ಅಪಘಾತ

ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಪುತ್ತೂರು: ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅರಿಯಡ್ಕ ದಲ್ಲಿ ನಡೆದಿದೆ. ಅರಿಯಡ್ಕದ ದಿ.ಅಣ್ಣಯ್ಯ ನಾಯ್ಕರ ಪುತ್ರ ಕೃಷ್ಣಪ್ಪ (55) ಮೃತಪಟ್ಟವರು. ಮನೆಯ ಹತ್ತಿರದ ತೋಟದಲ್ಲಿ ಮರವೊಂದರ ಗೆಲ್ಲು ಕಡಿಯುತ್ತಿರುವ ಸಂದರ್ಭ ಮರದಿಂದ ಬಿದ್ದು ಗಾಯಗೊಂಡಿದ್ದರು. ಬಳಿಕ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಮೃತರು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮರದಿಂದ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ | ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಮೃತ್ಯು

ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಂತೂರಿನಲ್ಲಿ ನಡೆದಿದೆ. ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಅವರ ಮೊಮ್ಮಗ ಶಮಿತ್ ಶೆಟ್ಟಿ (29) ಮೃತಪಟ್ಟವರು. ಶಮಿತ್ ನಿನ್ನೆ ರಾತ್ರಿ ಮಂಗಳೂರಿನ ಸ್ನೇಹಿತನ ಮನೆಯಲ್ಲಿ ದೈವದ ಕೋಲವೊಂದರಲ್ಲಿ ಪಾಲ್ಗೊಂಡು ತೊಕ್ಕೊಟ್ಟಿನ ಮನೆಗೆ ಕಾರಿನಲ್ಲಿ ಹಿಂತಿರುಗುತಿದ್ದಾಗ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಡಿವೈಡರ್‍ ಮೇಲೆ ಹಾಕಿದ್ದ ಕಬ್ಬಿಣದ ತಡೆಬೇಲಿ

ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ | ಬಿಜೆಪಿ ಹಿರಿಯ ನಾಯಕಿ ಲಲಿತಾ ಸುಂದರ್ ಮೊಮ್ಮಗ ಮೃತ್ಯು Read More »

ಸುಟ್ಟು ಕರಕಲಾದ ಕಾರಿನಲ್ಲಿ ಬೆಳ್ತಂಗಡಿ ಮೂಲದ ಮೂವರ ಮೃತದೇಹ ಪತ್ತೆ !

ತುಮಕೂರು: ಸುಟ್ಟುಹೋದ ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾದ ಘಟನೆ ತುಮಕೂರಿನಲ್ಲಿ ಕೆರೆಯೊಂದರ ಬಳಿ ಪತ್ತೆಯಾಗಿದೆ. ಬೆಳ್ತಂಡಗಡಿ ತಾಲೂಕಿನ ಟಿ.ಬಿ.ಕ್ರಾಸ್ ಬಳಿಯ ನಿವಾಸಿಗಳಾದ ಆಟೋ ಚಾಲಕ ಸಾಹುಲ್ (45), ಮದ್ದಡ್ಕ ನಿವಾಸಿ ಇಸಾಕ್‍ (56) ಹಾಗೂ ಶಿರ್ಲಾಲ್‍ ನಿವಾಸಿ ಇಮ್ತಿಯಾಝ್ (34) ಎಂಬವರ ಮೃತದೇಹ ಎಂದು ಗುರುತಿಸಲಾಗಿದೆ. ಈ ಮೂವರು ತುಮಕೂರು ಕಡೆಗೆ ಯಾಕೆ ತೆರಳಿದ್ದಾರೆ ಎಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಸುಟ್ಟು ಕರಕಲಾದ ಕಾರಿನಲ್ಲಿ ಬೆಳ್ತಂಗಡಿ ಮೂಲದ ಮೂವರ ಮೃತದೇಹ ಪತ್ತೆ ! Read More »

ಟೆಂಪೋ- ಕಾರು ಅಪಘಾತ | ವಾಹನಗಳು ಜಖಂ

ಪುತ್ತೂರು: ಕಾರು ಹಾಗೂ ಟೆಂಪೋ ಡಿಕ್ಕಿ ಹೊಡೆದುಕೊಂಡ ಘಟನೆ ಕೋಡಿಂಬಾಡಿಯ ಅರ್ಬಿಯಲ್ಲಿ ಇಂದು ನಡೆದಿದೆ. ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರು ಹಾಗೂ ಪುತ್ತೂರು ಕಡೆಗೆ ಬರುತ್ತಿದ್ದ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿದ್ದು, ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಟೆಂಪೋ- ಕಾರು ಅಪಘಾತ | ವಾಹನಗಳು ಜಖಂ Read More »

ಆಟೋ ರಿಕ್ಷಾ-ಬೈಕ್ ಡಿಕ್ಕಿ | ಬೈಕ್ ಸವಾರನಿಗೆ ಗಾಯ

ಪುತ್ತೂರು: ಆಟೋ ರಿಕ್ಷಾ ಬೈಕ್‍ ಗೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಇಂದು ಮುಂಜಾನೆ  ಜಿ ಎಲ್ ಆಚಾರ್ಯ ಬಳಿ ನಡೆದಿದೆ. ಅಪಘಾತದಿಂದ ಪತ್ರಿಕಾ ವಿತರಕ ಬೈಕ್ ಸವಾರ ರಮೇಶ್ ಅವರ ಕಾಲಿಗೆ ಗಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಆಟೋ ರಿಕ್ಷಾ-ಬೈಕ್ ಡಿಕ್ಕಿ | ಬೈಕ್ ಸವಾರನಿಗೆ ಗಾಯ Read More »

ಕಾರು-ಬೈಕ್ ಅಪಘಾತ : ಬೈಕ್ ಸವಾರ ಗಂಭೀರ

ವಿಟ್ಲ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಬದನಾಜೆಯಲ್ಲಿ ಭಾನುವಾರ ನಡೆದಿದೆ. ವಿಟ್ಲ ಸಮೀಪದ ಬದನಾಜೆ ಎಂಬಲ್ಲಿ ಆಲ್ಟೋ ಕಾರು ಹಾಗೂ ಎಬ್ಬಿ ಬೈಕ್ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.

ಕಾರು-ಬೈಕ್ ಅಪಘಾತ : ಬೈಕ್ ಸವಾರ ಗಂಭೀರ Read More »

ಕಾರು-ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರನಿಗೆ ಗಾಯ

ಪುತ್ತೂರು: ನೆಹರೂನಗರದ ಮಾಸ್ಟರ್ ಪ್ಲಾನರಿ ಬಳಿ ಪೋರ್ಡ್‍ ಕಾರು ಹಾಗೂ ಆ್ಯಕ್ಸಿಸ್ ಡಿಕ್ಕಿ ಹೊಡೆದುಕೊಂಡು ಆ್ಯಕ್ಸಿಸ್ ಸವಾರ ಗಾಯಗೊಂಡ ಘಟನೆ ಇದೀಗ ನಡೆದಿದೆ. ಗಾಯಗೊಂಡ ಆ್ಯಕ್ಸಿಸ್ ಸವಾರನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ಟರ್ ಪ್ಲಾನರಿ ಎದುರು ಪೋರ್ಡ್ ಕಾರು ಆಕ್ಸಿಸ್‍ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನರೀಕ್ಷಿಸಲಾಗುತ್ತಿದೆ. ಈ ಪ್ರದೇಶ ಅಪಘಾತ ವಲಯಗಳಾಗಿದ್ದು, ಇಲ್ಲಿ ಅಪಘಾತಗಳು ಜಾಸ್ತಿಯಾಗುತ್ತಿವೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಆಡಳಿತ ಅಳವಡಿಸಬೇಕಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಕಾರು-ಸ್ಕೂಟರ್ ಡಿಕ್ಕಿ : ಸ್ಕೂಟರ್ ಸವಾರನಿಗೆ ಗಾಯ Read More »

ಮೂರು ವರ್ಷದ ಮಗುವಿಗೆ ಆಟೋ ಡಿಕ್ಕಿ : ಮಗು ಮೃತ್ಯು

ಬೆಳ್ತಂಗಡಿ: ಮೂರು ವರ್ಷ ಮಗುವೊಂದು ಮನೆಯಿಂದ ರಸ್ತೆಗೆ ಬಂದಾಗ ಆಟೋ ರಿಕ್ಷಾ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಣಂದೂರಿನ ಪಣಕಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಹಾಗೂ ಉಷಾ ದಂಪತಿ ಪುತ್ರ ಕೌಶಿಕ್‍ ಮೃತಪಟ್ಟ ಮಗು. ರಸ್ತೆ ಬದಿಯಲ್ಲೇ ಮನೆಯಿದ್ದು, ಯಾರೂ ಇಲ್ಲದ ವೇಳೆ ಮಗು ರಸ್ತೆಗೆ ಓಡಿಬಂದಿದೆ. ಈ ಸಂದರ್ಭ ಬಂದ ಆಟೋ ರಿಕ್ಷಾ ಮಗುವಿಗೆ ಡಿಕ್ಕಿ ಹೊಡದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಬೆಳ್ತಂಗಡಿ

ಮೂರು ವರ್ಷದ ಮಗುವಿಗೆ ಆಟೋ ಡಿಕ್ಕಿ : ಮಗು ಮೃತ್ಯು Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ !

ಉಪ್ಪಿನಂಗಡಿ: ಗೋಳಿತೊಟ್ಟು ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇಂದು ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಪಲ್ಟಿಯಾಗಿದ್ದು, ಕಾರು ಚಾಲಕ ಸಹಿತ ಮೂರು ಮಂದಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ! Read More »

ಎರಡು ಕಾರುಗಳ ನಡುವೆ ಡಿಕ್ಕಿ | ಹಲವರಿಗೆ ಗಾಯ

ಪುತ್ತೂರು: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಸಂಟ್ಯಾರಿನಲ್ಲಿ ಇಂದು ನಡೆದಿದೆ. ಪೋರ್ಡ್‍ ಹಾಗೂ ಇನ್ನೋವಾ ಕಾರು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇನ್ನೋವಾ ಕಾರು ಚಾಲಕ ಸಹಿತ ಹಲವರಿಗೆ ಗಾಯಗಳಾಗಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಪರಿಣಾಮ ಟ್ರಾಫಿಕ್‍ ಜ್ಯಾಮ್‍ ನಿಂದಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಎರಡು ಕಾರುಗಳ ನಡುವೆ ಡಿಕ್ಕಿ | ಹಲವರಿಗೆ ಗಾಯ Read More »

error: Content is protected !!
Scroll to Top