ಅಪಘಾತ

ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಮೂವರು ಸಾವು

ದರ್ಶನಕ್ಕಾಗಿ ಭಕ್ತರು ಮುಗಿಬಿದ್ದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ನವದೆಹಲಿ: ಒಡಿಶಾದ ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥನ ರಥಯಾತ್ರೆಯ ಸಮಯದಲ್ಲಿ ಇಂದು ಮುಂಜಾನೆ ಕಾಲ್ತುಳಿತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. 10 ಜನರು ಗಾಯಗೊಂಡಿದ್ದು, ಈ ಪೈಕಿ 6 ಮಂದಿಯ ಸ್ಥಿತಿ ಚಿಂತಾಜನಕವಿದೆ ಎನ್ನಲಾಗಿದೆ.ಜಗನ್ನಾಥ, ಬಲರಾಮ ಮತ್ತು ಸುಭದ್ರ ದೇವಿಯ ವಿಗ್ರಹಗಳನ್ನು ಹೊತ್ತ ಮೂರು ರಥಗಳು ಜಗನ್ನಾಥ ದೇವಾಲಯದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಶ್ರೀ ಗುಂಡಿಚಾ ದೇವಾಲಯದ ಬಳಿ ಹಾದು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. […]

ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಮೂವರು ಸಾವು Read More »

ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್‍ ತಂತಿ ತಗುಲಿ ವ್ಯಕ್ತಿ ಮೃತ್ಯು

ನೆಲ್ಯಾಡಿ: ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್‍ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರೆಖ್ಯಾ ಗ್ರಾಮದ ಪರ್ಕಳ ಎಂಬಲ್ಲಿ ಶನಿವಾರ ನಡೆದಿದೆ. ಉಡೈರೆ ನಿವಾಸಿ ಕೃಷ್ಣಪ್ಪ ಕುಲಾಲ್ (49) ವಿದ್ಯುತ್‍ ಶಾಕ್‍ ನಿಂದ ಮೃತಪಟ್ಟವರು. ತೋಟದಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಿರುವ ಸಂದರ್ಭ ದೋಟಿಗೆ ಎಚ್‌ಟಿಐ ಲೈನ್‌ಗೆ ಸ್ಪರ್ಶಿಸಿ ತಕ್ಷಣವೇ ವಿದ್ಯುತ್ ಶಾಕ್ ಆಗಿದ್ದಾರೆ. ಅವರನ್ನು ತಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ದುರದೃಷ್ಟವಶಾತ್ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ..

ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್‍ ತಂತಿ ತಗುಲಿ ವ್ಯಕ್ತಿ ಮೃತ್ಯು Read More »

ಜಗತ್ಪ್ರಸಿದ್ಧ ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಓರ್ವ ಮೃತ, 500 ಮಂದಿಗೆ ಗಾಯ

ತಾಳಧ್ವಜ ರಥ ರಥ ಎಳೆಯಲು ತಳ್ಳಾಟ ನಡೆದಾಗ ಅವಘಡ ಭುವನೇಶ್ವರ : ಒಡಿಶಾದ ಪುರಿಯ ಜಗತ್ಪ್ರಸಿದ್ಧ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮೃತಪಟ್ಟು 500ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಲಭದ್ರನ ರಥವನ್ನು ಎಳೆಯಲು ಭಾರಿ ಜನಸಮೂಹ ಮುಂದಕ್ಕೆ ಬಂದಾಗ ಕಾಲ್ತುಳಿದಂಥ ಪರಿಸ್ಥಿತಿ ತಲೆದೋರಿದೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತದ ರೀತಿಯ ಘಟನೆ ಸಂಭವಿಸಿದೆ. ಲಕ್ಷಾಂತರ ಭಕ್ತರನ್ನು

ಜಗತ್ಪ್ರಸಿದ್ಧ ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಓರ್ವ ಮೃತ, 500 ಮಂದಿಗೆ ಗಾಯ Read More »

ಭಾರಿ ಮಳೆಗೆ ಕುಸಿದ ಕಟ್ಟಡ : ಮೂವರು ಕಾರ್ಮಿಕರು ಸಾವು

ಇಬ್ಬರಿಗೆ ಗಂಭೀರ ಗಾಯ; 12 ಮಂದಿ ಪಾರು ತೃಶ್ಶೂರು: ಕೇರಳದ ತೃಶ್ಶೂರ್ ಜಿಲ್ಲೆಯ ಕೊಡಕರ ಪಟ್ಟಣದಲ್ಲಿ 40 ವರ್ಷ ಹಳೆಯ ಎರಡು ಅಂತಸ್ತಿನ ಕಟ್ಟಡ ಕುಸಿದು ಮೂವರು ವಲಸೆ ಕಾರ್ಮಿಕರು ದುರ್ಮರಣ ಹೊಂದಿರುವ ದುರ್ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ರೂಪೆಲ್, ರಾಹುಲ್ ಮತ್ತು ಅಲಿಮ್ ಎಂದು ಗುರುತಿಸಲಾಗಿದೆ. ಅವಶೇಷಗಳಿಂದ ಅವರ ಶವಗಳನ್ನು ಹೊರತೆಗೆದುಕೊಳ್ಳಲಾಗಿದೆ. ಕಟ್ಟಡವು ಕೆಂಪುಕಲ್ಲಿನಿಂದ ನಿರ್ಮಿತವಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಗೆ ಪೂರ್ಣವಾಗಿ ಕುಸಿದಿದೆ. ಈ ಕಟ್ಟಡದಲ್ಲಿ

ಭಾರಿ ಮಳೆಗೆ ಕುಸಿದ ಕಟ್ಟಡ : ಮೂವರು ಕಾರ್ಮಿಕರು ಸಾವು Read More »

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ

ಚಾರ್ಮಾಡಿ, ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ಮಂಗಳೂರು: ಮಳೆ ಅಬ್ಬರಕ್ಕೆ ಸಕಲೇಶಪುರ ಬಳಿ ಶಿರಾಡಿ ಘಾಟಿಯಲ್ಲಿ ಭೂಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಸಂಪರ್ಕ ಕಡಿತವಾಗಿದೆ.ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ Read More »

ಕೆಎಸ್‍ ಆರ್ ಟಿಸಿ ಬಸ್‍ ಗಳೆರಡು ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

ಸುಳ್ಯ: ಕೆಎಸ್‍ ಆರ್‍ ಟಿಸಿ ಬಸ್‍ ಗಳೆರಡು ಮುಖಾಮುಖಿ ಡಿಕ್ಕಿ ಹೊಡದುಕೊಂಡ ಪರಿಣಾಮ ಹಲವರು ಗಾಯಗೊಂಡ ಘಟನೆ ಬುಧವಾರ ಸಂಜೆ ಸುಳ್ಯ ತಾಲೂಕಿನ ಅರಂತೋಡು ಶಾಲಾ ಮುಂಭಾಗ ನಡೆದಿದೆ. ಮಡಿಕೇರಿಯಿಂದ ಪುತ್ತೂರು ಕಡೆ ಬರುತ್ತಿದ್ದ ಬಸ್ ಎದುರಿನಿಂದ ಬಂದ ಬಸ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಗೊಂಡ ಬಸ್ ಗಳ ಪೈಕಿ ಒಂದು ಅಶ್ವಮೇಧ ಬಸ್ ಎಂದು ಹೇಳಲಾಗಿದೆ.

ಕೆಎಸ್‍ ಆರ್ ಟಿಸಿ ಬಸ್‍ ಗಳೆರಡು ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ Read More »

ಸಂಪಾಜೆಯಲ್ಲಿ ಕಾರಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ

ಸುಳ್ಯ: ಚಲಿಸುತ್ತಿದ್ದ ಕಾರೊಂದರ ಮೇಲೆ ಮರದ ಕೊಂಬೆ ಮುರಿದು ಬಿದ್ದ ಘಟನೆ ಸಂಪಾಜೆಯಲ್ಲಿ ನಡೆದಿದೆ. ಮರದ ಕೊಂಬೆ ವಿನಯ್ ಎಂಬುವವರು ಮಾರುತಿ 800 ಕಾರಿನ ಮೇಲೆ ಬಿದ್ದಿದೆ. ಇದೇ ಸ್ಥಳದಿಂದ ಸ್ವಲ್ಪ ದೂರದಲ್ಲೇ ವಿದ್ಯಾರ್ಥಿಗಳು ಪ್ರತಿನಿತ್ಯ ಮುಂಜಾನೆ ಆಟೋ ಹತ್ತುತ್ತಿದ್ದು ಅಲ್ಲಿಯೂ ಮರದ ಕೊಂಬೆ ಮುರಿದು ಬಿದ್ದಿದೆ. ಅದೃಷ್ಟವಶಾತ್ ಈ ಸಮಯದಲ್ಲಿ ಅವರು ಆಟೋ ಹತ್ತಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಕೊಂಬೆ ಮುರಿದ ಮರಗಳು ಖಾಸಗಿ ಜಾಗದೊಳಗಿದ್ದು, ಇದನ್ನು ತೆರವು ಮಾಡಲು ಕೆಲವು ನಿಯಮಗಳಿವೆ ಎಂದು

ಸಂಪಾಜೆಯಲ್ಲಿ ಕಾರಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ Read More »

13ನೇ ಅಂತಸ್ತಿನಲ್ಲಿ ರೀಲ್ಸ್ | ಕೆಳಗೆ ಬಿದ್ದು ಯುವತಿ ಮೃತ್ಯು

ಬೆಂಗಳೂರು: ಯುವತಿಯೊಬ್ಬಳು ನಿರ್ಮಾಣ ಹಂತದ ಕಟ್ಟಡದ 13ನೇ ಅಂತಸ್ತಿನಲ್ಲಿ ರೀಲ್ಸ್ ಮಾಡುವ ಸಂದರ್ಭ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಂದಿನಿ ಮೃತಪಟ್ಟ ಯುವತಿ   ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು.

13ನೇ ಅಂತಸ್ತಿನಲ್ಲಿ ರೀಲ್ಸ್ | ಕೆಳಗೆ ಬಿದ್ದು ಯುವತಿ ಮೃತ್ಯು Read More »

ಉಪ್ಪಿನಂಗಡಿ: ಮಣ್ಣಗುಂಡಿಯಲ್ಲಿ ಗುಡ್ಡ ಜರಿದು ಹೆದ್ದಾರಿಗೆ ಬಿದ್ದ ಮಣ್ಣು ರಾಶಿ

ಹಲವು ತಾಸು ವಾಹನ ಸಂಚಾರ ವ್ಯತ್ಯಯ ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ನಿನ್ನೆ ಸಂಜೆ ಗುಡ್ಡ ಜರಿದು ಭಾರಿ ಪ್ರಮಾಣದಲ್ಲಿ ಕಲ್ಲು-ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್‍ನಿಂದ ಅಡ್ಡಹೊಳೆ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಣ್ಣಗುಂಡಿಯಲ್ಲಿ ರಸ್ತೆ ನಿರ್ಮಾಣ ಸಂದರ್ಭ ಗುಡ್ಡ ಅಗೆಯಲಾಗಿದೆ. ಇಲ್ಲಿ ನೇರವಾಗಿ ಗುಡ್ಡ ಅಗೆದಿರುವುದರಿಂದ ಕೆಲ ದಿನಗಳಿಂದ ಮಣ್ಣು ಜರಿಯುತ್ತಿದ್ದು ಒಂದು

ಉಪ್ಪಿನಂಗಡಿ: ಮಣ್ಣಗುಂಡಿಯಲ್ಲಿ ಗುಡ್ಡ ಜರಿದು ಹೆದ್ದಾರಿಗೆ ಬಿದ್ದ ಮಣ್ಣು ರಾಶಿ Read More »

ನಿಯಂತ್ರಣ ತಪ್ಪಿ ಮಗುಚಿಬಿದ್ದ ಆಟೋ : ಸಹಸವಾರ ಮೃತ್ಯು

ಬೆಳ್ತಂಗಡಿ: ಆಟೋ ಚಾಲಕರೋರ್ವರ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ  ಸಹಸವಾರ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬದ್ಯಾರು ಸಮೀಪ ಭಾನುವಾರ ಸಂಜೆ ನಡೆದಿದೆ. ಕುಕ್ಕಳ, ಮಾಲಾಡಿ ಗ್ರಾಮದ ಅಣ್ಣು ಹೆಗ್ಡೆ ಅವರ ಪುತ್ರ ಚರಣ್‍ ಹೆಗ್ಡೆ (33) ಮೃತಪಟ್ಟ ಸಹಸವಾರ. ಚರಣ್‍ ಗುರುವಾಯನಕೆರೆಯಿಂದ ಅಳದಂಗಡಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಘಟನೆ ನಡೆದಿದೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಆಟೋದಲ್ಲಿ ಮೂವರು ಪ್ರಯಾಣಿಕರಿದ್ದರು

ನಿಯಂತ್ರಣ ತಪ್ಪಿ ಮಗುಚಿಬಿದ್ದ ಆಟೋ : ಸಹಸವಾರ ಮೃತ್ಯು Read More »

error: Content is protected !!
Scroll to Top