೆ ಮೃತ್ಯು ! Read More »

ಕಟ್ಟೆ ಇಲ್ಲದ ಬಾವಿಗೆ ಬಿದ್ದು ಬಾಲಕ ಮೃತ್ಯು ! | ಪಕ್ಕದ ಮನೆಗೆ ಆಡಲು ಹೊದಾಗ ನಡೆಯಿತು ಘಟನೆ

ಬೆಳ್ತಂಗಡಿ: ಪಕ್ಕದ ಮನೆಗೆ ಹೋದ ಬಾಲಕ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿಯ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಮೊಹಮ್ಮದ್ ಹನೀಫ್ ಎಂಬವರ ಪುತ್ರ ಮಹಮ್ಮದ್ ಅನಾಸ್‍ (7) ಮೃತಪಟ್ಟ ಬಾಲಕ. ಎರಡನೇ ತರಗತಿ ವಿದ್ಯಾರ್ಥಿಯಾಗಿರುವ ಅನಾಸ್ ಇಂದು ಪಕ್ಕದ ಮನೆಗೆ ಆಟವಾಡಲು ತೆರಳಿದ್ದ, ಅಲ್ಲಿರುವ ಕಟ್ಟೆ ಇಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಮನೆಯವರು ತಕ್ಷಣ ಮಗುವನ್ನು ಬಾವಿಯಿಂದ ಮೇಲೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದಾಗಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಕಟ್ಟೆ ಇಲ್ಲದ ಬಾವಿಗೆ ಬಿದ್ದು ಬಾಲಕ ಮೃತ್ಯು ! | ಪಕ್ಕದ ಮನೆಗೆ ಆಡಲು ಹೊದಾಗ ನಡೆಯಿತು ಘಟನೆ Read More »

ಬಸ್ಸಿನಿಂದ ಬಿದ್ದು ಮಹಿಳೆ ಮೃತ್ಯು !

ಸುರತ್ಕಲ್: ಬಸ್ ಚಾಲಕ ಬ್ರೇಕ್‍ ಹಾಕಿದ ಪರಿಣಾಮ ಬಸ್ಸಿನಿಂದ ಮಹಿಳೆ ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಜೋಕಟ್ಟೆ ಕ್ರಾಸ್ ಬಳಿ ನಡೆದಿದೆ. ಈರಮ್ಮ (65) ಬಸ್ಸಿನಿಂದ ಬಿದ್ದು ಮೃತಪಟ್ಟ ಮಹಿಳೆ ಮಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಮುಂದಿನ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಸ್ಸಿನ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬಸ್ಸಿನಿಂದ ಬಿದ್ದ ಮಹಿಳೆಯ ಮೇಲೆಯೇ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ಈ ಕುರಿತು ಮಂಗಳೂರು ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸಿನಿಂದ ಬಿದ್ದು ಮಹಿಳೆ ಮೃತ್ಯು ! Read More »

ಬಂಟ್ವಾಳ ಶಾಸಕರಿಗೆ ಮಂಗಳೂರಿನಲ್ಲಿ ಕಾರು ಡಿಕ್ಕಿ -ಶಾಸಕರು ಪವಾಡಸದೃಶ ಪಾರು – ಚಾಲಕ ಪೊಲೀಸ್ ವಶಕ್ಕೆ

ವಿಟ್ಲ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಕಾರೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ಜ.14ರಂದು ಮಧ್ಯಾಹ್ನ ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ನಡೆದಿದೆ.ಘಟನೆಯಿಂದಾಗಿ ಶಾಸಕರು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಜ.14ರಂದು ಸಂಕ್ರಮಣದ ಅಂಗವಾಗಿ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಶಾಸಕರು ಕಾರಿನತ್ತ ಹೆಜ್ಜೆ

ಬಂಟ್ವಾಳ ಶಾಸಕರಿಗೆ ಮಂಗಳೂರಿನಲ್ಲಿ ಕಾರು ಡಿಕ್ಕಿ -ಶಾಸಕರು ಪವಾಡಸದೃಶ ಪಾರು – ಚಾಲಕ ಪೊಲೀಸ್ ವಶಕ್ಕೆ Read More »

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪ್ರಪಾತಕ್ಕೆ !

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪ್ರಪಾತಕ್ಕೆ ಬಿದ್ದಿದ್ದು, ಚಾಲಕ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂಡಿಗೆರೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದೆ. ಟಿಪ್ಪರ್ ಉರುಳಿ ಬಿಳುತ್ತಿದ್ದಂತೆ ಚಾಲಕ ಲಾರಿಯಿಂದ ಜಿಗಿದಿದ್ದಾನೆ ಎನ್ನಲಾಗಿದೆ. ಬಣಕಲ್ ಪೊಲೀಸರು ಹಾಗೂ ಸ್ಥಳೀಯರು ಪ್ರಪಾತಕ್ಕೆ ಇಳಿದು ಲಾರಿಗಾಗಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿ ಪ್ರಪಾತಕ್ಕೆ ! Read More »

error: Content is protected !!
Scroll to Top