ಐಪಿಎಲ್ ಫೈನಲ್ ನಲ್ಲಿ ಆರ್ ಸಿಬಿ ಚಾಂಪಿಯನ್ | ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಭಾರೀ ಜನಸ್ತೋಮ | ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಹಲವರು ಕಾಲ್ತುಳಿತಕ್ಕೆ ಬಲಿ
ಬೆಂಗಳೂರು: 18ನೇ ಐಪಿಎಲ್ ಫೈನಲ್ ನಲ್ಲಿ ಆರ್ ಸಿಬಿ ಚಾಂಪಿಯನ್ ಆಗಿದ್ದು, ಈ ಸಂಬಂಧ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದ್ದಂತೆ ಭಾರೀ ಜನಸ್ತೋಮ ನೆರೆದಿದ್ದು, ಈ ಸಂದರ್ಭ ಕಾಲ್ತುಳಿತಕ್ಕೆ ಹಲವರು ಬಲಿಯಾಗಿದ್ದಾರೆ. ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದಾರೆ. ನೂಕುನುಗ್ಗಾಟದಲ್ಲಿ ಕಾಲ್ತುಳಿತಕ್ಕೆ 15ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರನ್ನು ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ಮಂದಿ ಅಭಿಮಾನಿಗಳು […]










