ಅಪಘಾತ

ಚಾಲಕನ ನಿಯಂತ್ರಣ ತಪ್ಪಿದ ಕಾರು | ಹೋಟೆಲ್‌ ಗೆ  ಡಿಕ್ಕಿ

ಸಂಪಾಜೆ : ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ದಂಪತಿಗೆ ಗಂಭೀರ ಗಾಯಗೊಂಡು, ಸುಳ್ಯದ ಆಸ್ಪತ್ರೆಗೆ ದಾಖಲಾದ ಘಟನೆ ದ.ಕ. ಸಂಪಾಜೆ ಎಂಬಲ್ಲಿ ಮೇ.3ರ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ವಿಟ್ಲದ ಅಡ್ಯನಡ್ಕದ ದಂಪತಿಗಳು ಕಾರಿನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದ ವೇಳೆ ಸಂಪಾಜೆಯ ಹೈವೆ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೋಟೆಲಿನ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಹಾಗೂ ಮುಂಭಾಗದಲ್ಲಿ ಕುಳಿತಿದ್ದ […]

ಚಾಲಕನ ನಿಯಂತ್ರಣ ತಪ್ಪಿದ ಕಾರು | ಹೋಟೆಲ್‌ ಗೆ  ಡಿಕ್ಕಿ Read More »

ಬೈಕ್ ಡಿಕ್ಕಿ : ವೃದ್ಧ ಗಂಭೀರ ಗಾಯ

ಬಂಟ್ವಾಳ : ಬಸ್ಸಿಗಾಗಿ ಕಾಯುತ್ತಿದ್ದ ವೃದ್ಧರೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ಸಂಭವಿಸಿದೆ. ಫರಂಗಿಪೇಟೆ ನಿವಾಸಿ ಶೇಖಬ್ಬ (71) ಗಾಯಗೊಂಡವರು. ಫರಂಗಿಪೇಟೆ ಜಂಕ್ಷನ್ನಿನಲ್ಲಿ ಬುಧವಾರ ಮಧ್ಯಾಹ್ನ ಬಸ್ಸಿಗಾಗಿ ಕಾಯುತ್ತಿರುವ ಸಂದರ್ಭ ಹೆದ್ದಾರಿಯಲ್ಲಿ ಅಕ್ಷಯ್ ನಾಯ್ಕ ಎಂಬವರು ಚಲಾಯಿಸಿಕೊಂಡು ಬಂದ ಬೈಕ್ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಶೇಖಬ್ಬ ಅವರನ್ನು ತಕ್ಷಣ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ : ವೃದ್ಧ ಗಂಭೀರ ಗಾಯ Read More »

ಬೈಕ್-ಕಾರು ಡಿಕ್ಕಿ : ಎರಡು ತುಂಡುಗಳಾದ ಬೈಕ್ !

ಬೆಳ್ತಂಗಡಿ: ಬೈಕ್‍ ಹಾಗೂ ಕಾರು ಡಿಕ್ಕಿ ಹೊಡೆದುಕೊಂಡ ಘಟನೆ ಬೆಳಾಲು ಉಜಿರೆ ರಸ್ತೆಯಲ್ಲಿರುವ ಮಾಚಾರು ಸಮೀಪ ಇಂದು ನಡೆದಿದೆ. ಅಪಘಾತದಲ್ಲಿ ಬೈಕ್ ಎರಡು ತುಂಡಾಗಿ ಬಿದ್ದಿದ್ದು, ಬೈಕಿನಲ್ಲಿದ್ದವರು ಪವಾಡಸದೃಶ್ಯವಾಗಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಅಪಘಾತದ ವೇಳೆ ಬೈಕ್ ಸವಾರ ಬೈಕಿನಿಂದ ಎಸೆಯಲ್ಪಟ್ಟಿದ್ದು ರಸ್ತೆಬದಿಗೆ ಬಿದ್ದಿದ್ದಾರೆ. ಆದರೆ ಯಾವುದೇ ಹೆಚ್ಚಿನ ಗಾಯಗಳಾಗಿಲ್ಲ. ಕಾರಿಗೂ ಹಾನಿಯಾಗಿದ್ದು ಕಾರಿನಲ್ಲಿದ್ದವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೈಕ್-ಕಾರು ಡಿಕ್ಕಿ : ಎರಡು ತುಂಡುಗಳಾದ ಬೈಕ್ ! Read More »

ಮರದ ಕೊಂಬೆ ನಡುವೆ ಸಿಲುಕಿ ವ್ಯಕ್ತಿ ಮೃತ್ಯು !

ಸುಳ್ಯ: ವ್ಯಕ್ತಿಯೊಬ್ಬರು ಮರ ಕಡಿಯುತ್ತಿದ್ದ ವೇಳೆ ಮರದ ಕೊಂಬೆಯ ನಡುವೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸುಳ್ಯದ ಕುರುಂಜಿಗುಡ್ಡೆಯಲ್ಲಿ ಇಂದು ನಡೆದಿದೆ. ಬೆಳ್ಯಪ್ಪ ನಾಯ್ಕ ಕೇರ್ಪಳ ಮನೆ ಮೃತಪಟ್ಟವರು. ಮರ ಕಡಿಯುತ್ತಿದ್ದ ವೇಳೆ ಕೊಂಬೆಗಳ ನಡುವೆ ಸಿಲುಕಿದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮರದ ಕೊಂಬೆ ನಡುವೆ ಸಿಲುಕಿ ವ್ಯಕ್ತಿ ಮೃತ್ಯು ! Read More »

ಪ್ಯಾರಾಗ್ಲೀಡಿಂಗ್‍ : ಶಿಕ್ಷಕಿ ಮೃತ್ಯು

ಥಾಯ್ಲೆಂಡ್: ಕೇರಳದ ಶಿಕ್ಷಕಿಯೊಬ್ಬರು ಪ್ಯಾರಾಗ್ಲೀಡಿಂಗ್‍ ಮಾಡುವಾಗ ಥಾಯ್ಲೆಂಡ್‌ನಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಚಿರಂಚಿರ ಸರಕಾರಿ ಯುಪಿ ಶಾಲೆಯ ಮುಖ್ಯ ಶಿಕ್ಷಕಿ ರಾಣಿ ಮ್ಯಾಥ್‍ ಮೃತಪಟ್ಟವರು. ರಾಣಿ ಮ್ಯಾಥ್ ಅವರ ಪತಿ ಕೂಡ ಥಾಯ್ಲೆಂಡ್‌ನಲ್ಲಿದ್ದಾರೆ. ಅವರು ರಜೆಯಲ್ಲಿ ಸುತ್ತಾಡಲು ಥಾಯ್ಲೆಂಡ್ ಗೆ ಹೋಗಿದ್ದರು.. ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರದ ನಂತರ ಮೃತದೇಹವನ್ನು ಮನೆಗೆ ತರಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಪ್ಯಾರಾಗ್ಲೀಡಿಂಗ್‍ : ಶಿಕ್ಷಕಿ ಮೃತ್ಯು Read More »

ಧರೆಗುರುಳಿದ ಬೃಹದಾಕಾರದ ಮರ; ಎರಡು ವಾಹನಗಳು ಜಖಂ

ಪುತ್ತೂರು: ಪುತ್ತೂರಿನ ಬೊಳ್ವಾರ್ ಹರಿಪ್ರಸಾದ್ ಹೊಟೇಲ್ ಬಳಿ ಬೃಹತ್ ಮಾವಿನ ಮರವೊಂದು ಉರುಳಿಬಿದ್ದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಮಾವಿನಮರ ಬಿದ್ದ ಕ್ಷಣದಲ್ಲೇ ಮಾವಿನ ಮಿಡಿಗಾಗಿ ಮುಗಿಬಿದ್ದಿದ್ದಾರೆ. ಬೃಹತ್ ಮರಬಿದ್ದ ಪರಿಣಾಮ ತಮ್ಮ ವಾಹನವನ್ನ ಹೊರತರಲು ಪರದಾಡಿದ ವಾಹನ ಮಾಲೀಕರು ಮರದ ಕೊಂಬೆಗಳನ್ನು ಕಡಿದು ತೆರವುಗೊಳಿಸುತ್ತಿದ್ದಾರೆ. ಮರ ಬೀಳುವ ಸಂದರ್ಭ ಯಾರೂ ಇಲ್ಲದ ಪರಿಣಾಮ ತಪ್ಪಿದ ಭಾರೀ ಅವಘಡ ತಪ್ಪಿದಂತಾಗಿದೆ.

ಧರೆಗುರುಳಿದ ಬೃಹದಾಕಾರದ ಮರ; ಎರಡು ವಾಹನಗಳು ಜಖಂ Read More »

ಬಸ್-ಆಟೋರಿಕ್ಷಾ ಡಿಕ್ಕಿ : ಆಟೋ ಚಾಲಕ ಮೃತ್ಯು

ಪುತ್ತೂರು : ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಇಂದು ಮುಂಜಾನೆ ಮುಕ್ರಂಪಾಡಿಯಲ್ಲಿ ನಡೆದಿದೆ. ಆಟೋ ರಿಕ್ಷಾ ಚಾಲಕ ಜೈಸನ್ (30) ಮೃತಪಟ್ಟವರು. ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ಹಾಗೂ ಎದುರಿನಿಂದ ಬರುತ್ತಿದ್ದ ರಿಕ್ಷಾ ಮಧ್ಯೆ ಡಿಕ್ಕಿ  ಸಂಭವಿಸಿದೆ. ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದು ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ

ಬಸ್-ಆಟೋರಿಕ್ಷಾ ಡಿಕ್ಕಿ : ಆಟೋ ಚಾಲಕ ಮೃತ್ಯು Read More »

ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು

ಧರ್ಮಸ್ಥಳ: ಬಸ್ಸಿನಡಿಗೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಕೆ ಎಸ್‌ ಆರ್‌ ಟಿ ಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಧರ್ಮಸ್ಥಳ ಬಸ್‌ ನಿಲ್ದಾಣದಲ್ಲಿ ಸುಬ್ರಹ್ಮಣ್ಯಕ್ಕೆ ಹೋಗುವ ಕೆ ಎಸ್‌ ಆರ್‌ ಟಿ ಸಿ ಬಸ್ ರಿವರ್ಸ್ ತೆಗೆಯುವ ವೇಳೆ ಮಹಿಳೆ ಆಕಸ್ಮಿಕವಾಗಿ ಟಯರ್‌ನಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಸೇರಿ 8 ಜನ ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದ ಧರ್ಮಸ್ಥಳಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿರುವ ಮಹಿಳೆ ಆಕಸ್ಮಿಕವಾಗಿ ಟಯರ್

ಬಸ್ಸಿನಡಿಗೆ ಸಿಲುಕಿ ಮಹಿಳೆ ಮೃತ್ಯು Read More »

ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು

ಸುಬ್ರಹ್ಮಣ್ಯ: ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಕೆಳಗೆ ಬಿದ್ದು ಬೆಂಗಳೂರಿನ ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಬೆಂಗಳೂರು ಸುಂಕದಕಟ್ಟೆಯ ಮಂಜುನಾಥ ಮೃತಪಟ್ಟವರು. ಮಂಜುನಾಥ ಅವರು ಪತ್ನಿ ಜೊತೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದು, ಬಸ್ಸು ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ತಲುಪುವಾಗ ಬಸ್ಸಿನ ಚಾಲಕ ನಿರ್ಲಕ್ಷತೆ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಬಸ್ಸಿನ ನಿರ್ವಾಹಕ ಬಸ್ಸಿನ ಬಾಗಿಲನ್ನು ಸರಿಯಾಗಿ ಹಾಕದೇ ಇದ್ದುದರಿಂದ ಮಂಜುನಾಥ ಅವರು ಬಸ್ಸಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸುಳ್ಯದ ಖಾಸಗಿ

ಬಸ್ಸಿನಿಂದ ಬಿದ್ದು ಪ್ರಯಾಣಿಕ ಮೃತ್ಯು Read More »

ಆಕ್ಸಿಜನ್ ಕೊರತೆ : ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು

ಕೇಪು: ಆಕ್ಸಿಜನ್ ಸಿಗದೆ ಬಾವಿಗೆ ರಿಂಗ್ ಹಾಕಲು ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ಇಂದು ನಡೆದಿದೆ. ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ (40) ಮತ್ತು ಮಲಾರ್ ನಿವಾಸಿ ಆಲಿ(24) ಮೃತಪಟ್ಟ ಕಾರ್ಮಿಕರು. ಸುಮಾರು 30 ಫೀಟ್ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ ಇಳಿದಿದ್ದ.

ಆಕ್ಸಿಜನ್ ಕೊರತೆ : ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತ್ಯು Read More »

error: Content is protected !!
Scroll to Top