ಅಪಘಾತ

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದ ಕಾರು ಪಲ್ಟಿ

ಮಂಗಳೂರು : ವೇಗವಾಗಿ ಚಲಿಸುತ್ತಿದ್ದ ಬಲೆನೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ ಮೇಲೆ ಏರಿ ಪಲ್ಟಿಯಾದ ಘಟನೆ ಮಂಗಳೂರು ಬೆಂದೂರ್ ವೆಲ್ ನ ಬಲ್ಮಠ ಬಳಿ ತಡ ರಾತ್ರಿ ಸಂಭವಿಸಿದೆ. ರಾತ್ರಿ ವೇಳೆ ಖಾಲಿ ಇರುವ ರಸ್ತೆಯಲ್ಲಿ ಅಪಘಾತವಾಗಿದ್ದರಿಂದ,  ಕಾರು ಡಿವೈಡರ್ ಮೇಲೆ ಏರಿ ವಿರುದ್ಧ ದಿಕ್ಕಿನ ರಸ್ತೆಗೆ ಬಿದ್ದರೂ  ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರ  ಮಾಹಿತಿ  ತಿಳಿಯಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿದ ಕಾರು ಪಲ್ಟಿ Read More »

ಬೈಕ್‍ ಗೆ ಪಿಕಪ್‍ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಲ್ಲಿ ದ್ವಿಚಕ್ರವಾಹನಕ್ಕೆ ಪಿಕಪ್ ಡಿಕ್ಕಿಹೊಡೆದು ಪರಾರಿಯಾಗಿದ್ದು ಪರಿಣಾಮ ದ್ಚಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಘಟನೆ ಇಂದು ಸಂಜೆ ನಡೆದಿದೆ. ಪಂಜ ಕೂತ್ಕುಂಜ ಗ್ರಾಮದ ಸಂಪ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಭಟ್ ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ಕಾರ್ಯ ನಿಮಿತ್ತ ಕೃಷ್ಣ ಭಟ್ ಅವರು ಪಂಜದಿಂದ ಪುತ್ತೂರಿಗೆ ಬೈಕ್ ನಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದಿದೆ. ಈ

ಬೈಕ್‍ ಗೆ ಪಿಕಪ್‍ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ನಂದಿನಿ ಸ್ಟಾಲ್‍ಗೆ ಡಿಕ್ಕಿ ಹೊಡೆದು ಕಂಟೈನರ್ ಪಲ್ಟಿ

ಸುಳ್ಯ : ನಂದಿನಿ ಸ್ಟಾಲ್‍ ಗೆ ಡಿಕ್ಕಿ ಹೊಡೆದು ಕಂಟೈನರ್‍ ಪಲ್ಟಿಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯದ ಮುಖ್ಯ ರಸ್ತೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಎದುರು ಬ್ಯಾಂಕ್ ಆಫ್ ಬರೋಡಾದ ಪಕ್ಕದಲ್ಲಿರುವ ನಂದಿನಿ ಸ್ಟಾಲ್ ಗೆ ಕಂಟೈನರ್ ಡಿಕ್ಕಿ ಹೊಡೆದು ಕಟ್ಟಡದ ಒಂದು ಭಾಗ ಸಂಪೂರ್ಣ ಹಾನಿಗೊಂಡ ಘಟನೆ ಇಂದು ಮುಂಜಾನೆ 5.30ರ ಹೊತ್ತಿಗೆ ನಡೆದಿದೆ. ಮಂಡ್ಯದಿಂದ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನ ಪುಟ್ ಪಾತ್ ಗೆ

ನಂದಿನಿ ಸ್ಟಾಲ್‍ಗೆ ಡಿಕ್ಕಿ ಹೊಡೆದು ಕಂಟೈನರ್ ಪಲ್ಟಿ Read More »

ಕಾರು ಡಿವೈಡರ್‌ಗೆ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು

ಮಂಜೇಶ್ವರ: ಕಾಸರಗೋಡಿನ ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊಸಂಗಡಿ ಹತ್ತಿರ ವಾಮಂಜೂರು ಚೆಕ್​ಪೋಸ್ಟ್ ಬಳಿ ಸೋಮವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜನಾರ್ದನ, ಅವರ ಪುತ್ರ ವರುಣ್ ಹಾಗೂ ಕಿಶನ್ ಮೃತ ದುರ್ದೈವಿಗಳು. ರತ್ನಾ ಎಂಬವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಉಪ್ಪಳದ ಪೈವಳಿಕೆ ಬಾಯಿಕಟ್ಟೆ ನಿವಾಸಿಗಳು ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಜೇಶ್ವರ ಪೊಲೀಸ್

ಕಾರು ಡಿವೈಡರ್‌ಗೆ ಡಿಕ್ಕಿ : ಮೂವರು ಸ್ಥಳದಲ್ಲೇ ಸಾವು Read More »

ಆಟೋ ರಿಕ್ಷಾ-ಸರಕಾರಿ ಬಸ್ ಅಪಘಾತ | ಇಬ್ಬರು ಮೃತ್ಯು, ಚಾಲಕನಿಗೆ ಗಂಭೀರ ಗಾಯ

ಪುತ್ತೂರು: ಕೆಎಸ್ ಆರ್ ಟಿಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ  ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟು, ಚಾಲಕ ಗಂಭೀರಗೊಂಡ ದಾರುಣ ಘಟನೆ ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿನ ಭಾನುವಾರ ಸಂಜೆ ನಡೆದಿದೆ.  ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿಗೆ ಪುತ್ತೂರು ಕಡೆಯಿಂದ ಕಬಕ ಕಡೆಗೆ ಕೆದಂಬಾಡಿ ಗ್ರಾಮದ ಕೆದಂಬಾಡಿ ಗುಡ್ಡೆ ಮಹಮ್ಮದ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ರಿಕ್ಷಾ

ಆಟೋ ರಿಕ್ಷಾ-ಸರಕಾರಿ ಬಸ್ ಅಪಘಾತ | ಇಬ್ಬರು ಮೃತ್ಯು, ಚಾಲಕನಿಗೆ ಗಂಭೀರ ಗಾಯ Read More »

ಆಟೋ ರಿಕ್ಷಾ-ಬಸ್ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ

ಪುತ್ತೂರು: ಬಸ್‍ ಹಾಗೂ ರಿಕ್ಷಾ ಡಿಕ್ಕಿ ಹೊಡೆದುಕೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಮಂಜಲ್ಪಡ್ಪುವಿನಲ್ಲಿ ನಡೆದಿದೆ. ಅಪಘಾತದಿಂದ ಆಟೋ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾದಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಟೋ ರಿಕ್ಷಾ-ಬಸ್ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ Read More »

ಬಿಜೆಪಿ ರಾಜ್ಯಾಧ್ಯಕ್ಷ  ವಿಜೇಯೇಂದ್ರ ಕಾರು ಅಪಘಾತ | ಪ್ರಾಣಪಾಯದಿಂದ ಪಾರಾದ ಕಾರು ಚಾಲಕ

ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಸೇರಿದ ಕಾರು ಅಪಘಾತಕ್ಕೀಡಾಗಿದ್ದು ಚಿಕ್ಕಮಗಳೂರು ಬಳಿ ಲಕ್ಯ ಕ್ರಾಸ್ ನಲ್ಲಿ ಲಾರಿ ಡಿಕ್ಕಿಯಾಗಿದೆ ಎನ್ನಲಾಗಿದೆ. ವಿಜಯೇಂದ್ರ ಅವರು ಫೆಬ್ರವರಿ 28ರಂದು ಚಿಕ್ಕಮಗಳೂರಿನಲ್ಲಿ ಬಸವ ತತ್ವ ಕಾರ್ಯಕ್ರಮ ಮುಗಿಸಿ ವಾಪಸ್ ಚಿಕ್ಕಮಗಳೂರು ನಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನು ಅದೃಷ್ಟವಶಾತ್ ವಿಜಯೇಂದ್ರ ಅವರು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರಿಂದ ಬಚಾವ್ ಆಗಿದ್ದಾರೆ. ವಿಜಯೇಂದ್ರಗೆ ಸೇರಿದ ಕಾರಿನ ಚಾಲಕ ಪ್ರಾಣಾಪಾಯದಿಂದ

ಬಿಜೆಪಿ ರಾಜ್ಯಾಧ್ಯಕ್ಷ  ವಿಜೇಯೇಂದ್ರ ಕಾರು ಅಪಘಾತ | ಪ್ರಾಣಪಾಯದಿಂದ ಪಾರಾದ ಕಾರು ಚಾಲಕ Read More »

ಬ್ರಹ್ಮಾವರ ಎಸ್‍.ಎಲ್‍.ಆರ್.ಎಮ್‍. ಘಟಕಕ್ಕೆ ಬೆಂಕಿ | ಸಂಪೂರ್ಣ ಭಸ್ಮ

ಬ್ರಹ್ಮಾವರ: ಬ್ರಹ್ಮಾವರ ಮಾರ್ಕೆಟ್ ಬಳಿಯಲ್ಲಿರುವ ಎಸ್.ಎಲ್.ಆರ್.ಎಮ್ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ  ಸುಮಾರು 1 ಗಂಟೆ ಹೊತ್ತಿಗೆ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ದಳದ ಪ್ರಯತ್ನದ ನಡುವೆಯೂ ಘಟಕ ಸಂಪೂರ್ಣ ಹೊತ್ತಿಕೊಂಡಿದೆ. ಘಟಕದ ಒಳಗೆ ನಿಲ್ಲಿಸಿದ ಮೂರು ಎಎಸ್ ಗಾಡಿಗಳು, ಒಂದು ಪಿಕಪ್, ಲಕ್ಷಾಂತರ ಮೌಲ್ಯದ ಕಸ, ಎರಡು ಬೇಲಿಂಗ್ ಮೆಶಿನ್, ಒಂದು ಬರ್ನಿಂಗ್ ಮೆಶಿನ್ , 6

ಬ್ರಹ್ಮಾವರ ಎಸ್‍.ಎಲ್‍.ಆರ್.ಎಮ್‍. ಘಟಕಕ್ಕೆ ಬೆಂಕಿ | ಸಂಪೂರ್ಣ ಭಸ್ಮ Read More »

ಪುತ್ತೂರು : ಹೆಜ್ಜೇನು ದಾಳಿ | ವಿದ್ಯಾರ್ಥಿಗಳು ಸಹಿತ 15ಕ್ಕು ಹೆಚ್ಚು ಮಂದಿಗೆ ಗಾಯ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎಪಿಎಂಸಿಯ ಸಂಪರ್ಕ ರಸ್ತೆಯಲ್ಲಿ ಅದರ್ಶ ಆಸ್ಪತ್ರೆಯ ಎದುರು ಹೆಚ್ಚೇನು ದಾಳಿ ನಡೆಸಿರುವ ಘಟನೆ ಇಂದು ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ. ಹೆಚ್ಚೇನು ದಾಳಿಯಿಂದ ಸುಮಾರು 10 ರಿದ 15 ಜನರಿಗೆ ಗಾಯಗಳಾಗಿದ್ದು, ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡವರನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ಹೊರಟ ಕೆಲವರಿಗೆ  ಹೆಚ್ಚೇನು  ದಾಳಿ ನಡೆಸಿದೆ. ಅಲ್ಲದೇ ಹೆಜ್ಜೆನು ವ್ಯಕ್ತಿಯೋರ್ವರ ಮೇಲೆ ಸುಮಾರು 20

ಪುತ್ತೂರು : ಹೆಜ್ಜೇನು ದಾಳಿ | ವಿದ್ಯಾರ್ಥಿಗಳು ಸಹಿತ 15ಕ್ಕು ಹೆಚ್ಚು ಮಂದಿಗೆ ಗಾಯ Read More »

ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಗೆ ಸ್ಕೂಟರ್ ಡಿಕ್ಕಿ : ಮೃತ್ಯು

ಉಪ್ಪಿನಂಗಡಿ: ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಕೆ.ಸದಾರಾಮ ಎಂಬವರ ಪತ್ನಿ ಸರಸ್ವತಿ (50) ಮೃತಪಟ್ಟವರು. ಸೋಮವಾರ ಬೆಳಗ್ಗೆ ಎಲೈಸಿ ಕಚೇರಿಯಲ್ಲಿ ಕೆಲಸ ಮುಗಿಸಿ, ಉಪ್ಪಿನಂಗಡಿಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಕೂಡಲೇ ಅವರನ್ನು ಸಮೀಪದ ತುಂಬೆಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾತ್ರಿ ವೇಳೆ ಚಿಕಿತ್ಸೆಗೆ

ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಗೆ ಸ್ಕೂಟರ್ ಡಿಕ್ಕಿ : ಮೃತ್ಯು Read More »

error: Content is protected !!
Scroll to Top