ಅಪಘಾತ

ಬೆಳ್ತಂಗಡಿ : ಗ್ಯಾಸ್‌ ಸೋರಿಕೆಯಾಗಿ ಅಂಗಡಿ ಬೆಂಕಿಗಾಹುತಿ

ಬಲೂನ್‌ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆ ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಾದ ಪರಿಣಾಮ ಬೆಂಕಿಹತ್ತಿಕೊಂಡು ಅಂಗಡಿ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್‌ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ KAF ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್‌ನಲ್ಲಿ ಇಬ್ಬರು ಕೆಲಸದವರು ಫೆ.14ರಂದು ಬೆಳಗ್ಗೆ 7.30ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್‌ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ. […]

ಬೆಳ್ತಂಗಡಿ : ಗ್ಯಾಸ್‌ ಸೋರಿಕೆಯಾಗಿ ಅಂಗಡಿ ಬೆಂಕಿಗಾಹುತಿ Read More »

ಪಿಯುಸಿ ವಿದ್ಯಾರ್ಥಿಗಳ ಜಾಲಿರೈಡ್‌ ಭೀಕರ ಅಪಘಾತಕ್ಕೆ ಕಾರಣ

ಅತಿವೇಗ, ನಿರ್ಲಕ್ಷ್ಯದ ಚಾಲನೆಗೆ ಬೆಳ್ಳಂಬೆಳಗ್ಗೆ 7 ಜೀವಗಳು ಬಲಿ ಬೆಂಗಳೂರು: ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತ ಬೆಂಗಳೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿಗಳ ಜಾಲಿ ರೈಡ್, ಅತಿ ವೇಗದ ಚಾಲನೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಎಕ್ಸ್‌ಯುವಿ 700 ಕಾರಿನಲ್ಲಿ ಬಂದಿದ್ದ ಆರು ವಿದ್ಯಾರ್ಥಿಗಳು ಬೆಂಗಳೂರಿನ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದವರು ಎಂಬುದು ಗೊತ್ತಾಗಿದೆ. ನೂತನ ಹೆದ್ದಾರಿಯಲ್ಲಿ ಲಾಂಗ್ ಡ್ರೈವ್‌ಗೆ ಬಂದಿದ್ದ ವೇಳೆ ಅತಿವೇಗವಾಗಿ

ಪಿಯುಸಿ ವಿದ್ಯಾರ್ಥಿಗಳ ಜಾಲಿರೈಡ್‌ ಭೀಕರ ಅಪಘಾತಕ್ಕೆ ಕಾರಣ Read More »

ಪಿಕಪ್‌ ಪಲ್ಟಿಯಾಗಿ ಚಾಲಕ ಸಾವು

ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.11ರಂದು ನಡೆದಿದೆ. ಮೃತ ವ್ಯಕ್ತಿ ಅಳಕೆ ನಿವಾಸಿ ಪುಟ್ಟ (31) ಎಂಬವರಾಗಿದ್ದಾರೆ. ಸೆಂಟ್ರಿಂಗ್ ಕೆಲಸದ ಸಾಮಾಗ್ರಿಗಳನ್ನು ಸಾಗಿಸುವ ವೇಳೆ ಪಿಕಪ್‌ ವಾಹನ ಪಲ್ಟಿಯಾಗಿದೆ. ಮೇಲ್ಬಾಗದ ರಸ್ತೆಯಿಂದ ವಾಹನ ಕೆಳಭಾಗದ ರಸ್ತೆಗೆ ಪಿಕಪ್‌ ಉರುಳಿ ಬಿದ್ದಿದ್ದು, ಚಾಲಕ ಅಳಕ್ಕೆ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಹೇಮಚಂದ್ರ (32) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಪಿಕಪ್‍ನಲ್ಲಿದ್ದ ಉಮ್ಮರಬ್ಬ (51) ಎಂಬವರು ಗಾಯಗೊಂಡು

ಪಿಕಪ್‌ ಪಲ್ಟಿಯಾಗಿ ಚಾಲಕ ಸಾವು Read More »

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ

ತುಮಕೂರು: ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ಒಂದರ ನಡುವೆ ಅಪಘಾತ‌ ಸಂಭವಿಸಿದ್ದು, ದ್ವಿಚಕ್ರ ಸವಾರ ಮೃತಪಟ್ಟ‌ ಘಟನೆ ಸಾತಟ್ಟದಲ್ಲಿ ‌ನಡೆದಿದೆ. ಮಿಟ್ರಳ್ಳಿಯ ಗಂಗಯ್ಯ (60) ಎಂಬವರೇ ಮೃತ ದುರ್ದೈವಿ. ಸಹಸವಾರ ಲಿಂಗಣ್ಣ ಎಂಬವರಿಗೆ ‌ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ Read More »

ಪ್ಲಾಸ್ಟಿಕ್‌ ಗೋಡೌನ್‌ ಬೆಂಕಿಗಾಹುತಿ

ಬೆಂಗಳೂರು: ಪ್ಲಾಸ್ಟಿಕ್ ಗೋಡೌನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಸೋಮವಾರ ಮಧ್ಯರಾತ್ರಿ ಈ ಅವಘಡ ನಡೆದಿದೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಇನ್ನೂ ಬೆಂಕಿ ಹತೋಟಿಗೆ ಬಂದಿಲ್ಲ. ಪ್ಲಾಸ್ಟಿಕ್ ಗೋಡೌನ್ ಸಮೀಪವೇ ಗ್ಯಾಸ್ ಸಿಲಿಂಡರ್ ಗೋಡೌನ್ ಇತ್ತು. ಗ್ಯಾಸ್ ಗೋಡೌನ್‌ಗೆ ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಆಗುವ ಸಾಧ್ಯತೆಯಿತ್ತು. ಸದ್ಯ ಭಾರಿ ಅನಾಹುತವೊಂದು ತಪ್ಪಿದೆ.

ಪ್ಲಾಸ್ಟಿಕ್‌ ಗೋಡೌನ್‌ ಬೆಂಕಿಗಾಹುತಿ Read More »

12ಕ್ಕೂ ಅಧಿಕ ಗೋದಾಮುಗಳು ಬೆಂಕಿಗಾಹುತಿ

ಗುಜರಿಗೆ ಹತ್ತಿಕೊಂಡ ಬೆಂಕಿ ಹರಡಿ ಭಾರಿ ಅನಾಹುತ ಮೈಸೂರು: ಹಳೆ ವಸ್ತುಗಳು ಸಂಗ್ರಹಿಸಿಡುವ ಗುಜರಿಗೆ ಬೆಂಕಿ ಬಿದ್ದ ಪರಿಣಾಮ ಸಾಲು ಸಾಲು ಗೋದಾಮುಗಳು ಸುಟ್ಟು ಹೋಗಿರುವ ಘಟನೆ ಮೈಸೂರು ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಬಳಿಯ ಹಳೆ ಕೆಸರೆಯಲ್ಲಿ ಗುಜರಿಗೆ ಬೆಂಕಿ ಬಿದ್ದ ಪರಿಣಾಮ ಬಹಳಷ್ಟು ಗೋದಾಮುಗಳು ಹೊತ್ತಿ ಉರಿಯುತ್ತಿವೆ. ಬೆಳಗ್ಗೆ 3.30ರ ವೇಳೆಗೆ ಬೆಂಕಿ ಬಿದ್ದಿದೆ. ಸ್ಥಳೀಯರು 4.30ರ ವೇಳೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಕೊಟ್ಟಿದ್ದಾರೆ. ಕೆಲ

12ಕ್ಕೂ ಅಧಿಕ ಗೋದಾಮುಗಳು ಬೆಂಕಿಗಾಹುತಿ Read More »

ವಿಟ್ಲ : ಬೈಕ್‌ ಡಿಕ್ಕಿ ಹೊಡೆದು ವೃದ್ಧ ಮಹಿಳೆ ಸಾವು

ಪುತ್ತೂರಿನ ಬೈಕ್‌ ಸವಾರನಿಗೆ ಗಂಭೀರ ಗಾಯ ವಿಟ್ಲ: ಬೈಕ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ವೃದ್ಧ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್‌ಸ್ಟ್ಯಾಂಡ್ ಸಮೀಪ ಭಾನುವಾರ ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ವಿಟ್ಲ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ (68) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಬೈಕ್ ಸವಾರ ಪುತ್ತೂರು ಮೂಲದವರು ಎಂದು ತಿಳಿದು ಬಂದಿದೆ. ಅಪಘಾತದ ರಭಸಕ್ಕೆ

ವಿಟ್ಲ : ಬೈಕ್‌ ಡಿಕ್ಕಿ ಹೊಡೆದು ವೃದ್ಧ ಮಹಿಳೆ ಸಾವು Read More »

ಕಡಬ: ಅರಣ್ಯ ಇಲಾಖೆಯ ನೆಡುತೋಪು ಬೆಂಕಿಗಾಹುತಿ

ಎರಡು ಎಕರೆ ಪ್ರದೇಶದ ಮರ-ಗಿಡ ಸುಟ್ಟು ಕರಕಲು ಕಡಬ : ತಾಲೂಕಿನ ಕಾಯ್ಮಣ ಗ್ರಾಮದ ಮುಂಗ್ಲಿಮಜಲು ಪದವು ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ನೆಡುತೋಪು ಹಾಗೂ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಶುಕ್ರವಾರ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿರುವುದಾಗಿ ಅಂದಾಜಿಸಲಾಗಿದ್ದು, ಮಧ್ಯಾಹ್ನದ ಧಗಧಗಿಸುವ ಬಿಸಿಲಿನ ಸಂದರ್ಭದಲ್ಲಿ ಬೆಂಕಿ ಬಿದ್ದು ಅರಣ್ಯ ಪ್ರದೇಶವನ್ನು ಆವರಿಸಿಕೊಂಡಿದೆ, ಮುಂಗ್ಲಿಮಜಲು, ಪದವು ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ನಾಟಿ ಮಾಡಿರುವ ನೆಡುತೋಪಿನ ಹಣ್ಣು ಹಂಪಲುಗಳ ಗಿಡಗಳು

ಕಡಬ: ಅರಣ್ಯ ಇಲಾಖೆಯ ನೆಡುತೋಪು ಬೆಂಕಿಗಾಹುತಿ Read More »

ಮಗಳ ಸಾವಿಗೆ ಕಾರಣವಾದ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ತಾಯಿ

ನಂತೂರಿನಲ್ಲಿ ಸ್ಕೂಟಿಗೆ ಬಸ್‌ ಡಿಕ್ಕಿಯಾಗಿ ಯುವತಿ ಮೃತಪಟ್ಟ ಘಟನೆ ಮಂಗಳೂರು: ನಗರದ ನಂತೂರು ಬಸ್ ನಿಲ್ದಾಣದ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಹೃದಯ ವಿದ್ರಾವಕ ಅಪಘಾತದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ದೀಪ್ತಿ (24) ಎಂಬ ಯುವತಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಅತ್ಯಂತ ನೋವಿನ ಅಂಶವೆಂದರೆ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಅದೇ ಬಸ್‌ನಲ್ಲಿ ಅವರ ತಾಯಿಯೂ ಪ್ರಯಾಣಿಸುತ್ತಿದ್ದರು. ಚಾಲಕ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಗುರುವಾರ ಕದ್ರಿ ಪೊಲೀಸ್‌ ಠಾಣೆಯ ಎದುರು ಬಂಧುಗಳು ದೀಪ್ತಿಯ

ಮಗಳ ಸಾವಿಗೆ ಕಾರಣವಾದ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದರು ತಾಯಿ Read More »

ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್‌ : ಪ್ರಯಾಣಿಕರು ಪಾರು

ಪ್ರಯಾಣಿಕರ ಲಗೇಜ್‌ಗಳೆಲ್ಲ ಸುಟ್ಟು ಕರಕಲು ನೆಲಮಂಗಲ: ಬೆಂಗಳೂರಿನಿಂದ ಕಲಬುರಗಿಗೆ ಹೊರಟಿದ್ದ ಖಾಸಗಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ಇಂದು ಮುಂಜಾನೆ ನಡೆದಿದೆ. ಬಸ್‌ನಲ್ಲಿದ್ದ ಸುಮಾರು 40 ಪ್ರಯಾಣಿಕರು ಅದೃಷ್ಟವಶಾತ್‌ ಪಾರಾಗಿದ್ದಾರೆ. ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹನುಮಂತಪುರ ಗೇಟ್ ಬಳಿ ಸಂಜನಾ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್‌ ಹೊತ್ತಿ ಉರಿದಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ನೆಲಮಂಗಲ ಸಂಚಾರ ಪೊಲೀಸರು

ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್‌ : ಪ್ರಯಾಣಿಕರು ಪಾರು Read More »

error: Content is protected !!
Scroll to Top