ಅಪಘಾತ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು!!

ಶಿವಮೊಗ್ಗದಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಅನ್ನಪೂರ್ಣ ಎಂದು ಗುರುತಿಸಲಾಗಿದೆ. ಮೃತಳ ಕುಟುಂಬಸ್ಥರು ಅನ್ನಪೂರ್ಣ ಅವರು ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮಹಿಳೆಯೂ ಅಲ್ಲ. ಯಾವುದೇ ಅನಾರೋಗ್ಯ ಕೂಡ ಇರಲಿಲ್ಲ. ಹೀಗಾಗಿ ಯಾರೋ ದುಷ್ಕರ್ಮಿಗಳು ಅನ್ನಪೂರ್ಣರನ್ನ ಕೊಂದು ರೈಲಿನಿಂದ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. ಮಂಗಳವಾರ ರಾತ್ರಿ ಶಿವಮೊಗ್ಗದಿಂದ ಮಹಿಳೆಯರಿಗಾಗಿ ಮೀಸಲಿದ್ದ ರೈಲ್ವೆ ಬೋಗಿಯಲ್ಲಿ ಬೆಂಗಳೂರಿನತ್ತ ಹೊರಟಿದ್ದರು. ಮಹಿಳೆಯರಿಗೆ ಪ್ರತ್ಯೇಕ ಇರುವ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದರು. ಜೊತೆಗೆ ಸಹೋದರ […]

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಅನುಮಾನಾಸ್ಪದವಾಗಿ ಮೃತ್ಯು!! Read More »

ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ!

ಕಡಬ: ರಿಕ್ಷಾವೊಂದು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಸಮೀಪದ ಜೋಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಕುಂತೂರಿನಿಂದ ಆಲಂಕಾರು ಕಡೆಗೆ ಬರುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ! Read More »

ರೈಲು  ಡಿಕ್ಕಿ : ಇಬ್ಬರು ಮೃತ್ಯು

ಕಾಸರಗೋಡು: ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಪಳ್ಳಂ ರೈಲ್ವೇ ಸೇತುವೆ ಬಳಿ ಇಂದು ಮುಂಜಾನೆ ನಡೆದಿದೆ. 20 ರಿಂದ 25 ವರ್ಷದೊಳಗಿನ ಇಬ್ಬರು ಯುವಕರು ಮೃತಪಟ್ಟಿದ್ದು, ಮೃತರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಮುಂಜಾನೆ ಸುಮಾರು 5.30 ರ ಹೊತ್ತಿಗೆ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ದೂರಿನದಂತೆ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರೈಲು  ಡಿಕ್ಕಿ : ಇಬ್ಬರು ಮೃತ್ಯು Read More »

ಪ್ಲೈವುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ !!

ಬಂಟ್ವಾಳ: ಆಕಸ್ಮಿಕ ಬೆಂಕಿ ತಗುಲಿ ಫೈವುಡ್ ಫ್ಯಾಕ್ಟರಿ ಭಸ್ಮವಾಗಿ 2 ಲಕ್ಷ ರೂ. ನಷ್ಟ ಉಂಟಾದ ಘಟನೆ ಸಜೀಪ ಸಮೀಪದ ಕೋಟೆಕಣಿಯಲ್ಲಿ ನಡೆದಿದೆ. ಶಬೀರ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ರಾಶಿ ಹಾಕಿದ್ದ ಮರದ ಅವಶೇಷದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಸಿದ ತಕ್ಷಣ ಕಾರ್ಯಾಚರಣೆ ನಡೆಸಿದ ಪಾಂಡೇಶ್ವರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜ, ಬಂಟ್ವಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಚಂದ್ರಕಾಂತ, ಪುರುಷೋತ್ತಮ, ರಾಜೇಶ್ ಶೆಟ್ಟಿ, ಕಿರಣ್ ಕುಮಾ‌ರ್, ರುಕ್ಕಯ್ಯ ಅಮೀನ್, ಕೆ.ಸುರೇಂದ್ರ, ಭಾಗವಹಿಸಿದ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಪ್ಲೈವುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ !! Read More »

ಪೋಳ್ಯದಲ್ಲಿ ಅಪಘಾತ: ಶಿಕ್ಷಕಿ ಅನಿತಾ ಮೃತ್ಯು!

ಪುತ್ತೂರು: ಮುರ ಸಮೀಪದ ಪೋಳ್ಯದಲ್ಲಿ ನಡೆದ ಅಪಘಾತದಲ್ಲಿ ಶಿಕ್ಷಕಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಅನಿತಾ ಎಂದು ಗುರುತಿಸಿದ್ದು, ನೇರಳಕಟ್ಟೆ ಶಾಲಾ ಶಿಕ್ಷಕಿ ಎಂದು ಹೇಳಲಾಗಿದೆ. ದ್ವಿಚಕ್ರ ವಾಹನದಲ್ಲಿ ಪತಿ ಹಾಗೂ ತನ್ನ ಮಗುವಿನೊಂದಿಗೆ ಸಂಚರಿಸುತ್ತಿದ್ದ ಅನಿತಾ ಅವರು, ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪತಿ ಸುರೇಶ್ ಕುಲಾಲ್ ಹಾಗೂ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಪುತ್ತೂರು ನಗರ

ಪೋಳ್ಯದಲ್ಲಿ ಅಪಘಾತ: ಶಿಕ್ಷಕಿ ಅನಿತಾ ಮೃತ್ಯು! Read More »

ಕಾರು ಡಿಕ್ಕಿ, ಹುಲಿ ಸಾವು

ಮೈಸೂರು: ಮೈಸೂರು – ನಂಜನಗೂಡು ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ಹುಲಿಗೆ ಕಾರು ಢಿಕ್ಕಿ ಹೊಡೆದು, ಹುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸಾವನ್ನಪ್ಪಿದ ಹುಲಿಯ ವಯಸ್ಸು ಸುಮಾರು ಒಂದೂವರೆ ವರ್ಷ ಎಂದು ಹೇಳಲಾಗಿದ್ದು, ಅರಣ್ಯಾಧಿಕಾರಿಗಳು ಹುಲಿಯ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ಮೈಸೂರಿನಿಂದ ನಂಜನಗೂಡು ಕಡೆಗೆ ಸಂಚರಿಸುವ ವೇಳೆ ಒಂದು ಬದಿಯಿಂದ ಮತ್ತೊಂದು ಬದಿಗೆ ಹುಲಿ ದಾಟುತ್ತಿತ್ತು. ಈ ಸಂದರ್ಭ

ಕಾರು ಡಿಕ್ಕಿ, ಹುಲಿ ಸಾವು Read More »

ಶಾಲಾ ಬಸ್ – ಟ್ರಾಕ್ಟರ್ ನಡುವೆ ಭೀಕರ ಅಪಘಾತ… ನಾಲ್ವರು ಮಕ್ಕಳು ದುರ್ಮರಣ

ಟ್ರಾಕ್ಟರ್ ಮತ್ತು ಶಾಲಾ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಶಾಲಾ ಮಕ್ಕಳು ಮೃತಪಟ್ಟು ಸುಮಾರು ಎಂಟು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಆಲಗೂರು ಗ್ರಾಮದ ಸಮೀಪ ಸಂಭವಿಸಿದೆ. ಮೃತರನ್ನು ಗೋವಿಂದ ಜಂಬಗಿ(13), ಸಾಗರ ಕಡಕೋಳ(17), ಶ್ವೇತಾ ಪಾಟಿಲ್ (16), ಬಸವರಾಜ ಕೊಟಗಿ(17) ಎನ್ನಲಾಗಿದೆ. ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಮುಗಿಸಿ ತಡರಾತ್ರಿ ೧೨ ಗಂಟೆಗೆ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಆಲಗೂರು ಕಡೆಯಿಂದ ಕವಟಗಿ ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ವೇಳೆ ಟ್ರ್ಯಾಕ್ಟರ್ ಗೆ ಡಿಕ್ಕಿ

ಶಾಲಾ ಬಸ್ – ಟ್ರಾಕ್ಟರ್ ನಡುವೆ ಭೀಕರ ಅಪಘಾತ… ನಾಲ್ವರು ಮಕ್ಕಳು ದುರ್ಮರಣ Read More »

ಬಂಟ್ವಾಳ: ಗುಡ್ಡದಲ್ಲಿ ಪತಿ-ಪತ್ನಿ ಸಜೀಹ ದಹನ!!

ಬಂಟ್ವಾಳ: ಗುಡ್ಡವೊಂದರಲ್ಲಿ ಹುಲ್ಲುಗಾವಲಿಗೆ ಬೆಂಕಿ ಕೊಡಲು ಹೋದ ಪತಿ ಪತ್ನಿ ಇಬ್ಬರೂ ಸಜೀಹ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡು ಪದವು ಎಂಬಲ್ಲಿ ಜ.28ರ ಭಾನುವಾರ ಮಧಾಹ್ನ ವೇಳೆ ಸಂಭವಿಸಿದೆ. ಲೊರೆಟ್ಟೊಪದವು ತುಂಡುಪದವು ನಿವಾಸಿ, ಕ್ರಿಸ್ಟಿನ್ ಕಾರ್ಲೋ(51) ಹಾಗೂ ಗಿಲ್ಬರ್ಟ್ ಕಾರ್ಲೊ (65) ಮೃತಪಟ್ಟವರು. ಇವರ ಮನೆ ಸಮೀಪದಲ್ಲಿರುವ ಗುಡ್ಡದಲ್ಲಿರುವ ಮುಳಿಹುಲ್ಲು ತೆಗೆಯುವ ಉದ್ದೇಶದಿಂದ ಅದಕ್ಕೆ ಬೆಂಕಿ ನೀಡಿದ್ದರು. ಮಧ್ಯಾಹ್ನ ಅಗಿದ್ದ ಕಾರಣ ಬೆಂಕಿಯ ಜ್ವಾಲೆ ಇವರಿಗೆ ಹತ್ತಿಕೊಂಡಿರಬೇಕು ಎಂದು ಹೇಳಲಾಗಿದೆ. ಬಂಟ್ವಾಳ ನಗರ

ಬಂಟ್ವಾಳ: ಗುಡ್ಡದಲ್ಲಿ ಪತಿ-ಪತ್ನಿ ಸಜೀಹ ದಹನ!! Read More »

ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಶಾಲಾ ಬಸ್ !!

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸು ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿಯ ರಾಮನಗರದಲ್ಲಿ ಇಂದು ನಡೆದಿದೆ. ಉಪ್ಪಿನಂಗಡಿ ಹಳೆಗೇಟು ಸಮೀಪದ ಅರಫಾ ಶಾಲಾ ಬಸ್ ಹಿರೇಬಂಡಾಡಿ ಕಡೆಯಿಂದ ಮಕ್ಕಳನ್ನು ಕರೆದುಕೊಂಡು ಬರುವ ಸಂದರ್ಭ ಈ ಘಟನೆ ನಡೆದಿದೆ. ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಶಾಲಾ ಬಸ್ !! Read More »

ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ

ಪುತ್ತೂರು: ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಕಾಡಾನೆ ಪತ್ಯಕ್ಷಗೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಕೋರಿಕ್ಕಾರು ಗಣೇಶ್ ಭಂಡಾರಿ ಎಂಬವರ ಜಮೀನಿನಲ್ಲಿ ಕಾಡಾನೆ ಬಂದಿರುವುದನ್ನು ನೋಡಿರುವುದಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್‍. ತಿಳಿಸಿದ್ದಾರೆ. ಈ ಭಾಗದ ಜನರು ಈ ಕುರಿತು ಜಾಗೃತರಾಗಿರುವಂತೆ ಅವರು ತಿಳಿಸಿದ್ದಾರೆ.

ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ Read More »

error: Content is protected !!
Scroll to Top