ಅಂಬಲಪಾಡಿ ಅಗ್ನಿ ಅವಘಡ | ಮೃತಪಟ್ಟ ರಮಾನಂದ ಶೆಟ್ಟಿ ಅವರ ಪತ್ನಿಯೂ ಮೃತ್ಯು
ಉಡುಪಿ : ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಮೃತಪಟ್ಟಿದ್ದು, ಇದೀಗ ಗಂಭೀರ ಗಾಯಗೊಂಡಿದ್ದ ಅವರ ಪತ್ನಿಯೂ ಸಾವನ್ನಪ್ಪಿದ್ದಾರೆ. ಅಶ್ವಿನಿ (50) ಮೃತ ಪಟ್ಟವರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಅಶ್ವಿನಿ ಮೃತಪಟ್ಟಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಗಂಭಿರವಾಗಿ ಗಾಯಗೊಂಡಿದ್ದ ಅಶ್ವಿನಿ ಉಸಿರಾಟ ಹಾಗೂ ಶಾಸ್ವಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ಅವರಿಬ್ಬರ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.
ಅಂಬಲಪಾಡಿ ಅಗ್ನಿ ಅವಘಡ | ಮೃತಪಟ್ಟ ರಮಾನಂದ ಶೆಟ್ಟಿ ಅವರ ಪತ್ನಿಯೂ ಮೃತ್ಯು Read More »